ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!

|

ಸಾಮಾಜಿಕ ಜಾಲತಾಣಗಳ ದಿಗ್ಗಜ ಫೇಸ್‌ಬುಕ್ ತನ್ನ ಬಳಕೆದಾರರಿಗೆ ನಿರಂತರವಾಗಿ ಅನುಕೂಲಕರ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೆ ಸಾಗಿ ಬಂದಿದೆ. ಇದರೊಂದಿಗೆ ಬಳಕೆದಾರರ ಖಾತೆಯ ಪ್ರೈವೆಸಿ ಸೆಟ್ಟಿಂಗ್ಸ್‌ಗೂ ಹೆಚ್ಚಿನ ಮಹತ್ವ ನೀಡಿದೆ. ಈ ನಿಟ್ಟಿನಲ್ಲಿ ಫೇಸ್‌ಬುಕ್ ಇದೀಗ ಮತ್ತೊಂದು ಮಹತ್ವದ ಬದಲಾವಣೆ ತರಲು ನಿರ್ಧಾರ ಮಾಡಿದ್ದು, ನಿಮ್ಮ ಸ್ನೇಹಿತರು ನೀವಿರುವ ಫೋಟೊ ಫೋಸ್ಟ್‌ ಮಾಡಿದರೇ ನಿಮಗೆ ಮಾಹಿತಿ ಬರಲಿದೆ.

ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!

ಹೌದು, ಫೇಸ್‌ಬುಕ್ ಸಂಸ್ಥೆಯ 'ಟ್ಯಾಗ್‌ ಸಜೇಶನ್ಸ್‌' ಆಯ್ಕೆಯ ಬದಲಾಗಿ 'ಫೇಸ್‌ ರಿಕಗ್ನೈಸೆಶನ್'(Face recognition) ಫೀಚರ್‌ ಅಳವಡಿಸಿದೆ. ಸುಮಾರು 2.41 ಬಿಲಿಯನ್ ಫೇಸ್‌ಬುಕ್ ಬಳಕೆದಾರರಿಗೆ ಈ ಹೊಸ ಫೀಚರ್‌ ಲಭ್ಯವಾಗಲಿದೆ. ಬಳಕೆದಾರರು ಅವರ ಫೇಸ್‌ಬುಕ್ ಸ್ನೇಹಿತರು ಪೋಸ್ಟ್ ಮಾಡುವ ಫೋಟೊ ಮತ್ತು ವಿಡಿಯೊಗಳಲ್ಲಿ ಟ್ಯಾಗ್ ಮಾಡುವುದನ್ನು ನಿಯಂತ್ರಿಸಬಹುದಾಗಿದೆ.

ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!

ಫೇಸ್‌ಬುಕ್ ಆಪ್‌ಗೆ ಹೊಸದಾಗಿ ಸೇರುವ ಬಳಕೆದಾರರಿಗೆ ಫೇಸ್‌ಬುಕ್‌ನ 'ಫೇಸ್‌ ರಿಕಗ್ನೈಸೆಶನ್' ಫೀಚರ್ ಆಟೋಮ್ಯಾಟಿಕ್ ಆಗಿ ಸೇರಿಸಲಿದೆ. ಹಾಗೆಯೇ ಈಗಾಗಲೇ ಫೇಸ್‌ಬುಕ್ ಬಳಸುತ್ತಿರುವ ಬಳಕೆದಾರರಿಗೆ ಈ ಫೀಚರ್‌ಗೆ ಅಪ್‌ಡೇಟ್ ಆಗಲಿದೆ. ನೀವೆನಾದರೂ 'ಫೇಸ್‌ ರಿಕಗ್ನೈಸೆಶನ್' ಫೀಚರ್ ಆನ್‌ ಮಾಡಿದರೇ, ನೀವಿರುವ ಫೋಟೊವನ್ನು ಸ್ನೇಹಿತರು ಫೋಸ್ಟ್‌ ಮಾಡಿದಾಗ ನೋಟಿಫಿಕೇಶನ್ ಲಭ್ಯವಾಗಲಿವೆ.

ಫೇಸ್‌ಬುಕ್ ಸೇರಿದ ಮತ್ತೊಂದು ಫೀಚರ್!..ಅಕೌಂಟ್ ಪ್ರೈವೆಸಿಗೆ ಮತ್ತಷ್ಟು ಬಲ!

ಇನ್ನು ಟ್ಯಾಗ್ ಸಜೇಶನ್ಸ್‌ ಆಯ್ಕೆಯನ್ನು ಬಳಸುತ್ತಿರುವ ಬಳಕೆದಾರರಿಗೆ ಫೇಸ್‌ ರಿಕಗ್ನೈಸೆಶನ್ ಫೀಚರ್ ನೋಟಿಫಿಕೇಶನ್ ಕಾಣಿಸಿಕೊಳ್ಳಲಿದ್ದು, ಅಲ್ಲಿಯೇ ಟರ್ನ್ ಆನ್‌ ಮತ್ತು ಟರ್ನ್ ಆಫ್ ಆಯ್ಕೆ ನೀಡಲಾಗಿರುತ್ತದೆ ಎನ್ನಲಾಗಿದೆ. ನಿಮ್ಮ ಖಾತೆಯಲ್ಲಿ ಈ ಫೀಚರ್ ಆನ್‌ ಮೋಡ್‌ನಲ್ಲಿದ್ದರೇ, ಯಾರಾದರೂ ನೀವಿರುವ ಫೋಟೊವನ್ನು ನಿಮಗೆ ಟ್ಯಾಗ್ ಮಾಡದಯೇ ಫೋಸ್ಟ್‌ ಮಾಡಿದರೂ ಆ ಕುರಿತು ನಿಮಗೆ ಮಾಹಿತಿ ಬರುತ್ತದೆ.

ಬಳಕೆದಾರರು ಸಭೆ, ಸಮಾರಂಭ, ಪ್ರವಾಸ, ಹೀಗೆ ವಿಶೇಷ ಸಂದರ್ಭಗಳನ್ನು ಒಳಗೊಂಡಂತೆ ತಮ್ಮ ದೈನಂದಿನ ಫೋಟೊಗಳನ್ನು ಫೇಸ್‌ಬುಕ್ ಖಾತೆಯ ವಾಲ್‌ಗೆ ಫೋಸ್ಟ್‌ ಮಾಡಿ ಸ್ನೇಹಿತರಿಂದ ಲೈಕ್ಸ್ ಮತ್ತು ಕಮೆಂಟ್ಸ್‌ಗಳನ್ನು ಪಡೆಯುತ್ತಿರುವುದು ಸರ್ವೇಸಾಮಾನ್ಯ. ಆದ್ರೆ ಫೇಸ್‌ಬುಕ್‌ನ ಹೊಸದಾಗಿ ಲೈಕ್ಸ್‌ ಹೈಡಿಂಗ್ ಫೀಚರ್ ಪರಿಚಯಿಸಲಿದ್ದು, ಖಾತೆದಾರರು ಮಾತ್ರ ಲೈಕ್ಸ್‌ಗಳನ್ನು ನೋಡಬಹುದು.

ಹಾಗೆಯೇ ಫೇಸ್‌ಬುಕ್‌ಗೆ ಹೊಸದಾಗಿ 'ಲೈಕ್ಸ್‌ ಹೈಡಿಂಗ್' ಫೀಚರ್ ಸೇರಿಸುವ ತಯಾರಿಯಲ್ಲಿದ್ದು, ಈ ಆಯ್ಕೆಯಲ್ಲಿ ಬಳಕೆದಾರರು ಫೋಸ್ಟ್‌ ಮಾಡಿರುವ ಫೋಟೊಗೆ ಎಷ್ಟು ಲೈಕ್ಸ್ ಬಂದಿವೆ ಎಂಬುದನ್ನು ಅವರು ಮಾತ್ರ ವೀಕ್ಷಿಸಬಹುದಾಗಿದೆ. ಇನ್ನು ಅವರ ಫೇಸ್‌ಬುಕ್‌ನ ಸ್ನೇಹಿತರಿಗೆ ಒಟ್ಟು ಲೈಕ್ಸ್‌ಗಳು ಕಾಣಿಸುವುದಿಲ್ಲ. ಆದ್ರೆ ಫೋಟೊಗೆ ಮ್ಯೂಚುವಲ್ ಸ್ನೇಹಿತರು ಲೈಕ್‌ ಮಾಡಿದ್ದರೇ, ಆ ಲೈಕ್ಸ್‌ಗಳು ಮಾತ್ರ ಸ್ನೇಹಿತರಿಗೆ ಕಾಣಿಸುತ್ತವೆ.

Best Mobiles in India

English summary
If you have Face Recognition turned on, Facebook will notify you if someone uploads a photo of you. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X