ಫೈರ್‌ ಬೋಲ್ಟ್‌ನಿಂದ ಮೂರು ಸ್ಮಾರ್ಟ್‌ವಾಚ್‌ ಅನಾವರಣ; ಕೈಗೆಟಕುವ ಬೆಲೆಯಲ್ಲಿ ಲಭ್ಯ!

By Ningaraju C
|

ಸ್ಮಾರ್ಟ್‌ಗ್ಯಾಜೆಟ್‌ ವಿಭಾಗದಲ್ಲಿ ಸ್ಮಾರ್ಟ್‌ವಾಚ್‌ಗಳು ಈಗ ಹೆಚ್ಚಿನ ಆಕರ್ಷಣೀಯ ಫೀಚರ್ಸ್‌ಗಳ ಜೊತೆಗೆ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಅದರಂತೆ ಪ್ರಮುಖ ಕಂಪೆನಿಗಳು ವಿವಿಧ ಫೀಚರ್ಸ್‌ಗಳ ಜೊತೆಗೆ ಕೈಗೆಟಕುವ ಬೆಲೆಯಲ್ಲಿ ಹಲವಾರು ಸ್ಮಾರ್ಟ್‌ವಾಚ್‌ ಅನ್ನು ಅನಾವರಣ ಮಾಡುತ್ತಿದ್ದು, ಅವುಗಳ ಸಾಲಿಗೆ ಫೈರ್ ಬೋಲ್ಟ್‌ನ ಹೊಸ ಮೂರು ಸ್ಮಾರ್ಟ್‌ವಾಚ್‌ಗಳು ಸೇರಿಕೊಳ್ಳಲಿವೆ.

ಫೈರ್ ಬೋಲ್ಟ್ ಟ್ಯಾಂಕ್

ಹೌದು, ಕೈಗೆಟಕುವ ದರದಲ್ಲಿ ಫೈರ್ ಬೋಲ್ಟ್ ಟ್ಯಾಂಕ್, ಎಪಿಕ್ ಪ್ಲಸ್ ಮತ್ತು ರೈಸ್ ಎಂಬ ಮೂರು ಸ್ಮಾರ್ಟ್‌ವಾಚ್‌ಗಳನ್ನು ಅನಾವರಣ ಮಾಡಿದೆ. ಈ ವಾಚ್‌ಗಳು ಗಟ್ಟಿಮುಟ್ಟಾದ ಮತ್ತು ಬಾಳಿಕೆ ಬರುವ ಸಾಮರ್ಥ್ಯ ಹೊಂದಿದ್ದು, ಇದರ ಜೊತೆಗೆ ಎಪಿಕ್ ಪ್ಲಸ್ ಪ್ರೀಮಿಯಂ ಫೀಚರ್ಸ್‌ಗಳನ್ನು ಪಡೆದುಕೊಂಡಿವೆ. ಹಾಗೆಯೇ ಒಂದನ್ನೊಂದು ಮೀರಿಸುವ ಫೀಚರ್ಸ್‌ಗಳು ಈ ಸ್ಮಾರ್ಟ್‌ವಾಚ್‌ನಲ್ಲಿದ್ದು, ಯಾವ ಸ್ಮಾರ್ಟ್‌ವಾಚ್‌ನ ಫೀಚರ್ಸ್‌ ಆಕರ್ಷಕ?, ಯಾವ ವಾಚ್‌ಗೆ ಎಷ್ಟು ಬೆಲೆ? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಫೈರ್ ಬೋಲ್ಟ್ ಟ್ಯಾಂಕ್ ಫೀಚರ್ಸ್‌

ಫೈರ್ ಬೋಲ್ಟ್ ಟ್ಯಾಂಕ್ ಫೀಚರ್ಸ್‌

ಫೈರ್ ಬೋಲ್ಟ್ ಟ್ಯಾಂಕ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಆಯ್ಕೆ ಹೊಂದಿದ್ದು, 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ. ಜೊತೆಗೆ IP68 ರೇಟಿಂಗ್‌ನೊಂದಿಗೆ ವಾಟರ್‌ ರೆಸಿಸ್ಟೆಂಟ್‌ ಆಯ್ಕೆ ನೀಡಲಾಗಿದ್ದು, 100+ ವಾಚ್ ಫೇಸ್‌ಗಳ ಫೀಚರ್ಸ್‌ ಪಡೆದುಕೊಂಡಿದೆ.

ಧೂಳು

ಈ ವಾಚ್‌ ಬಿರುಕು, ಧೂಳು ಮತ್ತು ಸ್ಪ್ಲಾಶ್ ನಿರೋಧಕವಾಗಿದ್ದು, ಇದರೊಂದಿಗೆ ಹೃದಯ ಬಡಿತ, ನಿದ್ರೆಯ ಮಾನಿಟರಿಂಗ್, SpO2 ಮಾನಿಟರಿಂಗ್ ಸೇರಿದಂತೆ ಇನ್ನೂ ಹೆಚ್ಚಿನ ಆಯ್ಕೆ ಜೊತೆಗೆ ಆರೋಗ್ಯ ಸಂಬಂಧಿ ಫೀಚರ್ಸ್‌ಗಳನ್ನು ಹೊಂದಿದೆ. ಇದಿಷ್ಟೇ ಅಲ್ಲದೆ ಈ ಸ್ಮಾರ್ಟ್‌ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ಗಳು, ಸ್ಮಾರ್ಟ್ ನೋಟಿಫಿಕೇಶನ್‌ಗಳು ಹಾಗೂ ವಾಯ್ಸ್‌ ಅಸಿಸ್ಟೆಂಟ್‌ ಸೇವೆಯನ್ನು ನೀಡುತ್ತದೆ.

ಕ್ಯಾಮೆರಾ

ಕ್ಯುರೇಟೆಡ್ ಕ್ಯಾಮೆರಾ ಕಂಟ್ರೋಲ್‌ ಆಯ್ಕೆ ಸಹ ಈ ವಾಚ್‌ನಲ್ಲಿದ್ದು, ಇನ್‌ಬಿಲ್ಟ್‌ ಗೇಮ್‌ ಕಂಟ್ರೋಲ್‌ ಆಯ್ಕೆ ಸಹ ಇದೆ. ಅದರಂತೆ ಈ ಸ್ಮಾರ್ಟ್‌‌ವಾಚ್‌ ಶಕ್ತಿಯುತ ಬ್ಯಾಟರಿ ಹೊಂದಿದ್ದು, ಒಂದು ಪೂರ್ಣ ಚಾರ್ಜ್‌ನಲ್ಲಿ ಬರೋಬ್ಬರಿ 7 ದಿನಗಳವರೆಗೆ ಬಳಕೆ ಮಾಡಬಹುದಾಗಿದೆ ಹಾಗೆಯೇ ಸ್ಟ್ಯಾಂಡ್‌ಬೈನಲ್ಲಿ 30 ದಿನಗಳವರೆಗೆ ಇರುತ್ತದೆ.

ಫೈರ್ ಬೋಲ್ಟ್ ರೈಸ್ ಸ್ಮಾರ್ಟ್‌ವಾಚ್‌ ಫೀಚರ್ಸ್‌

ಫೈರ್ ಬೋಲ್ಟ್ ರೈಸ್ ಸ್ಮಾರ್ಟ್‌ವಾಚ್‌ ಫೀಚರ್ಸ್‌

ಫೈರ್ ಬೋಲ್ಟ್ ರೈಸ್ ಸ್ಮಾರ್ಟ್‌ವಾಚ್‌ 1.85 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 240 x 280 ಪಿಕ್ಸೆಲ್‌ಗಳ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಈ ವಾಚ್‌ 123 ಸ್ಪೋರ್ಟ್ಸ್‌ ಮೋಡ್‌ ಹೊಂದಿದ್ದು, ಇನ್‌ಬಿಲ್ಟ್‌ ಸ್ಪೀಕರ್‌ ಹಾಗೂ ಮೈಕ್ರೊಫೋನ್ ಆಯ್ಕೆ ಪಡೆದುಕೊಂಡಿದೆ.

ಹೃದಯ

ರೈಸ್ ಸ್ಮಾರ್ಟ್‌ವಾಚ್ ನೈಜ ಸಮಯದ ಹೃದಯ ಬಡಿತ ಟ್ರ್ಯಾಕಿಂಗ್, ನಿದ್ರೆಯ ಮೇಲ್ವಿಚಾರಣೆ ಮತ್ತು SpO2 ಮಾನಿಟರಿಂಗ್‌ನೊಂದಿಗೆ ನಿಮ್ಮ ಆರೋಗ್ಯದ ಮೇಲೆ ಸದಾ ಕಣ್ಣಿಟ್ಟಿರುತ್ತದೆ. IP67 ರೇಟಿಂಗ್ ಇದ್ದು, ನೀರಿನಿಂದ ಹಾಳಾಗುತ್ತದೆ ಎಂಬ ತೊಂದರೆ ಇಲ್ಲದೆ ಎಲ್ಲಿ ಬೇಕೆಂದರಲ್ಲಿ ಬಳಕೆ ಮಾಡಬಹುದಾಗಿದೆ.

ಫೈರ್ ಬೋಲ್ಟ್ ಎಪಿಕ್ ಪ್ಲಸ್

ಫೈರ್ ಬೋಲ್ಟ್ ಎಪಿಕ್ ಪ್ಲಸ್

ಫೈರ್ ಬೋಲ್ಟ್ ಎಪಿಕ್ ಪ್ಲಸ್ ಸ್ಮಾರ್ಟ್‌ವಾಚ್‌ 183 ಇಂಚಿನ ಫುಲ್‌ ಹೆಚ್‌ಡಿ ಡಿಸ್‌ಪ್ಲೇ ಹೊಂದಿದ್ದು, 120 ಸ್ಪೋರ್ಟ್ಸ್‌ ಮೋಡ್‌ಗಳ ಆಯ್ಕೆ ಪಡೆದುಕೊಂಡಿದೆ. ಹಾಗೆಯೇ IP68 ರೇಟಿಂಗ್‌ ಇದ್ದು, SpO2 ಮಾನಿಟರಿಂಗ್, ಮಹಿಳೆಯರ ಆರೋಗ್ಯ ಟ್ರ್ಯಾಕಿಂಗ್ ಮತ್ತು ಹೃದಯ ಬಡಿತ ಟ್ರ್ಯಾಕಿಂಗ್ ಸೇರಿದಂತೆ ಇನ್ನಿತರೆ ಫೀಚರ್ಸ್‌ಗಳನ್ನು ಈ ವಾಚ್‌ ಪಡೆದುಕೊಂಡಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ನಿಂದ ಫೋನ್‌ನ ಕ್ಯಾಮೆರಾವನ್ನು ಕಂಟ್ರೋಲ್‌ ಸಹ ಮಾಡಬಹುದಾಗಿದೆ. ಇದರೊಂದಿಗೆ ಹವಾಮಾನ ನವೀಕರಣಗಳು ಮತ್ತು ಮ್ಯೂಸಿಕ್‌ ಕಂಟ್ರೋಲ್‌ನಂತಹ ಫೀಚರ್ಸ್‌ಗಳನ್ನು ಈ ವಾಚ್ ಪಡೆದುಕೊಂಡಿದೆ.

ಈ ಸ್ಮಾರ್ಟ್‌ವಾಚ್‌ಗಳ ಬೆಲೆ

ಈ ಸ್ಮಾರ್ಟ್‌ವಾಚ್‌ಗಳ ಬೆಲೆ

ಫೈರ್ ಬೋಲ್ಟ್ ಟ್ಯಾಂಕ್ ಸ್ಮಾರ್ಟ್‌ವಾಚ್‌ಗೆ 1,999ರೂ. ಗಳ ಬೆಲೆ ನಿಗದಿ ಮಾಡಲಾಗಿದ್ದು, ಕಪ್ಪು, ಬೂದು ಮತ್ತು ಹಸಿರು ಬಣ್ಣದಲ್ಲಿ ಲಭ್ಯ ಇದೆ. ಹಾಗೆಯೇ ಫೈರ್ ಬೋಲ್ಟ್ ರೈಸ್‌ ಸ್ಮಾರ್ಟ್‌ವಾಚ್‌ಗೆ 1,999 ರೂ. ಗಳ ಆರಂಭಿಕ ಬೆಲೆ ಇದ್ದು, ಈ ವಾಚ್‌ ಬೆಳ್ಳಿ, ಕಪ್ಪು, ಬೂದು ಮತ್ತು ಗುಲಾಬಿ ಬಣ್ಣ ಸೇರಿದಂತೆ ನಾಲ್ಕು ಬಣ್ಣಗಳನ್ನು ಹೊಂದಿದೆ. ಜೊತೆಗೆ ಫೈರ್-ಬೋಲ್ಟ್ ಎಪಿಕ್ ಪ್ಲಸ್ ಸ್ಮಾರ್ಟ್‌ವಾಚ್ 1,199 ರೂ. ಗಳ ಸಾಮಾನ್ಯ ದರ ಹೊಂದಿದ್ದು, ಕಪ್ಪು, ಬೂದು, ಗುಲಾಬಿ, ಹಸಿರು, ನೀಲಿ, ಕಿತ್ತಳೆ, ಕೆಂಪು ಮತ್ತು ಗೋಲ್ಡ್ ಕಪ್ಪು ಸೇರಿದಂತೆ ಹಲವಾರು ಬಣ್ಣಗಳಲ್ಲಿ ಲಭ್ಯ ಇದೆ. ಈ ವಾಚ್‌ಗಳನ್ನು‌ ಅಮೆಜಾನ್‌ ಹಾಗೂ ಫ್ಲಿಪ್‌ಕಾರ್ಟ್‌ನಲ್ಲಿ ನಾಳೆಯಿಂದ (ಡಿಸೆಂಬರ್ 17) ರಿಂದ ಖರೀದಿ ಮಾಡಬಹುದಾಗಿದೆ.

Best Mobiles in India

English summary
Fire-Boltt announces 3 smartwatches under Rs 2,000 ahead of festive season.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X