8 ಕೋಟಿ ನಕಲಿ ಫೇಸ್ ಬುಕ್ ಖಾತೆಗಳು ಸೃಷ್ಟಿ!

Posted By: Varun
8 ಕೋಟಿ ನಕಲಿ ಫೇಸ್ ಬುಕ್ ಖಾತೆಗಳು ಸೃಷ್ಟಿ!

ವಿಶ್ವದ ಖ್ಯಾತ ಸಾಮಾಜಿಕ ಜಾಲತಾಣ ಫೇಸ್ ಬುಕ್ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಪಕ್ಷ ಲೈಸೆನ್ಸ್ ಇಲ್ದೆ ಗಾಡಿನಾ ಓಡಿಸೋ ಹುಡುಗರು ಇದ್ರೂ ಇರಬಹುದು ಆದ್ರೆ ಫೇಸ್ ಬುಕ್ ಖಾತೆ ಇಲ್ದೆ ಅಂತೂ ಇರಕ್ಕೆ ಸಾಧ್ಯ ಇಲ್ಲ.

ಚಾಟಿಂಗ್, ಹೊಸ ಹೊಸ ಜನರೊಡನೆ ಸ್ನೇಹ ಬೆಸೆಯುವ, ತಮ್ಮ ತಮ್ಮ ಮನಸಿಗೆ ತೋಚಿದ್ದನ್ನ ಬರ್ಯೋದಕ್ಕೆ,ಅಲ್ಲಿ ಇಲ್ಲಿ ಹೋಗಿದ್ದೆ ಅಂತ ತೋರ್ಸಿ ಕೊಳ್ಳಕ್ಕೆ ಫೋಟೋ ಅಪ್ಡೇಟ್, ಈ ಥರ ಉಪಯುಕ್ತ ಹಾಗು ತರಲೆ ಕೆಲಸ ಮಾಡಕ್ಕೆ ಫೇಸ್ ಬುಕ್ ಒಳ್ಳೆ ತಾಣವಾಗಿದೆ.

ಈಗ ಬಂದರೋ ಮಜಾ ಸುದ್ದಿ ಏನು ಅಂದ್ರೆ ಫೇಸ್ ಬುಕ್ ಅಲ್ಲಿ ಇರೋ 95 ಕೋಟಿ ಖಾತೆಗಳಲ್ಲಿ, ಸುಮಾರು 8 ಕೋಟಿಗೂ ಹೆಚ್ಚು ಖಾತೆಗಳು ನಕಲಿಯಂತೆ!

ಇದನ್ನಸ್ವತಃ ಖಚಿತ ಪಡಿಸಿರೋ ಫೇಸ್ ಬುಕ್ ತ್ರೈಮಾಸಿಕ ವರದಿಯಲ್ಲಿ ಇದನ್ನ ಪ್ರಕಟಿಸಿದ್ದು, ಸುಮಾರು 4 ಕೋಟಿ ಜನ ಸುಮ್ಮನೆ ಇರ್ಲಿ ಅಂತ ಎಕ್ಸ್ಟ್ರಾ ಖಾತೆ ಓಪನ್ ಮಾಡಿದ್ರಂತೆ. ಇನ್ನ ಉಳಿದ 2 ಕೋಟಿ ಜನ ಫ್ಯಾನ್ ಪೇಜ್ ಬದಲಿಗೆ ಪ್ರೊಫೈಲ್ ಖಾತೆಯನ್ನ ಸೃಷ್ಟಿ ಮಾಡಿರೋರಂತೆ.

ಒಟ್ಟಿನಲ್ಲಿ ಅನೈತಿಕ ಚಟುವಟಿಕೆಗಳು ಫೇಸ್ ಬುಕ್ ನಲ್ಲಿ ಹೆಚ್ಚಾಗಿದ್ದು, ಈ ರೀತಿಯ ನಕಲು ಖಾತೆಗಳಿಗೆ ಕಡಿವಾಣ ಹಾಕಿದರೆ ಸ್ಪಾಮ್ ಅನ್ನು ಕಡಿಮೆ ಮಾಡಬಹುದು.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot