ಜಾನಿಯ ಜಾಣತನಕ್ಕೆ ಫೇಸ್‌ಬುಕ್ ನೀಡಿದ ಸನ್ಮಾನ $10,000
ಸಾಮಾಜಿಕ ದೈತ್ಯ ಜಾಲತಾಣ ಫೇಸ್‌ಬುಕ್ ಹತ್ತರ ಹರೆಯದ ಬಾಲಕನಿಗೆ ಇನ್‌ಸ್ಟಾಗ್ರಾಮ್‌ನಲ್ಲಿರುವ ಬಗ್ ಅನ್ನು ಪತ್ತೆಹಚ್ಚಿದ್ದಕ್ಕಾಗಿ $10,000 ವನ್ನು ನೀಡುವ ಮೂಲಕ ಪುರಸ್ಕರಿಸಿದೆ. ತಂತ್ರಜ್ಞಾನ ವೆಬ್‌ಸೈಟ್ VentureBeat.com ಹೇಳುವಂತೆ ಫಿನ್‌ಲ್ಯಾಂಡ್‌ನ ಜಾನಿ ಇನ್‌ಸ್ಟಾಗ್ರಾಮ್‌ನಲ್ಲಿದ್ದ ಬಗ್ ಅನ್ನು ಅನ್ವೇಷಣೆ ಮಾಡಿ ಫೇಸ್‌ಬುಕ್‌ನಿಂದ ಶ್ಲಾಘನೆಯನ್ನು ಪಡೆದುಕೊಂಡಿದ್ದಾನೆ.
ಸೈನ್ ಅಪ್ ಆಗುವುದಕ್ಕೆ 13 ಹರೆಯದವರಾಗಿರಬೇಕು ಮತ್ತು ಈ ದೋಷ ಆತನಿಗೆ ಸಾಮಾಜಿಕ ನೆಟ್‌ವರ್ಕ್‌ನಿಂದ ಯಾವುದೇ ಕಮೆಂಟ್ ಅನ್ನು ಡಿಲೀಟ್ ಮಾಡಲು ಅನುಮತಿಸಿದೆ.

#1
ತಂತ್ರಜ್ಞಾನ ವೆಬ್‌ಸೈಟ್ VentureBeat.com ಹೇಳುವಂತೆ ಫಿನ್‌ಲ್ಯಾಂಡ್‌ನ ಜಾನಿ ಇನ್‌ಸ್ಟಾಗ್ರಾಮ್‌ನಲ್ಲಿದ್ದ ಬಗ್ ಅನ್ನು ಅನ್ವೇಷಣೆ ಮಾಡಿ ಫೇಸ್‌ಬುಕ್‌ನಿಂದ ಶ್ಲಾಘನೆಯನ್ನು ಪಡೆದುಕೊಂಡಿದ್ದಾನೆ.

#2
ಸೈನ್ ಅಪ್ ಆಗುವುದಕ್ಕೆ 13 ಹರೆಯದವರಾಗಿರಬೇಕು ಮತ್ತು ಈ ದೋಷ ಆತನಿಗೆ ಸಾಮಾಜಿಕ ನೆಟ್‌ವರ್ಕ್‌ನಿಂದ ಯಾವುದೇ ಕಮೆಂಟ್ ಅನ್ನು ಡಿಲೀಟ್ ಮಾಡಲು ಅನುಮತಿಸಿದೆ.

#3
ಇಮೇಲ್ ಮೂಲಕ ಬಗ್ ಇರುವುದಾಗಿ ಆತ ತಿಳಿಸಿದ್ದು, ಫೇಸ್‌ಬುಕ್‌ನ ಟೆಸ್ಟ್ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಸಂದೇಶವನ್ನು ಅಳಿಸುವುದರ ಮೂಲಕ ಇದನ್ನು ಆತ ನಮಗೆ ತೋರಿಸಿಕೊಟ್ಟಿದ್ದಾನೆ ಮತ್ತು ಈ ಬಗ್ ಅನ್ನು ಈಗ ಸರಿಪಡಿಸಲಾಗಿದೆ ಎಂಬುದಾಗಿ ವರದಿ ತಿಳಿಸಿದೆ. ಫೇಸ್‌ಬುಕ್ ಇದಕ್ಕಾಗಿ ಜಾನಿಗೆ ಬಹುಮಾನವನ್ನು ನೀಡಿದೆ.

#4
ಜಸ್ಟಿನ್ ಬೈಬರ್ ಹೀಗೆ ಯಾರನ್ನೂ ಕೂಡ ನನಗೆ ಅಳಿಸಲು ಸಾಧ್ಯ ಎಂಬುದು ಜಾನಿಯ ಮಾತಾಗಿದೆ, ಸೆಕ್ಯುರಿಟಿ ರೀಸರ್ಚರ್ ಆಗಬೇಕು ಎಂಬುದು ಹುಡುಗನ ಆಸೆಯಾಗಿದೆ. ನನ್ನ ಕನಸಿನ ಉದ್ಯೋಗ ಇದಾಗಿದ್ದು ಭದ್ರತೆ ಹೆಚ್ಚು ಮುಖ್ಯವಾದುದು ಎಂಬುದು ಜಾನಿಯ ಜಾಣ ಮಾತಾಗಿದೆ.

#5
ಪುರಸ್ಕಾರ ದೊರೆತ ಹಣದಿಂದ ಜಾನಿ ಹೊಸ ಬೈಕ್, ಫುಟ್‌ಬಾಲ್ ಗೇರ್ ಮತ್ತು ಸಹೋದರರಿಗಾಗಿ ಕಂಪ್ಯೂಟರ್‌ಗಳನ್ನು ಖರೀದಿಸುವ ಇಚ್ಛೆಯನ್ನು ಹೊಂದಿದ್ದಾನೆ. ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತೆ ಫೇಸ್‌ಬುಕ್ ಕೂಡ ಬಗ್ ಪರಿಹಾರ ನಗದನ್ನು ಘೋಷಿಸುತ್ತಿದೆ.

#6
ಫೆಬ್ರವರಿಯಲ್ಲಿ ಫೇಸ್‌ಬುಕ್ $4.3 ಮಿಲಿಯನ್ ಪುರಸ್ಕಾರಗಳನ್ನು 800 ಕ್ಕಿಂತಲೂ ಹೆಚ್ಚಿನ ಸೆಕ್ಯುರಿಟಿ ರೀಸರ್ಚರ್‌ಗಳಿಗೆ 2,400 ಕ್ಕಿಂತಲೂ ಹೆಚ್ಚಿನ ಸಲ್ಲಿಕೆಗಳಿಗಾಗಿ ನೀಡಿದ್ದು ತನ್ನ ಬಗ್ ರೀವಾರ್ಡ್ ಯೋಜನೆಯನ್ನು ಇದು 2011 ರಲ್ಲಿ ಆರಂಭಿಸಿತ್ತು.

#7
2015 ರಲ್ಲಿ 210 ಸಂಶೋಧಕರು $936,000 ಸರಾಸರಿ ಪಾವತಿ $1,780 ಅನ್ನು ಪಡೆದುಕೊಂಡಿದ್ದಾರೆ.

#8
ಜಾನಿ ಬಗ್ ಇರುವುದನ್ನು ಇಮೇಲ್ ಮೂಲಕ ತಿಳಿಸಿದ್ದು ನಂತರ ಸಂಸ್ಥೆ ಈ ದೋಷವನ್ನು ಕಂಡುಕೊಂಡಿದೆ ಎನ್ನಲಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ
ಇನ್ನಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ


Click it and Unblock the Notifications








