Subscribe to Gizbot

ಫೇಸ್‌ಬುಕ್‌ನ ರಿಫ್ ವಿಶೇಷತೆ ಬಲ್ಲಿರಾ?

Written By:

ಫೇಸ್‌ಬುಕ್ ಹೊಸದಾಗಿ ರಿಫ್ ಎಂಬ ಅಪ್ಲಿಕೇಶನ್ ಅನ್ನು ವಿನ್ಯಾಸಗೊಳಿಸಿದ್ದು ಇದು ಒಂದು ವೀಡಿಯೊ ತುಣುಕಿನ ಸುತ್ತ ಸುತ್ತಿ ಮಾಹಿತಿಯನ್ನು ಕಲೆಹಾಕಿ ಫೇಸ್‌ಬುಕ್‌ನಲ್ಲಿ ಶೀಘ್ರ ಪ್ರಚಾರವನ್ನು ಪಡೆಯಲು ನೆರವಾಗಲಿದೆ. ಇದು ಫೇಸ್‌ಬುಕ್ ಚಾಟ್‌ನಂತೆ ಕಾರ್ಯನಿರ್ವಹಿಸಲಿದೆ.

ಇದನ್ನೂ ಓದಿ: ಫೇಸ್‌ಬುಕ್ ಕವರ್ ಫೋಟೋ ಹೀಗಿದ್ದರೆ ಚೆನ್ನ

ಫೇಸ್‌ಬುಕ್‌ನ ರಿಫ್ ವಿಶೇಷತೆ ಬಲ್ಲಿರಾ?

ಪ್ರಥಮ ಬಾರಿಗೆ ಬಳಕೆದಾರರು ರಿಫ್ ವೀಡಿಯೊವನ್ನು ರಚಿಸಿದಾಗ, ತಮ್ಮ ಸ್ನೇಹಿತರಿಗೆ ಇದನ್ನು ಟ್ಯಾಗ್ ಮಾಡಬಹುದು ಮತ್ತು ಟ್ರೆಂಡಿಯಾಗಿ ಇದನ್ನು ಹರಡಿಸಬಹುದಾಗಿದೆ. ಆಂಡ್ರಾಯ್ಡ್ ಮತ್ತು ಐಓಎಸ್ ಮೊಬೈಲ್ ಡಿವೈಸ್‌ಗಳೆರಡರಲ್ಲೂ ಅಪ್ಲಿಕೇಶನ್ ಲಭ್ಯವಿದೆ. ಕಳೆದ ವರ್ಷದ ಅಲಾಸ್ ಐಸ್ ಬಕೇಟ್ ಚಾಲೆಂಜ್ ಸಮಯದಲ್ಲಿ ಇದು ಜನ್ಮತಾಳಿದ್ದು ಐಸ್ ಬಕೇಟ್ ಚಾಲೆಂಜ್ ಈ ಅಪ್ಲಿಕೇಶನ್ ರಚನೆಗೆ ಕಾರಣವಾಗಿದೆ ಎನ್ನಲಾಗಿದೆ.

ಇದನ್ನೂ ಓದಿ: ಫೇಸ್‌ಬುಕ್‌ನಲ್ಲಿ ಅಪರಿಚಿತ ವ್ಯಕ್ತಿಯನ್ನು ನಿರ್ಬಂಧಿಸುವುದು ಹೇಗೆ?

ಫೇಸ್‌ಬುಕ್‌ನ ರಿಫ್ ವಿಶೇಷತೆ ಬಲ್ಲಿರಾ?

ಫೇಸ್‌ಬುಕ್ ಕ್ರಿಯೆಟೀವ್ ಲ್ಯಾಬ್ ಪ್ರೊಡಕ್ಟ್ ಮ್ಯಾನೇಜರ್ ಜೋಶ್ ಮಿಲ್ಲರ್ ಪ್ರಕಾರ, ಈ ವೀಡಿಯೊಗಳನ್ನು ಸಾಧ್ಯವಾದಷ್ಟು ದೊಡ್ಡದಾಗಿಸುವುದು ಮತ್ತು ಹೆಚ್ಚು ವೀಕ್ಷಣೆಗಳು ಅಂತೆಯೇ ಕ್ಲಿಪ್‌ಗಳನ್ನು ಪಡೆದುಕೊಳ್ಳುವುದು ಎಂದಿದ್ದಾರೆ. ಇನ್ನು ಸ್ನ್ಯಾಪ್‌ಚಾಟ್ ಕೂಡ "ಅವರ್ ಸ್ಟೋರೀಸ್" ಎಂಬ ಇಂತಹುದೇ ಫೀಚರ್ ಅನ್ನು ಹೊಂದಿದ್ದು ರಿಫ್‌ಗೆ ಇದುವೇ ಪ್ರೇರಣೆಯಾಗಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.

English summary
Facebook has introduced a standalone app called Riff that has been designed as an evolving mix of clips that revolve around a topic which works like a Facebook chat thread where users can make additions and make it go viral.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot