Subscribe to Gizbot

ಇವನು ಫೇಸ್ ಬುಕ್ ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ

Posted By: Varun

 

ಇವನು ಫೇಸ್ ಬುಕ್ ಗೆಳೆಯನಲ್ಲ, ಗೆಳತಿ ನಾನು ಮೊದಲೇ ಅಲ್ಲ

ಮುಂಗಾರು ಮಳೆ ಪ್ಯಾತೋ ಹಾಡು ಇಲ್ಲ್ಯಾಕಪ್ಪಾ ಬಂತು ಅನ್ಕೊಂಡ್ರಾ. ಕಾರಣ ಇದೆ ಕಣ್ರೀ. ಇನ್ನ್ಮೇಲೆ ಫೇಸ್ ಬುಕ್ ಅಲ್ಲಿ ನಿಮ್ಮ ಫ್ರೆಂಡ್ಸ್ ಯಾರಾದ್ರೂ ನಿಮ್ಮನ್ನ ಅವರ ಫ್ರೆಂಡ್ಸ್ ಲಿಸ್ಟ್ ನಿಂದ ಕಿತ್ತಾಕಿದ್ರೆ ನಿಮಗೆ ಗೊತ್ತಾಗ್ಬಿಡುತ್ತೆ ಕಣ್ರೀ.

ಫೇಸ್ ಬುಕ್ ನಲ್ಲಿ ಇರುವ ಹೊಸ ಟೂಲ್ ನ ನೀವು ಒಂದು ಸಲಿ ಡೌನ್ಲೋಡ್ ಮಾಡಿಕೊಂಡರೆ ಸಾಕು, ಯಾರ್ ಯಾರು ನಿಮ್ಮನ್ನ ಅನ್ ಫ್ರೆಂಡ್ ಮಾಡಿದಾರೆ ಅಂತ ಗೊತ್ತಾಗುತ್ತೆ.ಡೌನ್ಲೋಡ್ ಮಾಡಿದ ಮೇಲೆ ನಿಮ್ಮ ಮೆನು ಬಾರ್ ನಲ್ಲಿ ಹೊಸ ಗೆಳಯ/ಗೆಳತಿಯರನ್ನ ಸೇರಿಸಿಕೊಂಡರೆ +1 ಅಂತ ತೋರಿಸುತ್ತೆ. ಅದೇ ಅವರು ನಿಮ್ಮನ್ನ ಡಿಲೀಟ್ ಮಾಡಿದರೆ -1 ಅಂತ ತೋರಿಸುತ್ತೆ.

ಈಗಾಗಲೇ ತುಂಬಾ ಫೇಮಸ್ ಆಗಿರೋ ಈ ಸಾಫ್ಟ್ ವೇರ್ ಫೇಸ್ ಬುಕ್ ಅಲ್ಲೇ ಉಚಿತವಾಗಿ ಲಭ್ಯವಿದ್ದು, ಆಗಲೇ 4.4 ಕೋಟಿ ಬಾರಿ ಡೌನ್ಲೋಡ್ ಆಗಿದೆಯಂತೆ. ಅಸಲಿ ಫ್ರೆಂಡ್ಸ್ ಯಾರು ಅಂತ ಇವತ್ತೇತಿಳ್ಕೊತೀರಲ್ಲ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot