‘ಫಾಸ್ಟ್ಯಾಗ್‌' ನಲ್ಲಿರುವ ಹಣವನ್ನು ಕದಿಯಬಹುದಾ? NPCI ಏನ್‌ ಹೇಳಿದೆ ಗೊತ್ತಾ?

|

ಕೆಲವು ದಿನಗಳ ಹಿಂದೆ ಫಾಸ್ಟ್ಯಾಗ್‌ಗೆ ಸಂಬಂಧಿಸಿದಂತೆ ವೀಡಿಯೊ ಒಂದು ವೈರಲ್‌ ಆಗಿತ್ತು. ಈ ವಿಡಿಯೋದಲ್ಲಿ ಸ್ಮಾರ್ಟ್‌ವಾಚ್‌ ಮೂಲಕ ಸ್ಕ್ಯಾನ್‌ ಮಾಡಿ ಫಾಸ್ಟ್ಯಾಗ್‌ನಲ್ಲಿದ್ದ ಹಣವನ್ನು ಕದಿಯಲಾಗಿದೆ ಎಂದು ಹೇಳಲಾಗಿತ್ತು. ಕಾರನ್ನು ಒರೆಸುವ ನೆಪದಲ್ಲಿ ಬಾಲಕನೊಬ್ಬ ಫಾಸ್ಟ್ಯಾಗ್‌ನಲ್ಲಿದ್ದ ಹಣವನ್ನು ಎಗರಿಸಿದ್ದಾನೆ ಎಂದು ಹೇಳಿ ವೀಡಿಯೊ ವೈರಲ್‌ ಮಾಡಲಾಗಿತ್ತು. ಈ ವೀಡಿಯೊ ವೈರಲ್‌ ಆಗ್ತಿದ್ದ ಹಾಗೇ ಫಾಸ್ಟ್ಯಾಗ್‌ನಲ್ಲಿರುವ ಹಣ ಸೇಫ್‌ ಅಲ್ಲ ಎನ್ನುವ ವಂದತಿ ಹಬ್ಬಿತ್ತು. ಆದರೆ ಫಾಸ್ಟ್ಯಾಗ್‌ ಮೂಲಕ ಯಾರು ಕೂಡ ಹಣ ಕದಿಯಲು ಸಾಧ್ಯವಿಲ್ಲ ಎಂದು NPCI ಸ್ಪಷ್ಟನೆ ಪಡಿಸಿದೆ.

ಫಾಸ್ಟ್ಯಾಗ್‌

ಹೌದು, ಸೊಶೀಯಲ್‌ ಮೀಡಿಯಾದಲ್ಲಿ ಹರಿದಾಡುವ ವೈರಲ್‌ ವೀಡಿಯೊಗಳು ಸೃಷ್ಟಿಸುವ ಆವಂತಾರ ಅಷ್ಟಿಷ್ಟಲ್ಲ. ಕೆಲವೊಮ್ಮೆ ನಾಗರಿಕರನ್ನು ದಾರಿತಪ್ಪಿಸುವ ಕೆಲಸವನ್ನು ಕೂಡ ಮಾಡಿಬಿಡುತ್ತವೆ. ಇದಕ್ಕೆ ಸ್ಪಷ್ಟ ಉದಾಹರಣೆ ಅಂದರೆ ಇತ್ತೀಚಿಗೆ ಹರಿದಾಡಿದ ಫಾಸ್ಟ್ಯಾಗ್‌ ವಂಚನೆಯ ವೀಡಿಯೋ ಕೂಡ ಒಂದು. ಸ್ಮಾರ್ಟ್‌ವಾಚ್‌ ಮೂಲಕ ಫಾಸ್ಟ್ಯಾಗ್‌ ಸ್ಕ್ಯಾನ್‌ ಮಾಡಿ ಹಣ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎನ್ನುವ ವೀಡಿಯೊ ವಾಹನ ಚಾಲಕರನ್ನು ಚಿಂತೆಗೀಡು ಮಾಡಿತ್ತು. ಅಷ್ಟೇ ಅಲ್ಲ ಫಾಸ್ಟ್ಯಾಗ್‌ ವಂಚನೆಯ ಬಗ್ಗೆ ಸಾಕಷ್ಟು ಊಹಾಪೋಹ ಸುದ್ದಿಗಳು ಹರಿಬಿಡಲಾಗಿತ್ತು.

ಫಾಸ್ಟ್ಯಾಗ್‌

ಇದೀಗ ಫಾಸ್ಟ್ಯಾಗ್‌ ವಂಚನೆಗೆ ಸಂಬಂಧಿಸಿದ ಸುದ್ದಿಗೆ ಫುಲ್‌ಸ್ಟಾಪ್‌ ಬಿದ್ದಿದೆ. ಬಾಲಕನೊಬ್ಬ ಫಾಸ್ಟ್ಯಾಗ್‌ ಹಣ ವರ್ಗಾಯಿಸಿಕೊಂಡಿದ್ದಾನೆ ಎಂದು ಹೇಳುವ ವೀಡಿಯೊ ಫೇಕ್‌ ಆಗಿದೆ. ಜನರನ್ನು ದಾರಿ ತಪ್ಪಿಸುವ ಉದ್ದೇಶದಿಂದಲೇ ಈ ವೀಡಿಯೊವನ್ನು ವೈರಲ್‌ ಮಾಡಲಾಗಿದೆ ಎನ್ನಲಾಗಿದೆ. ಏಕೆಂದರೆ NPCI ಹೇಳಿರುವಂತೆ ಫಾಸ್ಟ್ಯಾಗ್‌ ವ್ಯಕ್ತಿಯಿಂದ ವ್ಯಕ್ತಿಗೆ ಪಾವತಿ ಮಾಡುವುದಕ್ಕೆ ಅನುಮತಿಸುವುದಿಲ್ಲ. ಹಾಗಾದ್ರೆ ಫಾಸ್ಟ್ಯಾಗ್‌ ವೈರಲ್‌ ವೀಡಿಯೊ ಬಗ್ಗೆ NPCI ಹೇಳಿರೋದೇನು? ಫಾಸ್ಟ್ಯಾಗ್‌ ವೈರಲ್‌ ವೀಡಿಯೊ ಬಗ್ಗೆ ನೀಡಿರುವ ಸ್ಪಷ್ಟನೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಾಸ್ಟ್ಯಾಗ್‌

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫಾಸ್ಟ್ಯಾಗ್‌ ವಂಚನೆಯ ವೀಡಿಯೋ ಆಧಾರರಹಿತ ಎಂದು ಭಾರತೀಯ ರಾಷ್ಟ್ರೀಯ ಪಾವತಿ ಮಂಡಳಿ (NPCI) ಟ್ವಿಟರ್‌ನಲ್ಲಿ ಸ್ಪಷ್ಟನೆ ನೀಡಿದೆ. ಅಲ್ಲದೆ "NETC ಫಾಸ್ಟ್‌ಟ್ಯಾಗ್ ವ್ಯಕ್ತಿಯಿಂದ ವ್ಯಾಪಾರಿ (P2M) ವಹಿವಾಟುಗಳಿಗೆ ಮಾತ್ರ ಕಾರ್ಯನಿರ್ವಹಿಸುತ್ತದೆ. NETC ಫಾಸ್ಟ್ಯಾಗ್‌ ನೆಟ್‌ವರ್ಕ್ ಮೂಲಕ ಯಾವುದೇ ವ್ಯಕ್ತಿಯಿಂದ ವ್ಯಕ್ತಿಗೆ (P2P) ವಹಿವಾಟುಗಳನ್ನು ಸುಗಮಗೊಳಿಸಲಾಗುವುದಿಲ್ಲ ಎಂದು ಹೇಳಿದೆ. ಅಂದರೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬ ವ್ಯಕ್ತಿಗೆ ಯಾವುದೇ ಕಾರಣಕ್ಕೂ ಫಾಸ್ಟ್ಯಾಗ್‌ ಹಣ ಪಾವತಿಸಲು ಸಾಧ್ಯವಿಲ್ಲ. ಅಧಿಕೃತ ಸಿಸ್ಟಮ್ ಇಂಟಿಗ್ರೇಟರ್‌ಗಳಿಗೆ (SI) ಮಾತ್ರ ಅಂದರೆ ಟೋಲ್‌ ಪ್ಲಾಜಾಗಳಲ್ಲಿ ಪಾವತಿ ವಹಿವಾಟುಗಳನ್ನು ನಡೆಸುವುದಕ್ಕೆ ಮಾತ್ರ ಅವಕಾಶವಿದೆ.

ಫಾಸ್ಟ್ಯಾಗ್‌

ಇನ್ನು ಫಾಸ್ಟ್ಯಾಗ್‌ ಎಸ್‌ಐ ಸಿಸ್ಟಮ್ ಹೊಂದಿರುವುದರಿಂದ ಸುರಕ್ಷಿತವಾಗಿದೆ. ಅಂದರೆ ರಿಯಾಯ್ತಿದಾರರು ಮತ್ತು ಬ್ಯಾಂಕ್‌ಗಳ ನಡುವೆ ನಿಯೋಜಿಸಲಾದ ಮೂಲಸೌಕರ್ಯವು ಅನುಮತಿಸಲಾದ ಐಪಿ ವಿಳಾಸಗಳು ಮತ್ತು ಯುಆರ್‌ಎಲ್‌ಗಳನ್ನು ಶ್ವೇತಪಟ್ಟಿ ಮಾಡುವ ಮೂಲಕ ಸುರಕ್ಷಿತವಾಗಿದೆ. ಟೋಲ್ ಪ್ಲಾಜಾ ಡೇಟಾ ಸೆಂಟರ್/ಸರ್ವರ್ ರೂಮ್‌ನಲ್ಲಿ ಸ್ಥಾಪಿಸಲಾದ ಹಾರ್ಡ್‌ವೇರ್ ಸೆಕ್ಯುರಿಟಿ ಮಾಡ್ಯೂಲ್ ಮೂಲಕ ನಿಮ್ಮ ಫಾಸ್ಟ್ಯಾಗ್‌ ಕ್ರಿಪ್ಟೋಗ್ರಾಫಿಕವಾಗಿ ಸುರಕ್ಷಿತವಾಗಿರಲಿದೆ ಎಂದು NPCI ಸ್ಪಷ್ಟ ಪಡಿಸಿದೆ.

ಫಾಸ್ಟ್ಯಾಗ್‌

ಫಾಸ್ಟ್ಯಾಗ್‌ ಅನ್ನು ಸ್ವಾಧೀನಪಡಿಸಿಕೊಳ್ಳುವ ಬ್ಯಾಂಕ್‌ಗೆ AID ಅನ್ನು ನೀಡಲಾಗಿದೆ. ಇದರಿಂದ ಪ್ಲಾಜಾ ಕೋಡ್ ಮತ್ತು ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುವವರ ID ಸಂಯೋಜನೆಯನ್ನು NPCI ಕೊನೆಯಲ್ಲಿ ಮ್ಯಾಪ್ ಮಾಡಿದೆ. ಇದರಿಂದ ಪ್ರತಿ ಟೋಲ್‌ ಪ್ಲಾಜಾದ ಜಿಯೋ ಲೋಕೇಶನ್‌ ಅನ್ನು ನಿಮ್ಮ ಫಾಸ್ಟ್ಯಾಗ್‌ನ ಬ್ಯಾಂಕ್‌ಗಳು ಮತ್ತು NPCI ನಲ್ಲಿ ಸ್ಟೊರೇಜ್‌ ಮಾಡಿರುತ್ತದೆ. ಆದರಿಂದ ತೆರೆದ ಇಂಟರ್ನೆಟ್ ಸಂಪರ್ಕದ ಮೂಲಕ ಯಾವುದೇ ವಹಿವಾಟುಗಳನ್ನು ಕಾರ್ಯಗತಗೊಳಿಸಲಾಗುವುದಿಲ್ಲ. ಇಂತಹ ಫೇಕ್‌ ವೀಡಿಯೊಗಳಿಗೆ ಯಾರು ಕೂಡ ತಲೆ ಕೆಡಿಸಿಕೊಳ್ಳಬಾರದು NPCI ಹೇಳಿದೆ.

ನ್ಯಾಷನಲ್

ಇನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (NPCI) ರಾಷ್ಟ್ರೀಯ ಎಲೆಕ್ಟ್ರಾನಿಕ್ ಟೋಲ್ ಕಲೆಕ್ಷನ್ (NETC) ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದೆ. ಫಾಸ್ಟ್ಯಾಗ್‌ ಎಂಬುದು ಇಂಡಿಯನ್ ಹೈವೇಸ್ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL) ಒಡೆತನದ ಬ್ರಾಂಡ್ ಹೆಸರಾಗಿದ್ದು, ಇದು ಎಲೆಕ್ಟ್ರಾನಿಕ್ ಟೋಲಿಂಗ್ ಮತ್ತು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಗಳ (NHAI) ಇತರ ಪೂರಕ ಯೋಜನೆಗಳನ್ನು ನಿರ್ವಹಿಸುತ್ತದೆ.

ಫಾಸ್ಟ್ಯಾಗ್‌ ಎಂದರೇನು?

ಫಾಸ್ಟ್ಯಾಗ್‌ ಎಂದರೇನು?

ರಾಷ್ಟ್ರೀಯ ಹೆದ್ದಾರಿಯ ಟೊಲ್‌ಗಳಲ್ಲಿ ಸಂಚಾರ ದಟ್ಟಣೆ ತಪ್ಪಿಸುವುದಕ್ಕಾಗಿ ಕೇಂದ್ರ ಸರ್ಕಾರ ಫಾಸ್ಟ್ಯಾಗ್‌ ಅನ್ನು ಪರಿಚಯಿಸಿದೆ. ಫಾಸ್ಟ್ಯಾಗ್‌ ಮೂಲಕ ಟೋಲ್‌ ಹಣ ಪಾವತಿಸುವ ವಾಹನ ಹೆಚ್ಚು ಸಮಯ ಟೋಲ್‌ನಲ್ಲಿ ಕಾಯಬೇಕಾದ ಅವಶ್ಯಕತೆಯಿಲ್ಲ. ಸುಲಭವಾಗಿ ಹೇಳುವುದಾದರೆ RFID (ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್) ಇರುವ ಸ್ಮಾರ್ಟ್ ಲೇಬಲ್‌ಗಳೇ ಫಾಸ್ಟ್ಯಾಗ್‌ ಆಗಿದೆ.ಇದನ್ನು ನಿಮ್ಮ ವಾಹನಕ್ಕೆ ಅಂಟಿಸಿದರೆ ಟೋಲ್ ಬೂತ್‌ಗಳಲ್ಲಿರುವ ಫಾಸ್ಟ್ಯಾಗ್ ಲೇನ್‌ನಲ್ಲಿ ರೀಡರ್ ಇರಲಿದೆ. ಈ ದಾರಿಯಲ್ಲಿ ವಾಹನ ಹಾದು ಹೋದಾಗ ವಾಹನಕ್ಕೆ ಅಂಟಿಸಿರುವ ಫಾಸ್ಟ್ಯಾಗ್ ರೀಡ್ ಆಗಿ ಫಾಸ್ಟ್ಯಾಗ್ ಖಾತೆಯಿಂದ ಶುಲ್ಕ ಪಾವತಿಯಾಗಲಿದೆ. ಗೂಗಲ್ ಪ್ಲೇಸ್ಟೋರ್‌ನಿಂದ ಆಪ್‌ ಡೌನ್‌ಲೋಡ್ ಮಾಡಿಕೊಂಡು ವಾಹನದ ಮಾಹಿತಿ ನಮೂದಿಸಿದರೆ ಫಾಸ್ಟ್ಯಾಗ್‌ ಆಕ್ಟಿವೇಟ್ ಆಗಲಿದೆ.

ಫಾಸ್ಟ್ಯಾಗ್‌ ಅನ್ನು ಯಾರು ಖರೀದಿಸಬಹುದು?

ಫಾಸ್ಟ್ಯಾಗ್‌ ಅನ್ನು ಯಾರು ಖರೀದಿಸಬಹುದು?

ಫಾಸ್ಟ್ಯಾಗ್‌ ಅನ್ನು ಯಾವುದೇ ವಾಹನ ಮಾಲೀಕರು ಖರೀದಿಸಬಹುದಾಗಿದೆ. ತಾವು ಖಾತೆದಾರರಾಗಿರುವ ಬ್ಯಾಂಕ್‌ಗಳಿಂದ ಫಾಸ್ಟ್ಯಾಗ್ ಖರೀದಿಸಬಹುದು. ಅಲ್ಲದೆ ಇಂದಿನ ದಿನಗಳಲ್ಲಿ ಫಾಸ್ಟ್ಯಾಗ್‌ ಹೊಂದಿರುವುದು ಕಡ್ಡಾಯವಾಗಿದೆ. ಫಾಸ್ಟ್ಯಾಗ್‌ ಇಲ್ಲದೆ ಟೋಲ್‌ಗಳಲ್ಲಿ ಪ್ರಯಾಣಿಸಿದರೆ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಸದ್ಯ ಫಾಸ್ಟ್ಯಾಗ್‌ ಎಸ್‌ಬಿಐ, ಆಕ್ಸಿಸ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮೊದಲಾದ ನೋಂದಾಯಿತ 23 ಬ್ಯಾಂಕ್‌ಗಳಲ್ಲಿ ಲಭ್ಯವಿದೆ.

ಫಾಸ್ಟ್ಯಾಗ್‌ ಅನ್ನು ರೀಚಾರ್ಜ್‌ ಮಾಡುವುದು ಹೇಗೆ?

ಫಾಸ್ಟ್ಯಾಗ್‌ ಅನ್ನು ರೀಚಾರ್ಜ್‌ ಮಾಡುವುದು ಹೇಗೆ?

ವಾಹನ ಚಾಲಕರು ನೇರವಾಗಿ ಬ್ಯಾಂಕಿನಿಂದ ಹಣವನ್ನು ಪಾವತಿಸುವ ಮೂಲಕ ಫಾಸ್ಟ್ಯಾಗ್‌ ಅನ್ನು ರೀಚಾರ್ಜ್‌ ಮಾಡಬಹುದು. ತನ್ನ ಬ್ಯಾಂಕ್‌ ಖಾತೆ ಇರುವುದಕ್ಕೆ ಫಾಸ್ಟ್ಯಾಗ್ ಲಿಂಕ್‌ ಮಾಡಿಸಬಹುದಾಗಿದೆ. ಇಲ್ಲವೇ ಪ್ರತ್ಯೇಕವಾಗಿ ಹಣ ಜಮೆ ಮಾಡಿಕೊಳ್ಳಬಹುದು. ಇದಲ್ಲದೆ ಗೂಗಲ್‌ ಪೇ, ಪೋನ್‌ಪೇ, ಮತ್ತು BHIM UPI ಮೂಲಕ FASTag ಅನ್ನು ರೀಚಾರ್ಜ್‌ ಮಾಡಬಹುದಾಗಿದೆ.

PhonePe ಬಳಸಿ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

PhonePe ಬಳಸಿ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡುವುದು ಹೇಗೆ?

ಹಂತ:1 PhonePe ಅಪ್ಲಿಕೇಶನ್ ತೆರೆಯಿರಿ ಮತ್ತು FASTag ಐಕಾನ್ ಕ್ಲಿಕ್ ಮಾಡಿ.
ಹಂತ:2 ವಿತರಿಸುವ ಬ್ಯಾಂಕುಗಳ ಪಟ್ಟಿಯಿಂದ, ನಿಮ್ಮ ಫಾಸ್ಟ್ಯಾಗ್ ನೀಡುವ ಬ್ಯಾಂಕ್ ಅನ್ನು ಆರಿಸಿ.
ಹಂತ:3 ಅಗತ್ಯವಿರುವ ಎಲ್ಲಾ ವಿವರಗಳನ್ನು ನಮೂದಿಸಿ.
ಹಂತ:4 ನಿಮ್ಮ ಫಾಸ್ಟ್‌ಟ್ಯಾಗ್ ಅನ್ನು ರೀಚಾರ್ಜ್ ಮಾಡಲು ಪಾವತಿ ಮಾಡಿ.

Best Mobiles in India

Read more about:
English summary
Fastags does not support person-to-person transactions: NCPI clarifies on fraud claim videos

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X