ಪೋಲೀಸ್ ಕಮಿಷನರ್ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ

Posted By: Varun
ಪೋಲೀಸ್ ಕಮಿಷನರ್ ನಕಲಿ ಫೇಸ್ ಬುಕ್ ಖಾತೆ ಸೃಷ್ಟಿ

ಜಗತ್ತಿನ ನಂ.1 ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನ ಸದ್ಬಳಕೆ ಎಷ್ಟು ಇದೆಯೋ ಅದಕ್ಕಿಂತಾ ಹೆಚ್ಚಾಗಿ ದುರ್ಬಳಕೆ ಮಾಡುವುದೇ ಹೆಚ್ಚಾಗಿದೆ.

ಗಂಡ ಹೆಂಡತಿಗೆ ಮೋಸ ಮಾಡುವುದು, ಬಾಯ್ ಫ್ರೆಂಡ್ ಗಳನ್ನ ಮಾಡಿಕೊಂಡು ಹುಡುಗರನ್ನು ಏಮಾರಿಸುವುದು, ಚಾಟಿಂಗ್ ಮೂಲಕ ಮೋಸ ಮಾಡುವುದು, ನಕಲಿ ಖಾತೆ ಸೃಷ್ಟಿಸಿ ಚಾರಿತ್ರ್ಯ ವಧೆ ಮಾಡುವುದು, ಈ ರೀತಿಯ ಫೇಸ್ ಬುಕ್ ಅವಗಘಢಗಳನ್ನು ಓದಿರುತ್ತೀರಿ.

ಕೆಲವುರು ಫೇಸ್ ಬುಕ್ ನಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನೂ ಮಾಡುವ ಸುದ್ದಿ ಹೊಸದೇನಲ್ಲ. ಆದರೆ ಉತ್ತರ ಪ್ರದೇಶದ ಅನುಭವ್ ಬಿಪಿನ್ ಕುಮಾರ್ ಯಾದವ್ ಎಂಬ BBA ಓದುತ್ತಿರುವ 19 ವರ್ಷದ ಹುಡುಗನೊಬ್ಬ, ಮುಂಬೈ ಪೋಲೀಸ್ ಅಧಿಕಾರಿಯಯೊಬ್ಬರ ನಕಲೀ ಫೇಸ್ ಬುಕ್ ಪ್ರೊಫೈಲ್ ಅನ್ನು ಸೃಷ್ಟಿಸಿ, ಈಗ ಸೈಬರ್ ಪೊಲೀಸರಿಗೆ ಸಿಕ್ಕಿಹಾಕಿಕೊಂಡಿದ್ದಾನೆ.

ಅಂದಹಾಗೆ ಈತ ಸೃಷ್ಟಿಸಿದ್ದು, ಮುಂಬೈ ನಗರದಲ್ಲಿ ಪೋಲೀಸ್ ಕಮಿಷನರ್ ಆಗಿರುವ ಮೀರನ್ ಬೋರ್ವಂಕರ್ ಎಂಬುವವರ ಪ್ರೊಫೈಲ್ ಅನ್ನು. ಆಕೆ ಫೇಸ್ ಬುಕ್ ನಲ್ಲಿ ತನ್ನ ಪ್ರೊಫೈಲ್ ಅನ್ನು ಚೆಕ್ ಮಾಡುತ್ತಿದ್ದಾಗ ಈ ನಕಲಿ ಪ್ರೊಫೈಲ್ ಕೂಡ ಗೋಚರಿಸಿದ್ದು ಕಂಡುಬಂದು, ಅನುಮಾನಗೊಂಡ ಆಕೆ ಸೈಬರ್ ಪೊಲೀಸರಿಗೆ ತನಿಖೆ ಮಾಡಲು ಸೂಚಿಸಿದ್ದರಂತೆ.

ಕೂಡಲೇ ಕಾರ್ಯಪ್ರವೃತ್ತರಾದ ಸೈಬರ್ ಪೊಲೀಸರು, ಗೂಗಲ್ ಹಾಗು ISP ಸಹಾಯದಿಂದ ಆರೋಪಿಯನ್ನು ಪತ್ತೆ ಹಚ್ಚಲು ಸಾಧ್ಯವಾಯಿತು. ಹೀಗಾಗಿ ಬಿಪಿನ್ ಕುಮಾರ್ ಯಾದವ್ ಮೇಲೆ ಈಗ ಸೈಬರ್ ಅಪರಾಧದ ಕೇಸ್ ದಾಖಲಾಗಿದೆ.

ಜಗತ್ತಿನಲ್ಲಿ ಎಷ್ಟೆಲ್ಲ ಸೆಲೆಬ್ರಿಟಿಗಳು ಇದ್ದಾರೆ, ಅವರ ಎಷ್ಟೊಂದು ನಕಲಿ ಖಾತಗಳು ಇವೆ. ಅವರುಗಳ ಖಾತೆ ಸೃಷ್ಟಿ ಮಾಡಿದ್ದರೆ ಸ್ವಲ್ಪ ಹೆಸರಾದರೂ ಬರುತ್ತಿತ್ತು. ಅದು ಬಿಟ್ಟು ಈತ ಹೋಗಿ ಹೋಗಿ ಮಹಿಳಾ ಪೋಲೀಸ್ ಅಧಿಕಾರಿಯ, ಅದೂ ಕಮಿಷನರ್ ಅವರ ನಕಲಿ ಖಾತೆ ಸೃಷ್ಟಿ ಮಾಡಿ ಈಗ ಕಂಬಿ ಏಣಿಸುವಂತಾಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot