ಶೀಘ್ರದಲ್ಲೇ ಫೇಸ್‌ಬುಕ್‌ನಲ್ಲಿ 'ಮ್ಯೂಸಿಕ್‌ ವೀಡಿಯೋ' ಫೀಚರ್ಸ್‌ ಲಭ್ಯ!

|

ಜನಪ್ರಿಯ ಸೊಶೀಯಲ್‌ ಮೀಡಿಯಾ ಆಗಿರುವ ಫೇಸ್‌ಬುಕ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಧಿಕೃತ ಮ್ಯೂಸಿಜ್‌ ವೀಡಿಯೋಗಳನ್ನ ಬಿಡುಗಡೆ ಮಾಡಲಿದೆ. ಈ ಹಿಂದಿನ ಲೇಖನದಲ್ಲಿ ಫೇಸ್‌ಬುಕ್‌ ಇಂತಹದೊಂದು ಪ್ಲ್ಯಾನ್‌ ಅನ್ನು ರೂಪಿಸಿಕೊಂಡಿದೆ ಎಂದು ತಿಳಿಸಿಕೊಡಲಾಗಿತ್ತು. ಅದರಂತೆ ಇದೀಗ ಫೇಸ್‌ಬುಕ್‌ ತನ್ನ ಅಧಿಕೃತ ಮ್ಯೂಸಿಕ್‌ ವಿಡಿಯೋ ಫೀಚರ್ಸ್‌ ಅನ್ನು ಪರಿಚಯಿಸುವುದು ಅಧಿಕೃತವಾಗಿದೆ. ಇದು ಫೇಸ್‌ಬುಕ್ ವಾಚ್‌ನಲ್ಲೂ ಸಹ ಈ ಹೊಸ 'ಮ್ಯೂಸಿಕ್ ವಿಡಿಯೋ' ಲಬ್ಯವಾಗಲಿದೆ ಎಂದು ಹೇಳಲಾಗ್ತಿದೆ.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ತನ್ನ ಬಳಕೆದಾರರಿಗೆ ಅಧಿಕೃತ ಮ್ಯೂಸಿಕ್‌ ವೀಡಿಯೋ ಫೀಚರ್ಸ್‌ ಅನ್ನು ಪರಿಚಯಿಸಲು ಸಿದ್ದತೆ ನಡೆಸಿದೆ. ಸದ್ಯ ಶೀಘ್ರದಲ್ಲೇ ಈ ಫಿಚರ್ಸ್‌ ಯುಎಸ್‌ನಲ್ಲಿ ಲಭ್ಯವಾಗಲಿದ್ದು, ಮುಂದಿನ ದಿನಗಳಲ್ಲಿ ಜಾಗತಿಕವಾಗಿ ಎಲ್ಲರಿಗೂ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ಯುಎಸ್‌ನಲ್ಲಿ ಈ ಫೀಚರ್ಸ್‌ ಅನ್ನು ಪರಿಚಯಿಸಿದರೆ ಫೇಸ್‌ಬುಕ್ ಬಳಕೆದಾರರು ಎಲ್ಟನ್ ಜಾನ್, ಜೊನಸ್ ಬ್ರದರ್ಸ್, ಕೀತ್ ಅರ್ಬನ್, ಅನಿಟ್ಟಾ, ಬ್ಲೇಕ್ ಶೆಲ್ಟನ್, ಮಾರ್ವಿನ್ ಗೇಯ್, ಬಾಬ್ ಮಾರ್ಲೆ, ಡಿಪ್ಲೊ, ಜೋಶ್ ಗ್ರೊಬನ್, ಮಾರೆನ್ ಮೋರಿಸ್ ಅವರಂತಹ ಕಲಾವಿದರ ಅಧೀಕೃತ ಮ್ಯೂಸಿಕ್‌ ವೀಡಿಯೊಗಳನ್ನು ವೀಕ್ಷಿಸಬಹುದಾಗಿದೆ, ಅಲ್ಲದೆ ಇವುಗಳನ್ನ ಇನ್ನೊಬ್ಬರ ಜೊತೆಗೆ ಶೇರ್‌ಮಾಡಬಹುದಾಗಿದೆ. ಹಾಗಾದ್ರೆ ಮ್ಯೂಸಿಕ್‌ ವಿಡಿಯೋ ಫೀಚರ್ಸ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೇಸ್‌ಬುಕ್‌

ಫೇಸ್‌ಬುಕ್‌ ಪರಿಚಯಿಸಲಿರುವ ಮ್ಯೂಸಿಕ್‌ ವೀಡಿಯೋ ಫೀಚರ್ಸ್‌ ಮ್ಯೂಸಿಕ್‌ ಪ್ರಿಯರಿಗೆ ಉತ್ತಮವಾದ ಆಯ್ಕೆಯಾಗಲಿದೆ. ಸೋನಿ ಮ್ಯೂಸಿಕ್, ವಾರ್ನರ್ ಮ್ಯೂಸಿಕ್, ಯೂನಿವರ್ಸಲ್ ಮ್ಯೂಸಿಕ್ ಗ್ರೂಪ್, ಮೆರ್ಲಿನ್, ಬಿಎಮ್‌ಜಿ ಮುಂತಾದ ಉನ್ನತ ಲೇಬಲ್‌ಗಳನ್ನ ಹೊಂದಿರುವ ಕಂಪನಿಯ ಸಹಭಾಗಿತ್ವದಿಂದ ಯುಎಸ್ ನಲ್ಲಿ ಈ ಫೀಚರ್ಸ್‌ ಅನ್ನು ಸಕ್ರಿಯಗೊಳಿಸಲಾಗಿದೆ ಎಂದು ವರದಿ ಆಗಿದೆ. ಅಲ್ಲದೆ ಆಗಸ್ಟ್ ತಿಂಗಳ ಮೊದಲ ವಾರದಲ್ಲಿ ಫೇಸ್‌ಬುಕ್‌ನ ಮ್ಯೂಸಿಕ್‌ ಪ್ಲ್ಯಾನ್‌ಗಳು ಎಲ್ಲರಿಗೂ ಲಭ್ಯವಾಗಲಿವೆ.

ಫೇಸ್‌ಬುಕ್‌

ಇನ್ನು ಫೇಸ್‌ಬುಕ್‌ನ ಮ್ಯೂಸಿಕ್‌ ವೀಡಿಯೋದ ವಿಶೇಷತೆ ಅಂದರೆ ಇದರಲ್ಲಿ ಅಧಿಕೃತ ಮ್ಯೂಸಿಕ್‌ ವೀಡಿಯೋಗಳಿಗೆ ಮಾತ್ರ ಅವಕಾಶವಿರುತ್ತದೆ. ಇದರಲ್ಲಿ ಮ್ಯೂಸಿಕ್‌ ಕ್ರಿಯೆಟರ್ಸ್‌, ಅನೇಕ ಬೆಂಬಲಿತ ಕಲಾವಿದರು ಸಹ ಅವರು ಹೊಸ ಅನುಮತಿಯನ್ನು ಟಾಗಲ್ ಮಾಡಬೇಕಾಗುತ್ತದೆ. ಇದು ತಮ್ಮ ಪುಟಕ್ಕೆ ಮ್ಯೂಸಿಕ್‌ ವೀಡಿಯೊಗಳನ್ನು ಆಟೋಮ್ಯಾಟಿಕ್‌ ಆಗಿ ಸೇರಿಸಲು ವೇದಿಕೆಯನ್ನು ಸಿದ್ದಪಡಿಸುತ್ತದೆ. ಇಲ್ಲಿ ಈ ಹೊಸ ಅನುಮತಿಯನ್ನು ಸಕ್ರಿಯಗೊಳಿಸಿದ ನಂತರ, ಕಲಾವಿದರು ತಮ್ಮ ವೀಡಿಯೊ ಪೋಸ್ಟ್‌ಗಳನ್ನು ಪೋಸ್ಟ್‌ ಮಾಡಬಹುದು ಇಲ್ಲವೇ ಅವರು ಬಯಸಿದಂತೆ ತೆಗೆದುಹಾಕಬಹುದಾಗಿದೆ.

ಫೇಸ್‌ಬುಕ್

ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸದಿದ್ದರೆ, ಅಭಿಮಾನಿಗಳು ತಮ್ಮ ವಿಡಿಯೋಗಳನ್ನ ಸರ್ಚ್‌ ಮಾಡಲು ಸಹ ಅವಕಾಶ ನೀಡಲಾಗಿದೆ. ಇದಕ್ಕಾಗಿ ಫೇಸ್‌ಬುಕ್ ಸ್ವಯಂಚಾಲಿತವಾಗಿ ಕಲಾವಿದರ ಪರವಾಗಿ ಪ್ರತ್ಯೇಕ ಅಧಿಕೃತ ಸಂಗೀತ ಪಪೇಜ್‌ ಅನ್ನು ಕಲಾವಿದರ ಹೆಸರಿನಲ್ಲಿಯೇ ಕ್ರಿಯೆಟ್‌ ಮಾಡಿರಲಾಗಿರುತ್ತದೆ. ಈ ಹೊಸ ಫೀಚರ್ಸ್‌ ಫೇಸ್‌ಬುಕ್ ಬಳಕೆದಾರರು ತಮ್ಮ ನೆಚ್ಚಿನ ಕಲಾವಿದರನ್ನು ಅನುಸರಿಸಲು ಮತ್ತು ಅವರ ನ್ಯೂಸ್ ಫೀಡ್‌ನಲ್ಲಿ ಮತ್ತು ಅವರು ಲೈವ್‌ಗೆ ಹೋದಾಗ ಅವರ ಇತ್ತೀಚಿನ ವೀಡಿಯೊ ಬಿಡುಗಡೆಗಳನ್ನು ನೋಡಲು ಅನುಮತಿಸುತ್ತದೆ. ಕಲಾವಿದರನ್ನು ಅವರ ಪುಟದಲ್ಲಿನ ‘ಫಾಲೋ' ಆಯ್ಕೆಯಿಂದ ಮತ್ತು ಮ್ಯೂಸಿಕ್ ವೀಡಿಯೊದಿಂದಲೂ ಅನುಸರಿಸಬಹುದಾಗಿದೆ.

Most Read Articles
Best Mobiles in India

English summary
This new feature lets Facebook users follow their favourite artists and see their latest video releases on their News Feed as and when they go live.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X