ಫಿಟ್‌ಬಿಟ್‌ ಕಂಪೆನಿಯಿಂದ ಮೂರು ಸ್ಮಾರ್ಟ್ ವಾಚ್ ಲಾಂಚ್‌: ಫೀಚರ್ಸ್‌ ಏನು?

|

ಸ್ಮಾರ್ಟ್‌ವಾಚ್‌ಗಳು ಈಗ ಎಲ್ಲರ ಗಮನ ಸೆಳೆದಿವೆ. ಅದರಂತೆ ಈಗ ಸ್ಮಾರ್ಟ್‌ವಾಚ್‌ ತಯಾರಿಕಾ ಕಂಪೆನಿಗಳಲ್ಲಿ ಒಂದಾದ ಗೂಗಲ್ ಒಡೆತನದ ಫಿಟ್‌ಬಿಟ್ ಹೊಸ ಮೂರು ಸ್ಮಾರ್ಟ್‌ ವಾಚ್‌ಗಳನ್ನು ಅನಾವರಣಗೊಳಿಸಿದೆ. ಈ ವಾಚ್‌ಗಳು ಫಿಟ್‌ಬಿಟ್‌ನ ಫಿಟ್‌ಬಿಟ್ ಸೆನ್ಸ, ಫಿಟ್‌ಬಿಟ್ ವರ್ಸಾ, ಹಾಗೂ ಇನ್‌ಸ್ಪೈರ್ ನ ಸರಣಿ ವಾಚ್‌ಗಳಾಗಿವೆ. ಹಾಗೆಯೇ ಈ ಹಿಂದಿನ ಸರಣಿಯಲ್ಲಿದ್ದ ಸ್ಮಾರ್ಟ್‌ವಾಚ್‌ಗಳಲ್ಲಿನ ಕೆಲವು ಫೀಚರ್ಸ್‌ಗಳ ಜೊತೆ ನೂತನ ಫೀಚರ್ಸ್‌ಗಳನ್ನೂ ಸಹ ಇವುಗಳಲ್ಲಿ ಕಾಣಬಹುದಾಗಿದೆ.

ಸ್ಮಾರ್ಟ್‌ವಾಚ್‌

ಹೌದು, ಸ್ಮಾರ್ಟ್‌ವಾಚ್‌ ವಿಭಾಗದಲ್ಲಿ ಈಗ ಮತ್ತೇ ಈ ಮೂರು ಸ್ಮಾರ್ಟ್‌ವಾಚ್‌ಗಳು ಮಾರುಕಟ್ಟೆಗೆ ಸೇರಿಕೊಂಡಿವೆ. ಫಿಟ್‌ಬಿಟ್ ಕಂಪೆನಿಯು ಇನ್ಸ್ಪೈರ್ 3, ವೆರ್ಸಾ 4 ಮತ್ತು ಸೆನ್ಸ್ 2 ಸ್ಮಾರ್ಟ್ ವಾಚ್‌ಸರಣಿಯನ್ನು ಪರಿಚಯಿಸಿದೆ. ಈ ಸ್ಮಾರ್ಟ್‌ವಾಚ್‌ಗಳು ಹಲವು ಸ್ಪೋರ್ಟ್‌ ಮೋಡ್, ಇನ್‌ಬಿಲ್ಟ್‌ ಜಿಪಿಎಸ್‌, ಸೇರಿದಂತೆ ಇನ್ನಿತರ ಆರೋಗ್ಯ ಸಂಬಂಧಿ ವಿಷಯಗಳನ್ನು ಮೇಲ್ಪಿಚಾರಣೆ ಮಾಡಲಿವೆ. ಜೊತೆಗೆ ಫಿಟ್‌ಬಿಟ್ ಸೆನ್ಸ್ 2 ಹಾಗೂ ಫಿಟ್‌ಬಿಟ್ ವರ್ಸಾ 4 ಸ್ಮಾರ್ಟ್‌ವಾಚ್‌ಗಳು ಹೊಸ ಫಿಟ್‌ಬಿಟ್‌ ಓಎಸ್‌ ನ ಸಾಮರ್ಥ್ಯ ಪಡೆದಿದ್ದು, ಇವು iOS ಮತ್ತು ಆಂಡ್ರಾಯ್ಡ್‌ ಎರಡಕ್ಕೂ ಹೊಂದಿಕೊಳ್ಳುತ್ತದೆ. ಹಾಗಿದ್ರೆ ಈ ಸ್ಮಾರ್ಟ್‌ವಾಚ್‌ಗಳ ಬೆಲೆ ಎಷ್ಟು? ಏನೆಲ್ಲಾ ಹೆಚ್ಚಿನ ಫೀಚರ್ಸ್‌ ಪಡೆದಿವೆ ಎಂಬುದನ್ನು ಈ ಲೇಖನದಲ್ಲಿ ನೀಡಲಾಗಿದೆ ಓದಿರಿ.

ಫಿಟ್‌ಬಿಟ್ ಇನ್‌ಸ್ಪೈರ್ 3

ಫಿಟ್‌ಬಿಟ್ ಇನ್‌ಸ್ಪೈರ್ 3

ಈ ಇನ್‌ಸ್ಪೈರ್ ಫಿಟ್‌ನೆಸ್ ಸ್ಮಾರ್ಟ್‌ವಾಚ್‌ ಸರಣಿ ಈ ಹಿಂದೆ ಪಡೆದುಕೊಂಡಿದ್ದ ಹೃದಯ ಬಡಿತದ ಟ್ರ್ಯಾಕಿಂಗ್‌, ನಿದ್ರೆ ಮತ್ತು ಒತ್ತಡದ ಮಾನಿಟರಿಂಗ್ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದರ ಜೊತೆಗೆ ಬರ್ನಿಂಗ್‌ ಕ್ಯಾಲೋರಿ ಟ್ರ್ಯಾಕಿಂಗ್‌, ದೂರದ ಮಾಪನ, ಹೃದಯ ಬಡಿತದ ಹಂತಗಳನ್ನು ತಿಳಿಸುವ ನೂತನ ಫೀಚರ್ಸ್‌ಗನ್ನು ಪಡೆದಿದೆ. ಇನ್ನು ಹೆಲ್ತ್ ಮೆಟ್ರಿಕ್ಸ್ ಡ್ಯಾಶ್‌ಬೋರ್ಡ್ ಅನ್ನು ಸಹ ಹೊಂದಿದ್ದು, ಉಸಿರಾಟದ ಏರಿಳಿತದ ಮಾಪನದ ಜೊತೆಗೆ ಹೃದಯ ಬಡಿತದ ವ್ಯತ್ಯಾಸ, ಚರ್ಮದ ಉಷ್ಣತೆ, ಆಮ್ಲಜನಕದ ಶುದ್ಧತೆ (SpO2) ಬಗೆಗಿನ ಮಾಹಿತಿಯನ್ನು ಈ ವಾಚ್‌ ನೀಡಲಿದೆ. ಪ್ರತಿ ಪೂರ್ಣ ಚಾರ್ಜಿಂಗ್‌ಗೆ 10 ದಿನಗಳ ಬ್ಯಾಟರಿ ಬ್ಯಾಕ್‌ಅಪ್‌ ಪಡೆಯಬಹುದಾಗಿದೆ.

ಫಿಟ್‌ಬಿಟ್ ವರ್ಸಾ 4

ಫಿಟ್‌ಬಿಟ್ ವರ್ಸಾ 4

ಈ ಸ್ಮಾರ್ಟ್‌ವಾಚ್ 40 ಕ್ಕೂ ಹೆಚ್ಚು ವ್ಯಾಯಾಮ ವಿಧಾನಗಳು, ರಿಯಲ್‌ ಟೈಮ್‌ ಅಂಕಿಅಂಶಗಳು, ಇನ್‌ಬಿಲ್ಟ್‌ ಜಿಪಿಎಸ್‌ ಜೊತೆಗೆ ಡೈಲಿ ರೆಡಿನೆಸ್ ಸ್ಕೋರ್‌ನಂತಹ ಪ್ರೀಮಿಯಂ ಫೀಚರ್ಸ್‌ಗಳನ್ನು ಇದು ನೀಡುತ್ತದೆ. ಈ ಸ್ಮಾರ್ಟ್‌ ವಾಚ್ 6 ದಿನಗಳ ಬ್ಯಾಟರಿ ಬ್ಯಾಕ್‌‌ಅಪ್‌ ಆಯ್ಕೆಯನ್ನು ಪಡೆದಿದೆ. ಇದರೊಂದಿಗೆ ನೂತನ ಪಿಟ್‌ಬಿಟ್‌ ಓಎಸ್‌ನಲ್ಲಿ ಕೆಲಸ ಮಾಡಲಿದ್ದು, ಇದು iOS ಮತ್ತು ಆಂಡ್ರಾಯ್ಡ್‌ ಎರಡಕ್ಕೂ ಸಪೋರ್ಟ್‌ ಮಾಡುತ್ತದೆ.

ಫಿಟ್‌ಬಿಟ್ ಸೆನ್ಸ್ 2

ಫಿಟ್‌ಬಿಟ್ ಸೆನ್ಸ್ 2

ಫಿಟ್‌ಬಿಟ್ ಸೆನ್ಸ್ 2 ವಾಚ್‌ 24/7 ಹೃದಯ ಬಡಿತದ ಮೇಲ್ವಿಚಾರಣೆ, ಚಟುವಟಿಕೆಗಳ ಟ್ರ್ಯಾಕಿಂಗ್, ವಾಕ್/ರನ್ ಫೈಂಡ್‌, ನಿದ್ರೆ ಟ್ರ್ಯಾಕಿಂಗ್ ಮತ್ತು ಒತ್ತಡದ ಟ್ರ್ಯಾಕಿಂಗ್‌ ಆಯ್ಕೆಗಳನ್ನು ಹೊಂದಿದೆ. ಜೊತೆಗೆ ಹೃದಯ ಬಡಿತದ ವ್ಯತ್ಯಾಸ ಮತ್ತು ಚರ್ಮದ ಉಷ್ಣತೆಯಂತಹ ವಿಷಯಗಳನ್ನು ತಿಳಿಸುವುದಲ್ಲದೇ ಬಳಕೆದಾರರು ತಮ್ಮ ದೇಹದಲ್ಲಿ ಏನಾದರೂ ಏರುಪೇರಾದ ಅನುಭವನ್ನು ಕಂಡುಕೊಳ್ಳಲು ಈ ಸ್ಮಾರ್ಟ್‌ವಾಚ್‌ ಸಹಾಯಕವಾಗಲಿದೆ. ಈ ಸ್ಮಾರ್ಟ್‌ವಾಚ್‌ ಸಹ ಫಿಟ್‌ಬಿಟ್‌ ಓಎಸ್‌ ಆಯ್ಕೆ ಪಡೆದಿದ್ದು, iOS ಮತ್ತು ಆಂಡ್ರಾಯ್ಡ್‌ ಎರಡಕ್ಕೂ ಹೊಂದಿಕೊಳ್ಳುತ್ತದೆ. ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ತಂತ್ರಜ್ಞಾನದ ಬೆಂಬಲದೊಂದಿಗೆ 6 ದಿನದ ಬ್ಯಾಟರಿ ಬ್ಯಾಕ್‌‌ಅಪ್‌ ಪಡೆದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಈ ಸ್ಮಾರ್ಟ್‌ವಾಚ್‌ಗಳನ್ನು ಆನ್‌ಲೈನ್‌ ಹಾಗೂ ಆಫ್‌ಲೈನ್‌ನಲ್ಲಿ ಕೊಂಡುಕೊಳ್ಳಬಹುದಾಗಿದ್ದು, ಇದರಲ್ಲಿ ಫಿಟ್‌ಬಿಟ್ ಇನ್‌ಸ್ಪೈರ್ 3 ಗೆ 8,999ರೂ. ಇದ್ದು, ಫಿಟ್‌ಬಿಟ್ ವರ್ಸಾ 4 ಗೆ 20,499ರೂ. ನಿಗದಿ ಮಾಡಲಾಗಿದೆ ಹಾಗೆಯೇ ಫಿಟ್‌ಬಿಟ್ ಸೆನ್ಸ್ 2 ಗೆ 24,999ರೂ. ಬೆಲೆ ಇದ್ದು, ಈ ವಾಚ್‌ಗಳು ಆಕರ್ಷಕ ನೋಟವನ್ನು ಪಡೆದಿವೆ.

Best Mobiles in India

English summary
Consumers are also buying smartwatches more and more recently. Fitbit has launched Fitbit Sense 2 and Fitbit Versa 4 and Inspire 3 smartwatch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X