Subscribe to Gizbot

ಕಂದನ ಜನನ ವೀಕ್ಷಣೆಯನ್ನು ತಂದೆಗೆ ದಯಪಾಲಿಸಿದ ಸ್ಯಾಮ್‌ಸಂಗ್

Written By:

ವರ್ಚುವಲ್ ರಿಯಾಲಿಟಿ ಹ್ಯಾಂಡ್‌ಸೆಟ್‌ಗಳು ಆಟಿಕೆಯಲ್ಲ ಎಂಬುದಾಗಿ ಸ್ಯಾಮ್‌ಸಂಗ್ ತಿಳಿಸಿದ್ದು, ಜನರ ಜೀವನದಲ್ಲಿ ಬಹುದೊಡ್ಡ ಬದಲಾವಣೆಗಳನ್ನು ತರುವಲ್ಲಿ ಇದು ಸಹಾಯಕವಾಗಲಿದೆ. ಗೇರ್ ವಿಆರ್ ಬಳಸಿಕೊಂಡು ಕಂಪೆನಿ ಇದನ್ನು ಸಾಧಿಸಲು ಪ್ರಯತ್ನಿಸಿದ್ದು ಹೆರಿಗೆ ಕೋಣೆಯಲ್ಲಿ ತನ್ನ ಮಗುವಿನ ಜನನವನ್ನು ನೇರವಾಗಿ ಕಾಣುವ ಭಾಗ್ಯವನ್ನು ತಂದೆಗೆ ಒದಗಿಸಿಕೊಟ್ಟಿದೆ.

ಕಂದನ ಜನನ ವೀಕ್ಷಣೆಯನ್ನು ತಂದೆಗೆ ದಯಪಾಲಿಸಿದ ಸ್ಯಾಮ್‌ಸಂಗ್

ಸ್ಯಾಮ್‌ಸಂಗ್ ಜೇಸ್ ಮತ್ತು ಅಲಿಸನ್ ಲಾರ್ಕ್ ಅನ್ನು ಒಗ್ಗೂಡಿಸಿದ್ದು, ಜೇಸ್‌ನ ಉದ್ಯೋಗದಿಂದಾಗಿ 2,500 ಮೈಲಿಗಳಷ್ಟು ದೂರದಲ್ಲಿದ್ದ ಜೇಸ್ ಅನ್ನು ಅಲಿಸನ್ ಮಗುವಿಗೆ ಜನ್ಮನೀಡುವಾಗ ಒಗ್ಗೂಡುವಂತೆ ಮಾಡಿದೆ. ಗೇರ್ ವಿಆರ್ ಹೆಡ್‌ಸೆಟ್ ಬಳಸಿಕೊಂಡು ಆ ದಿನದಂದು ಜೇಸ್ ಹೆರಿಗೆ ಕೋಣೆಯಲ್ಲಿ ಇರುವಂತೆ ಮಾಡಿದೆ.

ಕಂದನ ಜನನ ವೀಕ್ಷಣೆಯನ್ನು ತಂದೆಗೆ ದಯಪಾಲಿಸಿದ ಸ್ಯಾಮ್‌ಸಂಗ್

ಗೇರ್ ವಿಆರ್ ಅನ್ನು ಧರಿಸಲು ಜೇಸ್‌ಗಾಗಿ ವಿಶೇಷ ಕೋಣೆಯನ್ನು ಸಿದ್ಧಪಡಿಸಲಾಗಿತ್ತು. 360 ಡಿಗ್ರಿ ಕ್ಯಾಮೆರಾ, ಆಡಿಯೊ ಸಲಕರಣೆ, ಲೈವ್ ಸ್ಟ್ರೀಮಿಂಗ್ ರಿಗ್ ಅನ್ನು ಅಲಿಸನ್‌ನ ಪ್ರಸೂತಿ ಕೋಣೆಯಲ್ಲಿ ಸಿದ್ಧಪಡಿಸಲಾಗಿತ್ತು. ಗೇರ್ ವಿಆರ್ ಅನ್ನು ಬಳಸಿಕೊಂಡು ಜೇಸ್ ಸಂಪೂರ್ಣ ಕೋಣೆಯನ್ನು ವರ್ಚುವಲಿ ನೋಡುವುದು ಮಾತ್ರವಲ್ಲದೆ ಅಲಿಸನ್‌ನೊಂದಿಗೆ ಸಂವಹನವನ್ನು ಇವರು ಮಾಡಿದ್ದಾರೆ. ಮಗುವಿನ ಜನನವನ್ನು ಇವರು ನೇರವಾಗಿ ನೋಡಿದ್ದಾರೆ.

ಕಂದನ ಜನನ ವೀಕ್ಷಣೆಯನ್ನು ತಂದೆಗೆ ದಯಪಾಲಿಸಿದ ಸ್ಯಾಮ್‌ಸಂಗ್

ಗೇರ್ ವಿಆರ್‌ಗೆ ಈ ವೀಡಿಯೊ ಉತ್ತಮ ಜಾಹೀರಾತು ಎಂದೆನಿಸಿದ್ದು ಜನರನ್ನು ಅನನ್ಯವಾಗಿ ಒಗ್ಗೂಡಿಸುವ ಅದರ ಸಾಮರ್ಥ್ಯ, ಅನನ್ಯ ತಂತ್ರಜ್ಞಾನ ನಿಜಕ್ಕೂ ಶ್ಲಾಘನೀಯವಾದುದು.

English summary
Virtual reality headsets aren’t toys says Samsung, they can also be used to make a big difference in people’s lives. The company has tried to prove it by using the Gear VR to virtually put a faraway father in the delivery room, when his wife gave birth to their third son.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot