ಫೇಸ್‌ಬುಕ್‌ ತೆಕ್ಕೆಗೆ ಬೆಂಗಳೂರು ಐಟಿ ಕಂಪೆನಿ!

Written By:

ಫೇಸ್‌ಬುಕ್‌ ಪ್ರಪ್ರಥಮ ಬಾರಿಗೆ ಭಾರತದ ಟೆಕ್‌ ಕಂಪೆನಿಯನ್ನು ಖರೀದಿಸಲು ಮುಂದಾಗುತ್ತಿದೆ. ಬೆಂಗಳೂರಿನಲ್ಲಿ ಲಿಟ್ಲ್‌ ಐ ಲ್ಯಾಬ್‌ ಕಂಪೆನಿಯನ್ನು ಖರೀದಿಸಲು ಫೇಸ್‌‌ಬುಕ್‌ ಮುಂದಾಗುತ್ತಿದೆ ಎನ್ನುವ ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡಲಾರಂಭಿಸಿದೆ.

ಲಿಟ್ಲ್‌ ಐ ಲ್ಯಾಬ್‌ ಕಂಪೆನಿ ಮೊಬೈಲ್ ಅಪ್ಲಿಕೇಶ್‌ಗಳಿಗೆ ಸಂಬಂಧಿಸಿದ ಟೂಲ್‌ಗಳನ್ನು ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದ್ದು ಈ ಕಂಪೆನಿಯನ್ನು ಖರೀದಿಸಲು ಫೇಸ್‌ಬುಕ್‌ ಆಸಕ್ತಿ ಹೊಂದಿದ್ದು ಖರೀದಿ ಬಗ್ಗೆ ಎರಡು ಕಂಪೆನಿಗಳ ಮಧ್ಯೆ ಚರ್ಚೆ‌ಗಳು ಆರಂಭವಾಗಿದೆ. ಫೇಸ್‌ಬುಕ್‌ ಈ ಖರೀದಿ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಲಿಟ್ಲ್‌ ಐ ಲ್ಯಾಬ್‌ ಕಂಪೆನಿಯ ಸಿಇಒ ರಂಗರಾಜನ್‌ ಕೆಲವು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ,ಈ ಸಂಬಂಧ ಆರಂಭಿಕ ಚರ್ಚೆ ನಡೆಯುತ್ತಿದೆ. ಹೆಚ್ಚಿನ ಮಾಹಿತಿ ಹೇಳಲು ಸಾದ್ಯವಿಲ್ಲ ಎಂದು ಹೇಳಿದ್ದಾರೆ.

 ಫೇಸ್‌ಬುಕ್‌ ತೆಕ್ಕೆಗೆ ಬೆಂಗಳೂರು ಐಟಿ ಕಂಪೆನಿ!

ಗಿರಿಧರ್‌ ಮೂರ್ತಿ,ಕುಮಾರ್‌ ರಂಗರಾಜನ್‌‌,ಸತ್ಯಂ ಕಂಡುಲ ಮತ್ತು ಲಕ್ಷ್ಮಣ್‌ ಕಕ್ಕಿರ್ಲ ಮೇ 2012ರಲ್ಲಿ ಲಿಟ್ಲ್‌ ಐ ಲ್ಯಾಬ್‌ ಕಂಪೆನಿಯನ್ನು ಆರಂಭಿಸಿದ್ದು, ಗಿರಿಧರ್‌ ಮೂರ್ತಿ,ಕುಮಾರ್‌ ರಂಗರಾಜನ್‌‌ ಕಂಪೆನಿಯ ಸಿಇಒ ಆಗಿದ್ದಾರೆ.

ಯಾಕೆ ಖರೀದಿ:
ಲಿಟ್ಲ್‌ ಐ ಲ್ಯಾಬ್‌ ಮೊಬೈಲ್‌ ಆಪ್‌ ತಯಾರಿಸುವವರಿಗಾಗಿ ಟೂಲ್‌ ಅಭಿವೃದ್ಧಿ ಪಡಿಸುವ ಕಂಪೆನಿಯಾಗಿದೆ. ಈ ಟೂಲ್‌ಗಳು ಅಪ್ಲಿಕೇಶನ್‌ ತಯಾರಿಸುವವರಿಗೆ ಆಪ್‌ ಬಗ್ಗೆ ಇರುವ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಬಲ್ಲದು. ಆಪ್‌ಗೆ ಎಷ್ಟು ಬ್ಯಾಟರಿ ಖರ್ಚಾಗುತ್ತದೆ,ಮೆಮೊರಿ ವಿವರ, ಸಿಪಿಯು ಸೇರಿದಂತೆ ಇತ್ಯಾದಿ ಬೆಂಚ್‌ಮಾರ್ಕ್‌ ಡೇಟಾಗಳನ್ನು ಈ ಟೂಲ್‌ ಮೂಲಕ ನೋಡಬಹುದು. ಮುಂದಿನ ದಿನಗಳಲ್ಲಿ ಮತ್ತಷ್ಟು ಆಪ್‌ಗಳನ್ನು ತಯಾರಿಸಲು ಮುಂದಾಗುತ್ತಿರುವ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಈ ಕಂಪೆನಿಯನ್ನು ಖರೀದಿಸಲು ಆಸಕ್ತಿ ತೋರಿಸಿದೆ ಎನ್ನಲಾಗಿದೆ.

Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot