Fire-Boltt Talk Ultra : ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌ !

|

ಫೈರ್‌ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಭಾರತದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ಅನುಗುಣವಾಗಿ ಭಾರತದಲ್ಲಿ ಫೈರ್‌ಬೋಲ್ಟ್‌ ಕಂಪೆನಿ ಅನೇಕ ಸ್ಮಾರ್ಟ್‌ವಾಚ್‌ಗಳು ಬಿಡುಗಡೆ ಮಾಡಿದೆ. ಇದೀಗ ತನ್ನ ಮತ್ತೊಂದು ಹೊಸ ಫೈರ್‌ ಬೋಲ್ಟ್‌ ಟಾಕ್‌ ಅಲ್ಟ್ರಾ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ವಾಚ್‌ 120ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳಿಗೆ ಬೆಂಬಲವನ್ನು ನೀಡಲಿದೆ. ಇದಲ್ಲದೆ ಹೃದಯಬಡಿತ ಮತ್ತು ರಕ್ತದ ಆಮ್ಲಜನಕದ ಲೆವೆಲ್‌ ಸೆನ್ಸಾರ್‌ಗಳನ್ನು ಒಳಗೊಂಡಿದೆ.

ಫೈರ್‌ಬೋಲ್ಟ್‌

ಹೌದು, ಫೈರ್‌ಬೋಲ್ಟ್‌ ಕಂಪೆನಿ ಭಾರತದಲ್ಲಿ ಹೊಸ ಫೈರ್‌ಬೋಲ್ಟ್‌ ಟಾಕ್‌ ಅಲ್ಟ್ರಾ ಸ್ಮಾರ್ಟ್‌ವಾಚ್‌ ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ 1.39 ಇಂಚಿನ LCD ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ನೀಡಲಾಗಿದೆ. ಇದರಿಂದ ಫೋನ್‌ ಕಾಲ್‌ಗಳನ್ನು ಕಂಟ್ರೋಲ್‌ ಮಾಡುವ ಅವಕಾಶ ಕೂಡ ಲಭ್ಯವಾಗಲಿದೆ. ಇದರೊಂದಿಗೆ ಈ ಸ್ಮಾರ್ಟ್‌ವಾಚ್‌ ವಾಟರ್‌ ಪ್ರೂಫ್‌ಗಾಗಿ IP68 ರೇಟಿಂಗ್‌ ಕೂಡ ಹೊಂದಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನಿರಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೈರ್‌ಬೋಲ್ಟ್‌ ಟಾಕ್‌ ಅಲ್ಟ್ರಾ ವಾಚ್‌ ಫೀಚರ್ಸ್‌ ಹೇಗಿದೆ?

ಫೈರ್‌ಬೋಲ್ಟ್‌ ಟಾಕ್‌ ಅಲ್ಟ್ರಾ ವಾಚ್‌ ಫೀಚರ್ಸ್‌ ಹೇಗಿದೆ?

ಫೈರ್-ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1.39 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240x240 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ ರನ್ನಿಂಗ್‌, ಸೈಕ್ಲಿಂಗ್ ಮತ್ತು ಸ್ವಿಮ್ಮಿಂಗ್‌ ಸೇರಿದಂತೆ 123 ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸಲಿದೆ. ಇದರೊಂದಿಗೆ SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ಬೀಟ್‌ ಟ್ರ್ಯಾಕಿಂಗ್ ಮತ್ತು ಸ್ಲಿಪಿಂಗ್‌ ಟ್ರ್ಯಾಕ್‌ ಅನ್ನು ಕೂಡ ನಡೆಸಲಿದೆ.

 ಫೈರ್-ಬೋಲ್ಟ್ ಟಾಕ್

ಇನ್ನು ಫೈರ್-ಬೋಲ್ಟ್ ಟಾಕ್ ಅಲ್ಟ್ರಾವು ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ಹೊಂದಿದೆ. ಇದು ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ವಾಚ್ ಡಿಸ್‌ಪ್ಲೇ ಮೂಲಕ ಡೈರೆಕ್ಟ್‌ ಆಗಿ ಕಾಲ್‌ಗಳನ್ನು ಸ್ವೀಕರಿಸುವ ಮತ್ತು ತಿರಸ್ಕರಿಸುವ ಆಯ್ಕೆಯನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್ ವಾಚ್ ಗೂಗಲ್ ಅಸಿಸ್ಟೆಂಟ್ ಮತ್ತು ಆಪಲ್‌ ಸಿರಿಯಂತಹ ವಾಯ್ಸ್‌ ಅಸಿಸ್ಟೆಂಟ್‌ ಗಳಿಗೆ ಕೂಡ ಬೆಂಬಲವನ್ನು ನೀಡಲಿದೆ. ಇದರಿಂದ ಸ್ಮಾರ್ಟ್‌ವಾಚ್‌ನಲ್ಲಿ AI ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಬಳಸಬಹುದಾಗಿದೆ

ಫೈರ್-ಬೋಲ್ಟ್ ಟಾಕ್ ಅಲ್ಟ್ರಾ

ಫೈರ್-ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ಗೇಮ್‌ಗಳೊಂದಿಗೆ ಬರಲಿದೆ. ಇದರಿಂದ ಬಳಕೆದಾರರು ಈ ಸ್ಮಾರ್ಟ್‌ವಾಚ್‌ನಲ್ಲಿ ಗೇಮಿಂಗ್‌ ಅನುಭವವನ್ನು ಕೂಡ ಪಡೆದುಕೊಳ್ಳಬಹುದಾಗಿದೆ. ಇನ್ನು ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ ಏಳು ದಿನಗಳ ಬಾಳಿಕೆಯನ್ನು ನೀಡಲಿದೆ. ಇದನ್ನು ಫುಲ್‌ ಚಾರ್ಜ್‌ ಮಾಡುವುದಕ್ಕೆ ಸುಮಾರು 120 ನಿಮಿಷಗಳ ಅವಶ್ಯಕತೆಯಿದೆ ಎಂದು ಫೈರ್‌ಬೋಲ್ಟ್‌ ಕಂಪೆನಿ ಹೇಳಿಕೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ 100+ ಕ್ಲೌಡ್ ವಾಚ್ ಫೇಸ್‌ಗಳನ್ನು ನೀಡಲಾಗಿದ್ದು, ಸ್ಮಾರ್ಟ್ UI ಇಂಟರ್ಫೇಸ್ ಅನ್ನು ಹೊಂದಿದೆ. ಇದರಿಂದ ಕ್ಯಾಮೆರಾ ಮತ್ತು ಮ್ಯೂಸಿಕ್‌ ಪ್ಲೇ ಬ್ಯಾಕ್‌ ಅನ್ನು ಕೂಡ ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಬಿಡುಗಡೆಯಾಗಿರುವ ಫೈರ್-ಬೋಲ್ಟ್ ಟಾಕ್ ಅಲ್ಟ್ರಾ ಸ್ಮಾರ್ಟ್ ವಾಚ್ 1,999ರೂ. ಬೆಲೆಯನ್ನು ಹೊಂದಿದೆ. ಬಜೆಟ್‌ ಬೆಲೆಯಲ್ಲಿ ಬಂದಿರುವ ಈ ಸ್ಮಾರ್ಟ್‌ವಾಚ್‌ ಕಂಪೆನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ ಮೂಲಕ ಭಾರತದಲ್ಲಿ ಖರೀದಿಗೆ ಲಭ್ಯವಾಗಲಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ, ಕೆಂಪು, ಬೂದು, ಗುಲಾಬಿ ಮತ್ತು ಟೀಲ್ ಎಂಬ ಒಟ್ಟು ಆರು ಬಣ್ಣಗಳ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English summary
Fire-Boltt Talk Ultra smartwatch is priced at Rs. 1,999 and is available for sale via the official Fire-Boltt website and also via Flipkart India.know more details in kannada

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X