Subscribe to Gizbot

ಮುಂಬರುವ ಗೂಗಲ್ ಪ್ಲಸ್ ಬೀಟಾ ಟೆಸ್ಟರ್ ಬಗ್ಗೆ ಇಲ್ಲಿ ತಿಳಿಯಿರಿ!!

Posted By: Prathap T

ಗೂಗಲ್ ಪ್ಲಸ್ನ ಬೀಟಾ ಟೆಸ್ಟರ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಅಪಸ್ವರಗಳು ಕೇಳಿಬಂದ ಹಿನ್ನಲೆಯಲ್ಲಿ ಅದರ ಪ್ರೋಗ್ರಾಂನಲ್ಲಿ ಸಾಕಾಷ್ಟು ಮಾರ್ಪಾಡು ಮಾಡಿ ನೂತನ ವೈಶಿಷ್ಟ್ಯತೆಯೊಂದಿಗೆ ಪರಿಯಿಸಲು ಮುಂದಾಗಿದೆ. ಇತರೆ ಕಂಪನಿಗಳಿಗಿಂತ ಅತ್ಯಾಧುನಿಕ ಆಧುನಿಕ ಸ್ಪರ್ಶ ಕೊಟ್ಟು ಬಳಕೆದಾರರ ಬೇಡಿಕೆಯನ್ನು ನಿವಾರಿಸಿದೆ ಎನ್ನಲಾಗಿದೆ.

ಮುಂಬರುವ ಗೂಗಲ್ ಪ್ಲಸ್ ಬೀಟಾ ಟೆಸ್ಟರ್ ಬಗ್ಗೆ ಇಲ್ಲಿ ತಿಳಿಯಿರಿ!!

ಇತರ ಬೀಟಾ ಟೆಸ್ಟರ್ ಗಿಂತ ಭಿನ್ನವಾಗಿ, ಉತ್ಕೃಷ್ಟವಾಗಿ ಚಾಟ್ ಅಥವಾ ಸಂವಹನ ಮಾಡಬಹುದಾಗಿದೆ ಎಂದು ಗೂಗಲ್ ಪ್ಲಸ್ ಉತ್ಪನ್ನ ತಂಡ ಹೇಳಿಕೊಂಡಿದೆ. ಗೂಗಲ್ ಪ್ಲಸ್ ಸಕ್ರಿಯ ಬಳಕೆದಾರರನ್ನು ಮಾತ್ರ ಪರಿಗಣಿಸಿ ಈ ಸೇವೆಯನ್ನು ವಿಸ್ತರಿಸಿದೆ. ಬಳಕೆದಾರರಿಗೆ ಗೂಗಲ್ ಪ್ಲಸ್ ಮೂರು ಷರತ್ತುಗಳನ್ನು ವಿಧಿಸಿದ್ದು, ಮೊದಲನೆಯದಾಗಿ ಪೋಸ್ಟ್ ಮಾಡುವ ಬಳಕೆದಾರರು ಸಕ್ರಿಯರಾಗಿದ್ದಾರೆಯೇ ಎಂಬುದರ ಬಗ್ಗೆ ಈಗ ಬೀಟಾ ಟೆಸ್ಟಲ್ ವಿವರಣೆ ನೀಡುವುದಿಲ್ಲ ಎನ್ನಲಾಗಿದೆ.

ಎರಡನೆಯದಾಗಿ ಬೀಟಾ ಅನುಭವವನ್ನು ಸೇರಲು ಬಯಸುವವರು ಗೂಗಲ್ ಪ್ಲಸ್ ಬಗ್ಗೆ "ಕಲಿಯಲು ಪ್ರೇರೇಪಿಸಬೇಕಾಗಿದೆ" ಮತ್ತು ಉತ್ಪನ್ನದ ಚರ್ಚೆಗಳ ಮೂಲಕ ಉಪಯುಕ್ತ ಪ್ರತಿಕ್ರಿಯೆ ನೀಡಲು ಪ್ರೇರಣೆ ನೀಡಬೇಕು. ಮೂರನೆಯದಾಗಿ ಗೂಗಲ್ ಪ್ಲಸ್ "ಉನ್ನತ ಮಟ್ಟದ ಪ್ರತಿಕ್ರಿಯೆಯನ್ನು" ಒದಗಿಸಲು ಉತ್ಸುಕನಾಗುವವರನ್ನು ಮಾತ್ರ ಹುಡುಕುತ್ತಿದೆ ಎಂದು ಹೇಳುತ್ತದೆ.

ಮೊದಲೇ ರೈಲ್ವೆ ಟಿಕೆಟ್ ಬುಕ್ ಮಾಡಿ ನಂತರ ಹಣಪಾವತಿಸಿ!! ಹೊಸ ಆಯ್ಕೆ ಹೇಗೆ ಗೊತ್ತಾ?

ಹಾಗಾಗಿ ಬೀಟಾ ಟೆಸ್ಟರ್ಸ್ ವಿವರಣಾತ್ಮಕ ಮತ್ತು ಒಳನೋಟವುಳ್ಳ ಪ್ರತಿಕ್ರಿಯೆಯನ್ನು ನೀಡಬೇಕೆಂದು ಗೂಗಲ್ ಪ್ಲಸ್ ತಿಳಿಸಿದೆ.

ಇದಲ್ಲದೆ, ಗೂಗಲ್ ಪ್ಲಸ್ ಬೀಟಾ ಟೆಸ್ಟರ್ ಆಗಲು ಯಾವುದೇ ಇತರ ಷರತ್ತುಗಳನ್ನು ಹೇಳಿಲ್ಲ. ಅಲ್ಲದೆ, ಗೂಗಲ್ ಪ್ಲಸ್ ಸೀಮಿತ ಸಂಖ್ಯೆಯ ಬೀಟಾ ಪರೀಕ್ಷಕರಿಗೆ ಮಾತ್ರ ಸೇರ್ಪಡೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ಎಷ್ಟು ಮಂದಿ ಪರೀಕ್ಷಕರು ಅವರು ಹುಡುಕುತ್ತಿದ್ದಾರೆಂಬುದನ್ನು ಅದು ಉಲ್ಲೇಖಿಸದಿದ್ದರೂ, ನೀವು ಬಳಕೆದಾರರಾಗಲು ಬಯಸಿದರೆ ನೀವು ವಿಳಂಬ ಮಾಡದೇ ಗೂಗಲ್ ಪ್ಲಸ್ ಬೀಟಾ ಟೆಸ್ಟರ್ ಆಗಲು ನೀವು ಒಂದು ಸಣ್ಣ ಅರ್ಜಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು.

ನೀವು ಅಪ್ಲಿಕೇಶನ್ ಅನ್ನು ಏಕೆ ಬಳಸುತ್ತೀರಿ, ನೀವು ಎಷ್ಟು ಕಾಲ ಪ್ಲಾಟ್ಫಾರ್ಮ್ ಅನ್ನು ಬಳಸಿದ್ದೀರಿ ಮತ್ತು ಏಕೆ ನೀವು ಬೀಟಾ ಪರೀಕ್ಷಾ ಕಾರ್ಯಕ್ರಮದ ಭಾಗವಾಗಿರಲು ಬಯಸುತ್ತೀರಿ ಎಂಬಂತಹ ಪ್ರಶ್ನೆಗಳನ್ನು ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕಿದೆ.

Read more about:
English summary
Google Plus is looking for beta testers!
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot