ಭಾರತದಲ್ಲಿ ಲಭ್ಯವಿರುವ ಐದು ಅತ್ಯುತ್ತಮ ವೆಬ್‌ಕ್ಯಾಮ್‌ಗಳು!

|

ಇತ್ತೀಚಿನ ದಿನಗಳಲ್ಲಿ ವೆಬ್‌ಕ್ಯಾಮ್‌ಗಳ ಬಳಕೆ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡಿದೆ. ಆನ್‌ಲೈನ್‌ ತರಗತಿ ನಡೆಸುವುದಕ್ಕೆ, ಆನ್‌ಲೈನ್‌ ಮೀಟಿಂಗ್‌ಗಳಲ್ಲಿ ಗುಣಮಟ್ಟದ ವೀಡಿಯೊ ಕಾರಣಕ್ಕೆ ವೆಬ್‌ಕ್ಯಾಮ್‌ಗಳ ಬಳಕೆ ಹೆಚ್ಚಿದೆ. ಇದೇ ಕಾರಣಕ್ಕೆ ವೆಬ್‌ಕ್ಯಾಮ್‌ ಇಂದು ಲ್ಯಾಪ್‌ಟಾಪ್‌ ಮತ್ತು ಡೆಸ್ಕ್‌ಟಾಪ್‌ಗಳ ಬಹುಮುಖ್ಯವಾದ ಇನ್‌ಪುಟ್‌ ಡಿವೈಸ್‌ ಆಗಿ ಗುರುತಿಸಿಕೊಂಡಿದೆ. ಕೇವಲ ಆನ್‌ಲೈನ್‌ ಶಿಕ್ಷಣ ಮಾತ್ರವಲ್ಲ ಗೇಮಿಂಗ್‌ ಪ್ರಿಯರಿಗೂ ಕೂಡ ವೆಬ್‌ಕ್ಯಾಮ್‌ಗಳು ಅಚ್ಚುಮೆಚ್ಚಿನ ಡಿವೈಸ್‌ ಆಗಿವೆ.

ವೆಬ್‌ಕ್ಯಾಮ್‌

ಹೌದು, ವೆಬ್‌ಕ್ಯಾಮ್‌ಗಳು ಲ್ಯಾಪ್‌ಟಾಪ್‌ ಗಳ ಬಹುಮುಖ್ಯವಾದ ಇನ್‌ಪುಟ್‌ ಡಿವೈಸ್‌ ಆಗಿ ಗುರುತಿಸಿಕೊಂಡಿವೆ. ಇನ್ನು ವೆಬ್‌ಕ್ಯಾಮ್‌ಗಳು 720p ಅಥವಾ 1080p ರೆಸಲ್ಯೂಶನ್‌ ಸಮರ್ಥ್ಯವನ್ನು ಹೊಂದಿವೆ. ಸ್ಪಷ್ಟತೆ ಮತ್ತು ನ್ಯಾಚುರಲ್‌ ವೀಡಿಯೊ ಗುಣಮಟ್ಟಗಳಿಗೆ ವೆಬ್‌ಕ್ಯಾಮ್‌ಗಳು ಹೆಸರುವಾಸಿಯಾಗಿವೆ. ಇನ್ನು 4K ವೆಬ್‌ಕ್ಯಾಮ್ ಗಳಿಗೆ ಬೇಡಿಕೆ ಇದ್ದೆ ಇದೆ. ಇನ್ನು ಈ ಲೇಖನದಲ್ಲಿ ನೀವು ಖರೀದಿಸಬಹುದಾದ ಉತ್ತಮ ಗುಣಮಟ್ಟದ ವೆಬ್‌ಕ್ಯಾಮ್‌ಗಳ ಬಗ್ಗೆ ತಿಳಿಸಿಕೊಡ್ತೀವಿ ಓದಿರಿ.

ಪೀಪಲ್‌ಲಿಂಕ್ 4K-120

ಪೀಪಲ್‌ಲಿಂಕ್ 4K-120

ಪೀಪಲ್‌ಲಿಂಕ್ 4K-120 ವೆಬ್‌ಕ್ಯಾಮ್‌ ಉತ್ತಮ ಗುಣಟ್ಟದ ವೆಬ್‌ಕ್ಯಾಮ್‌ಗಳ ಸಾಲಿನಲ್ಲಿ ಸೇರುತ್ತದೆ. ಇದರಲ್ಲಿರುವ ಎಂಬೆಡೆಡ್‌ ನೈಟ್‌ ವಿಷನ್‌ ಫೀಚರ್ಸ್‌ ಇದರ ಪ್ರಮುಖ ಹೈಲೈಟ್‌ ಆಗಿದೆ. ಇದಲ್ಲದೆ ಈ ವೆಬ್‌ಕ್ಯಾಮ್ ಆಟೋ ಫ್ರೇಮರ್ ಆಲ್ ಇನ್ ಒನ್ ಅನ್ನು ಸಹ ಬೆಂಬಲಿಸಲಿದೆ. ಇನ್ನು ಈ ವೆಬ್‌ಕ್ಯಾಮ್‌ ಬಳಸಿ 30fps ನಲ್ಲಿ 4K ವರೆಗೆ ವೀಡಿಯೊ ರೆಕಾರ್ಡ್ ಮಾಡಬಹುದಾಗಿದೆ. ಈ ವೆಬ್‌ಕ್ಯಾಮ್‌ 60,000ರೂ ಬೆಲೆಯನ್ನು ಹೊಂದಿದೆ.

ಡೆಲ್ ಅಲ್ಟ್ರಾಶಾರ್ಪ್ ವೆಬ್‌ಕ್ಯಾಮ್

ಡೆಲ್ ಅಲ್ಟ್ರಾಶಾರ್ಪ್ ವೆಬ್‌ಕ್ಯಾಮ್

ಇನ್ನು ಡೆಲ್ ಅಲ್ಟ್ರಾಶಾರ್ಪ್ ವೆಬ್‌ಕ್ಯಾಮ್ ಕೂಡ ಉತ್ತಮ ವಿನ್ಯಾಸವನ್ನು ಒಳಗೊಂಡಿದ್ದು, ವೆಬ್‌ಕ್ಯಾಮ್‌ ಪ್ರಿಯರ ಉತ್ತಮ ಆಯ್ಕೆಗಳಲ್ಲಿ ಇದು ಕೂಡ ಒಂದಾಗಿದೆ. ಈ ವೆಬ್‌ಕ್ಯಾಮ್‌ 5X ಜೂಮ್ ಅನ್ನು ಬೆಂಬಲಿಸಲಿದೆ. ಅಲ್ಲದೆ 65, 78 ಮತ್ತು 90 ಡಿಗ್ರಿ ವ್ಯೂವ್‌ ಫಿಲ್ಡ್‌ ಅನ್ನು ಪಡೆದುಕೊಂಡಿದೆ. ಇದರಲ್ಲಿ ಎಐ ಆಟೋ ಫ್ರೇಮಿಂಗ್ ಮತ್ತು 1080p ನಲ್ಲಿ 60 fps ವರೆಗೆ ರೆಕಾರ್ಡಿಂಗ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದರ ಬೆಲೆ 24,500ರೂ,ಆಗಿದೆ.

ಅವರ್ ಮೀಡಿಯಾ PW513

ಅವರ್ ಮೀಡಿಯಾ PW513

ಅವರ್‌ ಮೀಡಿಯಾ PW513 ವೆಬ್‌ಕ್ಯಾಮ್‌ 4K 30fps ಅಥವಾ 1080p ರೆಸಲ್ಯೂಶನ್‌ ಅನ್ನು ಬೆಂಬಲಿಸಲಿದೆ. ಇದನ್ನು ಬಳಸಿಕೊಂಡು 60fps ವರೆಗೆ ವೀಡಿಯೊವನ್ನು ರೆಕಾರ್ಡ್ ಮಾಡಬಹುದಾಗಿದೆ. ಅಲ್ಲದೆ ಈ ವೆಬ್‌ಕ್ಯಾಮ್‌ 4x HD ಜೂಮ್, 94-ಡಿಗ್ರಿ ಫೀಲ್ಡ್-ಆಫ್-ವ್ಯೂ ಅನ್ನು ಹೊಂದಿದೆ. ಇದನ್ನು 360-ಡಿಗ್ರಿ ತನಕ ತಿರುಗಿಸಬಹುದಾಗಿದೆ. ಈ ವೆಬ್‌ಕ್ಯಾಮ್‌1/4-ಇಂಚಿನ ಥ್ರೆಡ್‌ನೊಂದಿಗೆ ಬರುತ್ತದೆ, ಇದನ್ನು ಟ್ರೈಪಾಡ್ ನೊಂದಿಗೆ ಜೋಡಿಸಲು ಕೂಡ ಅವಕಾಶವಿದೆ. ಈ ವೆಬ್‌ಕ್ಯಾಮ್‌ ಬೆಲೆ 24,356ರೂ, ಆಗಿದೆ.

ಲಾಜಿಟೆಕ್ ಬ್ರಿಯೊ

ಲಾಜಿಟೆಕ್ ಬ್ರಿಯೊ

ಅತ್ಯುತ್ತಮ ವೆಬ್‌ಕ್ಯಾಮ್‌ಗಳಲ್ಲಿ ಲಾಜಿಟೆಕ್ ಬ್ರಿಯೊ ಕೂಡ ಒಂದಾಗಿದೆ. ಇನ್ನು ಈ ವೆಬ್‌ಕ್ಯಾಮ್‌ ವೃತ್ತಿಪರ ದರ್ಜೆಯ 4K ವೆಬ್‌ಕ್ಯಾಮ್ ಆಗಿದ್ದು, 1080p ನಲ್ಲಿ 60fps ಅನ್ನು ಬೆಂಬಲಿಸಲಿದೆ. ಇದು ಗೇಮರುಗಳಿಗೆ ಉತ್ತಮ ಆಯ್ಕೆಯಾಗಿದೆ. ಈ ವೆಬ್‌ಕ್ಯಾಮ್ ಸ್ಕೈಪ್ ಫಾರ್ ಬ್ಯುಸಿನೆಸ್, ವಿಂಡೋಸ್ ಹಲೋ ಪ್ರೋಗ್ರಾಂಗಳೊಂದಿಗೆ ಹೊಂದಿಕೊಳ್ಳುತ್ತದೆ. ಇದರ ಬೆಲೆ 26,690ರೂ, ಆಗಿದೆ.

ಗೋಪ್ರೊ ಹೀರೋ 9

ಗೋಪ್ರೊ ಹೀರೋ 9

ಈಗಾಗಲೇ ಗೋಪ್ರೊ ಹೀರೋ ಸರಣಿಯ ವೆಬ್‌ಕ್ಯಾಮ್‌ಗಳು ಕ್ರಿಯಾಶೀಲತೆಗೆ ಹೆಸರುವಾಸಿಯಾಗಿವೆ. ಇದರಲ್ಲಿ ಗೋಪ್ರೊ ಹೀರೋ 9 ವೆಬ್‌ಕ್ಯಾಮ್‌ ಉತ್ತಮ ರೆಕಾರ್ಡಿಂಗ್‌ ಗುಣಮಟ್ಟವನ್ನು ಹೊಂದಿದೆ. ಇದರ ಕಾಂಪ್ಯಾಕ್ಟ್ ಸೈಜ್ ಉತ್ತಮವಾಗಿದ್ದು, ಅತ್ಯುತ್ತಮ ಫೀಚರ್ ಸೆಟ್ ಇದಾಗಿದೆ. ಅಲ್ಲದೆ ನೀವು ಇತ್ತೀಚಿನ ಕ್ಯಾಮೆರಾ ಫರ್ಮ್‌ವೇರ್ ಮತ್ತು ಆರೋಹಿಸುವ ಆಯ್ಕೆಯನ್ನು ಹೊಂದಿದ್ದರೆ ಇದನ್ನು ವೆಬ್‌ಕ್ಯಾಮ್ ಆಗಿ ಬಳಸಬಹುದು. ಇದರ ಬೆಲೆ 36,160ರೂ,ಆಗಿದೆ.

Best Mobiles in India

Read more about:
English summary
Check out these great webcams to consider if you want a powerful recording device.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X