ಆಂಡ್ರಾಯ್ಡ್‌ ಫೋನ್‌ನಲ್ಲಿ ಕಾಣಿಸುವ ಐದು ಸಾಮಾನ್ಯ ಸಮಸ್ಯೆಗಳು: ಹೀಗೆ ಸರಿ ಮಾಡಿ...

|

ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್‌‌ಗಳಲ್ಲಿ ಎಷ್ಟೆಲ್ಲಾ ಸೇವೆ ಪಡೆಯಬಹುದೋ ಹಾಗೆಯೇ ನಮಗೆ ಅರಿವಿಲ್ಲದ ಸಮಸ್ಯೆಗಳು ನಮ್ಮನ್ನು ಕಾಡುತ್ತಿರುತ್ತವೆ. ಕೆಲವೊಮ್ಮೆ ಯಾಕಾಗಿ ಈ ರೀತಿಯ ಸಮಸ್ಯೆ ಫೋನ್‌ ನಲ್ಲಿ ಕಾಣಿಸಿಕೊಂಡಿದೆ ಎನ್ನುವುದೇ ಗೊತ್ತಾಗುವುದಿಲ್ಲ. ಸಮಸ್ಯೆ ಬಗೆಹರಿಸಿಕೊಳ್ಳಲು ಸ್ಟೋರ್‌ಗಳಿಗೆ ಹೋದರೆ ಸುಮ್ಮನೇ ಹಣ ವ್ಯಯಿಸಬೇಕು. ಆದರೆ, ಸ್ಮಾರ್ಟ್‌ಫೋನ್‌ಗಳಲ್ಲಿ ಕಾಣಿಸಿಕೊಳ್ಳುವ ಈ ಸಮಸ್ಯೆಗಳನ್ನು ನೀವೇ ಪರಿಹರಿಸಿಕೊಳ್ಳಿ.

ಸ್ಮಾರ್ಟ್‌ಫೋನ್

ಹೌದು, ಸ್ಮಾರ್ಟ್‌ಫೋನ್ ಎಷ್ಟೇ ಕಾರ್ಯಕ್ಷಮತೆ ಹೊಂದಿದ್ದರೂ ಆಂತರಿಕವಾಗಿ ಏನಾದರೂ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಆದರೆ ಈ ಸಾಮಾನ್ಯ ಸಮಸ್ಯೆಗಳನ್ನು ನೀವೇ ಸರಿ ಮಾಡಿಕೊಳ್ಳಬಹುದು. ಸ್ಮಾರ್ಟ್‌ಫೋನ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಏನು?, ಪರಿಹಾರ ಏನು ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ನಿಧಾನ ಚಾರ್ಜಿಂಗ್

ನಿಧಾನ ಚಾರ್ಜಿಂಗ್

ನಿಮ್ಮ ಆಂಡ್ರಾಯ್ಡ್‌ ಸ್ಮಾರ್ಟ್‌ಫೋನ್ ಫೋನ್ ಚಾರ್ಜ್ ಆಗಲು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ ಎಂದರೆ ಮೊದಲು ಗಮನಿಸಬೇಕಾದುದು ಕೇಬಲ್‌ ಹಾಗೂ ಚಾರ್ಜಿಂಗ್ ಕೇಸ್. ಕೆಲವು ಸಹ ಚಾರ್ಜಿಂಗ್‌ ಕೇಸ್‌ ಅಗತ್ಯವಾದ ಪವರ್‌ ಅನ್ನು ಮೊಬೈಲ್‌ಗೆ ಒದಗಿಸಲು ವಿಫಲವಾಗುತ್ತದೆ. ಹಾಗೆಯೇ ದೋಷಪೂರಿತ ಕೇಬಲ್ ಸಹ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪರಿಣಾಮ ನೀವು ಸ್ಮಾರ್ಟ್‌ಫೋನ್‌ಗೆ ಹೊಂದಿಕೆಯಾಗುವ ಕೇಬಲ್‌ ಅಥವಾ ಚಾರ್ಜಿಂಗ್‌ ಕೇಸ್‌ ಬಳಕೆ ಮಾಡುವುದು ಒಳಿತು.

ಬ್ಯಾಗ್ರೌಂಡ್ ಅಪ್ಲಿಕೇಶನ್‌

ಬ್ಯಾಗ್ರೌಂಡ್ ಅಪ್ಲಿಕೇಶನ್‌ ರನ್‌ ಆಗುತ್ತಿದ್ದರೂ ಸಹ ನಿಧಾನ ಚಾರ್ಜಿಂಗ್‌ಗೆ ಮತ್ತೊಂದು ಕಾರಣ ಎನ್ನಬಹುದು. ನಿಮ್ಮ ಫೋನ್‌ನಲ್ಲಿ ನೀವು ಹಲವು ಅಪ್ಲಿಕೇಶನ್‌ಗಳನ್ನು ಓಪನ್‌ ಮಾಡಿದ್ದರೆ. ಅವು ಹೆಚ್ಚಿನ ಪವರ್‌ ಹೀರಿಕೊಳ್ಳತ್ತವೆ. ಸ್ಮಾರ್ಟ್‌ಫೋನ್‌ ಸರಿಯಾದ ರೀತಿಯಲ್ಲಿ ಚಾರ್ಜಿಂಗ್‌ ಆಗುವುದನ್ನು ಇವು ತಡೆಯುತ್ತವೆ. ಇನ್ನೂ ಒಂದು ಪ್ರಮುಖ ವಿಷಯ ಎಂದರೆ ಚಾರ್ಜ್ ಮಾಡುವಾಗ ಗೇಮ್‌ ಆಡುವುದೂ ಸಹ ನಿಧಾನವಾಗಿ ಚಾರ್ಜ್‌ ಆಗಲು ಕಾರಣವಾಗುತ್ತದೆ.

ಗೂಗಲ್‌ ಪ್ಲೇ ಸ್ಟೋರ್‌ ಕಾರ್ಯನಿರ್ವಹಿಸುತ್ತಿಲ್ಲವೇ...?

ಗೂಗಲ್‌ ಪ್ಲೇ ಸ್ಟೋರ್‌ ಕಾರ್ಯನಿರ್ವಹಿಸುತ್ತಿಲ್ಲವೇ...?

ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್‌ ಪ್ಲೇ ಸ್ಟೋರ್‌ ಅತ್ಯಂತ ಪ್ರಮುಖ ಸ್ಥಾನ ಪಡೆಯುತ್ತದೆ. ಅಗತ್ಯ ಆಪ್‌ ಇನ್‌ಸ್ಟಾಲ್‌ ಮಾಡಲು ಇದು ಅನಿವಾರ್ಯವಾಗಿದೆ. ಸಾಮಾನ್ಯವಾಗಿ ಬಹುಪಾಲು ಬಳಕೆದಾರರು ಆಪ್‌ಗಳನ್ನು ಇನ್‌ಸ್ಟಾಲ್‌ ಮಾಡುವಾಗ ಸಮಸ್ಯೆ ಎದುರಿಸಿಯೇ ಇರುತ್ತಾರೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ನೀವು ಪ್ಲೇ ಸ್ಟೋರ್‌ ಆಪ್‌ ಓಪನ್‌ ಮಾಡಿ ಅಲ್ಲಿ ಕಾಣಿಸುವ 'ಫೋರ್ಸ್‌ ಸ್ಟಾಪ್‌' ಅಥವಾ 'ಕ್ಲಿಯರ್‌ ಕ್ಯಾಶ್' ಆಯ್ಕೆ ಮೇಲೆ ಟ್ಯಾಪ್‌ ಮಾಡಿ.

ದೋಷಪೂರಿತ ಅಪ್ಲಿಕೇಶನ್

ಈ ಸಮಸ್ಯೆಯು ದೋಷಪೂರಿತ ಅಪ್ಲಿಕೇಶನ್ ಅಥವಾ ಸ್ಟೋರೇಜ್‌ನಿಂದಲೂ ಕಂಡುಬರುತ್ತದೆ. ಹೀಗಾಗಿ ಅವುಗಳನ್ನು ಪತ್ತೆ ಮಾಡಿ ನಿಮ್ಮ ಸ್ಮಾರ್ಟ್‌ಫೋನ್‌ನಿಂದ ರಿಮೂವ್‌ ಮಾಡಿ. ಇಷ್ಟೆಲ್ಲಾ ಮಾಡಿದರೂ ಸರಿಯಾಗಲಿಲ್ಲ ಎಂದರೆ ಗೂಗಲ್‌ ಪ್ಲೇ ಸ್ಟೋರ್‌ ಅನ್ನು ಅನ್‌ಇನ್‌ಸ್ಟಾಲ್‌ ಮಾಡಿ ಮತ್ತೇ ಹೊಸದಾಗಿ ಇನ್‌ಸ್ಟಾಲ್‌ ಮಾಡಿ. ಇದರ ಜೊತೆಗೆ ನೀವು ಇನ್ನೂ ಒಂದು ಕಾರ್ಯ ಮಾಡಬೇಕಿದೆ. ಅದುವೇ ನಿಮ್ಮ ಡಿವೈಸ್‌ನಲ್ಲಿ ಸಾಕಷ್ಟು ಸ್ಟೋರೇಜ್‌ ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ನಿಮ್ಮ ಫೋನ್ ಸ್ಟೋರೇಜ್‌ನಲ್ಲಿ ಕಡಿಮೆ ಸ್ಥಳಾವಕಾಶ ಇದ್ದರೆ ಅನಗತ್ಯ ಫೈಲ್‌ಗಳನ್ನು ಡಿಲೀಟ್‌ ಮಾಡಿ.

ಗೆಸ್ಚರ್ ನ್ಯಾವಿಗೇಶನ್ ಸಮಸ್ಯೆ

ಗೆಸ್ಚರ್ ನ್ಯಾವಿಗೇಶನ್ ಸಮಸ್ಯೆ

ಆಂಡ್ರಾಯ್ಡ್‌ 10 ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ಸ್‌ ಲಭ್ಯವಿದೆ. ಫುಲ್‌ ಸ್ಕ್ರೀನ್‌ ಗೆಸ್ಚರ್ ಆಧಾರಿತ ನ್ಯಾವಿಗೇಶನ್ ಅನ್ನು ಬಳಸುವ ಸಾಮರ್ಥ್ಯವನ್ನು ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹೊಂದಿವೆಯಾದರೂ ಇದಕ್ಕೂ ಮಿಗಿಲಾಗಿ ನೀವು ಗೆಸ್ಚರ್ ನ್ಯಾವಿಗೇಶನ್ ಅನ್ನು ಬೆಂಬಲಿಸದ ಅಥವಾ ಹೊಂದಿಕೆಯಾಗದ ಮೂರನೇ ವ್ಯಕ್ತಿಯ ಲಾಂಚರ್ ಅನ್ನು ನೀವು ಇನ್‌ಸ್ಟಾಲ್‌ ಮಾಡಿಕೊಂಡಿದ್ದರೆ ಅದನ್ನು ನಿಮ್ಮ ಸ್ಮಾರ್ಟ್‌ಫೋನ್‌ನಿಂದ ರಿಮೂವ್‌ ಮಾಡಿ.

ಸ್ಮಾರ್ಟ್‌ಫೋನ್‌

ಇದನ್ನು ಪರಿಹರಿಸಿಕೊಳ್ಳಲು ಸ್ಮಾರ್ಟ್‌ಫೋನ್‌ನ 'ಸೆಟ್ಟಿಂಗ್ಸ್‌' ವಿಭಾಗಕ್ಕೆ ಹೋಗಿ ಅಲ್ಲಿ 'ಆಪ್ಸ್‌ ' ಆಯ್ಕೆಯ ಮೇಲೆ ಟ್ಯಾಪ್ ಮಾಡಿ ನಂತರ 'ಡೀಫಾಲ್ಟ್ ಆಪ್' ಎಂದು ಕಾಣುವ ಆಯ್ಕೆಯ ಮೇಲೆ ಟ್ಯಾಪ್‌ ಮಾಡಿದಾಗ, 'ಹೋಮ್ ಆಪ್' ಆಯ್ಕೆ ಬರುತ್ತದೆ. ಅದರ ಮೇಲೆ ಟ್ಯಾಪ್ ಮಾಡಿದಾಗ ನಿಮ್ಮ ಸಮಸ್ಯೆ ಸರಿಯಾಗುತ್ತದೆ.

ಮೊಬೈಲ್ ಡೇಟಾ, ವೈ-ಫೈ ಸಮಸ್ಯೆ

ಮೊಬೈಲ್ ಡೇಟಾ, ವೈ-ಫೈ ಸಮಸ್ಯೆ

ಬಹುಪಾಲು ಆಂಡ್ರಾಯ್ಡ್ ಬಳಕೆದಾರರು ತಮ್ಮ ಮೊಬೈಲ್‌ನಲ್ಲಿ ಡೇಟಾ ಅಥವಾ ವೈ-ಫೈ ಸಮಸ್ಯೆಯನ್ನು ಎದುರಿಸುತ್ತಲೇ ಇರುತ್ತಾರೆ. ಇದಕ್ಕೂ ಇಲ್ಲಿ ಪರಿಹಾರ ಮಾರ್ಗಗಗಳ್ನು ತಿಳಿಸಿಕೊಲಾಗಿದೆ. ವೈ-ಫೈ ಕೆಲಸ ಮಾಡುತ್ತಿಲ್ಲ ಎಂದರೆ ನೀವು ವೈ-ಫೈ ಸೆಟ್ಟಿಂಗ್ ವಿಭಾಗಕ್ಕೆ ಹೋಗಬೇಕು. ಅಲ್ಲಿ ಆರಂಭಿಕವಾಗಿ ಆಫ್‌ ಹಾಗೂ ಆನ್‌ ಪ್ರಕ್ರಿಯೆ ನಡೆಸಿ. ಈ ರೀತಿ ಮಾಡಿದರೂ ಸಮಸ್ಯೆ ಸರಿಯಾಗಲಿಲ್ಲ ಎಂದರೆ ನಿಮ್ಮ ವೈ-ಫೈ ರೂಟರ್‌ನಲ್ಲಿಯೇ ಏನಾದರೂ ಸಮಸ್ಯೆ ಇದೆ ಎಂದರ್ಥ. ಹೀಗಾಗಿ ಅದನ್ನು ರಿಸ್ಟಾರ್ಟ್‌ ಮಾಡಿ.

 ಡೇಟಾದಲ್ಲಿ ಸಮಸ್ಯೆ

ನಿಮ್ಮ ಡೇಟಾದಲ್ಲಿ ಸಮಸ್ಯೆ ಕಾಣಿಸಿಕೊಂಡರೆ ಡೇಟಾವನ್ನು ಆಫ್‌ ಅಥವಾ ಆನ್ ಮಾಡುವ ಪ್ರಕ್ರಿಯೆ ಜೊತೆಗೆ ಏರ್‌ಪ್ಲೇನ್ ಮೋಡ್ ಅನ್ನು ಆನ್ ಕೆಲ ಸಮಯದ ನಂತರ ಆನ್‌ ಮಾಡಿ ಆಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಹೀಗೆ ಮಾಡಿದ್ದರೂ ಕೆಲಸ ಮಾಡುತ್ತಿಲ್ಲ ಎಂದರೆ ನೆಟ್‌ವರ್ಕ್ ಸೆಟ್ಟಿಂಗ್‌ಗೆ ಹೋಗಿ 'ಆಕ್ಸೆಸ್ ಪಾಯಿಂಟ್ ನೇಮ್ಸ್' ಆಯ್ಕೆ ಮಾಡಿ ಅಲ್ಲಿ ಬೇರೆ ಆಯ್ಕೆಯನ್ನು ಟ್ಯಾಪ್‌ ಮಾಡಿ.

ಕ್ರ್ಯಾಶ್ ಆಪ್‌

ಕ್ರ್ಯಾಶ್ ಆಪ್‌

ಕೆಲವು ಸಲ ಆಪ್‌ಗಳು ಆಗಾಗ್ಗೆ ಕ್ರ್ಯಾಶ್ ಆಗುತ್ತಿರುತ್ತವೆ. ಇದಕ್ಕೆ ಮೊದಲ ಕಾರಣ ಅಪ್‌ಗ್ರೇಡ್‌.ಇದಕ್ಕೆ ನೀವು ಮಾಡಬೇಕಿರುವುದು ಗೂಗಲ್‌ ಪ್ಲೇ ಸ್ಟೋರ್‌ಗೆ ಹೋಗಿ ಅಲ್ಲಿ 'ಅಬೌಟ್' ಕಾಣುತ್ತದೆ ಅದರ ಮೇಲೆ ಟ್ಯಾಪ್‌ ಮಾಡಿ ನಂತರ ಸ್ಕ್ರಾಲ್ ಮಾಡಿ. ಆಗ ಆಪ್‌ ಕೊನೆಯ ಬಾರಿ ಯಾವಾಗ ಅಪ್‌ಡೇಟ್‌ ಆಗಿದೆ ಎಂಬುದು ಗೊತ್ತಾಗುತ್ತದೆ. ಅದರ ಆಧಾರದ ಮೇಲೆ ಅಪ್‌ಡೇಟ್‌ ಮಾಡಬೇಕೋ ಅಥವಾ ಹೊಸದಾಗಿ ಇನ್‌ಸ್ಟಾಲ್‌ ಮಾಡಬೇಕೋ ಎಂಬುದನ್ನು ನಿರ್ಧರಿಸಿ.

ಆಪ್ಸ್‌

ಇದರ ಹೊರತಾಗಿಯೂ ನೀವು 'ಆಪ್ಸ್‌' ವಿಭಾಗಕ್ಕೆ ಹೋಗಿ ಕ್ರ್ಯಾಶಿಂಗ್ ಅಪ್ಲಿಕೇಶನ್ ಅನ್ನು ಹುಡುಕಲು ಪ್ರಯತ್ನಿಸಬಹುದು ಜೊತೆಗೆ ಅಪ್ಲಿಕೇಶನ್ ಡೇಟಾ ಮತ್ತು ಸ್ಟೋರೇಜ್‌ ಅನ್ನು ಕ್ಲಿಯರ್‌ ಮಾಡಬಹುದು. ಈ ಮೂಲಕ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

Best Mobiles in India

English summary
There are some common prosmartphoneblems that appear in Android . in This article we provides solution tips for mobile problems.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X