ನಿಮಗೆ ಬೇಸರವಾಗಿದೆಯಾ?..ಹಾಗಿದ್ರೆ, ಈ ವೆಬ್‌ಸೈಟ್‌ ಓಪನ್ ಮಾಡಿ, ಆಮೇಲೆ ನೋಡಿ!

|

ಪ್ರಸ್ತುತ ಪ್ರತಿ ವಿಷಯಕ್ಕೂ ಅನೇಕ ಆಪ್‌ಗಳು ಇವೆ. ಅದೇ ರೀತಿ ಕ್ರೀಡೆ, ಸಿನಿಮಾ, ತಂತ್ರಜ್ಞಾನ, ವಿಜ್ಞಾನ, ಪ್ರವಾಸ ಹೀಗೆ ಪ್ರತಿ ವಿಷಯಕ್ಕೂ ಸಂಬಂಧಿಸಿದಂತೆ ಅನೇಕ ವೆಬ್‌ಸೈಟ್‌ಗಳನ್ನು ಕಾಣಬಹುದಾಗಿದೆ. ಇವುಗಳ ನಡುವೆ ಆಶ್ಚರ್ಯಕರ ಸಂಗತಿ ಎಂದರೆ, ಬೇಸರ ಕಳೆಯಲು ಸಹ ಕೆಲವು ವೆಬ್‌ಸೈಟ್‌ಗಳಿವೆ. ಇಂತಹ ವೆಬ್‌ಸೈಟ್‌ಗಳ ಬಗ್ಗೆ ನಿಮಗೆ ತಿಳಿದಿದೆಯಾ?

ಬೇಸರ ಕಳೆಯಲು

ಹೌದು, ಬೇಸರ ಕಳೆಯಲು ಕೆಲವರು ಗೇಮ್‌ಗಳನ್ನು ಆಡುತ್ತಾರೆ. ಮತ್ತೆ ಕೆಲವರು ಅವರಿಗೆ ಇಷ್ಟವಾದ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಸೃಜನಶೀಲತೆ ಕಡೆಗೆ ಹೊರಳುತ್ತಾರೆ. ಈ ನಿಟ್ಟಿನಲ್ಲಿ ಕೆಲವು ವೆಬ್‌ಸೈಟ್‌ಗಳು ಫನ್ನ ಆಧಾರಿತವಾಗಿದ್ದು, ನಿಮಗಾಗಿರುವ ಬೇಸರವನ್ನು ನಿವಾರಿಸುವಲ್ಲಿ ನೆರವಾಗಲಿವೆ. ಈ ವೆಬ್‌ಸೈಟ್‌ಗಳಲ್ಲಿ ನೀವು ನಗ್ತೀರಾ ಹಾಗೂ ನಿಮ್ಮ ಬ್ರೈನ್‌ಗೂ ಕೆಲ್ಸಾ ಆಗುತ್ತೆ. ಹಾಗಾದರೆ ಬೇಸರ ನಿವಾರಿಸುವ ಕೆಲವು ವೆಬ್‌ಸೈಟ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

ವೆಕ್ಟರ್‌ಪಾರ್ಕ್‌ (vectorpark)

ವೆಕ್ಟರ್‌ಪಾರ್ಕ್‌ (vectorpark)

ನಿಜಕ್ಕೂ ಬೇಸರ ಕಳೆಯಲು ಇದು ಉತ್ತಮ ವೆಬ್‌ಸೈಟ್‌ ಎನಿಸಲಿದ್ದು, ನೀವು ಮುಗುಳುನಗೆ ಬೀರುತ್ತಿರಾ. ಇದರಲ್ಲಿ ಉತ್ಸಾಹಭರಿತ ಭೌತಶಾಸ್ತ್ರದ ಆಟಿಕೆ ಮಾದರಿಗಳನ್ನು ಕಾಣಬಹುದಾಗಿದೆ. ಇದು ಆಂಡ್ರಾಯ್ಡ್‌ ಹಾಗೂ iOS ಬೆಂಬಲ ಪಡೆದಿದೆ.

ಲೋಗೋಸ್ ಫ್ರಮ್‌ ಮೆಮೊರಿ (Logos From Memory)

ಲೋಗೋಸ್ ಫ್ರಮ್‌ ಮೆಮೊರಿ (Logos From Memory)

ಈ ವೆಬ್‌ಸೈಟ್‌ ಹೆಸರೇ ಸೂಚಿಸುವಂತೆ ಇದು ಬ್ರ್ಯಾಂಡ್‌ಗಳ ಲೋಗೊ ಕುರಿತಾಗಿದೆ. ಇದ್ರಲ್ಲಿ ಕೆಲವು ಬ್ರ್ಯಾಂಡ್‌ಗಳ ಲೋಗೋ ಬಗ್ಗೆ ನಿಮಗೆ ರೇಖಾಚಿತ್ರಗಳನ್ನು ಬಿಡಿಸುವ ಮೂಲಕ ಸೂಚಿಸಲು ಹೇಳಲಾಗುತ್ತದೆ.

ರಾಕ್‌ಗೇಮ್‌ (The Rock Game)

ರಾಕ್‌ಗೇಮ್‌ (The Rock Game)

ಬೇಸರ ಕಳೆಯಲು ಇದು ಸರಳವಾದ ಆಟವಾಗಿದ್ದು ಅದು ನಿಮಗೆ ಸಮಯವನ್ನು ಕಳೆಯಲು ಸಹಾಯ ಮಾಡುತ್ತದೆ ಆದರೆ ನಿಮಗೆ ಬಹಳಷ್ಟು ಕಿರಿಕಿರಿ ಉಂಟುಮಾಡುವ ಸಾಧ್ಯತೆಯನ್ನು ಹೊಂದಿದೆ. ನಾಲ್ಕು ಕಿರು ಬಂಡೆಗಳನ್ನು ಒಂದರ ಮೇಲೊಂದರಂತೆ ಬ್ಯಾಲೆನ್ಸ್‌ ಮಾಡುವ ಟಾಸ್ಕ್‌ ಸಿಗಲಿದೆ. ಈ ಗೇಮ್‌ ಆಡುವಾಗ ತಾಳ್ಮೆ ಅಗತ್ಯವಿದೆ.

ಗ್ರಾಸ್ ಸೈನ್ಸ್ (Gross Science)

ಗ್ರಾಸ್ ಸೈನ್ಸ್ (Gross Science)

ಯೂಟ್ಯೂಬ್‌ ಅತ್ಯುತ್ತಮ ಸೈಟ್‌ ಆಗಿದ್ದು, ಇದ್ರಲ್ಲಿ ಅನೇಕ ವಿಡಿಯೋ ಲಭ್ಯ. ಆ ಪೈಕಿ (Gross Science) ಗ್ರಾಸ್ ಸೈನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ವಿಲಕ್ಷಣ ಎನಿಸುವ ವಿಡಿಯೋ ಇದ್ದು, ಆದರೆ ವೈಜ್ಞಾನಿಕವಾಗಿವೆ.

ಲೈಫ್‌ಸ್ಟಾರ್ಸ್‌ (Life Stats)

ಲೈಫ್‌ಸ್ಟಾರ್ಸ್‌ (Life Stats)

ಬೇಸರದಿಂದ ಹೊರಬರಲು ಇದು ಸಹ ಅತ್ಯುತ್ತಮ ವೆಬ್‌ಸೈಟ್‌ಗಳಲ್ಲಿ ಒಂದಾಗಿದೆ. ಇದರಲ್ಲಿ ನಿಮ್ಮ ಜನ್ಮದಿನವನ್ನು ನಮೂದಿಸಿ ಮತ್ತು ಗೋ ಬಟನ್ ಒತ್ತಿರಿ. ನಂತರ ಕೆಳಗೆ ಸ್ಕ್ರಾಲ್ ಮಾಡುವ ಮೂಲಕ ನಿಮ್ಮ ಜೀವನದ ಅಂಕಿಅಂಶಗಳನ್ನು ನೋಡಿ ಆನಂದಿಸಬಹುದು.

ಲೈಫ್ ಹ್ಯಾಕರ್ (Lifehacker)

ಲೈಫ್ ಹ್ಯಾಕರ್ (Lifehacker)

ಲೈಫ್‌ಹ್ಯಾಕರ್ ಉತ್ಪಾದಕತೆಯ ಸಲಹೆಗಳು, ತಂತ್ರಗಳು ಮತ್ತು ಡೌನ್‌ಲೋಡ್‌ಗಳ ಕೇಂದ್ರವಾಗಿದೆ. ಇದು ಮೂಲಭೂತವಾಗಿ ಎಲ್ಲಾ ಮಾಹಿತಿಯ ಆರ್ಕೈವ್ ಆಗಿದೆ. ಇದು ಅತ್ಯುತ್ತಮ ಉಪಯುಕ್ತ ಟಿಪ್ಸ್‌ ತಾಣವಾಗಿದ್ದು, ಇದ್ರಲ್ಲಿನ ಟಿಪ್ಸ್‌ ಬಗ್ಗೆ ಬಹುಶಃ ಯಾರೂ ಕಲಿಸುವುದಿಲ್ಲ.

Imgur

Imgur

Imgur ವಾರದ ಅತ್ಯಂತ ವೈರಲ್ ಮೀಮ್ಸ್‌ಗಳು, ಫೋಟೊಗಳನ್ನು ಸಂಗ್ರಹಿಸುತ್ತದೆ. ಬಳಕೆದಾರರ ಸ್ಕ್ರೋಲಿಂಗ್ ಮಾಡುವ ಮೂಲಕ ಒಂದೇ ಸ್ಥಳದಲ್ಲಿ ಸಂಗ್ರಹವನ್ನು ಗಮನಿಸಬಹುದು. ಇದು ಇನ್‌ಸ್ಟಾಗ್ರಾಮ್‌ ಹಾಗೂ ಟ್ವಿಟರ್ ಸಂಯೋಜಿತವಾಗಿದೆ.

ಜಿಫಿ (Giphy)

ಜಿಫಿ (Giphy)

ನಿಮ್ಮ ಬೇಸರ ಓಡಿಸಲು ಜಿಫಿ ಸಹ ಉತ್ತಮ ತಾಣವಾಗಿದೆ. ಇದ್ರಲ್ಲಿ ನೀವು ಅತ್ಯುತ್ತಮ GIF ಅನ್ನು ಕಾಣಬಹುದಾಗಿದೆ. ಪ್ರಾಣಿಗಳ ಜರ್ಕ್‌, ಡಾನ್ಸಿಂಗ್, ಫನ್ನಿ GIF ಗಳ ಸಂಗ್ರಹವನ್ನು ಕಾಣಬಹುದಾಗಿದೆ.

Heardle

Heardle

ನೀವು ಸಂಗೀತ ಪ್ರಿಯರಾಗಿದ್ದರೆ, Heardle ತಾಣವು ನಿಮ್ಮ ಬೇಸರ ನಿವಾರಿಸುವ ಅತ್ಯುತ್ತಮ ಜೊತೆಗಾರ ಆಗಲಿದೆ. ಇದು ಹಾಡಿನ ಸಣ್ಣ ತುಣುಕನ್ನು ಪ್ಲೇ ಮಾಡುವ ಮೂಲಕ ಕೆಲಸ ಮಾಡುತ್ತದೆ ಮತ್ತು ಸರಿಯಾದ ಹಾಡನ್ನು ಊಹಿಸಲು ನಿಮಗೆ ಆರು ಪ್ರಯತ್ನಗಳನ್ನು ನೀಡುತ್ತದೆ.

ಜಿಯೋಗೆಸ್ಸರ್ (GeoGuesser)

ಜಿಯೋಗೆಸ್ಸರ್ (GeoGuesser)

ಪ್ರವಾಸದ ಬಗ್ಗೆ ಆಸಕ್ತಿ ಇದ್ದರೆ, ಈ ಸೈಟ್‌ನಲ್ಲಿ ಬ್ಯುಸಿಯಾಗಿ ನಿಮ್ಮ ಬೇಸರ ಕಡಿಮೆ ಮಾಡಿಕೊಳ್ಳಿ. ಈ ತಾಣದಲ್ಲಿ ಪ್ರಪಂಚದಾದ್ಯಂತ ಇರುವ ಕೆಲವು ಪ್ರಮುಖ ಸ್ಥಳಗಳನ್ನು ನಿಮಗೆ ತೋರಿಸುವ ಮೂಲಕ, ಅದು ಎಲ್ಲಿದೆ ಎನ್ನುವ ಪ್ರಶ್ನೆಗೆ ನೀವು ಉತ್ತರ ಊಹಿಸಬಹುದು. ಬೇಸರ ಕಳೆಯುವ ಜೊತೆಗೆ ಭೌಗೋಳಿಕತೆ ಜ್ಞಾನ ವೃದ್ಧಿಸಲು ಸಹಕಾರಿ.

Best Mobiles in India

English summary
Few Fun and Cool websites to cure boredom in 2022.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X