ಎಲ್ಲರೂ ತಿಳಿಯಲೇ ಬೇಕಾದ ಟಾಪ್‌ 15 ಸಾಮಾಜಿಕ ಜಾಲತಾಣಗಳು

By Suneel
|

ಪ್ರಪಂಚವೆಲ್ಲಾ ನಮಗೆ ಹತ್ತಿರವಿದೆ ಅಂತ ಅನ್ನಿಸೋದು ನಾವು ಇಂದು ಬದಲಾಗುತ್ತಿರುವ ತಂತ್ರಜ್ಞಾನಕ್ಕೆ ಒಗ್ಗಿಕೊಂಡು, ಹೊಸ ಹೊಸ ಸಂವಹನ ಆಧಾರಿತ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿದಾಗ ಮಾತ್ರ. ಅಧಿಕವಾಗಿ ಇಂದು ಎಲ್ಲರೂ ಮೊಬೈಲ್‌ಗಳ ಮೂಲಕ ಕೈಗೆಟಕುವ ಎಲ್ಲಾ ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದಾರೆ. ಹಿಂದಿನ ಟ್ರೆಂಡ್‌ ಸಾಮಾಜಿಕ ಜಾಲತಾಣಗಳು ಈಗಾಗಲೇ ಮೂಲೆಗುಂಪು ಸೇರಿವೆ.

ಓದಿರಿ: ಗೂಗಲ್‌ ಲೋಗೋ ಬದಲಿಸಿದ ಹಿಂದಿರುವ ರಹಸ್ಯವೇನು

ಫೇಸ್‌ಬುಕ್‌ ಮತ್ತು ಟ್ವಿಟರ್‌ ತಾಣಗಳ ಹಿಂದೆ ಮೈಸ್ಪೈಸ್‌ ಮತ್ತು ಲೈವ್‌ಜರ್ನಲ್‌ ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಖ್ಯಾತವಾಗಿದ್ದವು. ಆದರೆ ಇಂದು ಟ್ರೆಂಡ್‌ ಬದಲಾಗಿದೆ. ತಂತ್ರಜ್ಞಾನ ಮಾರುಕಟ್ಟೆಗೆ ಬಂದ ಎಲ್ಲಾ ರೀತಿಯ ಸಾಮಾಜಿಕ ಜಾಲತಾಣಗಳನ್ನು ಇಂದು ಅಧಿಕ ಸಂಖ್ಯೆಯಲ್ಲಿ ಎಲ್ಲರೂ ಅಳವಡಿಸಿ ಕೊಳ್ಳುತ್ತಿದ್ದಾರೆ. ಅಂತೆಯೇ ಪ್ರಸ್ತುತದಲ್ಲಿ ಟಾಪ್‌ 15 ಸಾಮಾಜಿಕ ಜಾಲತಾಣಗಳು ಇಂದು ಎಲ್ಲರಿಂದ ಬಳಸಲ್ಪಡುತ್ತಿದ್ದು, ಹೆಚ್ಚು ಹೆಸರುವಾಸಿಯಾಗಿವೆ. ಅವುಗಳು ಯಾವುವು ಎಂಬುದನ್ನು ನಾವು ಇಂದಿನ ಲೇಖನದಲ್ಲಿ ಒಮ್ಮೆ ಮನನ ಮಾಡಿಕೊಡಲಿದ್ದೇವೆ.

ಫೇಸ್‌ಬುಕ್‌

ಫೇಸ್‌ಬುಕ್‌

ವೆಬ್‌ನಲ್ಲಿ ಟಾಪ್‌ ಸಾಮಾಜಿಕ ಜಾಲತಾಣಗಳ ಪಟ್ಟಿಯಲ್ಲಿ ಫೇಸ್‌ಬುಕ್‌ ಇರುವುದು ನಿಮಗೆ ಗೊತ್ತೇ ಇದೆ. ಇಂದು ಬಿಲಿಯನ್‌ಗಿಂತ ಹೆಚ್ಚಿನ ಬಳಕೆದಾರರು ಇದನ್ನು ಬಳಸುತ್ತಿದ್ದಾರೆ.

ಟ್ವಿಟರ್

ಟ್ವಿಟರ್

ಫೇಸ್‌ಬುಕ್‌ ರೀತಿಯಲ್ಲಿಯೇ ಇರುವ ಸಾಮಾಜಿಕ ಜಾಲತಾಣ ಟ್ವಿಟರ್. ಟ್ವಿಟರ್‌ ಇಂದು ರಿಯಲ್‌ ಟೈಮ್‌ ನ್ಯೂಸ್‌ ಶೇರಿಂಗ್‌ನ ಬಹುದೊಡ್ಡ ಸಾಮಾಜಿಕ ಜಾಲತಾಣವಾಗಿದೆ. ಇದು 140 ಕ್ಯಾರೆಕ್ಟರ್‌ ಟೆಕ್ಸ್ಟ್‌ ಲಿಮಿಟ್‌ ಹೊಂದಿದೆ.

ಗೂಗಲ್‌ +

ಗೂಗಲ್‌ +

ಗೂಗಲ್‌ + 2011 ರಲ್ಲಿ ತನ್ನ ಅಸ್ತಿತ್ವ ಪಡೆಯಿತು. ಫೇಟೆಸ್ಟ್‌ ಅಭಿವೃದ್ದಿಹೊಂದುತ್ತಿರುವ ಸಾಮಾಜಿಕ ಜಾಲತಾಣವಾಗಿದೆ. ಆದರೆ ಕೆಲವು ಬಾರಿ ಫೇಲ್‌ ಆದರೂ ಇಂದು ಗೂಗಲ್‌ ಅಪ್ಲಿಕೇಶನ್‌ಗಳೊಂದಿಗೆ ತನ್ನ ಸೇವೆ ನೀಡುತ್ತಿದೆ.

ಯೂಟ್ಯೂಬ್

ಯೂಟ್ಯೂಬ್

ಎಲ್ಲರೂ ವಿಡಿಯೋ ಶೇರ್‌ ಮಾಡಲು ಮತ್ತು ವಿಡಿಯೋ ನೋಡಲು ಇರುವ ಒಂದೇ ಒಂದು ಸಾಮಾಜಿಕ ಜಾಲತಾಣ ಯೂಟ್ಯೂಬ್‌. ಗೂಗಲ್‌ ನಂತರದ ಎರಡನೇ ದೊಡ್ಡ ಸರ್ಚ್‌ ಇಂಜಿನ್‌ ಯೂಟ್ಯೂಬ್‌ ಆಗಿದೆ. ಇದು ಗೂಗಲ್‌ ಮತ್ತು ಗೂಗಲ್‌ + ನೊಂದಿಗೆ ಸಹಭಾಗಿತ್ವ ಹೊಂದಿದೆ. ಆದರೆ ಇತರೆ ಸಾಮಾಜಿಕ ಜಾಲತಾಣದಂತೆ ಸೇವೆ ಸಲ್ಲಿಸುತ್ತಿದೆ.

 ಲಿಂಕ್ಡ್ಇನ್‌

ಲಿಂಕ್ಡ್ಇನ್‌

ಪ್ರೊಫೇಶನಲ್‌ ಸಂಪರ್ಕ ಬಯಸುವವರು ಇದನ್ನು ಬಳಕೆ ಮಾಡುತ್ತಾರೆ. ಲಿಂಕ್ಡ್‌ಇನ್‌ ಸಾಮಾಜಿಕ ಜಾಲತಾಣದಂತೆ ಇದ್ದು ಪ್ರೊಪೇಶನಲ್‌ ಸಂಪರ್ಕ ಒದಗಿಸುತ್ತದೆ. ಫೇಸ್‌ಬುಕ್‌, ಟ್ವಿಟರ್, ಗೂಗಲ್+ ನೊಂದಿಗೆ ರೈಟ್‌ಅಪ್‌ ಮಾಡಿಕೊಂಡಿದೆ.

 ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂ

ಇನ್ಸ್ಟಾಗ್ರಾಂ, ಫೋಟೊ ಶೇರಿಂಗ್‌ನ ಪ್ರಖ್ಯಾತ ಸಾಮಾಜಿಕ ಜಾಲತಾಣವಾಗಿ ಬೆಳವಣಿಗೆ ಹೊಂದಿದೆ. ರಿಯಲ್‌ ಟೈಮ್‌ ಫೋಟೊ ಶೇರಿಂಗ್ ಮಾಡಲು ಇದು ಉತ್ತಮ ಸಾಮಾಜಿಕ ಸಂಪರ್ಕ ಮಾಧ್ಯಮವಾಗಿದೆ. ಅಲ್ಲದೇ ಇದರಲ್ಲಿ ಶಾರ್ಟ್‌ ವಿಡಿಯೋಗಳನ್ನು ಕಳುಹಿಸಬಹುದಾಗಿದೆ.

ಪಿಂಟೆರೆಸ್ಟ್‌

ಪಿಂಟೆರೆಸ್ಟ್‌

ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದು, ವೆಬ್‌ನಲ್ಲಿ ವಿಸ್ಯುವಲ್‌ ಕಾಂಟೆಂಟ್‌ಪ್ರಾಮುಖ್ಯತೆ ತಿಳಿಸುತ್ತದೆ. 10 ಮಿಲಿಯನ್ ಬಳಕೆದಾರರು ತಿಂಗಳಿಗೆ ಈ ಸೈಟ್‌ಗೆ ಬೇಟಿ ನೀಡುತ್ತಾರೆ.

ತಂಬ್ಲರ್‌

ತಂಬ್ಲರ್‌

ಟೀನ್ಸ್‌ ಮತ್ತು ಯಂಗರ್ಸ್‌ಹೆಚ್ಚು ಬಳಕೆಮಾಡುವ ಸಾಮಾಜಿಕ ಬ್ಲಾಗಿಂಗ್‌ ವೇದಿಕೆಗೆ ತಂಬ್ಲರ್‌ ಹೆಸರು ವಾಸಿಯಾಗಿದೆ. ಇದು 8 ನೇ ಟಾಪ್‌ ಸಾಮಾಜಿಕ ಜಾಲತಾಣವಾಗಿದೆ.

ವೈನ್

ವೈನ್

ವೈನ್‌ ಮೊಬೈಲ್‌ ಶೇರಿಂಗ್‌ ವಿಡಿಯೋ ಅಪ್ಲಿಕೇಶನ್‌ ಆಗಿದ್ದು, ಟ್ವಿಟರ್ ಒಡೆತನದಲ್ಲಿದೆ.

ಸ್ನಾಪ್‌ಚಾಟ್‌

ಸ್ನಾಪ್‌ಚಾಟ್‌

ಇನ್ಸ್ಟಾಂಟ್ ಮೆಸೇಜಿಂಗ್‌ ಸಾಮಾಜಿಕ ಸಂಪರ್ಕ ಮಾಧ್ಯಮವಾಗಿದೆ. ಆದರೆ ಒಟ್ಟಾರೆ ಮೊಬೈಲ್‌ ಆಧಾರಿತವಾಗಿದೆ.

ರೆಡ್ಡಿಟ್

ರೆಡ್ಡಿಟ್

ರೆಡ್ಡಿಟ್‌ ಸಾಂಪ್ರದಾಯಿಕ ಸಂದೇಶ ಶೈಲಿಯನ್ನು ಹೊಂದಿದೆ. ಡಿಸ್ಪ್ಲೇ ಸಬ್‌ಮಿಟೆಡ್‌ ಲಿಂಕ್‌ಗಳಿಂದ ಕಾರ್ಯ ನಿರ್ವಹಿಸುತ್ತದೆ. ಹೆಚ್ಚು ಜನರು ವೋಟ್‌ ನೀಡಿದ ಮಾಹಿತಿಯನ್ನು ಇದು ಪುಸ್‌ ಮಾಡುತ್ತದೆ.

 ಫ್ಲಿಕರ್

ಫ್ಲಿಕರ್

ಫ್ಲಿಕರ್, ಪ್ರಖ್ಯಾತ ಯಾಹೂ ಫೋಟೊ ಶೇರಿಂಗ್‌ ನೆಟ್‌ವರ್ಕ್‌ ಆಗಿದೆ. ಫೋಟೊ ಅಪ್‌ಲೋಡ್‌ ಮಾಡಲು ಇರುವ ಬೆಸ್ಟ್‌ ಸಾಮಾಹಿಕ ಸಂಪರ್ಕ ಸೈಟ್‌ ಆಗಿದೆ. ಇದರಿಂದ ಫೋಟೊ ಅಪ್‌ಲೋಡ್‌ ಮಾಡಿ, ಆಲ್ಬಂಗಳನ್ನು ಸೃಜನಶೀಲತೆಯಿಂದ ವಿನ್ಯಾಸಗೊಳಿಸಿ ಸ್ನೇಹಿತರಿಗೆ ತೋರಿಸ ಬಹುದಾಗಿದೆ. ಯಾಹೂ ಫೋಟೊ ಎಡಿಟಿಂಗ್ ಸಂಬಂಧಿಸಿದಂತೆ ಹಲವು ಮೊಬೈಲ್‌ ಅಪ್ಲಿಕೇಶನ್‌ಗಳನ್ನು ಸಹ ನೀಡುತ್ತಿದೆ.

 ಸ್ವಾರ್ಮ್

ಸ್ವಾರ್ಮ್

Foursquare , ತನ್ನ ಲೋಕೇಶನ್‌ ಆಧಾರಿತ ಅಪ್ಲಿಕೇಶನ್‌ಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಿದೆ. ಇದರಲ್ಲಲಿ ಸ್ವಾರ್ಮ್‌ ಒಂದಾಗಿದ್ದು, ಇದು ಸಾಮಾಜಿಕ ಸಂಪರ್ಕಕ್ಕೆ ಸಂಬಂಧಿಸಿದೆ. ಸ್ವಾರ್ಮ್‌ನಿಂದ ಸ್ನೇಹಿತರು ಎಲ್ಲಿದ್ದಾರೆ ಎಂದು ತಿಳಿಯ ಬಹುದಾಗಿದೆ. ಅಲ್ಲದೇ ಬೇಟಿಗೆ ಸ್ಥಳಗಳನ್ನು ನಿಯೋಜಿಸಲು ಬಳಕೆಮಾಡಬಹುದಾಗಿದೆ.

ಟಿವಿಟಾಗ್‌

ಟಿವಿಟಾಗ್‌

GetGlue ಈಗ ಟಿವಿಟಾಗ್ ಆಗಿದೆ. ಇದು ಮನರಂಜನೆ ಆಧಾರಿತ ಟಿವಿಶೋಗಳ ಸಾಮಾಜಿಕ ಸಂಪರ್ಕ ತಾಣವಾಗಿದೆ. ನೆಚ್ಚಿನ ಶೋಗಳನ್ನು ನೋಡಲು ಇದನ್ನು ಟ್ಯೂನ್‌ ಮಾಡಬಹುದಾಗಿದೆ.

ಫೀಡ್‌

ಫೀಡ್‌

ಫೀಡ್‌, ಸಾಮಾಜಿಕ ಸಂಪರ್ಕ ಕಲ್ಪಿಸುವ ಹೊಸ ಮಾಧ್ಯಮವಾಗಿದೆ. ಯಾರು ಆಧುನಿಕ, ಕೂಲೆಸ್ಟ್ ಅಪ್ಲಿಕೇಶನ್‌ಗಳನ್ನು ಬಯಸುತ್ತಾರೋ ಅವರು ಇದಕ್ಕೆ ಜಂಪ್‌ ಆಗಬಹುದಾಗಿದೆ. ಫೇಸ್‌ಬುಕ್‌ ಮತ್ತು ಟ್ವಿಟರ್‌ನಂತೆ ಪ್ರಖ್ಯಾತತೆಯನ್ನು ನೀಡುವ ಅಪ್ಲಿಕೇಶನ್‌ ಆಗಿದೆ.

Most Read Articles
Best Mobiles in India

English summary
The most popular social networking sites sure have changed over the years, and you can expect them to continue to change as times goes on. Old social media trends will die, and new ones will appear.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more