ಐಫೋನ್‌ 14 ಪ್ಲಸ್‌ ಫೋನ್‌ಗಾಗಿ ನೀವು ಖರೀದಿಸಲೇಬೇಕಾದ ಬಿಡಿಭಾಗಗಳು!

|

ಕಳೆದ ವರ್ಷ ಒಂದು ಅಧ್ಯಯನದ ವರದಿ ಬಂದಿತ್ತು. ಅದರ ಪ್ರಕಾರ ಆಂಡ್ರಾಯ್ಡ್‌ ಫೋನ್‌ ಬಳಕೆದಾರರಿಗಿಂತ ಐಫೋನ್ ಬಳಕೆದಾರರು ಸಾಮಾನ್ಯವಾಗಿ ಸಂತೋಷದಿಂದ, ಹೆಚ್ಚು ಬಹಿರ್ಮುಖಿ, ಹೆಚ್ಚು ಸಾಹಸಮದಿಂದ ಇರುತ್ತಾರೆ ಎಂದು ತಿಳಿಸಲಾಗಿತ್ತು. ಹಾಗಿದ್ರೆ, ಐಫೋನ್ ತೆಗೆದುಕೊಂಡರೆ ಸಂತೋಷವಾಗಿರಬಹುದಾ ಎಂಬ ನಿಮ್ಮ ಆಲೋಚನೆ ಸರಿ ಇಲ್ಲದಿರಬಹುದು. ಯಾಕೆಂದರೆ ಅಗತ್ಯಕ್ಕೆ ತಕ್ಕಂತೆ ವ್ಯಯ ಮಾಡುವುದು ಸರಿಯಾದ ಮಾರ್ಗವಾಗಿದೆ. ಅಕಸ್ಮಾತ್ ನೀವೇನಾದರೂ ಐಫೋನ್‌ ತೆಗೆದುಕೊಂಡಿದ್ದೀರಿ ಅಥವಾ ತೆಗೆದುಕೊಳ್ಳುತ್ತೀರಿ ಎಂದಾದರೆ ನಿಮ್ಮ ಬಳಿ ಐಫೋನ್‌ಗಾಗಿ ಈ ಬಿಡಿಭಾಗಗಳು ಇದ್ದರೆ ಇನ್ನಷ್ಟು ಚೆನ್ನ.

ದೊಡ್ಡ ಡಿಸ್‌ಪ್ಲೇ

ಹೌದು, ನೀವೇನಾದರೂ ದೊಡ್ಡ ಡಿಸ್‌ಪ್ಲೇ ಇರುವ ಹಾಗೂ ಬೆಲೆ ಕಡಿಮೆ ಇರುವ ಫೋನ್‌ ಬೇಕು ಎಂದರೆ ಐಫೋನ್ 14 ಪ್ಲಸ್ ಅನ್ನು ಖರೀದಿ ಮಾಡಬಹುದು. ನೀವು ಈ ಫೋನ್‌ ಖರೀದಿ ಮಾಡಬೇಕು ಎಂದುಕೊಂಡಿದ್ದರೆ ಈ ಫೋನ್‌ ಅನ್ನು ದೀರ್ಘಾವಧಿ ವರೆಗೆ ರಕ್ಷಣೆ ಮಾಡಿಕೊಳ್ಳುವ ಬಿಡಿಭಾಗಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ. ಹಾಗಿದ್ರೆ, ಈ ಫೋನ್‌ ಗಾಗಿ ಏನೆಲ್ಲಾ ಖರೀದಿ ಮಾಡಿದರೆ ಒಳಿತು ಎಂಬುದನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ನೋಡಿ. ಪ್ರಮುಖ ವಿಷಯ ಎಂದರೆ ಈ ಬಿಡಿಭಾಗಗಳು 500 ರೂ. ಗಳ ಆಸುಪಾಸಿನಲ್ಲಿ ಲಭ್ಯವಾಗಲಿವೆ.

POPIO ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್

POPIO ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್

ಐಫೋನ್‌ 14 ಪ್ಲಸ್‌ ಗಾಗಿ POPIO ಟೆಂಪರ್ಡ್ ಗ್ಲಾಸ್ ಸ್ಕ್ರೀನ್ ಪ್ರೊಟೆಕ್ಟರ್ ಬಳಕೆ ಮಾಡಿದರೆ ನಿಮ್ಮ ಫೋನ್‌ ಇನ್ನಷ್ಟು ಪ್ರೀಮಿಯಂ ನೋಟ ಪಡೆಯಲಿದೆ. ಈ ಗ್ಲಾಸ್ 9H ಹಾರ್ಡ್‌ನೆಸ್ ಮತ್ತು ಒಲಿಯೊಫೋಬಿಕ್ ಲೇಪನದ ಆಯ್ಕೆ ಪಡೆದುಕೊಂಡಿದೆ. ಅಮೆಜಾನ್‌ನಲ್ಲಿ ನೀವು ಇದನ್ನು ಕೇವಲ 150 ರೂ. ಗಳಿಗೆ ಖರೀದಿ ಮಾಡಬಹುದಾಗಿದೆ.

ಪೋರ್ಟ್ರೋನಿಕ್ಸ್ ಅಡಾಪ್ಟೊ 20 ಟೈಪ್‌ C 20W ಫಾಸ್ಟ್ PD/ಟೈಪ್‌ C ಅಡಾಪ್ಟರ್

ಪೋರ್ಟ್ರೋನಿಕ್ಸ್ ಅಡಾಪ್ಟೊ 20 ಟೈಪ್‌ C 20W ಫಾಸ್ಟ್ PD/ಟೈಪ್‌ C ಅಡಾಪ್ಟರ್

ಈಗ ಲಾಂಚ್‌ ಆಗುತ್ತಿರುವ ಬಹುಪಾಲು ಸ್ಮಾರ್ಟ್‌ಫೋನ್‌ಗಳಿಗೆ ಕಂಪೆನಿಗಳು ಚಾರ್ಜಿಂಗ್‌ ಬಾಕ್ಸ್‌ ನೀಡುತ್ತಿಲ್ಲ. ಈ ಕಾರಣಕ್ಕೆ ನೀವೇ ನಿಮ್ಮ ಫೋನ್‌ಗೆ ಹೊಂದುವ ಚಾರ್ಜರ್‌ ಅನ್ನು ಖರೀದಿ ಮಾಡಬೇಕಾಗುತ್ತದೆ. ವೇಗದ ಚಾರ್ಜಿಂಗ್‌ ಆಯ್ಕೆಗಾಗಿ ಪೋರ್ಟ್ರೋನಿಕ್ಸ್ ಅಡಾಪ್ಟೊ 20 ಟೈಪ್‌ C 20W ಫಾಸ್ಟ್ PD/ಟೈಪ್‌ C ಅಡಾಪ್ಟರ್ ಅನ್ನು ನೀವು 550 ರೂ. ಗಳಿಗೆ ಖರೀದಿ ಮಾಡಬಹುದು.

ESR ಕ್ಲಿಯರ್ ಕೇಸ್

ESR ಕ್ಲಿಯರ್ ಕೇಸ್

ಯಾವುದೇ ಫೋನ್‌ಗಾದರೂ ರಕ್ಷಣೆ ಮುಖ್ಯ. ಇದರಿಂದಾಗಿ ನೀವು ESR ಕ್ಲಿಯರ್ ಕೇಸ್ ಖರೀದಿ ಮಾಡಬಹುದಾಗಿದೆ. ಸಾಮಾನ್ಯವಾಗಿ ಕೇಸ್‌ಗಳು ಸಮಯ ಕಳೆದಂತೆ ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದರೆ, ಈ ESR ಕ್ಲಿಯರ್ ಕೇಸ್ ಮಾತ್ರ ಯಾವುದೇ ಕಾರಣಕ್ಕೂ ಹಳದಿ ಬಣ್ಣಕ್ಕೆ ತಿರುಗುವುದಿಲ್ಲ. ಹಾಗೆಯೇ ಕ್ಯಾಮರಾ, ಚಾರ್ಜಿಂಗ್ ಪೋರ್ಟ್, ಸ್ಪೀಕರ್ ಮತ್ತು ಮೈಕ್ರೊಫೋನ್‌ಗಾಗಿ ನಿಖರವಾದ ಕಟೌಟ್‌ ಆಯ್ಕೆಯನ್ನು ಹೊಂದಿದ್ದು, ಮೊಬೈಲ್‌ ಅಂದಕ್ಕೆ ಧಕ್ಕೆ ಉಂಟು ಮಾಡುವುದಿಲ್ಲ.

POPIO ಕ್ಯಾಮೆರಾ ಲೆನ್ಸ್ ಪ್ರೊಟೆಕ್ಟರ್

POPIO ಕ್ಯಾಮೆರಾ ಲೆನ್ಸ್ ಪ್ರೊಟೆಕ್ಟರ್

ಪ್ರಮುಖವಾಗಿ ನೀವು ಈ ಫೋನ್‌ನ ಕ್ಯಾಮೆರಾ ಭಾಗಕ್ಕಷ್ಟೇ ರಕ್ಷಣೆ ಬೇಕು ಎಂದುಕೊಂಡರೆ ಅದಕ್ಕೆ POPIO ಕ್ಯಾಮೆರಾ ಲೆನ್ಸ್ ಪ್ರೊಟೆಕ್ಟರ್ ಅನ್ನು ಖರೀದಿ ಮಾಡಬಹುದು. ಇದು ಟ್ರಾನ್ಸ್ಪರೆಂಟ್ ಆಗಿರುವುದರಿಂದ ಯಾರಿಗೂ ಸಹ ಪ್ರೊಟೆಕ್ಟರ್ ಬಳಕೆ ಮಾಡಲಾಗಿದೆ ಎಂಬುದು ಗೊತ್ತಾಗುವುದಿಲ್ಲ. ಈ ಪ್ರೊಟೆಕ್ಟರ್ ಅನ್ನು 251 ರೂ. ಗಳಿಗೆ ಕೊಂಡುಕೊಳ್ಳಬಹುದಾಗಿದೆ.

ಹೆಡ್‌ಫೋನ್ ಜ್ಯಾಕ್ ಅಡಾಪ್ಟರ್

ಹೆಡ್‌ಫೋನ್ ಜ್ಯಾಕ್ ಅಡಾಪ್ಟರ್

ಇಯರ್‌ಫೋನ್‌, ಹೆಡ್‌ಫೋನ್‌ ಮೂಲಕ ಸಂಗೀತ ಆಲಿಸಬೇಕು ಎಂದರೆ ಕಾಂಗೆಟ್ ಲೈಟ್ನಿಂಗ್ ಟು 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅಡಾಪ್ಟರ್ ಅತ್ಯಗತ್ಯ. ಇದು ಅಮೆಜಾನ್‌ನಲ್ಲಿ 299 ರೂ. ಗಳಲ್ಲಿ ಲಭ್ಯ ಇದೆ.

Best Mobiles in India

Read more about:
English summary
Five affordable accessories for Apple iPhone 14 Plus.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X