Data Privacy: ಡೇಟಾ ಪ್ರೈವೆಸಿಯನ್ನು ರಕ್ಷಿಸುವ ಐದು ಸುಲಭ ಮಾರ್ಗಗಳು!

|

ಇದು ಇಂಟರ್‌ನೆಟ್‌ ಜಗತ್ತು. ಇಂಟರ್‌ನೆಟ್‌ ಒಂದಿದ್ದರೆ ಸಾಕು ಜಗತ್ತಿನ ಯಾವುದೇ ಮೂಲೆಯ ವಿಚಾರವನ್ನ ಬೇಕಾದ್ರೂ ಗೂಗಲ್‌ ಸರ್ಚ್‌ ಮಾಡಿ ವೀಕ್ಷಿಸಬಹುದು. ಅಷ್ಟೇ ಯಾಕೆ ಇಡೀ ಜಗತ್ತನ್ನೇ ಇಂಟರ್‌ನೆಟ್‌ ಅನ್ನೊ ಮಾಯಾಜಾಲ ಒಂದು ಮಾಡಿದೆ. ಪರಸ್ಪರ ಸಂಪರ್ಕ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇಂಟರ್‌ನೆಟ್‌ನಲ್ಲಿ ಬಹುತೇಕ ಏನೇ ಲಭ್ಯವಿದ್ದರೂ, ಡೇಟಾ ಗೌಪ್ಯತೆ ಕಾಪಾಡುವುದು ಒಂದು ದೊಡ್ಡ ಸಾವಾಲಾಗಿದೆ. ಇದೇ ಕಾರಣಕ್ಕಾಗಿ ಅಂತರ್ಜಾಲದಲ್ಲಿ ವೈಯಕ್ತಿಕ ಡೇಟಾದ ಗೌಪ್ಯತೆಯ ಬಗ್ಗೆ ಜಾಗೃತಿ ಮೂಡಿಸಲು, ಪ್ರತಿವರ್ಷ ಜನವರಿ 28 ರಂದು ಡೇಟಾ ಗೌಪ್ಯತೆ ದಿನವಾಗಿ ಆಚರಿಸಲಾಗುತ್ತದೆ.

ಹೌದು

ಹೌದು ಪ್ರತಿವರ್ಷ ಜನವರಿ 28 ರಂದು ಅಂತರರಾಷ್ಟ್ರೀಯ ಡೇಟಾ ಗೌಪ್ಯತೆ ದಿನವನ್ನು ಆಚರಿಸಲಾಗುತ್ತದೆ. ಜನವರಿ 28, 1981 ರಂದು ಯೂರೋಪ್‌ನಲ್ಲಿ ಬಹುತೇಕ ರಾಷ್ಟ್ರಗಳು ಕನ್ವೆನ್ಷನ್ 108 ಒಪ್ಪಂದಕ್ಕೆ ಮುಂದಾದವು. ಅದರ ಫಲವೇ ಡೇಟಾ ಪ್ರೈವಸಿ ಡೇ ಜಾರಿಗೆ ಬಂದಿದ್ದು, ಕನ್ವೆನ್ಷನ್ 108 ದತ್ತಾಂಶ ಸಂರಕ್ಷಣೆ ಮತ್ತು ಗೌಪ್ಯತೆಗೆ ಸಂಬಂಧಿಸಿದ ಕಾನೂನುಬದ್ಧವಾಗಿ ಬಂದ ಅಂತರರಾಷ್ಟ್ರೀಯ ಒಪ್ಪಂದವಾಗಿದೆ. ಸದ್ಯ ಇಂಟರ್‌ನೆಟ್‌ ಜಗತ್ತಿನಲ್ಲಿ ಡೇಟಾ ಪ್ರೈವೆಸಿ ಸೋರಿಕೆಯ ಗಂಬೀರ ಅಪರಾಧಗಳ ನಡುವೆಯೂ ನಿಮನ್ಮ ಡೇಟಾ ಸುರಕ್ಷತೆ ಮಾಡಲು ಅನುಸರಿಸಬಹುದಾದ ಉತ್ತಮ ಮಾರ್ಗಗಳನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿ.

ಡೌನ್‌ಲೋಡ್ ಮಾಡುವಾಗ ಇರಲಿ ಎಚ್ಚರ

ಡೌನ್‌ಲೋಡ್ ಮಾಡುವಾಗ ಇರಲಿ ಎಚ್ಚರ

ಇಂದು ಜಾಗತಿಕವಾಗಿ ಸುಲಭವಾಗಿ ಇಂಟರ್‌ನೆಟ್‌ ದೊರೆತು ಬಿಡುತ್ತದೆ. ಆದರೆ ಇಂಟರ್‌ನೆಟ್‌ ಇದೆ ಅಂತಾ ಸಿಕ್ಕ ಸಿಕ್ಕ ಆಪ್ಲಿಕೇಶನ್‌ಗಳನ್ನ ಡೌನ್‌ಲೋಡ್‌ ಮಾಡಿಕೊಂಡ್ರೆ ಆಪಾಯ ತಪ್ಪಿದ್ದಲ್ಲ. ಹೌದು ದುಷ್ಕರ್ಮಿಗಳು ನಿಮ್ಮ ಖಾತೆಗೆ ಹ್ಯಾಕ್ ಮಾಡಲು ಸುಲಭವಾದ ಮಾರ್ಗವೆಂದರೆ ಮಾಲ್‌ವೇರ್ ಮೂಲಕ ಡೌನ್‌ಲೋಡ್ ಮಾಡಲು ನಿಮ್ಮನ್ನು ಪ್ರೇರೆಪಿಸುವುದು. ಇದು ಪ್ರೋಗ್ರಾಂಗಳು ಮತ್ತು ಅಪ್ಲಿಕೇಶನ್‌ಗಳನ್ನು ಒಳಗೊಂಡಿರುತ್ತದೆ. ಇದನ್ನ ಒಮ್ಮೆ ಡೌನ್‌ಲೋಡ್‌ ಮಾಡಿದ್ರೆ ಸಾಕು ನಿಮ್ಮ ಪ್ರೈವೆಸಿ ಡೇಟಾ ಸುಲಭವಾಗಿ ಸೋರಿಕೆಯಾಗಿ ಬಿಡುತ್ತದೆ. ಈ ಕಾರಣಕ್ಕಾಗಿ ನೀವು ವಿಶ್ವಾಸಾರ್ಹವಲ್ಲದ ಯಾವುದೇ ಅಪ್ಲಿಕೇಶನ್ ಅಥವಾ ಸಾಫ್ಟ್‌ವೇರ್ ಅನ್ನು ಡೌನ್‌ಲೋಡ್ ಮಾಡಬೇಡಿ.

ಪಾಸ್‌ವರ್ಡ್‌ ಸ್ಟ್ರಾಂಗ್‌ ಆಗಿರಲಿ

ಪಾಸ್‌ವರ್ಡ್‌ ಸ್ಟ್ರಾಂಗ್‌ ಆಗಿರಲಿ

ಹೌದು ಪಾಸವರ್ಡ್‌ ಕ್ರಿಯೆಟ್‌ ಮಾಡಿ ನಿಮ್ಮ ನೆಚ್ಚಿನ ಸೈಟ್‌ಗಳಿಗೆ ಎಂಟ್ರಿ ಕೊಡುವುದು ಉತ್ತಮ. ಆದರೆ ನೀವು ಕ್ರಿಯೆಟ್‌ ಮಾಡುವ ಪಾಸವರ್ಡ್‌ ಸುಲಭವಾಗಿ ತಿಳಿಯುವಂತಿರಬಾರದು, ಒಂದು ರೀತಿಯಲ್ಲಿ ಪಾಸ್‌ವರ್ಡ್‌ಗಳು ಇಂಟರ್ನೆಟ್ ಭದ್ರತೆಯನ್ನ ದುರ್ಬಲ ಮಾಡುತ್ತಿವೆ ಅಂತಾನೇ ಹೇಳಬಹುದು. ಯಾಕೆಂದರೆ ಬಹುತೇಕ ಜನರು ಒಂದೇ ತೆರನಾದ ಸುಲಭವಾದ ಪಾಸ್‌ವರ್ಡ್‌ ಕ್ರಿಯೆಟ್‌ ಮಾಡಿರುತ್ತಾರೆ. ಇದರ ಬದಲು ನಿಮ್ಮ ಪಾಸ್‌ವರ್ಡ್ ಕ್ರಿಯೆಟ್‌ ಮಾಡುವಾಗ ವಿಶೇಷ ಅಕ್ಷರಗಳನ್ನ ಬಳಸಿಕೊಳ್ಳುವುದು ಉತ್ತಮ. ಜೊತೆಗೆ ಎಲ್ಲಾ ಪೋರ್ಟಲ್‌ಗೆ ಒಂದೇ ಪಾಸ್‌ವರ್ಡ್‌ಗಳನ್ನು ಇಡುವುದನ್ನು ಬಿಟ್ಟು ಬೇರೆ ಬೇರೆ ಪಾಸವರ್ಡ್‌ ಬಳಸಿದರೆ ಡೇಟಾ ಪ್ರೈವಸಿಯನ್ನ ಕಾಪಾಡಬಹುದಾಗಿದೆ.

ಆನ್‌ಲೈನ್ ಶಾಪಿಂಗ್‌ನಲ್ಲಿ ಎಚ್ಚರವಿರಲಿ

ಆನ್‌ಲೈನ್ ಶಾಪಿಂಗ್‌ನಲ್ಲಿ ಎಚ್ಚರವಿರಲಿ

ಇಂದು ತಂತ್ರಜ್ಞಾನ ಮುಂದುವರೆದಂತೆ ಆನ್‌ಲೈನ್‌ ಶಾಪಿಂಗ್‌ ಸಂಸ್ಕೃತಿ ಇಡೀ ಜಗತ್ತನ್ನ ಆವರಿಸಿಕೊಂಡು ಬಿಟ್ಟಿದೆ. ಆನ್‌ಲೈನ್‌ ಶಾಪಿಂಗ್‌ನಲ್ಲಿ ಮನಸ್ಸಿಗೆ ತೋಚಿದೆಲ್ಲಾವನ್ನ ಶಾಪಿಂಗ್‌ ಮಾಡಬಹುದು ನಿಜ, ಆದರೆ ಅಷ್ಟೇ ಗಂಬೀರವಾಗಿ ನಿಮ್ಮ ಡೇಟಾ ಮಾಹಿತಿ ಕೂಡ ಸೋರಿಕೆಯಾಗುತ್ತದೆ ಅನ್ನೊದನ್ನ ನೆನಪಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಡೆಬಿಟ್‌ಇಲ್ಲವೇ ಕ್ರೆಡಿಟ್‌ ಕಾರ್ಡ್ ಅಥವಾ ಮೊಬೈಲ್ ವ್ಯಾಲೆಟ್ ವಿವರಗಳನ್ನು ಆನ್‌ಲೈನ್‌ನಲ್ಲಿ ಎಂಟ್ರಿ ಮಾಡುವಾಗ ವಿಶ್ವಾಸಾರ್ಹ ಶಾಪಿಂಗ್‌ ಫೋರ್ಟ್‌ಲ್‌ಗಳನ್ನೇ ಬಳಸಿದರೆ ಉತ್ತಮ. ನೀವು ವಿಸಿಟ್‌ ಮಾಡುವ ವೆಬ್‌ಸೈಟ್‌ ಎನ್‌ಕ್ರಿಪ್ಟ್ ಮಾಡಲಾಗಿದೆಯಾ ಅನ್ನೊದನ್ನ ಖಾತ್ರಿ ಪಡಿಸಿಕೊಳ್ಳಲು ಅಡ್ರೆಸ್‌ ಬಾರ್‌ನಲ್ಲಿ ವೆಬ್‌ಸೈಟ್‌ ಐಡಿ ಕೇವಲ http ಯಿಂದ ಪ್ರಾರಂಭವಾದರೆ ಅದು ಸುರಕ್ಷಿತವಲ್ಲ. ಸುರಕ್ಷಿತ ವೆಬ್‌ಸೈಟ್‌ನ ಐಡಿ ಯಾವಾಗಲು https.ಆಗಿರುತ್ತದೆ.

ಯಂಟಿ ವೈರಸ್ ಪ್ರೋಗ್ರಾಂ ಆಪ್‌ಡೇಟ್‌ ಮಾಡಿ

ಯಂಟಿ ವೈರಸ್ ಪ್ರೋಗ್ರಾಂ ಆಪ್‌ಡೇಟ್‌ ಮಾಡಿ

ಇನ್ನು ನಿಮ್ಮ ಕಂಪ್ಯೂಟರ್‌ ಸಿಸ್ಟಂನಲ್ಲಿ ಯಂಟಿ ವೈರಸ್‌ ಪ್ರೋಗ್ರಾಂ ಅನ್ನು ಆಪ್‌ಡೇಟ್‌ ಮಾಡಲಾಗಿದೆಯಾ ಅನ್ನೊದನ್ನ ಆಗಾ ಪರಶೀಲಿಸುವುದು ಕೂಡ ನಿಮ್ಮ ಡೇಟಾ ಗೌಪ್ಯತೆಯ ದೃಷ್ಟಿಯಿಂದ ಉತ್ತಮ. ಈ ಪ್ರೋಗ್ರಾಂ ನಿಮ್ಮ ಸಿಸ್ಟಂನ ಸಾಫ್ಟ್‌ವೇರ್‌ಗೆ ಭದ್ರತೆಯನ್ನು ಒದಗಿಸುತ್ತದೆ. ಹಾಗಂತ ಇದು ಎಲ್ಲಾ ಮಾದರಿಯ ಹ್ಯಾಕಿಂಗ್‌ ಮಾಲ್‌ವೇರ್‌ಗಳನ್ನ ತೆಗೆದುಹಾಕದಿರಬಹುದು, ಆದರೆ ಸಿಸ್ಟಂನಲ್ಲಿ ಇರುವ ಮಾಲ್‌ವೇರ್‌ಗಳನ್ನ ಪತ್ತೆ ಮಾಡುತ್ತದೆ. ಹೀಗಾಗಿ ಆಪರೇಟಿಂಗ್ ಸಿಸ್ಟಮ್ ಮತ್ತು ಅಪ್ಲಿಕೇಶನ್ ಆಪ್‌ಡೇಟ್‌ ಮಾಡುವಾಗ ಯಂಟಿವೈರಸ್‌ ಪ್ರೋಗ್ರಾಂ ಕಡೆಗೂ ಗಮನಕೊಡುವುದು ಭದ್ರತೆಯ ದೃಷ್ಟಿಯಿಂದ ಒಳಿತಾಗಿದೆ.

ಫೈರ್‌ವಾಲ್ ರಚನೆ

ಫೈರ್‌ವಾಲ್ ರಚನೆ

ಹೌದು ನಿಮ್ಮ ಡೇಟಾ ಗೌಪ್ಯತೆಯನ್ನ ಕಾಪಾಡುವಲ್ಲಿ ಮತ್ತೊಂದು ಉತ್ತಮ ವಿಧಾನ ಅಂದರೆ ಫೈರ್‌ವಾಲ್‌ ರಚನೆ ಮಾಡುವುದು. ಫೈರ್‌ವಾಲ್ ಒಂದು ರೀತಿಯಲ್ಲಿ ಎಲೆಕ್ಟ್ರಾನಿಕ್ ತಡೆಗೋಡೆಯಾಗಿದ್ದು, ಇದು ನಿಮ್ಮ ಡಿವೈಸ್‌ಗಳಿಗೆ ಅನಧಿಕೃತ ಪ್ರವೇಶವನ್ನು ನಿರ್ಬಂಧಿಸುತ್ತದೆ. ಕೆಲವೊಮ್ಮೆ, ಫೈರ್‌ವಾಲ್ ನಿಮ್ಮ ಡಿವೈಸ್‌ನ ಕಂಪ್ಲಿಟ್‌ ಸೆಕ್ಯೂರಿಟಿ ಸಾಫ್ಟ್‌ವೇರ್‌ ಜೊತೆಯಲ್ಲಿಯೇ ಬರುತ್ತದೆ. ಇದರ ಮೂಲಕ ನಿಮ್ಮ ನೆಟ್‌ವರ್ಕ್‌ಗೆ ಸಂಪರ್ಕಗೊಂಡಿರುವ ಎಲ್ಲಾ ಡಿವೈಸ್‌ಗಳು ಸೆಕ್ಯೂರ್‌ ಆಗಿರುವಂತೆ ಮಾಡಬಹುದಾಗಿದೆ.

Best Mobiles in India

English summary
International Data Privacy Day is observed to create awareness about the importance of safeguarding data and respecting privacy.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X