ಬರಲಿದೆ ಮೊಟೊ X4 ಲೀಕ್ ಆಗಿದೆ ಬೆಲೆ, ವಿಶೇಷತೆಗಳು

Written By: Lekhaka

ಭಾರತೀಯ ಮಾರುಕಟ್ಟೆಯಲ್ಲಿ ಮೊಟೊರೊಲಾ ಸ್ಮಾರ್ಟ್ ಫೋನ್ ಗಳು ಹೆಚ್ಚು ಸದ್ದು ಮಾಡುತ್ತಿದೆ. ಇದೀಗ ಮಾರುಕಟ್ಟೆಗೆ ಹೊಸದಾಗಿ ಕಾಲಿಡಲು ಸಿದ್ಧವಾಗಿರುವ ಮೊಟೊ X4 ಸ್ಮಾರ್ಟ್ ಫೋನಿನ ಬಗ್ಗೆ ಮಾಹಿತಿ ಲೀಕ್ ಆಗಿದ್ದು, ಮೊಟೊ ಸ್ಮಾರ್ಟ್ ಫೋನ್ ಮಾಹಿತಿಗಳನ್ನು ಲೀಕ್ ಮಾಡುವುದರಲ್ಲಿ ಮುಂದಿರುವ ಅರ್ನಲ್ಡ್ ಕ್ವಿಂಟೆಡ್ ಈ ಫೋನ್ ಮಾಹಿತಿಯನ್ನು ಟ್ವೀಟರ್ ನಲ್ಲಿ ಹರಿ ಬಿಟ್ಟಿದ್ದಾರೆ.

ಬರಲಿದೆ ಮೊಟೊ X4 ಲೀಕ್ ಆಗಿದೆ ಬೆಲೆ, ವಿಶೇಷತೆಗಳು

ಹೊಸ ಮೊಟೊ X4 ಸ್ಮಾರ್ಟ್ ಫೋನ್ ಬೆಲೆಯೂ 350 ಯೂರೋಗಳಾಗಲಿದೆ ಭಾರತೀಯ ರೂಪಾಯಿಗಳಲ್ಲಿ ಇದು ರೂ.26,500 ಆಗಲಿದೆ. ಅಲ್ಲದೇ ಇದರ ಬೆಲೆಯೂ ಇನ್ನು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೊಂದು ಮಧ್ಯಮ ಸರಣಿಯ ಸ್ಮಾರ್ಟ್ ಫೋನ್ ಆಗಿರಲಿದೆ ಎಂಬುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ.

ಈ ಸ್ಮಾರ್ಟ್ ಫೋನಿನಲ್ಲಿ ಈಗಾಗಲೇ ತಿಳಿದಿರುವಂತೆ ಆಕ್ಟಾ ಕೋರ್ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 630 ಪ್ರೋಸೆಸರ್ ಕಾಣಬಹುದಾಗಿದೆ. ಇದು 2.2GHz ವೇಗವನ್ನು ಹೊಂದಿದೆ ಎನ್ನಲಾಗಿದೆ. ಅಲ್ಲದೇ ಇದರಲ್ಲಿ 4GB RAM ಇದ್ದು, 64 GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ.

ಬೇಕಾಗಿದ್ದಾರೆ..ವಾಟ್ಸಾಪ್ ನಿಂದ ಹಣಗಳಿಸಿಕೊಡುವ ಉದ್ಯೋಗಿ!

ಇದಲ್ಲದೇ ಈ ಸ್ಮಾರ್ಟ್ ಫೋನ್ ಎರಡು ಆವೃತ್ತಿಯಲ್ಲಿ ಲಭ್ಯವಿದ್ದು, 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಮತ್ತೊಂದು ಆವೃತ್ತಿಯೂ ಇದರಲ್ಲಿದೆ. ಇದರ ಬೆಲೆಯೂ 350 ಯೂರೋಗಳಾಗಲಿದೆ ಎನ್ನಲಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನಿನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ನೋಡಬಹುದಾಗಿದೆ.

ಹಿಂಭಾಗದಲ್ಲಿ 8MP + 12 MP ಕ್ಯಾಮೆರಾ ಇದ್ದು, ಮುಂಭಾಗದಲ್ಲಿ 16 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರೊಂದಿಗೆ 3000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಶೀಘ್ರವೇ ಈ ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಭ್ಯವಾಗಿದೆ.Read more about:
English summary
The Motorola Moto X4 is expected to be powered by a Snapdragon 630 chipset paired with 4GB of RAM.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot