ಫೇಸ್‌ಬುಕ್ ಕಚೇರಿಯಲ್ಲಿ ಮೋಡಿ ಮಾಡಿದ ನರೇಂದ್ರ ಮೋದಿ

By Shwetha
|

ಸ್ಯಾನ್ ಫ್ರಾನ್ಸಿಸ್ಕೋದ ಬಳಿಯಲ್ಲಿರುವ ಮೆನ್ಲೊ ಪಾರ್ಕ್ ಪ್ರಮುಖ ಕಚೇರಿಯಲ್ಲಿ ಫೇಸ್‌ಬುಕ್ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಆಪ್ತ ಸಂಧಾನವನ್ನು ನಡೆಸಿದ್ದಾರೆ. ಹೊಸ ಫೇಸ್‌ಬುಕ್ ಕ್ಯಾಂಪಸ್‌ನಲ್ಲಿ ಆಯೋಜಿತರಾಗಿರುವ ಪ್ರಥಮ ಸರಕಾರಿ ಪ್ರಮುಖರು ಪ್ರಧಾನಿ ನರೇಂದ್ರ ಮೋದಿಯಾಗಿದ್ದಾರೆ.

ಓದಿರಿ: ಮೋದಿ ಡಿಜಿಟಲ್ ಇಂಡಿಯಾ: ಭವ್ಯ ಭಾರತ ಇಲ್ಲಿಂದ ಆರಂಭ

ಸಿಲಿಕಾನ್ ವಾಲ್ಲಿಗೆ ನರೇಂದ್ರ ಮೋದಿ ಭೇಟಿಯ ಎರಡನೇ ದಿನದಂದು 500 ಜನರು ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು. ಇಂದಿನ ಲೇಖನದಲ್ಲಿ ನರೇಂದ್ರ ಮೋದಿಯವರು ಫೇಸ್‌ಬುಕ್ ಕಚೇರಿ ಕಾರ್ಯಾಗಾರದಲ್ಲಿ ನಡೆಸಿದ ಅತ್ಯಂತ ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳೋಣ.

ನರೇಂದ್ರ ಮೋದಿ ಬರಹ

ನರೇಂದ್ರ ಮೋದಿ ಬರಹ

ಫೇಸ್‌ಬುಕ್ ಮುಖ್ಯಕಚೇರಿ ವಾಲ್‌ನಲ್ಲಿ ನರೇಂದ್ರ ಮೋದಿಯವರು ಲಗತ್ತಿಸಿರುವ ಸಂದೇಶದ ನೋಟ

ತಾಯಿಯ ಕುರಿತು ಮಾತು

ತಾಯಿಯ ಕುರಿತು ಮಾತು

ಜುಕರ್‌ಬರ್ಗ್ ಮೋದಿಯವರಲ್ಲಿ ತಮ್ಮ ತಾಯಿಯ ಬಗ್ಗೆ ಮಾತನಾಡಲು ಕೇಳಿದಾಗ ಅವರ ಕಣ್ಣಾಲಿಗಳು ತುಂಬಿ ಬಂದವು. ಭಾರತದಾದ್ಯಂತ ಮಿಲಿಯಗಟ್ಟಲೆ ಹೆತ್ತವರು ತಮ್ಮ ಮಕ್ಕಳಿಗಾಗಿ ಪ್ರತಿಯೊಂದನ್ನು ತ್ಯಾಗ ಮಾಡಿದ್ದಾರೆ ಎಂದರು.

ಮಹಿಳಾ ಸಬಲೀಕರಣದ ಬಗ್ಗೆ ಮೋದಿ ಮಾತು

ಮಹಿಳಾ ಸಬಲೀಕರಣದ ಬಗ್ಗೆ ಮೋದಿ ಮಾತು

100 ಶೇಕಡಾ ಪಾಲುದಾರಿಕೆಯನ್ನು ಮಹಿಳೆಗೆ ನೀಡಲಿದ್ದು ಸಮಾನ ಹಕ್ಕುಗಳನ್ನು ಆಕೆಗೆ ನೀಡಲಾಗುತ್ತಿದೆ. ಪೋಲೀಸ್ ವಿಭಾಗದಲ್ಲಿ 30 ಶೇಕಡಾದಷ್ಟು ಉದ್ಯೋಗಗಳನ್ನು ಮಹಿಳೆಯರಿಗೆ ನೇಮಕಾತಿ ಮಾಡಲಾಗಿದೆ. ಇನ್ನು ತೀರ್ಮಾನ ಕೈಗೊಳ್ಳುವಂತಹ ಪ್ರಮುಖ ವಿಚಾರಗಳಲ್ಲಿಯೂ ಆಕೆಯ ಪಾತ್ರ ಹಿರಿದಾಗಿದೆ.

ಮೇಕ್ ಇನ್ ಇಂಡಿಯಾ

ಮೇಕ್ ಇನ್ ಇಂಡಿಯಾ

ಭಾರತದ ಅಭಿವೃದ್ಧಿಯಲ್ಲಿ ಕ್ಷಿಪ್ರ ಪ್ರಗತಿಯನ್ನು ಮಾಡಲಾಗದಿದ್ದರೂ ನಿಧಾನಗತಿಯ ಪ್ರಗತಿಯನ್ನು ಭಾರತದ ಅಭ್ಯುದಯದಲ್ಲಿ ನಾವು ಮಾಡುತ್ತಿದ್ದೇವೆ.ಇನ್ನು ಬಡವರು ಅನುಕೂಲಕ್ಕೆ ತಕ್ಕಂತೆಯೇ ಬ್ಯಾಂಕ್ ಸೌಲಭ್ಯಗಳಲ್ಲಿ ಪ್ರಗತಿಯನ್ನು ಮಾಡಲಾಗುತ್ತಿದೆ. ನನ್ನ ಸರಕಾರವು 100 ದಿನಗಳಲ್ಲಿ 180 ಮಿಲಿಯನ್ ಬ್ಯಾಂಕ್ ಖಾತೆಗಳನ್ನು ರಚಿಸಿದೆ ಎಂದವರು ನುಡಿದರು.

 ಭಾರತವು ಸ್ವರ್ಗ

ಭಾರತವು ಸ್ವರ್ಗ

ಎಲ್ಲಾ ತಯಾರಕರಿಗೆ ಭಾರತವು ಸ್ವರ್ಗ ಎಂದೆನಿಸಿದೆ. ಆಧುನಿಕ ತಂತ್ರಜ್ಞಾನವನ್ನು ಭಾರತದ ವ್ಯವಹಾರದಲ್ಲಿ ಅಳವಡಿಸಿರುವುದರಿಂದ ಎಲ್ಲಾ ಕ್ಷೇತ್ರದ ಸಾಧನೆಗಳಿಗೂ ಭಾರತ ಅತ್ಯುತ್ತಮ ವೇದಿಕೆ ಎಂದೆನಿಸಿದೆ.

ಅತ್ಯುತ್ತಮ ಸಂಪರ್ಕ

ಅತ್ಯುತ್ತಮ ಸಂಪರ್ಕ

ಸಾಮಾಜಿಕ ಮಾಧ್ಯಮದಲ್ಲಿ ಭಾರತವು ಅತ್ಯುತ್ತಮ ಸಂಪರ್ಕವನ್ನು ಪಡೆದುಕೊಂಡಿದ್ದು ನಮ್ಮನ್ನು ಹೆಚ್ಚು ಸಕ್ರಿಯಗೊಳಿಸಲು ಇದು ನೆರವಾಗಿದೆ.

ಸಂವಹನದ ಕೊರತೆ

ಸಂವಹನದ ಕೊರತೆ

ಸಾಮಾಜಿಕ ಮಾಧ್ಯಮ ಎಂದರೆ ದೈನಂದಿನ ಮತ ಚಲಾವಣೆ ಎಂದಾಗಿದೆ. ಆದ್ದರಿಂದ ಸರಕಾರದ ನಡುವೆ ಯಾವುದೇ ಸಂವಹನದ ಕೊರತೆ ಇದರಿಂದ ಉಂಟಾಗುತ್ತಿಲ್ಲ. ಪ್ರತೀ ಐದು ನಿಮಿಷಗಳಿಗೊಮ್ಮೆ ಸರಕಾರಕ್ಕೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಸಾಧ್ಯವಾಗುತ್ತಿದೆ.

ಅತ್ಯುತ್ತಮ ಪ್ರಗತಿ

ಅತ್ಯುತ್ತಮ ಪ್ರಗತಿ

ನಮ್ಮ ದೇಶದ ಆರ್ಥಿಕ ವ್ಯವಸ್ಥೆಯನ್ನು $20 ಟ್ರಿಲಿಯನ್‌ಗೆ ಏರಿಸುವ ಮಹತ್ವಾಕಾಂಕ್ಷೆಯಲ್ಲಿದ್ದು ಉದ್ಯೋಗ ಸೃಷ್ಟಿ ಮತ್ತು ಕೃಷಿಯಲ್ಲಿ ಅತ್ಯುತ್ತಮ ಪ್ರಗತಿಯ ಮೂಲಕ ಇದು ಸಾಧ್ಯ ಎಂಬುದಾಗಿ ತಿಳಿಸಿದ್ದಾರೆ.

ಅಂತರ್ಜಾಲದ ಹೆಚ್ಚು ಸಂಪರ್ಕ

ಅಂತರ್ಜಾಲದ ಹೆಚ್ಚು ಸಂಪರ್ಕ

ಇನ್ನು ಭಾರತೀಯರೂ ಅಂತರ್ಜಾಲದ ಹೆಚ್ಚು ಸಂಪರ್ಕದಲ್ಲಿದ್ದು ಉದ್ಯೋಗ ಪಡೆದುಕೊಳ್ಳಲು ಮತ್ತು ಬಡತನ ನಿರ್ಮೂಲನೆಗೆ ಇದು ಪೂರಕವಾಗಿದೆ. ಇನ್ನು ಜುಕರ್‌ಬರ್ಗ್ ಮೋದಿಯವರ ಡಿಜಿಟಲ್ ಇಂಡಿಯಾ ಬದ್ಧತೆಗೆ ಅವರನ್ನು ಅಭಿನಂದಿಸಿದ್ದಾರೆ.

ಮಾರ್ಕ್ ಜುಕರ್‌ಬರ್ಗ್ ಡಿಜಿಟಲ್ ಇಂಡಿಯಾ ಬೆಂಬಲ

ಮಾರ್ಕ್ ಜುಕರ್‌ಬರ್ಗ್ ಡಿಜಿಟಲ್ ಇಂಡಿಯಾ ಬೆಂಬಲ

ತಮ್ಮ ಫೇಸ್‌ಬುಕ್ ಪ್ರೊಫೈಲ್ ಚಿತ್ರವನ್ನು ತಿರಂಗದ ಬಣ್ಣಕ್ಕೆ ಪರಿವರ್ತಿಸುವುದರ ಮೂಲಕ ಮಾರ್ಕ್ ಜುಕರ್‌ಬರ್ಗ್ ಡಿಜಿಟಲ್ ಇಂಡಿಯಾಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

Most Read Articles
Best Mobiles in India

English summary
Prime Minister Narendra Modi and Facebook CEO Mark Zuckerberg addressed a Townhall event at the social network’s sprawling headquarters in Menlo Park near San Francisco. PM Modi was the first head of government to be hosted at the new Facebook campus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more