ನೀರಿನಲ್ಲಿ ಈಜುವ, ಗಾಳಿಯಲ್ಲಿ ಹಾರುವ ರೋಬೋ

  By Suneel
  |

  ಟೆಕ್‌ ಕ್ಷೇತ್ರದ ಸಂಶೋಧನೆ ಇಂದು ಮಾನವರಂತೆ ಕೆಲಸ ಮಾಡುವ ಹೇಳಿದ ಮಾತು ಕೇಳುವ ರೋಬೋಟ್‌ಗಳನ್ನು ಕಂಡುಹಿಡಿದು ತನ್ನ ಅಭಿವೃದ್ಧಿ ಪತವನ್ನು ಎಲ್ಲೋ ಸಾಗಿಸಿ ಬಿಟ್ಟಿದೆ. ಆದರೆ ಟೆಕ್‌ ಸಂಶೋಧನೆಯ ಹೊರಗಿನವರು ಅಯ್ಯೋ ಕಂಡುಹಿಡಿಯೋಕೆ ಇನ್ನೇನಿದೆ ಎಂದು ಮಾತನಾಡಿಕೊಳ್ಳುತ್ತಾರೆ. ಕಾರಣ ಹಲವರು ಟೆಕ್‌ ಬೆಳವಣಿಗೆ ಬಗ್ಗೆ ಮಾಹಿತಿಯನ್ನು ತಿಳಿದಿರುವುದಿಲ್ಲ. ಆದರೆ ಇಂದು ಪ್ರತಿಯೊಬ್ಬರು ಟೆಕ್‌ ಕ್ಷೇತ್ರದ ಅಭಿವೃದ್ಧಿಯನ್ನು ತಿಳಿಯಲೇಬೇಕು.

  ಓದಿರಿ: ಎಲ್ಲರೂ ತಿಳಿಯಲೇ ಬೇಕಾದ ಟಾಪ್‌ 15 ಸಾಮಾಜಿಕ ಜಾಲತಾಣಗಳು

  ಟೆಕ್‌ ಇಂದು ಮನುಷ್ಯನ ಅರ್ಧದಷ್ಟು ದೈಹಿಕ ಕೆಲಸಗಳನ್ನು ಕಡಿಮೆ ಮಾಡಿದೆ. ಟೆಕ್‌ ದಿನದಿಂದ ದಿನಕ್ಕೆ ಇನ್ನು ಹೆಚ್ಚು ಹೆಚ್ಚು ಮಾನವನ ಕೆಲಸಗಳನ್ನು ಕಡಿಮೆ ಮಾಡುವಲ್ಲಿ ಸಂಶಯವಿಲ್ಲ. ಅದಕ್ಕೆ ಉದಾಹರಣೆಯಾಗಿ ರೋಬೋಟ್‌ ಬಗ್ಗೆ ನಿಮಗೆ ಹೇಳಬೇಕಾಗಿಲ್ಲ. ಆದರೆ ಇಂದು ರೋಬೋಟ್‌ಗಿಂತಲು ಒಂದು ಹೆಜ್ಜೆ ಮುಂದೆ ಹೋಗಿ ವಿಜ್ಷಾನಿಗಳು ನ್ಯಾನೋ ರೋಬೋಟ್‌(RoboBee) ಕಂಡುಹಿಡಿದಿದ್ದಾರೆ. ಕೀಟದ ಗಾತ್ರದ RoboBee ಹೆಚ್ಚು ಆಶ್ಚರ್ಯಕರವಾಗಿದ್ದು ಹಲವು ರೀತಿಯ ಅನುಕೂಲಗಳನ್ನು ಒದಗಿಸಲಿದೆ. ಇದರ ವಿಶೇಷತೆ ಏನು ಎಂಬುದನ್ನು ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ನೀಡಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಕೀಟದ ರೀತಿಯ ರೋಬೋಟ್‌

  ಇದೇ ಮೊದಲ ಬಾರಿಗೆ ವಿಜ್ಞಾನಿಗಳು ಕೀಟದ ರೀತಿಯ ರೋಬೋಟ್‌ ಅನ್ನು ವಿನ್ಯಾಸ ಗೊಳಿಸಿದ್ದಾರೆ. ಇದಕ್ಕೆ RoboBee ಎಂದು ಹೆಸರಿಸಿದ್ದಾರೆ.

  ನೀರು ಮತ್ತು ಗಾಳಿಯಲ್ಲಿ ಚಲನೆ

  ಕೀಟದ ರೀತಿಯ ರೋಬೋಟ್‌ ನೀರಿನಲ್ಲಿ ಈಜಬಲ್ಲದು ಹಾಗು ಆಕಾಶದಲ್ಲಿ ಹಾರಬಲ್ಲದಾಗಿದೆ. ಅಲ್ಲದೇ ಇದರಗಾತ್ರ ಕೇವಲ ಒಂದು ಪೇಪರ್‌ ಕ್ಲಿಪ್‌ ಗಿಂತಲು ಸಣ್ಣದಾಗಿದೆ. ಭವಿಷ್ಯದ ದೃಷ್ಟಿಯಿಂದ ಇದನ್ನು ಗಾಳಿ ಮತ್ತು ನೀರು ಎರಡರಲ್ಲೂ ಚಲಿಸುವಂತೆ ಆವಿಷ್ಕರಿಸಲಾಗಿದೆ.

  ವಿನ್ಯಾಸದಲ್ಲಿ ಎದುರಿಸಿದ ಸಮಸ್ಯೆಗಳು

  ಗಾಳಿಯಲ್ಲಿ ತೇಲಲು ರೆಕ್ಕೆಗಳು ದೊಡ್ಡ ರೀತಿಯಲ್ಲಿ ಬೇಕಾಗುತ್ತವೆ. ಆದರೆ ನೀರಿನಲ್ಲಿ ಈಜಲು ರೆಕ್ಕೆಗಳು ಕಡಿಮೆ ರೀತಿಯಲ್ಲಿ ಬೇಕಾಗಿರುವುದರಿಂದ ಕೀಟ ರೀತಿಯ ನ್ಯಾನೋ ರೋಬೋಟ್‌ ವಿನ್ಯಾಸಗೊಳಿಸಲು ರೆಕ್ಕೆಗಳಿಗೆ ಸಂಬಂಧಿಸಿದ ತಂತ್ರಜ್ಞಾನ ಅಳವಡಿಸುವಲ್ಲಿ ಸಮಸ್ಯೆಯನ್ನು ಎದುರಿಸಲಾಗಿದ್ದರೂ ಸಹ ವಿನ್ಯಾಸ ಸಂಪೂರ್ಣಗೊಂಡಿದೆ.

  ಸಮಸ್ಯಗೆ ಪರಿಹಾರ

  ನ್ಯಾನೋ ರೋಬೋಟ್‌ ರೆಕ್ಕೆಗಳನ್ನು ಅಳವಡಿಸುವ ವಿಷಯದಲ್ಲಿ ಪರಿಹಾರಕ್ಕಾಗಿ ಇಂಜಿನಿಯರ್‌ಗಳಾದ ಹಾರ್ವರ್ಡ್‌ ವಿಶ್ವವಿದ್ಯಾಲಯದ ಜಾನ್‌ ಎ ಪಾಲ್ಸನ್‌ ರವರು ಪುಫಿನ್‌ನಿಂದ ಕ್ಲ್ಯೂ ತೆಗೆದುಕೊಂಡಿದ್ದಾರೆ.

  ಸರ್ಪೇಸ್‌ ಒತ್ತಡ

  ಗಾಳಿ ಮತ್ತು ನೀರು ಎರಡರಲ್ಲೂ ನ್ಯಾನೋ ರೋಬೋಟ್‌ ಚಲಿಸುವಂತೆ ವ್ಯವಸ್ಥೆಗೊಳಿಸಲು ಟೀಮ್‌ ಮೊದಲು ಸರ್ಫೇಸ್ ಒತ್ತಡವನ್ನು ಬಗೆಹರಿಸಿದೆ.

  ಕೆವಿನ್‌ ಚೆನ್

  ''ವಿವಿಧ ಸೈದ್ಧಾಂತಿಕ ಕಂಪ್ಯೂಟೇಷನಲ್‌ ಮತ್ತು ಪ್ರಾಯೋಗಿಕ ಅಧ್ಯಯನಗಳ ಮೂಲಕ ಪ್ಲ್ಯಾಪಿಂಗ್ ಪ್ರಪಲ್ಸನ್‌ ಯಂತ್ರ ಪ್ರಕ್ರಿಯೆ ನೀರು ಮತ್ತು ಗಾಳಿ ಎರಡರಲ್ಲೂ ಒಂದೇ ರೀತಿ ಇರುವುದನ್ನು ತಿಳಿದುಕೊಂಡು ನ್ಯಾನೋ ರೋಬೋಟ್‌ ಕಂಡುಹಿಡಿಯಲಾಗಿದೆ'', ಎಂದು ಹಾರ್ವರ್ಡ್‌ ಮೈಕ್ರೋಬಯೋಟಿಕ್ಸ್‌ ಲ್ಯಾಬ್ ಪದವಿ ವಿದ್ಯಾರ್ಥಿ 'ಕೆವಿನ್‌ ಚೆನ್' ಹೇಳಿದ್ದಾರೆ.

  RoboBee

  RoboBee, ಪೋಸ್ಟ್‌ಡಾಕ್ಟರಲ್‌ ಪೆಲೋ ರಾಬರ್ಟ್‌ ಜೆ ವುಡ್ಸ್‌ ಲ್ಯಾಬ್‌ ನಲ್ಲಿ ವಿನ್ಯಾಸಗೊಂಡಿದ್ದು, ಮೈಕ್ರೋಬಾಟ್‌ ಅಂದರೇ ಪೇಪರ್‌ಕ್ಲಿಪ್‌ ಗಿಂತ ಸಣ್ಣ ಗಾತ್ರವಾಗಿದೆ. ಕಾಣದ ರೆಕ್ಕೆಗಳನ್ನು ಹೊಂದಿದ್ದು, ಕೀಟದಂತೆ ಹಾರುತ್ತದೆ ಮತ್ತು ಒಂದು ಸೆಕೆಂಡಿಗೆ 120 ಬಾರಿ ರೆಕ್ಕೆಗಳನ್ನು ಬಡಿಯುತ್ತದೆ.

  RoboBee

  RoboBee ಅತಿ ಸಣ್ಣದಾಗಿದ್ದು ಕಡಿಮೆ ತೂಕಹೊಂದಿರುವುದರಿಂದ ನೀರಿನ ಸರ್ಪೇಸ್‌ ಒತ್ತಡವನ್ನು ಬ್ರೇಕ್‌ ಮಾಡಲು ಆಗುವುದಿಲ್ಲ.

  ಸ್ವಿಚ್‌ ಆಫ್

  ನೀರಿನ ಒಳಗೆ ಇದು ಈಜಲು ಎದುರಾಗುವ ಅಡಚಣೆಗಳಿಂದ ತಪ್ಪಿಸಿಕೊಳ್ಳಲು ಕೆಲವೊಮ್ಮೆ ತನ್ನ ರೆಕ್ಕೆಗಳನ್ನು ಸ್ವಿಚ್‌ ಆಫ್ ಮಾಡಿಕೊಳ್ಳುತ್ತದೆ.

  ದಿಕ್ಕು ಬದಲಾವಣೆ ಹೇಗೆ?

  RoboBee ದಿಕ್ಕುಗಳನ್ನು ಬದಲಿಸಲು ರೆಕ್ಕೆಗಳ ಸ್ಟ್ರೋಕ್‌ ಆಂಗಲ್‌ ಬದಲಿಸಿ ದಿಕ್ಕುಗಳನ್ನು ಬದಲಿಸುತ್ತದೆ. ಗಾಳಿ ಮತ್ತು ನೀರು ಎರಡರಲ್ಲೂ ಈ ರೀತಿ ಪ್ರಕ್ರಿಯೆ ನೆಡೆಸುತ್ತದೆ. ನ್ಯಾನೋ ರೋಬೋಟ್‌ ಪ್ರಸ್ತುತದಲ್ಲಿ ಚಲನೆಯ ಇಂಧನಕ್ಕಾಗಿ ವಿದ್ಯುತ್‌ ಅವಲಂಬಿಸಿದೆ.

  ಗಾಳಿ ಇಂದ ನೀರಿಗೆ ಹಾರಾಟ

  RoboBee ಗಾಳಿಯಿಂದ ನೀರಿಗೆ ಮತ್ತು ನೀರಿನಿಂದ ಗಾಳಿಗೆ ಮನಬಂದಂತೆ ಹಾರಾಟ ನೆಡೆಸಬಹುದು ಎನ್ನಲಾಗಿದೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  For the first time, scientists have designed an insect-like robot smaller than a paperclip that can both fly and swim — paving the way for future dual aerial aquatic robotic vehicles.

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more