ಡಿಲೀಟ್ ಆದ ಚಿತ್ರಗಳಿಗೆ ಮಂಗಳ ಹಾಡಿದ ಫೇಸ್ ಬುಕ್

By Varun
|

ಡಿಲೀಟ್ ಆದ ಚಿತ್ರಗಳಿಗೆ ಮಂಗಳ ಹಾಡಿದ ಫೇಸ್ ಬುಕ್
ಕೊನೆಗೂ ಸಾಮಾಜಿಕ ಜಾಲತಾಣ ಫೇಸ್ ಬುಕ್ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ. ಸುಮಾರು 96 ಕೋಟಿ ಖಾತೆದಾರರು ನೆಮ್ಮದಿಯಾಗಿರುವಂತಿದೆ. ಇದಕ್ಕಾಗಿ ಫೇಸ್ ಬುಕ್ ಗೆ ಥ್ಯಾಂಕ್ಸ್ ಹೇಳಲೇ ಬೇಕು.

ಆ ತಪ್ಪು ಏನೆಂದರೆ ಇದುವರೆಗೂ ನಾವು ನೀವು ಫೇಸ್ ಬುಕ್ ನಲ್ಲಿ ಯಾವುದಾದರೂ ಇಮೇಜ್ ಅನ್ನು ಅಪ್ಲೋಡ್ ಮಾಡಿ ನಂತರ ಬೇಡಾ ಎಂದಾಗ ಡಿಲೀಟ್ ಮಾಡಿದ ಇಮೇಜುಗಳು ಫೇಸ್ ಬುಕ್ ನ ಸರ್ವರ್ ಗಳಲ್ಲಿ ಇರುತ್ತಿದ್ದವು. ಅವುಗಳನ್ನು URL ಮೂಲಕ ಹುಡುಕಬಹುದಿತ್ತು. ಹೀಗಾಗಿ ಕೆಲವು ಬಳಕೆದಾರರಿಗೆ ಇರುಸು ಮುರುಸು ಉಂಟಾಗುತ್ತಿತ್ತು.

ಈಗ ಆ ರೀತಿಯ ಇಮೆಜುಗಳನ್ನು ಸರ್ವರ್ ನಿಂದ ತೆಗೆಯಲಾಗಿದ್ದು, ಇನ್ನು ಮೇಲೆ ಇಮೆಜುಗಳನ್ನು ಡಿಲೀಟ್ ಮಾಡಿದ 30 ದಿನಗಳ ನಂತರ ಆ ಇಮೇಜ್ ಫೇಸ್ ಬುಕ್ ಸರ್ವರ್ ನಿಂದಲೂ ಡಿಲೀಟ್ ಆಗಲಿದೆ ಎಂದು ಫೇಸ್ ಬುಕ್ ವಕ್ತಾರರು ತಿಳಿಸಿದ್ದಾರೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X