13 ಲಕ್ಷದ ನಕಲಿ ಶಿಯೋಮಿ ಉತ್ಪನ್ನಗಳು ಸೀಜ್‌!..ಖರೀದಿಸುವಾಗ ಇರಲಿ ಎಚ್ಚರ!

|

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಭಾರಿ ಮುಂಚೂಣಿಯಲ್ಲಿ ಗುರುತಿಸಿಕೊಂಡಿರುವ ಶಿಯೋಮಿ ಕಂಪನಿಯು ಇತ್ತೀಚಿಗೆ ಹಲವು ಹೊಸ ಉತ್ಪನ್ನಗಳನ್ನು ಪರಿಚಯಸಿದೆ. ಹಲವು ಬಜೆಟ್‌ ಬೆಲೆಯ ಸ್ಮಾರ್ಟ್‌ಫೋನ್‌ಗಳ ಮೂಲಕ ಗ್ರಾಹಕರ ಮನಗೆದ್ದಿರುವ ಶಿಯೋಮಿ, ವಾಟರ್ ಫ್ಯೂರಿಫೈರ್, ಸ್ಮಾರ್ಟ್‌ ಬಲ್ಬ್, ಮಿ ಸೈಕಲ್, ಮಿ ಟಿ-ಶರ್ಟ್ ನಂತಹ ಇತರೆ ಉತ್ಪನ್ನಗಳಿಂದಲೂ ಗ್ರಾಹಕರನ್ನು ಆಕರ್ಷಿಸಿದೆ. ಆದರೆ ಇದೀಗ ಶಿಯೋಮಿಗೆ ಶುರುವಾಗಿದೆ ನಕಲಿ ಉತ್ಪನ್ನಗಳ ಹಾವಳಿ.

ಶಿಯೋಮಿಯ ನಕಲಿ ಉತ್ಪನ್ನ

ಹೌದು, ಇತ್ತೀಚಿಗಷ್ಟೆ ದೆಹಲಿಯ ಗಫರ್ ಮಾರುಕಟ್ಟೆಯಲ್ಲಿ ಸುಮಾರು 13 ಲಕ್ಷ ಮೌಲ್ಯದ ಶಿಯೋಮಿಯ ನಕಲಿ ಉತ್ಪನ್ನಗಳನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ಕಂಪನಿಯ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಕಾಣಿಸಿಕೊಂಡಿರುವ ಬಗ್ಗೆ ದೆಹಲಿ ಪೊಲೀಸರಿಗೆ ಶಿಯೋಮಿ ಕಂಪ್ಲೈಂಟ್ ನೀಡಿರುವ ಹಿನ್ನಲೆಯಲ್ಲಿ ಈ ರೇಡ್‌ ನಡೆದಿದೆ. ರೇಡ್‌ ವೇಳೆ ಪೊಲೀಸರ ಜೊತೆ ಕಂಪನಿಯ ಸಿಬ್ಬಂದಿಗಳು ಭಾಗಿಯಾಗಿದ್ದರು.

ಕೆಲವು ಅಂಗಡಿ

ರೇಡ್ ನಡೆಸಿದ ವೇಳೆ ಸುಮಾರು 2000ಕ್ಕೂ ಅಧಿಕ ಶಿಯೋಮಿಯ ನಕಲಿ ಉತ್ಪನ್ನಗಳನ್ನು ಕೆಲವು ಅಂಗಡಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಅವುಗಳಲ್ಲಿ ಕಂಪನಿಯ ಹೆಸರಿನ ನಕಲಿ ಪವರ್‌ಬ್ಯಾಂಕ್, ಹೆಡ್‌ಫೋನ್, ನೆಕ್‌ಬ್ಯಾಂಡ್, ರೆಡ್ಮಿ ಏರ್ ಡಾಟ್ಸ್‌, ಟ್ರಾವೆಲ್‌ ಅಡಾಪ್ಟರ್‌, ಇಯರ್‌ಫೋನ್, ಚಾರ್ಜರ್ ಕೇಬಲ್ ಸೇರಿದಂತೆ ಇನ್ನಿತರೆ ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ಗಳು ಇದ್ದವು ಎಂದು ಹೇಳಲಾಗಿದೆ.

ಜನಪ್ರಿಯ ಸೋನಿ

ಜನಪ್ರಿಯ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಜನಪ್ರಿಯ ಸೋನಿ, ಸ್ಯಾಮ್‌ಸಂಗ್, ನೋಕಿಯಾ ಕಂಪನಿಗಳ ಹೆಸರಿನಲ್ಲಿ ನಕಲಿ ಉತ್ಪನ್ನಗಳು ಕಾಣಿಸಿಕೊಂಡಿದ್ದ ಘಟನೆಗಳು ಈ ಹಿಂದೆ ನಡೆದಿವೆ. ಹೀಗಾಗಿ ಗ್ರಾಹಕರಿಗೆ ಉತ್ಪನ್ನಗಳುನ್ನು ಖರೀದಿಸುವಾಗ ನೈಜತೆಯ ಬಗ್ಗೆ ಪರಿಶೀಲಿಸಿ ಖರೀದಿಸಲು ಉತ್ತಮ.

ಸುರಕ್ಷತೆಗೆ ಅಪಾಯಕಾರಿ

ನಕಲಿ ಉತ್ಪನ್ನಗಳ ಬಳಕೆ ಕಂಪನಿಗಳಿಗೆಷ್ಟೆ ಸಮಸ್ಯೆಯಲ್ಲ. ಅವುಗಳ ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಗೆ ಮತ್ತು ಮುಖ್ಯವಾಗಿ ದತ್ತಾಂಶ ಸುರಕ್ಷತೆಗೆ ಅಪಾಯಕಾರಿ ಆಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ. ಒಂದು ನಿರ್ದಿಷ್ಟ ಅವಧಿಯ ನಂತರ ಅವು ಅಸಮರ್ಪಕವಾಗಿ ಕಾರ್ಯನಿರ್ವಹಿಸಬಹುದು ಮತ್ತು ಬಳಕೆದಾರರಿಗೆ ಈ ಅಪಾಯಗಳ ಬಗ್ಗೆ ತಿಳಿದಿಲ್ಲದಿರಬಹುದು. ಎಂಬ ಶಿಯೋಮಿ ಹೇಳಿದೆ.

ಪರಿಶೀಲಿಸುವುದು ಹೇಗೆ ಅಂತೀರಾ?

ಪರಿಶೀಲಿಸುವುದು ಹೇಗೆ ಅಂತೀರಾ?

ಶಿಯೋಮಿ ಉತ್ಪನ್ನಗಳನ್ನು ಖರೀದಿಸುವಾಗ ಅವುಗಳು ಅಸಲಿ ಆಗಿವೆ ಎನ್ನುವುದನ್ನು ಪರಿಶೀಲಿಸುವುದು ಹೇಗೆ ಅಂತೀರಾ?..ಅದಕ್ಕೆ ಈ ಕೆಳಗಿನ ಕೆಲವು ಕ್ರಮಗಳನ್ನು ಅನುಸರಿಸಿರಿ.

* ಪ್ಯಾಕಿಂಗ್ ಡಿಸೈನ್ ಮತ್ತು ಪ್ಯಾಕಿಂಗ್ ಗುಣಮಟ್ಟ ಚೆಕ್ ಮಾಡಿ. ಓರಿಜಿನಲ್ ಪ್ಯಾಕಿಂಗಗಳ ಗುಣಮಟ್ಟ ಉತ್ತಮವಾಗಿರುತ್ತದೆ. ಸಮೀಪದ ಶಿಯೋಮಿ ಅಧಿಕೃತ ತಾಣದಲ್ಲಿ ಖರೀದಿಸುವುದು ಉತ್ತಮ.

* ಗ್ರಾಹಕರು ಶಿಯೋಮಿ ಉತ್ಪನ್ನಗಳನ್ನು ಖರೀದಿಸುವಾಗ ಕಂಪನಿಯ Mi ಲೊಗೊವನ್ನು ಚೆಕ್ ಮಾಡಿರಿ. ಅಧಿಕೃತ ಲೊಗೊ ಹೇಗಿದೆ ಎಂಬುದನ್ನು Mi.com ವೆಬ್‌ಸೈಟ್‌ನಲ್ಲಿ ತಿಳಿಯಬಹುದು.

* ಅಧಿಕೃತ ಶಿಯೋಮಿ ಫಿಟ್ನೆಸ್‌ ಉತ್ಪನ್ನಗಳು ಮಿ ಆಪ್‌ ಬೆಂಬಲ ಪಡೆದಿರುತ್ತವೆ. ಆ ಕುರಿತು ಪರಿಶೀಲಿಸಿ ಖರೀದಿಸುವುದು ಉತ್ತಮ.

* ಶಿಯೋಮಿಯ ಅಧಿಕೃತ ಬ್ಯಾಟರಿಗಳು ಆರಂಭದಲ್ಲಿ Li-Poly ಹೆಸರನ್ನು ಹೊಂದಿರುತ್ತವೆ. ಒಂದು ವೇಳೆ Li-ion ಕಂಡು ಬಂದರೇ ಅವು ನಕಲಿ ಎಂದರ್ಥ.

* ನಕಲಿ ಕೇಬಲ್ ಉತ್ಪನ್ನಗಳು ಬಾಳಿಕೆ ಹೆಚ್ಚಿರುವುದಿಲ್ಲ ಮತ್ತು ಬೇಗನೆ ಮುರಿದು ಹೋಗುತ್ತವೆ.

Most Read Articles
Best Mobiles in India

English summary
company has announced that counterfeit Xiaomi products estimated to be worth over Rs 13 lakhs have been seized from four suppliers in Gaffar market. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X