ಲೋನ್‌ ಅಪ್ಲಿಕೇಶನ್‌ಗಳಲ್ಲಿ ಸಾಲ ಪಡೆಯುವ ಮುನ್ನ ಎಚ್ಚರ ಎಚ್ಚರ?

|

ಇತ್ತೀಚಿನ ದಿನಗಳಲ್ಲಿ ಫೇಕ್‌ ಲೋನ್‌ ಅಪ್ಲಿಕೇಶನ್‌ಗಳ ಕಾಟ ಜಾಸ್ತಿಯಾಗಿದೆ. ಆನ್‌ಲೈನ್‌ನಲ್ಲಿ ಇನ್ಸ್‌ಟಂಟ್‌ ಲೋನ್‌ ನೀಡುವ ನೆಪದಲ್ಲಿ ಗ್ರಾಹಕರಿಗೆ ವಂಚನೆ ಮಾಡುವವ ಅಪ್ಲಿಕೇಶನ್‌ಗಳು ಹೆಚ್ಚಾಗಿವೆ. ಸ್ಮಾರ್ಟ್‌ಫೋನ್‌ನಲ್ಲಿಯೇ ಕೇವಲ ಕೆಲವೇ ನಿಮಿಷಗಳಲ್ಲಿ ಲೋನ್‌ ನೀಡುವ ಆಮಿಷ ಒಡ್ಡುವ ಲೋನ್‌ ಅಪ್ಲಿಕೇಶನ್‌ಗಳು ನಂತರ ಗ್ರಾಹಕರಿಗೆ ಮೋಸ ಮಾಡುತ್ತಿರೋದು ವರದಿಯಾಗುತ್ತಲೇ ಇದೆ. ಅಲ್ಲದೆ ಲೋನ್‌ ಅಪ್ಲಿಕೇಶನ್‌ಗಳ ಮೂಲಕ ಸಾಲ ಪಡೆದವರು ನಂತರ ಏನೆಲ್ಲಾ ಸಂಕಷ್ಟ ಎದುರಿಸಬೇಕಾಗುತ್ತದೆ ಅನ್ನೊದು ಈಗಾಗಲೇ ಜಗಜ್ಜಾಹೀರು ಆಗಿದೆ.

ಲೋನ್‌

ಹೌದು, ಲೋನ್‌ ಅಪ್ಲಿಕೇಶನ್‌ಗಳ ಮೂಲಕ ಲೋನ್‌ ಪಡೆಯಲು ಪ್ರಯತ್ನಿಸುವವರು ಈ ಸ್ಟೋರಿಯನ್ನು ಓದಲೇಬೇಕು. ಲೋನ್‌ ಅಪ್ಲಿಕೇಶನ್‌ಗಳ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ ಬಳಕೆದಾರರ ವೈಯುಕ್ತಿಕ ಡೇಟಾ ಕದಿಯುವ ಪ್ರಯತ್ನಗಳು ಮೊದಲಿನಿಂದಲೂ ನಡೆಯುತ್ತಲೇ ಬಂದಿದೆ. ಅದರಲ್ಲಿಯೂ ಕೆಲವು ನಕಲಿ ಲೋನ್‌ ಅಪ್ಲಿಕೇಶನ್‌ಗಳು ಗ್ರಾಹಕರಿಗೆ ಇನ್ನಿಲ್ಲದ ಕಾಟವನ್ನು ನೀಡುತ್ತಿವೆ. ಲೋನ್‌ ನೀಡುವ ನೆಪದಲ್ಲಿ ಗ್ರಾಹಕರ ಬ್ಯಾಂಕ್‌ ಖಾತೆ ವಿವರ ಪಡೆದು ಅವರ ಖಾತೆಯಲ್ಲಿನ ಹಣವನ್ನು ಎಗಿರಿಸಿರುವ ಘಟನೆಗಳು ಕೂಡ ನಡೆದಿವೆ.

ಅಪ್ಲಿಕೇಶನ್‌

ಇದೀಗ ಫೇಕ್‌ ಲೋನ್‌ ಅಪ್ಲಿಕೇಶನ್‌ ಮೂಲಕ ಗ್ರಾಹಕರಿಗೆ ಮೋಸ ಮಾಡಿದ ಪ್ರಕರಣ ಕೇರಳದಲ್ಲಿ ವರದಿಯಾಗಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಕೇರಳದ ಮುಲಾಂತುರುತಿ ಮತ್ತು ಪಂಬಾಕುಡದ ಸ್ಥಳೀಯರು ಫೇಕ್‌ ಲೋನ್‌ ಅಪ್ಲಿಕೇಶನ್‌ನಿಂದ ಮೋಸ ಹೋಗಿದ್ದಾರೆ. ಅದರಂತೆ ಇವರಿಬ್ಬರೂ ಕ್ರಮವಾಗಿ 3.6 ಲಕ್ಷ ಮತ್ತು 1 ಲಕ್ಷ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಹಾಗಾದ್ರೆ ಫೇಕ್‌ ಲೋನ್‌ ಅಪ್ಲಿಕೇಶನ್‌ಗಳಿಂದ ಮೋಸ ಹೋಗುತ್ತಿರುವುದು ಹೇಗೆ? ಇದರಿಂದ ತಪ್ಪಿಸಿಕೊಳ್ಳಲು ನೀವು ಏನು ಮಾಡಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಲೋನ್‌

ಫೇಕ್‌ ಲೋನ್‌ ಅಪ್ಲಿಕೇಶನ್‌ ಮೂಲಕ ಸಾಕಷ್ಟು ಜನ ಈಗಾಗಲೇ ಮೋಸ ಹೋಗಿದ್ದಾರೆ. ಇದೀಗ ಕೇರಳದ ಮುಲಾಂತುರುತಿ ಮತ್ತು ಪಂಬಾಕುಡದ ಸ್ಥಳೀಯರು ಫೇಕ್‌ ಲೋನ್‌ ಅಪ್ಲಿಕೇಶನ್‌ನಿಂದ ಮೋಸ ಹೋಗಿದ್ದಾರೆ. ಟೈಮ್ಸ್‌ ಆಫ್‌ ಇಂಡಿಯಾದ ವರದಿಯ ಪ್ರಕಾರ, ವಂಚಕರು ನಿರ್ದಿಷ್ಟ ಮೊತ್ತವನ್ನು ಕ್ರೆಡಿಟ್ ಮಾಡುವ ಮೊದಲು ಗ್ರಾಹಕರ ಗುರುತನ್ನು ಪರಿಶೀಲಿಸಲು ವಿವರಗಳನ್ನು ಕೇಳಿದ್ದಾರೆ. ವಿವಿರಗಳನ್ನು ಪಡೆದುಕೊಳ್ಳುವ ನೆಪದಲ್ಲಿ ಗ್ರಾಹಕರಿಗೆ ಬಂದ ಒಟಿಪಿ ಸಂಖ್ಯೆಯನ್ನು ಪಡೆದುಕೊಂಡಿದ್ದಾರೆ. ಒಟಿಪಿಯನ್ನು ಪಡೆದುಕೊಂಡ ವಂಚಕರು ಗ್ರಾಹಕರ ಬ್ಯಾಂಕ್‌ ಖಾತೆಯಲ್ಲಿದ್ದ ಹಣವನ್ನು ಎಗರಿಸಿದ್ದಾರೆ.

ವಂಚನೆಗೆ

ಫೇಕ್‌ ಲೋನ್‌ ಅಪ್ಲಿಕೇಶನ್‌ನಿಂಚ ಮೋಸ ಹೋದ ನಂತರ ವಂಚನೆಗೆ ಒಳಗಾದವರೂ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಅದೃಷ್ಟವಶಾತ್, ವಂಚಕರು ಬೇರೆ ಅಪ್ಲಿಕೇಶನ್ ಬಳಸಿ ಗಿಫ್ಟ್‌ ಕಾರ್ಡ್‌ಗಳನ್ನು ಖರೀದಿಸಲು ಹಣವನ್ನು ಬಳಸಿದ್ದಾರೆ ಎಂದು ಪತ್ತೆ ಹಚ್ಚಿದ ಪೊಲೀಸರು ವಂಚಕರಿಂದ ಹಣವನ್ನು ಮರಳಿಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಮತ್ತೊಂದು ಪ್ರಕರಣದಲ್ಲಿ, ಕೊಚ್ಚಿ ಪೊಲೀಸರು ಎಡಪ್ಪಲ್ಲಿಯ 25 ವರ್ಷದ ಮಹಿಳೆಯಿಂದ ದೂರನ್ನು ಸ್ವೀಕರಿಸಿದ್ದಾರೆ. ಮಹಿಳೆಯು ಲೋನ್‌ ಆಪ್‌ನಲ್ಲಿ ಸಾಲ ಪಡೆದಿದ್ದು, ಲೋನ್‌ ಮರುಪಾವತಿ ಮಾಡುವ ದಿನಾಂಕ ಹತ್ತಿರವಾಗುತ್ತಿದ್ದಂತೆ ಬೆದರಿಕೆ ಮತ್ತು ನಿಂದನೀಯ ಸಂದೇಶಗಳನ್ನು ಸ್ವಿಕರಿಸಿರುವುದಾಗಿ ದೂರು ನೀಡಿದ್ದಾರೆ.

ಅಪ್ಲಿಕೇಶನ್‌

ಲೋನ್‌ ಅಪ್ಲಿಕೇಶನ್‌ ಮೂಲಕ ಲೋನ್‌ ಪಡೆದುಕೊಂಡಿರುವ ಮಹಿಳೆಗೆ ವಂಚಕರು ಬೆದರಿಕೆಯನ್ನು ಹಾಕಿದ್ದಾರೆ. ಅಲ್ಲದೆ ಆಕೆಯ ಫೋಟೋಗಳನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ದ ಸ್ಥಳೀಯ ಪೊಲೀಸರು "ಐಪಿಸಿ ಸೆಕ್ಷನ್ 354A (1) (iv) ಅಡಿ ಹಾಗೂ 506ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಇದೇ ರೀತಿಯ ಅನೇಕ ಪ್ರಕರಣಗಳು ದೇಶದ ಹಲವು ಕಡೆ ದಾಖಲಾಗಿವೆ. ಇದಲ್ಲದೆ ಸರ್ಕಾರವೂ ಕೂಡ ಕೆಲವು ಲೋನ್‌ ಅಪ್ಲಿಕೇಶನ್‌ಗಳನ್ನು ಬ್ಯಾನ್‌ ಮಾಡಿದೆ. ಆದರೂ ಕೂಡ ಆನ್‌ಲೈನ್‌ ಲೋನ್‌ ಅಪ್ಲಿಕೇಶನ್‌ಗಳಿಂದ ವಂಚನೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚುತಲೆ ಇದೆ.

ತಿಂಗಳು

ಕಳೆದ ತಿಂಗಳು ಕೂಡ ಇದೇ ಮಾದರಿಯ ಪ್ರಕರಣವೊಂದು ವರದಿಯಾಗಿದೆ. ಈ ಪ್ರಕರಣದಲ್ಲಿ 20 ವರ್ಷದ ಯುವಕ ಗೋಲ್ಡ್ ಕ್ಯಾಶ್ ಆ್ಯಪ್‌ನಿಂದ 11,000 ರೂಪಾಯಿ ಸಾಲ ಪಡೆದಿದ್ದಾನೆ. ಆದರೆ ಆತ ಲೋನ್‌ ಮರುಪಾವತಿ ಮಾಡುವಲ್ಲಿ ವಿಳಂಬವಾದ ಕಾರಣ ಆತನಿಗೆ ಬೆದರಿಕೆ ಸಂದೇಶಗಳು ಬರುವುದಕ್ಕೆ ಶುರುವಾಗಿದೆ. ಅಲ್ಲದೆ ವಂಚಕರು ಸಾಲದ ಮೊತ್ತವನ್ನು ಮರುಪಾವತಿ ಮಾಡುವಂತೆ ಅವನ ಸ್ನೇಹಿತರಿಗೆ ಯುವಕನ ಮಾರ್ಫ್ ಮಾಡಿದ ಚಿತ್ರಗಳನ್ನು ಸೆಂಡ್‌ ಮಾಡಿದ್ದಾರೆ. ಈ ಘಟನೆಯ ನಂತರ ಕೊಚ್ಚಿ ಪೊಲೀಸರು ಐಪಿಸಿ ಸೆಕ್ಷನ್ 506 ಕ್ರಿಮಿನಲ್ ಬೆದರಿಕೆ, ಐಟಿ ಆಕ್ಟ್ ಸೆಕ್ಷನ್ 66 (ಇ) ಗೌಪ್ಯತೆಯ ಉಲ್ಲಂಘನೆಗಾಗಿ ಮತ್ತು ಕೇರಳ ಪೊಲೀಸ್ ಆಕ್ಟ್ 120 (ಒ) ಅಡಿಯಲ್ಲಿ ಅಪ್ಲಿಕೇಶನ್ ತಯಾರಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. .

ಲೋನ್‌

ಲೋನ್‌ ಅಪ್ಲಿಕೇಶನ್‌ಗಳಲ್ಲಿ ಸಾಲ ಪಡೆಯುವ ಮುನ್ನ ಗ್ರಾಹಕರು ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆ ಇದೆ. ಯಾವುದು ಅಸಲಿ ಅಪ್ಲಿಕೇಶನ್‌, ಯಾವುದು ನಕಲಿ ಅಪ್ಲಿಕೇಶನ್‌ಗಳೆಂಬ ಅರಿವು ಇರಬೇಕಾಗುತ್ತದೆ. ಸಾಲವನ್ನು ಪಡೆಯುವ ತರಾತುರಿಯಲ್ಲಿ ನೀವು ಲೋನ್‌ ಅಪ್ಲಿಕೇಶನ್‌ಗಳ ಗಾಳಕ್ಕೆ ಸಿಲುಕಿಕೊಂಡರೆ ನಿಮಗೆ ನಷ್ಟ ಗ್ಯಾರಂಟಿ ಅನ್ನೊದು ಪೊಲೀಸರ ವಾದವಾಗಿದೆ. ಏಕೆಂದರೆ ಕಡಿಮೆ ಅವಧಿಯಲ್ಲಿ ಲೋನ್‌ ನೀಡುವ ಅಪ್ಲಿಕೇಶನ್‌ಗಳು ಸಾಲ ಮರುಪಾವತಿಯನ್ನು ಮಾಡಿಸುವಾಗ ಗ್ರಾಹಕರಿಗೆ ಇನ್ನಿಲ್ಲದ ಕಾಟವನ್ನು ನೀಡುತ್ತಾರೆ. ಇಂತಹ ಘಟನೆಗಳಿಂದ ಸಾಕಷ್ಟು ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಕೂಡ ದಾಖಲಾಗಿವೆ.

ಲೋನ್‌ ಅಪ್ಲಿಕೇಶನ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ?

ಲೋನ್‌ ಅಪ್ಲಿಕೇಶನ್‌ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ಹೀಗೆ ಮಾಡಿ?

ಲೋನ್‌ ಅಪ್ಲಿಕೇಶನ್‌ಗಳಿಂದ ವಂಚನೆಗೆ ಒಳಗಾಗುವುದನ್ನು ನೀವು ತಪ್ಪಿಸಿಕೊಳ್ಳಲು ಸುಲಭ ಮಾರ್ಗವೆಂದರೆ ಲೋನ್‌ ಅಪ್ಲಿಕೇಶನ್‌ಗಳಿಂದ ಸಾಲವನ್ನು ಪಡೆಯಬಾರದು. ಸ್ಮಾರ್ಟ್‌ಫೋನ್‌ಗಳಲ್ಲಿ ಸಾಲ ನೀಡುವುದಾಗಿ ಹೇಳುವ ಲೋನ್‌ ಅಪ್ಲಿಕೇಶನ್‌ಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವುದು ಉತ್ತ. ಇದಲ್ಲದೆ, ಸ್ಮಾರ್ಟ್‌ಫೋನ್ ಬಳಕೆದಾರರು ತಮ್ಮ ಸೂಕ್ಷ್ಮ ಡೇಟಾಗಳಾದ ಫೋಟೋ ಗ್ಯಾಲರಿ ಮತ್ತು ಸಂಪರ್ಕಗಳಿಗೆ ಪ್ರವೇಶವನ್ನು ಕೇಳುವ ಲೋನ್‌ ಅಪ್ಲಿಕೇಶನ್‌ಗಳನ್ನು ಬಳಸಲೇಬಾರದು. ಪ್ಲೇ ಸ್ಟೋರ್ ಅಥವಾ ಆಪ್ ಸ್ಟೋರ್‌ನಿಂದ ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡುವ ಮೊದಲು ಡೆವಲಪರ್‌ಗಳ ವಿವರಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

Most Read Articles
Best Mobiles in India

Read more about:
English summary
fraudsters to find new ways to lure innocent smartphone users to gain access to their personal data and ultimately rob them off their money.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X