ಫೈರ್‌ಬೋಲ್ಟ್‌ನಿಂದ ಬಂತು ಮತ್ತೊಂದು ಅತ್ಯಾಕರ್ಷಕ ಸ್ಮಾರ್ಟ್‌ವಾಚ್‌! ಬೆಲೆ ಎಷ್ಟು?

|

ಫೈರ್-ಬೋಲ್ಟ್ ಕಂಪೆನಿ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಹೊಸ ಸಂಚಲನವನ್ನೇ ಸೃಷ್ಟಿಸಿದೆ. ಬಳಕೆದಾರರ ಅಗತ್ಯಕ್ಕೆ ತಕ್ಕಂತೆ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುವ ಮೂಲಕ ಭಾರಿ ಕ್ರೇಜ್‌ ಹುಟ್ಟುಹಾಕಿದೆ. ಇದಕ್ಕೆ ತಕ್ಕಂತೆ ಇದೀಗ ತನ್ನ ಹಸ ಫೈರ್-ಬೋಲ್ಟ್ ಇನ್ಫಿನಿಟಿ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ ಅಗ್ಗದ ಬೆಲೆಯಲ್ಲಿ ಲಭ್ಯವಾಗಲಿದ್ದು, ಯುವನತೆಯ ಅಶಯಗಳಿಗೆ ಸೂಕ್ತವಾದ ವಿನ್ಯಾಸವನ್ನು ಪಡೆದಿದೆ. ಇದು ನೀರು ಮತ್ತು ಧೂಳಿನಿಂದ ರಕ್ಷಿಸುವುದಕ್ಕಾಗಿ IP67 ರೇಟಿಂಗ್‌ ಅನ್ನು ಪಡೆದುಕೊಂಡಿದೆ.

ಫೈರ್-ಬೋಲ್ಟ್

ಹೌದು, ಭಾರತದ ಮಾರುಕಟ್ಟೆಯಲ್ಲಿ ಫೈರ್-ಬೋಲ್ಟ್ ಇನ್ಫಿನಿಟಿ ಸ್ಮಾರ್ಟ್ ವಾಚ್ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್‌ 300 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಇದು 110 ಕ್ಕೂ ಹೆಚ್ಚು ಇನ್‌ಬಿಲ್ಟ್‌ ವಾಚ್ ಫೇಸ್‌ಗಳಿಗೆ ಬೆಂಬಲವನ್ನು ನೀಡಲಿದೆ. ಈ ಸ್ಮಾರ್ಟ್‌ವಾಚ್‌ ಹಾರ್ಟ್‌ಬೀಟ್‌ ಸೆನ್ಸಾರ್‌ ಮತ್ತು ಬ್ಲಡ್‌ ಆಕ್ಸಿಜನ್‌ ಲೆವೆಲ್‌ ಅನ್ನು ಟ್ರ್ಯಾಕ್‌ ಮಾಡುವ ಸಾಮರ್ಥ್ಯವನ್ನು ಪಡದಿದೆ. ಇನ್ನುಳಿದಂತೆ ಈ ವಾಚ್‌ ಏನೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಇನ್ಫಿನಿಟಿ

ಫೈರ್-ಬೋಲ್ಟ್ ಇನ್ಫಿನಿಟಿ ಸ್ಮಾರ್ಟ್ ವಾಚ್ 1.6-ಇಂಚಿನ HD LCD ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 400x400 ಪಿಕ್ಸೆಲ್ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಇದರ ಡಿಸ್‌ಪ್ಲೇ 500 ನಿಟ್ಸ್ ಪೀಕ್ ಬ್ರೈಟ್‌ನೆಸ್‌ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ 300 ಕ್ಕೂ ಹೆಚ್ಚು ಸ್ಪೋರ್ಟ್ಸ್ ಮೋಡ್‌ಗಳನ್ನು ಹೊಂದಿದ್ದು, 110ಕ್ಕೂ ಹೆಚ್ಚು ಇನ್‌ಬಿಲ್ಟ್‌ ವಾಚ್ ಫೇಸ್‌ಗಳಿಗೆ ಬೆಂಬಲಿಸಲಿದೆ. ಈ ಸ್ಮಾರ್ಟ್‌ವಾಚ್‌ ನೀರು ಮತ್ತು ಧೂಳಿನಿಂದ ರಕ್ಷಿಸಲು IP67 ರೇಟಿಂಗ್ ಅನ್ನು ಪಡೆಯುತ್ತದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಪಡೆದಿದೆ. ಇದರಿಂದ ನೀವು ವಾಚ್‌ನಿಂದಲೇ ನೇರವಾಗಿ ಫೋನ್ ಕರೆಗಳನ್ನು ಮಾಡಲು ಮತ್ತು ಸ್ವೀಕರಿಸಲು ಅವಕಾಶ ಸಿಗಲಿದೆ. ಇದು ಟೈಮ್‌ಪೀಸ್ 4GB ಇನ್‌ಬಿಲ್ಟ್‌ ಸ್ಟೋರೇಜ್‌ ಅನ್ನು ಒಳಗೊಂಡಿದೆ. ಇದರಲ್ಲಿ ನೀವು 300 ಹಾಡುಗಳ ಸ್ಓರೇಜ್‌ ಕ್ಯಾಪಸಿಟಿ ಹೊಂದಿದ್ದು, ಪರ್ಸನಲ್‌ MP3 ಪ್ಲೇಯರ್ ಅನ್ನು ನೀಡುತ್ತದೆ. ಅಲ್ಲದೆ ಸ್ಮಾರ್ಟ್‌ವಾಚ್‌ ಮೂಲಕವೇ ಡೈರಕ್ಟ್‌ ಆಗಿ ಮ್ಯೂಸಿಕ್‌ ಅನ್ನು ಪ್ಲೇ ಮಾಡಬಹುದು. ಇದು ಆಂಡ್ರಾಯ್ಡ್ ಮತ್ತು ಐಫೋನ್‌ಗಳೆರಡಕ್ಕೂ ಸಹ ಹೊಂದಿಕೊಳ್ಳುತ್ತದೆ.

ಇನ್ಫಿನಿಟಿ

ಫೈರ್-ಬೋಲ್ಟ್ ಇನ್ಫಿನಿಟಿ ಸ್ಮಾರ್ಟ್‌ವಾಚ್ ಹೆಲ್ತ್‌ ಫೀಚರ್ಸ್‌ಗಳ ವಿಚಾರದಲ್ಲಿ ಸಾಕಷ್ಟು ಗಮನಸೆಳೆದಿದೆ. ಇದು SpO2 ಮಾನಿಟರಿಂಗ್, ಡೈನಾಮಿಕ್ ಹಾರ್ಟ್‌ ಬೀಟ್‌ ಟ್ರ್ಯಾಕಿಂಗ್ ಸೆನ್ಸಾರ್‌, ಸ್ಲಿಪ್ ಟ್ರ್ಯಾಕಿಂಗ್‌ ಮತ್ತು ಮಹಿಳೆಯರ ಆರೋಗ್ಯಕ್ಕೆ ಸಂಬಂಧಿಸಿದ ಹೆಲ್ತ್‌ ಟ್ರ್ಯಾಕರ್‌ಗಳನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ನಲ್ಲಿ ಸ್ಮಾರ್ಟ್ ನೋಟಿಫಿಕೇಶನ್‌ಗಳನ್ನು ಸಹ ನೀಡಲಿದೆ. ಇದರೊಂದಿಗೆ ಮ್ಯೂಸಿಕ್‌ ಕಂಟ್ರೋಲ್‌ ಮತ್ತು TWS ಕನೆಕಟಿವಿಟಿ ಫೀಚರ್ಸ್‌ಗಳನ್ನು ಸಹ ಪಡೆದುಕೊಂಡಿದೆ.

ಸ್ಮಾರ್ಟ್‌ವಾಚ್‌

ಈ ಸ್ಮಾರ್ಟ್‌ವಾಚ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಹೊಂದಿದ್ದು, iOS ನಲ್ಲಿ ಸಿರಿ ಮತ್ತು ಆಂಡ್ರಾಯ್ಡ್‌ನಲ್ಲಿ ಗೂಗಲ್‌ ಅಸಿಸ್ಟೆಂಟ್‌ ಎರಡನ್ನೂ ಸಹ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ ಐದು ದಿನಗಳವರೆಗೆ ಬಾಳಿಕೆಯನ್ನು ನೀಡಲಿದೆ. ಇದನ್ನು ಸಂಪೂರ್ಣವಾಗಿ ಚಾರ್ಜ್ ಮಾಡಲು ಮೂರು ಗಂಟೆಗಳ ಸಮಯ ಬೇಕಾಗುತ್ತದೆ. ಈ ಸ್ಮಾರ್ಟ್ ವಾಚ್ 4.5x3.9x1.2cm ಅಳತೆ ಮತ್ತು 50 ಗ್ರಾಂ ತೂಕವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫೈರ್-ಬೋಲ್ಟ್ ಇನ್ಫಿನಿಟಿ ಸ್ಮಾರ್ಟ್ ವಾಚ್ ಭಾರತದಲ್ಲಿ 4,999ರೂ.ಬೆಲೆಯನ್ನು ಹೊಂದಿದೆ. ಇದು ಅಧಿಕೃತ ಫೈರ್-ಬೋಲ್ಟ್ ವೆಬ್‌ಸೈಟ್‌ನಲ್ಲಿ ಮತ್ತು ಅಮೆಜಾನ್ ಇಂಡಿಯಾ ಮೂಲಕ ಮಾರಾಟಕ್ಕೆ ಲಭ್ಯವಿದೆ. ಇನ್ನು ಸ್ಮಾರ್ಟ್‌ವಾಚ್‌ ಕಪ್ಪು, ಚಿನ್ನ, ಬೆಳ್ಳಿ, ಬೂದು ಮತ್ತು ಗೋಲ್ಡ್ ಕಪ್ಪು ಬಣ್ಣದ ಆಯ್ಕೆಗಳಲ್ಲಿ ದೊರೆಯಲಿದೆ.

Best Mobiles in India

English summary
Fire-Boltt Infinity Smartwatch Launched in India: Specifications

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X