ಕೈಗೆಟಕುವ ಬೆಲೆಯಲ್ಲಿ ಹೊಸ ಸ್ಮಾರ್ಟ್‌ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌!

|

ಫೈರ್‌ ಬೋಲ್ಟ್‌ ಕಂಪೆನಿಯ ಸ್ಮಾರ್ಟ್‌ವಾಚ್‌ಗಳಿಗೆ ಮಾರುಕಟ್ಟೆಯಲ್ಲಿ ಸಿಕ್ಕಾಪಟ್ಟೆ ಕ್ರೇಜ್‌ ಇದೆ. ಇದಕ್ಕೆ ತಕ್ಕಂತೆ ಫೈರ್‌ ಬೋಲ್ಟ್‌ ಕಂಪೆನಿ ಕೂಡ ವಿಶೇಷ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಅದರ ಮುಂದುವರೆದ ಭಾಗವಾಗಿ ಇದೀಗ ಹೊಸ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಭಾರತದಲ್ಲಿ ಲಾಂಚ್‌ ಆಗಿದೆ. ಈ ಸ್ಮಾರ್ಟ್‌ವಾಚ್‌ ವೇರಿಯೆಬಲ್‌ ಸ್ಪೋರ್ಟ್ಸ್ 1.83 ಇಂಚಿನ HD ಡಿಸ್‌ಪ್ಲೇ ಹೊಂದಿದೆ. ಇದು ಬ್ಲೂಟೂತ್ ಕಾಲ್‌ ಅನ್ನು ಬೆಂಬಲಿಸಲಿದೆ.

ಹೊಸ

ಹೌದು, ಫೈರ್‌ ಬೋಲ್ಟ್‌ ಹೊಸ ಫೈರ್‌ ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಬಿಡುಗಡೆ ಮಾಡಿದೆ. ಇದು 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ ಮತ್ತು ಹೃದಯ ಬಡಿತ ಮತ್ತು SpO2 ಸೆನ್ಸಾರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ವಾಚ್‌ AI ವಾಯ್ಸ್‌ ಅಸಿಸ್ಟೆಂಟ್‌ ಇನ್‌ಬಿಲ್ಟ್‌ ಗೇಮ್ಸ್‌ ಮತ್ತು ಸ್ಮಾರ್ಟ್ ನೋಟಿಫಿಕೇಶನ್‌ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ 6 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫೀಚರ್ಸ್‌ ಹೇಗಿದೆ?

ಫೀಚರ್ಸ್‌ ಹೇಗಿದೆ?

ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 1.83-ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು 240 x 284 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್ ವಾಚ್ ಬ್ಲೂಟೂತ್ ಕಾಲ್‌ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ಬಳಕೆದಾರರು ಫೋನ್‌ ಕಾಲ್‌ಗಳನ್ನು ಸ್ಮಾರ್ಟ್‌ವಾಚ್‌ ಮೂಲಕವೇ ಸ್ವೀಕರಿಸಲು ಅನುವು ಮಾಡಿಕೊಡಲಿದೆ. ಇದಲ್ಲದೆ ಈ ಸ್ಮಾರ್ಟ್‌ವಾಚ್‌ ಇನ್‌ಬಿಲ್ಟ್‌ ವಾಯ್ಸ್‌ ಅಸಿಸ್ಟೆಂಟ್‌ ಅನ್ನು ಕೂಡ ಹೊಂದಿದೆ. ಇದರಿಂದ ನಿಮ್ಮ ಸ್ಮಾರ್ಟ್‌ವಾಚ್‌ ಮೂಲಕವೇ ನಿಮ್ಮ ಫೋನ್‌ ಕಾಲ್‌ ಮೇಲ್ವಿಚಾರಣೆ ಮಾಡಲು ಅವಕಾಶ ಸಿಗಲಿದೆ.

ನಿಂಜಾ

ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 100ಕ್ಕೂ ಹೆಚ್ಚು ಸ್ಪೋರ್ಟ್ಸ್‌ ಮೋಡ್‌ಗಳನ್ನು ಬೆಂಬಲಿಸಲಿದೆ. ಡ್ರಿಂಕ್ ವಾಟರ್ ರಿಮೈಂಡರ್, ಫೀಮೇಲ್ ಹೆಲ್ತ್ ಕೇರ್, ಹಾರ್ಟ್ ರೇಟ್ ಟ್ರ್ಯಾಕರ್, ಸೆಡೆಂಟರಿ ಟ್ರ್ಯಾಕರ್, ಸ್ಲೀಪ್ ಮಾನಿಟರಿಂಗ್ ಮತ್ತು SpO2 ಸೇರಿದಂತೆ ಹಲವು ಹೆಲ್ತ್‌ ಟ್ರ್ಯಾಕರ್‌ಗಳನ್ನು ಕೂಡ ಒಳಗೊಂಡಿದೆ. ಇದು ನಿಮಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಸಲಹೆಗಳನ್ನು ನೀಡಲಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ ಸ್ಮಾರ್ಟ್‌ ನೋಟಿಫಿಕೇಶನ್‌ಗಳನ್ನು ಕೂಡ ನೀಡಲಿದೆ.

ಬೋಲ್ಟ್‌

ಇದಲ್ಲದೆ ಫೈರ್-ಬೋಲ್ಟ್‌ ನಿಂಜಾ ಕಾಲ್ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಮೂಲಕ ನೀವು ಕ್ಯಾಮೆರಾ ಕಂಟ್ರೋಲ್‌ ಮಾಡುವುದಕ್ಕೆ ಕೂಡ ಅವಕಾಶವಿದೆ. ಅಲ್ಲದೆ ಮ್ಯೂಸಿಕ್‌ ಕಂಟ್ರೋಲ್‌ ಮತ್ತು ವೇದರ್‌ ಅಪ್ಡೇಟ್‌ ಫೀಚರ್ಸ್‌ಗಳನ್ನು ಕೂಡ ಒಳಗೊಂಡಿದೆ. ಇದರೊಂದ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಇನ್‌ಬಿಲ್ಟ್‌ ಗೇಮ್ಸ್‌ಗಳನ್ನು ಕೂಡ ಹೊಂದಿದೆ. ಇದು ನೀರು ಮತ್ತು ದೂಳಿನಿಂದ ರಕ್ಷಣೆ ಪಡೆಯಲು IP67 ರೇಟಿಂಗ್‌ ಅನ್ನು ಹೊಂದಿದೆ.

ಸ್ಮಾರ್ಟ್‌ವಾಚ್‌

ಇನ್ನು ಈ ಸ್ಮಾರ್ಟ್‌ವಾಚ್‌ ಸಾಮಾನ್ಯ ಬಳಕೆಯಲ್ಲಿ 6 ದಿನಗಳ ಬ್ಯಾಟರಿ ಅವಧಿಯನ್ನು ನೀಡಲಿದೆ ಎಂದು ಫೈರ್‌ ಬೋಲ್ಟ್‌ ಕಂಪೆನಿ ಹೇಳಿದೆ. ಆದರೆ ಈ ಸ್ಮಾರ್ಟ್‌ವಾಚ್‌ ಸಿಂಗಲ್‌ ಚಾರ್ಜ್‌ನಲ್ಲಿ 15 ದಿನಗಳ ಸ್ಟ್ಯಾಂಡ್‌ಬೈ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಸದ್ಯ ಫೈರ್-ಬೋಲ್ಟ್ ನಿಂಜಾ ಕಾಲ್ ಪ್ರೊ ಪ್ಲಸ್ ಭಾರತದಲ್ಲಿ 1,999ರೂ. ಬೆಲೆ ಹೊಂದಿದೆ. ಇದನ್ನು ಫೈರ್-ಬೋಲ್ಟ್‌ನ ಅಧಿಕೃತ ವೆಬ್‌ಸೈಟ್ ಮತ್ತು ಇ-ಕಾಮರ್ಸ್‌ ದೈತ್ಯ ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದಾಗಿದೆ. ಇದು ಕಪ್ಪು, ಬ್ಲ್ಯಾಕ್‌ ಗೋಲ್ಡ್‌, ಬೂದು, ಪಿಂಕ್ ಮತ್ತು ನೇವಿ ಬ್ಲೂ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Fire-Boltt Ninja Call Pro Plus smartwatch With 1.83-Inch Display Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X