Subscribe to Gizbot

ಫೇಸ್ ಬುಕ್ ಟೈಮ್ ಲೈನ್ ಕಡ್ಡಾಯ

Posted By: Varun
ಫೇಸ್ ಬುಕ್ ಟೈಮ್ ಲೈನ್ ಕಡ್ಡಾಯ

ಸೆಪ್ಟೆಂಬರ್ 2011 ರಿಂದ ಪ್ರಾರಂಭವಾಗಿರುವ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನ ಟೈಮ್ ಲೈನ್ ಫೀಚರ್ ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇರುತ್ತೆ.

ನಿಮ್ಮ ಪ್ರೊಫೈಲ್ ಮೂಲಕ ನಿಮ್ಮ ಚಟುವಟಿಕೆಗಳ ಪ್ರಮುಖ ಅಂಶಗಳನ್ನು ತೆಗೆದುಕೊಂಡು ಅನುಕ್ರಮವಾಗಿ ಜೋಡಿಸಿ ತೋರಿಸುವ ಟೈಮ್ ಲೈನ್ ಫೀಚರ್ ಅನ್ನು ಫೇಸ್ ಬುಕ್ ಆಗಸ್ಟ್ 8 ರಿಂದ ಕಡ್ಡಾಯಗೊಳಿಸಿದೆ.

ಈವರೆಗೂ ಟೈಮ್ ಲೈನ್ ಅನ್ನು ಬಳಸುವ ಆಯ್ಕೆಯನ್ನು ಖಾತೆದಾರರಿಗೆ ಬಿಡಲಾಗಿತ್ತು. ಆದ್ರೆ ಆಗಸ್ಟ್ 8 ರಿಂದ ನಿಮ್ಮ ಫೇಸ್ ಬುಕ್ ಖಾತೆಯಲ್ಲಿ ಟೈಮ್ ಲೈನ್ ಕಾಣಿಸಿಕೊಳ್ಳಲಿದೆ.

ಅಸಲಿಗೆ ಟೈಮ್ ಲೈನ್ ನಲ್ಲಿ ನೀವು ಖಾತೆ ಶುರುಮಾಡಿರುವ ದಿನದಿಂದ ಹಿಡಿದು ಈವರೆಗೂ ನೀವು ಹಾಕಿರುವ ಪೋಸ್ಟ್ ಗಳು, ಫೋಟೋಗಳು, ನೀವು ಓದಿರೋ ಸುದ್ದಿಗಳು, ನೀವು ಹೊಸದಾಗಿ ಯಾರ ಜೊತೆ ಫ್ರೆಂಡ್ ಆಗಿದ್ದೀರ.. ಹೀಗೆ ಎಲ್ಲವನ್ನು ನಿಮ್ಮ ಪ್ರೊಫೈಲ್ ನಲ್ಲಿ ತೋರಿಸಲಿದೆ.

ಇದರಿಂದಾಗಿ ನಿಮ್ಮ ಎಲ್ಲ ಚಟುವಾಟಿಕೆಯನ್ನೂ ನಿಮ್ಮ ಪ್ರೊಫೈಲ್ ನೋಡುವ ಎಲ್ಲರಿಗೂ ಕಾಣುವಂತೆ ಮಾಡುವ ಟೈಮ್ ಲೈನ್ ಅನ್ನು ಸುಮಾರು 95 ಕೋಟಿಗೂ ಹೆಚ್ಚು ಖಾತೆದಾರ ಮೇಲೆ ಹೇರುತ್ತಿರುವುದು ಬಹಳಷ್ಟು ಜನಕ್ಕೆ ಇಷ್ಟವಾಗುತ್ತಿಲ್ಲ.

ಟೈಮ್ ಲೈನ್ ನಿಂದ ನಮಗೇನು ಲಾಭವಿದೆಯೋ ಇಲ್ಲವೋ, ಆದ್ರೆ ಫೇಸ್ ಬುಕ್ ಕಂಪನಿಗೆ ಜಾಹೀರಾತು ಕೊಡುತ್ತಿರುವ ಕಂಪನಿಗಳು ಖಾತೆದಾರರರಿಗೆ ಏನು ಇಷ್ಟವಾಗುತ್ತೆ, ಏನು ಇಷ್ಟವಾಗಲ್ಲ ಎಂದು ನೋಡಿಕೊಂಡು ಅದಕ್ಕೆ ತಕ್ಕಂತೆ ಜಾಹೀರಾತನ್ನು ಹಾಕುವುದಕ್ಕೆ ಸಹಕಾರಿಯಾಗಲಿದೆಯಾದರಿಂದ ಫೇಸ್ ಬುಕ್ ಇದನ್ನು ಕಡ್ಡಾಯಗೊಳಿಸಿದೆ ಎಂಬುದು ನಮ್ಮ ಅಭಿಪ್ರಾಯ.

ಫೇಸ್ ಬುಕ್ ಟೈಮ್ ಲೈನ್ ನಿಮಗೆ ಇಷ್ಟಾನಾ ಇಲ್ಲವಾ ? ದಯವಿಟ್ಟು ತಿಳಿಸಿ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot