Subscribe to Gizbot

ಫೇಸ್‌ಬುಕ್‌ ವಾಟ್ಸ್‌ಆಪ್‌ ಡೀಲ್‌: ತಿಳಿಯಲೇಬೇಕಾದ 7 ವಿಷಯಗಳು

Posted By:

ಕಡಿಮೆ ಅವಧಿಯಲ್ಲಿ ಹೆಚ್ಚು ಜನಪ್ರಿಯವಾದ ವಾಟ್ಸ್‌ ಆಪ್‌ನ್ನು ಫೇಸ್‌‌ಬುಕ್‌ 19 ಶತಕೋಟಿ ಡಾಲರ್‌ ನೀಡಿ ಖರೀದಿಸಿದೆ. ಒಂದು ವರ್ಷದೊಳಗೆ ಈ ಒಪ್ಪಂದ ಪ್ರಕ್ರಿಯೆ ಸಂಪೂರ್ಣ‌ವಾಗಲಿದೆ.

ಈ ಫೇಸ್‌‌ಬುಕ್‌ ಖರೀದಿಸುವ ಮೊದಲೇ ವಾಟ್ಸ್‌ ಆಪ್‌ ಜನಪ್ರಿಯತೆಯನ್ನು ನೋಡಿ ಗೂಗಲ್‌ ಸಹ ಖರೀದಿಸಲು ಆಸಕ್ತಿ ತೋರಿಸಿತ್ತಂತೆ. ಆದರೆ ಕೆಲವೊಂದು ಕಾರಣಗಳಿಂದಾಗಿ ವಾಟ್ಸ್‌ಆಪ್‌ ಗೂಗಲ್‌ ಒಪ್ಪಂದ ಪ್ರಕ್ರಿಯೆಯಿಂದ ಹಿಂದೆ ಸರಿದಿತ್ತು.

ಈಗ ವಾಟ್ಸ್‌ ಆಪ್‌ ಫೇಸ್‌ಬುಕ್‌ ಡೀಲ್‌ ಟೆಕ್‌ ಜಗತ್ತಿನಲ್ಲಿ ದೊಡ್ಡ ಡೀಲ್‌ ಎಂದೇ ಫೇಮಸ್ಸಾಗಿದೆ. ಹೀಗಾಗಿ ಈ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಮುಖ್ಯವಾದ ನೀವು ತಿಳಿಯಲೇಬೇಕಾದ ಕೆಲವೊಂದು ವಿಷಯಗಳಿದ್ದು ಅದನ್ನು ಇಲ್ಲಿ ನೀಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಫೇಸ್‌‌ಬುಕ್‌ನ ದೊಡ್ಡ ಖರೀದಿ:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


ಫೇಸ್‌ಬುಕ್‌ ವಾಟ್ಸ್‌ ಆಪ್‌ ಸೇರಿದಂತೆ ಇದುವರೆಗೂ ಒಟ್ಟು 45 ಕಂಪೆನಿಗಳನ್ನು ಖರೀದಿಸಿದೆ. ಈ ಖರೀದಿಯಲ್ಲಿ ಅತಿ ಹೆಚ್ಚು ಬೆಲೆ ನೀಡಿ ಫೇಸ್‌ಬುಕ್‌ ಖರೀದಿಸಿದ ಕಂಪೆನಿ ವಾಟ್ಸ್‌ ಆಪ್‌. ಫೇಸ್‌‌ಬುಕ್‌ ವಾಟ್ಸ್‌ ಆಪ್‌ನ್ನು 19 ಶತಕೋಟಿ ಡಾಲರ್‌‌‌ ನೀಡಿ ಸ್ವಾಧೀನ ಪಡಿಸಿಕೊಂಡಿದೆ. ಈ ಹಿಂದೆ ಫೋಟೋ ಶೇರ್‌ ಮಾಡುವ ಇನ್‌ಸ್ಟಾಗ್ರಾಮ್‌ನ್ನು ಫೇಸ್‌‌ಬುಕ್‌‌ ಒಂದು ಶತಕೋಟಿ ಡಾಲರ್‌ ನೀಡಿ ಖರೀದಿಸಿತ್ತು.

 ಅತಿ ದೊಡ್ಡ ಒಪ್ಪಂದ:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


ಐಟಿ ವಲಯದಲ್ಲಿ ಅತಿ ದೊಡ್ಡ ಕಂಪೆನಿಗಳಾದ ಗೂಗಲ್‌‌,ಮೈಕ್ರೋಸಾಫ್ಟ್‌,ಆಪಲ್‌ ಸಹ ಇಷ್ಟು ದುಬಾರಿ ಬೆಲೆ ನೀಡಿ ಯಾವುದೇ ಕಂಪೆನಿಯನ್ನು ಖರೀದಿ ಮಾಡಿರಲಿಲ್ಲ.ಗೂಗಲ್‌ ಮೋಟರೋಲಾ ಮೊಬಿಲಿಟಿ ಅತಿ ಹೆಚ್ಚು ಬೆಲೆಯನ್ನು ನೀಡಿ ಖರೀದಿಸಿತ್ತು. ಈ ಒಪ್ಪಂದಕ್ಕೆ 12.5 ಶತಕೋಟಿ ಡಾಲರ್‌ ನೀಡಿತ್ತು. ಮೈಕ್ರೋಸಾಫ್ಟ್‌‌ ಸ್ಕೈಪ್‌ನ್ನು 8.5 ಶತ ಕೋಟಿ ಡಾಲರ್‌ ನೀಡಿ ಖರೀದಿತ್ತು.ಆಪಲ್‌ ಇದುವರೆಗೂ ಒಂದು ಶತ ಕೋಟಿ ಡಾಲರ್‌ಗಿಂತಲೂ ಅಧಿಕ ಮೊತ್ತಕ್ಕೆ ಯಾವುದೇ ಕಂಪೆನಿಯನ್ನು ಖರೀದಿಸಿಲ್ಲ.

 ಎರಡು ವರ್ಷ‌ಗಳ ಮಾತುಕತೆ:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


ವಾಟ್ಸ್‌ ಆಪ್‌ ಜನಪ್ರಿಯತೆ ಹೆಚ್ಚಾಗುತ್ತಿದ್ದಂತೆ ಫೇಸ್‌‌ಬುಕ್‌ ಎರಡು ವರ್ಷ‌ಗಳ ಹಿಂದೆಯೇ ಖರೀದಿ ಸಂಬಂಧ ಮಾತುಕತೆ ನಡೆಸಿತ್ತು ಎಂದು ಹೇಳಲಾಗುತ್ತಿದೆ. ಈ ವರ್ಷ‌ದ ಆರಂಭದಲ್ಲಿ ಫೇಸ್‌‌ಬುಕ್‌ ಸಂಸ್ಥಾಪಕ ಜುಕರ್‌ಬರ್ಗ್‌ ಮನೆಯ ಔತಣಕೂಟಕ್ಕೆ ವಾಟ್ಸ್‌ಆಪ್‌ ಸಂಸ್ಥಾಪಕ ಉಕ್ರೈನಿನ ಜನ್‌ ಕೌಮ್‌ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಅಂತಿಮ ಒಪ್ಪಂದ,ಮಾರಾಟ ಪ್ರಕ್ರಿಯೆ ಮಾತುಕತೆ ನಡೆದಿತ್ತು.

 ಗೂಗಲ್‌ ವಾಟ್ಸ್‌ ಆಪ್‌ ಡೀಲ್‌!:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


ಕೆಲವೊಂದು ಮಾಧ್ಯಮಗಳಲ್ಲಿ ಪ್ರಕಟಗೊಂಡತೆ ಗೂಗಲ್‌ ಕಂಪೆನಿ ಸಹ ವಾಟ್ಸ್‌ಆಪ್‌ ಖರೀದಿಗೆ ಆಸಕ್ತಿ ತೋರಿಸಿತ್ತು. 10 ಶತಕೋಟಿ ಡಾಲರ್‌‌ ಒಪ್ಪಂದ ಸಹ ನಡೆಸಿತ್ತು. ಆದರೆ ಗೂಗಲ್‌, ವಾಟ್ಸ್‌ಆಪ್‌ ಸಂಸ್ಥಾಪಕ ಜನ್‌ ಕೌಮ್‌ ಗೂಗಲ್‌ ಬೋರ್ಡ್‌ನ ಡೈರೆಕ್ಟರ್‌ ಹುದ್ದೆ ನೀಡಲು ನಿರಾಕರಿಸಿತ್ತು. ಈ ಕಾರಣದಿಂದಾಗಿ ವಾಟ್ಸ್‌ಆಪ್‌ ಈ ಗೂಗಲ್‌ ಒಪ್ಪಂದದಿಂದ ಹಿಂದೆ ಸರಿದಿತ್ತು ಎಂದು ಕೆಲ ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.

ಫೇಸ್‌ಬುಕ್‌ ವಾಟ್ಸ್‌ಆಪ್‌ ಡೀಲ್‌


ಬಹಳ ಅಚ್ಚರಿಯ ಸುದ್ದಿಯೆಂದರೆ ವಾಟ್ಸ್‌ಆಪ್‌ ಸಂಸ್ಥಾಪಕ
ಅಮೆರಿಕದ ಬ್ರಿಯಾನ್ ಆಕ್ಟನ್‌ಗೆ(Brian Acton) ಫೇಸ್‌‌ಬುಕ್‌‌ ಉದ್ಯೋಗ ನೀಡಲು ನಿರಾಕರಿಸಿತ್ತು.ಈ ಸಂದರ್ಭಲ್ಲಿ ಟ್ವೀಟರ್‌‌ನಲ್ಲಿ ಬ್ರಿಯಾನ್ ಆಕ್ಟನ್‌ ಫೇಸ್‌‌ಬುಕ್‌ ನನ್ನನ್ನು ತಿರಸ್ಕರಿಸಿದ್ದರೂ ಪರವಾಗಿಲ್ಲ.ಕೆಲ ಜನರದೊಂದಿಗೆ ಸಂಪರ್ಕಿಸಲು ಒಂದು ಉತ್ತಮವಾದ ಅವಕಾಶ ಸಿಕ್ಕಿದೆ ಎಂದು ಭಾವಿಸುತ್ತೇನೆ. ಜೀವನದ ಮತ್ತೊಂದು ಸಾಹಸಕ್ಕೆ ಕೈಹಾಕುತ್ತಿದ್ದೇನೆ ಎಂದು ಟ್ವೀಟ್‌ ಮಾಡಿದ್ದರು.

 ವಾಟ್ಸ್‌ ಆಪ್‌ ಸಂಖ್ಯಾ ಸುದ್ದಿಗಳು:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


45 ಕೋಟಿ ಜನ ವಾಟ್ಸ್‌ ಆಪ್‌ನ್ನು ಬಳಸುತ್ತಿದ್ದು, ಪ್ರತಿದಿನ 19 ಶತಕೋಟಿ ಮೆಸೇಜ್‌‌‌ಗಳು, 60 ಕೋಟಿ ಚಿತ್ರಗಳು 10 ಕೋಟಿ ವಿಡಿಯೋಗಳು ವಾಟ್ಸ್‌ ಆಪ್‌ನಲ್ಲಿ ಹರಿದಾಡುತ್ತಿದೆ.

 ವಾಟ್ಸ್‌ ಆಪ್‌ನಲ್ಲಿ ಹೆಚ್ಚು ಸಕ್ರೀಯ ಬಳಕೆದಾರರು:

ಫೇಸ್‌ಬುಕ್‌ ತೆಕ್ಕೆಗೆ ವಾಟ್ಸ್‌ಆಪ್‌


ಕಡಿಮೆ ಅವಧಿಯಲ್ಲಿ 45 ಕೋಟಿ ಜನ ಪ್ರತಿ ತಿಂಗಳು ಸಕ್ರೀಯವಾಗಿ ವಾಟ್ಸ್‌ಆಪ್‌ನ್ನು ಬಳಸುತ್ತಿದ್ದಾರೆ. ಆರಂಭಗೊಂಡ ಮೊದಲ ನಾಲ್ಕು ವರ್ಷ‌ದಲ್ಲಿ ಫೇಸ್‌‌ಬುಕ್‌ನಲ್ಲಿ ಪ್ರತಿ ತಿಂಗಳು 14.5 ಕೋಟಿ,ಜಿಮೇಲ್‌‌ನಲ್ಲಿ 12.3 ಕೋಟಿ, ಟ್ವೀಟರ್‌ನಲ್ಲಿ 5.4 ಕೋಟಿ,ಸ್ಕೈಪ್‌‌ನಲ್ಲಿ 5.2 ಕೋಟಿ ಗ್ರಾಹಕರು ಸಕ್ರೀಯವಾಗಿದ್ದರು.

photo curtsy:cdn-static.zdnet.com

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot