ಅಗ್ಗದ ಬೆಲೆಯಲ್ಲಿ ಹೊಸ ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌! ವಿಶೇಷತೆ ಏನು?

|

ಭಾರತದ ಸ್ಮಾರ್ಟ್‌ವಾಚ್‌ ಮಾರುಕಟ್ಟೆಯಲ್ಲಿ ಫೈರ್‌ಬೋಲ್ಟ್‌ ಕಂಪನಿ ಸಾಕಷ್ಟು ಸದ್ದು ಮಾಡ್ತಿದೆ. ಕಡಿಮೆ ಬೆಲೆಯಲ್ಲಿ ಅತ್ಯಾಕರ್ಷಕ ಫೀಚರ್ಸ್‌ ಒಳಗೊಂಡ ಸ್ಮಾರ್ಟ್‌ವಾಚ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಫೈರ್ ಬೋಲ್ಟ್ ನಿಂಜಾ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ ಅನ್ನು ಪರಿಚಯಿಸಿದೆ. ಇದು ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ಹೊಂದಿದ್ದು, 120 ಸ್ಪೋರ್ಟ್ಸ್ ಮೋಡ್‌ಗಳನ್ನು ಒಳಗೊಂಡಿದೆ. ಜೊತೆಗೆ ಈ ಸ್ಮಾರ್ಟ್‌ವಾಚ್‌ 1.83 ಇಂಚಿನ ಬಿಗ್‌ ಡಿಸ್‌ಪ್ಲೇಯನ್ನು ಹೊಂದಿದೆ.

ಅಗ್ಗದ ಬೆಲೆಯಲ್ಲಿ ಹೊಸ ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌! ವಿಶೇಷತೆ ಏನು?

ಹೌದು, ಫೈರ್‌ಬೋಲ್ಟ್‌ ಕಂಪೆನಿ ಭಾರತದಲ್ಲಿ ಹೊಸ ಫೈರ್‌ಬೋಲ್ಟ್‌ ನಿಂಜಾ ಪ್ರೊ ಪ್ಲಸ್‌ ಸ್ಮಾರ್ಟ್‌ವಾಚ್‌ ಬಿಡುಗಡೆಯಾಗಿದೆ. ಈ ಸ್ಮಾರ್ಟ್‌ವಾಚ್‌ ಪಾಕೆಟ್-ಸ್ನೇಹಿ ಬೆಲೆಯಲ್ಲಿ ಬರಲಿದ್ದು, ನಿರೀಕ್ಷೆಗೂ ಮೀರಿದ ಹೆಲ್ತ್‌ ಫೀಚರ್ಸ್‌ಗಳನ್ನು ನೀಡಲಿದೆ. ಇದು Spo2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ವಾಚ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಫೈರ್ ಬೋಲ್ಟ್ ನಿಂಜಾ ಪ್ರೊ ಪ್ಲಸ್ ಫೀಚರ್ಸ್‌ ಹೇಗಿದೆ?
ಫೈರ್‌ ಬೋಲ್ಟ್‌ ನಿಂಜಾ ಪ್ರೊ ಪ್ಲಸ್ ಸ್ಮಾರ್ಟ್‌ವಾಚ್‌ 1.83 ಇಂಚಿನ ಬಿಗ್‌ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 240 x 260 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಪಡೆದಿದೆ. ಜೊತೆಗೆ ಡಿಸ್‌ಪ್ಲೇ IP67-ಪ್ರಮಾಣೀಕೃತ ವಾಟರ್‌ ಪ್ರೂಫ್‌ ವ್ಯವಸ್ಥೆಯನ್ನು ಕೂಡ ಒಳಗೊಂಡಿದೆ. ಇದು ನೀರು ಮತ್ತು ಧೂಳಿನ ವಿರುದ್ಧ ರಕ್ಷಿಸುತ್ತದೆ. ಇನ್ನು ಸ್ಮಾರ್ಟ್‌ವಾಚ್‌ ವಾಯ್ಸ್‌ ಆಕ್ಟಿವ್‌ ಅಸಿಸ್ಟೆಂಟ್‌ ಅನ್ನು ಸಹ ಹೊಂದಿದೆ. ಇದಲ್ಲದೆ ಬಳಕೆದಾರರಿಗೆ ಫೀಚರ್ಸ್‌ಗಳನ್ನು ಸರ್ಚ್‌ ಮಾಡಲು, ಲಿಸ್ಟ್‌ಗಳನ್ನು ಮಾಡಲು, ರಿಮೈಂಡರ್‌ಗಳನ್ನು ಸೆಟ್‌ ಮಾಡುವುದಕ್ಕೆ ಅವಕಾಶ ನೀಡಲಿದೆ.

ಅಗ್ಗದ ಬೆಲೆಯಲ್ಲಿ ಹೊಸ ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌! ವಿಶೇಷತೆ ಏನು?

ಇನ್ನು ಫೈರ್‌ ಬೋಲ್ಟ್‌ ನಿಂಜಾ ಪ್ರೊ ಪ್ಲಸ್‌ ಸ್ಮಾರ್ಟ್‌ವಾಚ್‌ ಹೆಲ್ತ್‌ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರಲ್ಲಿ Spo2 ಮಾನಿಟರಿಂಗ್, ಹೃದಯ ಬಡಿತ ಟ್ರ್ಯಾಕಿಂಗ್, ಸ್ಲೀಪ್ ಮಾನಿಟರಿಂಗ್‌ ಫೀಚರ್ಸ್‌ಗಳನ್ನು ಹೊಂದಿದೆ. ಇದಲ್ಲದೆ ಟೈಮ್‌ಪೀಸ್ ಕ್ಯಾಮೆರಾ ಕಂಟ್ರೋಲ್‌, ಮ್ಯೂಸಿಕ್‌ ಕಂಟ್ರೋಲ್‌ ಮತ್ತು ವೆದರ್‌ ಅಪ್ಡೇಟ್‌ಗಳನ್ನು ಸಹ ನೀಡಲಿದೆ. ಇದಿಷ್ಟೇ ಅಲ್ಲ ಈ ಸ್ಮಾರ್ಟ್‌ವಾಚ್‌ ತನ್ನ ಬಳಕೆದಾರರಿಗೆ ಸಮಯಕ್ಕೆ ಸರಿಯಾಗಿ ನೀರು ಕುಡಿಯುವುದನ್ನು ಕೂಡ ನೆನಪು ಮಾಡಲಿದೆ.

ಇದಲ್ಲದೆ ಫೈರ್‌ಬೋಲ್ಟ್‌ ಎಂದಿನಂತೆ ತನ್ನ ಈ ಸ್ಮಾರ್ಟ್‌ವಾಚ್‌ನಲ್ಲಿಯೂ ಕೂಡ ಬ್ಲೂಟೂತ್‌ ಕಾಲಿಂಗ್‌ ಫೀಚರ್ಸ್‌ ಅನ್ನು ನೀಡಿದೆ. ಇದರಿಂದ ನೀವು ಕಾಲ್‌ಗಳನ್ನು ರಿಸಿವ್‌ ಮಾಡುವುದಕ್ಕೆ ಮತ್ತು ಕಾಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಜೊತೆಗೆ ತ್ವರಿತ ಪ್ರವೇಶ ಡಯಲ್ ಪ್ಯಾಡ್, ಕಾಲ್‌ ಹಿಸ್ಟರಿ ಮತ್ತು ಕಂಟ್ಯಾಕ್ಟ್‌ಗಳನ್ನು ಸಿಂಕ್‌ ಮಾಡುವ ಫೀಚರ್ಸ್‌ಗಳನ್ನು ನೀಡಲಾಗಿದೆ.

ಅಗ್ಗದ ಬೆಲೆಯಲ್ಲಿ ಹೊಸ ವಾಚ್‌ ಪರಿಚಯಿಸಿದ ಫೈರ್‌ಬೋಲ್ಟ್‌! ವಿಶೇಷತೆ ಏನು?

ಬೆಲೆ ಮತ್ತು ಲಭ್ಯತೆ
ಫೈರ್‌ ಬೋಲ್ಟ್‌ ನಿಂಜಾ ಪ್ರೊ ಪ್ಲಸ್‌ ಸ್ಮಾರ್ಟ್‌ವಾಚ್‌ ಭಾರತದಲ್ಲಿ 1,799ರೂ. ಬೆಲೆಯನ್ನು ಪಡೆದುಕೊಂಡಿದೆ. ಈ ಸ್ಮಾರ್ಟ್‌ವಾಚ್‌ ಕಪ್ಪು, ನೀಲಿ, ಹಸಿರು, ಗೋಲ್ಡ್ ಬ್ಲಾಕ್, ಪಿಂಕ್, ಸಿಲ್ವರ್ ಮತ್ತು ಡಾರ್ಕ್ ಗ್ರೇ ಸೇರಿದಂತೆ ಹಲವು ಬಣ್ಣಗಳಲ್ಲಿ ಲಭ್ಯವಿದೆ. ಇದನ್ನು ನೀವು ಅಮೆಜಾನ್‌ನಲ್ಲಿ ಖರೀದಿಸಬಹುದಾಗಿದೆ.

ಇನ್ನು ಫೈರ್‌ಬೋಲ್ಟ್‌ ಕಂಪೆನಿ ಇತ್ತೀಚಿಗೆ ಭಾರತದಲ್ಲಿ ಹೊಸದಾಗಿ ಫೈರ್ ಬೋಲ್ಟ್ ರಾಕೆಟ್‌ ವಾಚ್‌ ಬಿಡುಗಡೆ ಮಾಡಿದೆ. ಫೈರ್ ಬೋಲ್ಟ್ ರಾಕೆಟ್‌ ವಾಚ್‌ 1.3 ಇಂಚಿನ HD ಡಿಸ್‌ಪ್ಲೇಯನ್ನು ಹೊಂದಿದೆ. ಇದು ರೌಂಡ್ ಡಯಲ್ ಅನ್ನು ಒಳಗೊಂಡಿದೆ. ಇನ್ನು ಸ್ಮಾರ್ಟ್‌ವಾಚ್‌ ಬಲಭಾಗದಲ್ಲಿ ಫಿಸಿಕಲ್‌ ಬಟನ್ ಹೊಂದಿದ್ದು, IP67-ಪ್ರಮಾಣೀಕೃತ ವಾಟರ್‌ ರೆಸಿಸ್ಟೆನ್ಸಿಯನ್ನು ಪಡೆದಿದೆ. ಇದು ವಿವಿಧ ಮಾದರಿಯ ಸ್ಮಾರ್ಟ್‌ವಾಚ್‌ ಫೇಸ್‌ಗಳನ್ನು ಒಳಗೊಂಡಿದೆ. ಫೈರ್ ಬೋಲ್ಟ್ ರಾಕೆಟ್‌ ವಾಚ್‌ ಆರೋಗ್ಯದ ದೃಷ್ಟಿಯಿಂದ, ಹೃದಯ ಬಡಿತ ಮಾನಿಟರ್, SpO2 ಸೆನ್ಸಾರ್‌, ಸ್ಲಿಪಿಂಗ್‌ ಟ್ರ್ಯಾಕರ್ ಮತ್ತು ಸ್ತ್ರೀ ಸೈಕಲ್ ಮಾನಿಟರ್ ಅನ್ನು ಹೊಂದಿದೆ.

Best Mobiles in India

English summary
Fire Boltt Ninja Pro Plus with Bluetooth calling feature launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X