Home
ಸುದ್ದಿಜಾಲ

ಫೇಸ್‌ಬುಕ್‌ನಲ್ಲಿ ತರುತ್ತಿರುವ ಈ ಹೊಸ ಫೀಚರ್ ಬಗ್ಗೆ ಊಹೆ ಕೂಡ ಇರಲಿಲ್ಲ!

ಫೇಸ್‌ಬುಕ್ ಬಳಕೆದಾರರು ತಮ್ಮ ಪೋಸ್ಟ್‌ಗಳಿಗೆ ಎಷ್ಟು ಜನ ಲೈಕ್ಸ್​ ಮತ್ತು ಕಮೆಂಟ್ಸ್​​​ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸದೆ ಗೌಪ್ಯವಾಗಿ ಇಡುವಂತಹ ಹೊಸ ಫೀಚರ್ ಒಂದನ್ನು ಫೇಸ್​ಬುಕ್ ಒದಗಿಸುತ್ತಿದೆ. ಈ ಫೀಚರ್‌ನಿಂದ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಫೋಟೊ ಮತ್ತು ವಿಡಿಯೋಗಳಿಗೆ ಎಷ್ಟು ಲೈಕ್ ಬಂದಿದೆ ಎಂಬುದನ್ನು ಪೋಸ್ಟ್ ಮಾಡಿದವರಿಗೆ ಮಾತ್ರ ಗೋಚರಿಸುವಂತೆ ಮಾಡಬಹುದಾಗಿದ್ದು, ಈ ವಿಶೇಷ ಫೀಚರ್ ಬರುತ್ತಿರುವುದನ್ನು ಫೇಸ್​ಬುಕ್ ಸಂಸ್ಥೆಯೇ​ ದೃಢೀಕರಿಸಿದೆ.

ಫೇಸ್‌ಬುಕ್‌ನಲ್ಲಿ ತರುತ್ತಿರುವ ಈ ಹೊಸ ಫೀಚರ್ ಬಗ್ಗೆ ಊಹೆ ಕೂಡ ಇರಲಿಲ್ಲ!

ಹೌದು, ಫೇಸ್‌ಬುಕ್‌ನಲ್ಲಿ ಮಾಡಿದ ಪೋಸ್ಟ್‌ಗಳ ಕೆಳಗೆ ಕಾಣಿಸುವ 'ಲೈಕ್‌ಗಳ' ಪ್ರದರ್ಶನವನ್ನು ನಿರ್ಬಂಧಿಸಲು ಫೇಸ್‌ಬುಕ್ ಎದುರು ನೋಡುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಈಗಾಗಲೇ ಈ ಕ್ರಮವನ್ನು ಪ್ರಾರಂಭಿಸಲಾಗಿದೆ ಮತ್ತು ಫೇಸ್ಬುಕ್ಗೆ ವಿಸ್ತರಿಸಬಹುದು ಎಂದು ವರದಿಯಾಗಿದೆ. ಇದರ ಹಿಂದಿನ ಉದ್ದೇಶವೇನೆಂದರೆ, ಜನರು ತಮ್ಮ ಪೋಸ್ಟ್‌ಗಳಿಗೆ ಪಡೆಯುವ ಕಡಿಮೆ ಸಂಖ್ಯೆಯ 'ಲೈಕ್‌'ಗಳಿಂದ ಜನರು ನಿರುತ್ಸಾಹಗೊಳ್ಳುತ್ತಾರೆ ಮತ್ತು ಹೆಚ್ಚಿನ ಸಂದೇಶಗಳನ್ನು ಪೋಸ್ಟ್ ಮಾಡುವುದನ್ನು ತಡೆಯುತ್ತಿದ್ದಾರಂತೆ.

ಹಾಗಾಗಿ, ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಫೋಟೊ ಮತ್ತು ವಿಡಿಯೋಗಳಿಗೆ ಎಷ್ಟು ಲೈಕ್ ಬಂದಿದೆ ಎಂಬುದನ್ನು ಪೋಸ್ಟ್ ಮಾಡಿದವರಿಗೆ ಮಾತ್ರ ಗೋಚರಿಸುವಂತೆ ಮಾಡಿ ಬಳಕೆದಾರರನ್ನು ಸಂತುಷ್ಟಗೊಳಿಸಲು ಸಂಸ್ಥೆ ಮುಂದಾಗಿದೆ. ಉದಾಹರಣೆಗೆ, ಓರ್ವ ವ್ಯಕ್ತಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಮಾಡುತ್ತಾನೆ. ಅದಕ್ಕೆ ಎಷ್ಟು ಲೈಕ್ ಬಂದಿವೆ ಎಂಬುದನ್ನು ಆತ ಇತರರಿಗೆ ತೋರಿಸಬಹುದು. ಇಲ್ಲವೇ, ಆ ಪೋಸ್ಟ್ ಕಡಿಮೆ ಲೈಕ್‌ಗಳುನ್ನು ಹೊಂದಿದ್ದರೆ ಅದನ್ನು ಇತರರಿಂದ ಮರೆಮಾಚಬಹುದು. ಇದು ಆತನಿಗೆ ಸಹಾಯವಾಗಲಿದೆ.

ಫೇಸ್‌ಬುಕ್‌ನಲ್ಲಿ ತರುತ್ತಿರುವ ಈ ಹೊಸ ಫೀಚರ್ ಬಗ್ಗೆ ಊಹೆ ಕೂಡ ಇರಲಿಲ್ಲ!

ಕಡಿಮೆ ಲೈಕ್ ಬಂದಿರುವ ಪೋಸ್ಟ್‌ಗಳನ್ನು ಮರೆಮಾಚಬಹುದು. ಹೆಚ್ಚು ಲೈಕ್ ಬಂದಿರುವ ಪೋಸ್ಟ್‌ಗಳನ್ನು ತೋರಿಸಿಕೊಳ್ಳಬಹುದು. ಇದರಿಂದ ಕಡಿಮೆ ಸಂಖ್ಯೆಯ 'ಲೈಕ್‌'ಗಳು ಬಂದಿರುವ ಬೇಸರ ತಪ್ಪುತ್ತದೆ. ಮತ್ತೊಂದು ವಿಷಯ ಎಂದರೆ, ಈ ಫೀಚರ್ ಅನ್ನು ಪರಿಚಯಿಸುವಲ್ಲಿ ಫೇಸ್‌ಬುಕ್ ಸ್ವಾರ್ಥ ಕೂಡ ಇದೆ. ಕಡಿಮೆ ಸಂಖ್ಯೆಯ 'ಲೈಕ್‌'ಗಳಿಂದ ನಿರುತ್ಸಾಹಗೊಳ್ಳುವ ಹಲವರು ಹೆಚ್ಚು ಪೋಸ್ಟ್ ಮಾಡುವುದಿಲ್ಲ. ಇದರಿಂದ ಬಳಕೆದಾರರು ಫೇಸ್‌ಬುಕ್ ತಾಣದಲ್ಲಿ ಎಂಗೇಜ್ ಆಗಿರುವುದಿಲ್ಲ ಎಂಬುದು ಕಂಪೆನಿಯ ಆಂಬೋಣ.

ನೂತನ ಬದಲಾವಣೆಯು ಚಿತ್ರ, ವಿಡಿಯೋ ಮತ್ತು ಕಮೆಂಟ್ಸ್​ಗಳಿಂದ ಉಂಟಾಗಬಹುದಾದ ಪ್ರಚೋದನೆಯನ್ನು ತಡೆಯಲು ನೆರವಾಗಲಿದೆ. ಬದಲಾಗಿ, ಪೋಸ್ಟ್‌ನಲ್ಲಿ ಏನಿದೆ ಎಂಬುದರ ಕುರಿತಷ್ಟೇ ಹಿಂಬಾಲಕರ ಅಥವಾ ಸ್ನೇಹಿತರ ಗಮನ ಕೇಂದ್ರೀಕರಿಸಲಿದೆ. ಫೇಸ್‌ಬುಕ್ ಒಡೆತನದ ಇನ್‌ಸ್ಟಾಗ್ರಾಮ್ ವರ್ಷದ ಆರಂಭದಲ್ಲಿ ಸುಮಾರು ಆರು ರಾಷ್ಟ್ರಗಳಲ್ಲಿ ಇದನ್ನು ಪ್ರಾಯೋಗಿಕವಾಗಿ ಜಾರಿಗೆ ತಂದಿತ್ತು. ಇದೀಗ ವಿಶ್ವದಾದ್ಯಂತ ಲೈಕ್ಸ್​ ಮತ್ತು ಕಮೆಂಟ್ಸ್​​​ ಮಾಡಿದ್ದಾರೆ ಎಂಬುದನ್ನು ಬಹಿರಂಗಪಡಿಸದೆ ಇರುವ ಫೀಚರ್ ಬರುತ್ತಿದೆ.

Best Mobiles in India

English summary
Facebook on Tuesday (Sep 3) confirmed it is dabbling with no longer making a public display of how many "likes" are racked up by posts.to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+