ಬೆಂಗಳೂರಿನ ಫ್ಲಿಪ್‌ಕಾರ್ಟ್ ಗೋದಾಮಿನಲ್ಲಿವೆ 100ಕ್ಕೂ ಹೆಚ್ಚು ರೋಬೋಗಳು!

|

ಭಾರತದ ಅತ್ಯಂತ ಜನಪ್ರಿಯ ಇ-ಕಾಮರ್ಸ್ ಜಾಲತಾಣ ಕಂಪೆನಿ ಫ್ಲಿಪ್‌ಕಾರ್ಟ್ ಇದೀಗ ವಿಶ್ವಮಾನ್ಯ ಕಂಪೆನಿಗಳಿಗೂ ಸೆಡ್ಡು ಹೊಡೆಯುವ ರೋಬೋ ತಂತ್ರಜ್ಞಾನವನ್ನು ದೇಶದಲ್ಲಿ ಪರಿಚಯಿಸಿದೆ. ವಸ್ತುಗಳ ಪ್ಯಾಕಿಂಗ್ ಸೇರಿದಂತೆ ಇನ್ನಿತರ ಕಾರ್ಯಗಳಿಗೆ ನೆರವಾಗುವಂತ ಸುಮಾರು 100ಕ್ಕೂ ಹೆಚ್ಚು ಸ್ವಯಂಚಾಲಿತ ಬುದ್ದಿಮತ್ತೆ ರೋಬೋಗಳನ್ನು ಬಳಕೆ ಮಾಡುತ್ತಿದೆ .

ಹೌದು, ವಿತರಣಾ ವೇಗವನ್ನು ಹೆಚ್ಚಿಸಿ ಖರೀದಿ ನಂತರ ಗ್ರಾಹಕರಿಗೆ ಡೆಲಿವರಿ ವಿಳಂಬವನ್ನು ತಡೆಯಲು ಮತ್ತು ದೇಶದಾದ್ಯಂತದ ಸಾವಿರಾರು ಗ್ರಾಹಕರು ಆದೇಶಿಸಿದ ಸರಕುಗಳನ್ನು ವಿಂಗಡಿಸಲು ಈ ರೋಬೋಗಳು ನೆರವಾಗಲಿವೆ. ಈ ರೋಬೋಗಳು ಯಾಂತ್ರೀಕೃತಗೊಂಡ ಕೃತಕ ಬುದ್ದಿಮತ್ತೆಯಲ್ಲಿ ಕೆಲಸ ಮಾಡುತ್ತವೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನ ಫ್ಲಿಪ್‌ಕಾರ್ಟ್ ಗೋದಾಮಿನಲ್ಲಿವೆ 100ಕ್ಕೂ ಹೆಚ್ಚು ರೋಬೋಗಳು!

ಬೆಂಗಳೂರಿನಲ್ಲಿರುವ ಫ್ಲಿಪ್‌ಕಾರ್ಟ್ ಗೋದಾಮಿನಲ್ಲಿ 100ಕ್ಕೂ ಹೆಚ್ಚು ರೋಬೋಗಳನ್ನು ಬಳಕೆ ಮಾಡುತ್ತಿದ್ದು, ಈ ರೋಬೋಗಳು ಪ್ರತಿ ಪ್ಯಾಕೇಜ್‌ನಲ್ಲಿ ನೀಡಿರುವ ಎನ್‌ಕೋಡೆಡ್ ಮಾಹಿತಿಗಳನ್ನು ಗುರುತಿಸಿ, ಪಿನ್ ಕೋಡ್ ಆಧಾರದಲ್ಲಿ ಸರಕುಗಳನ್ನು ಶೀಘ್ರವಾಗಿ ಪ್ಯಾಕೇಜ್ ಮಾಡಲಿವೆ. ಇದರಿಂದ ಗ್ರಾಹಕರಿಗೆ ತ್ವರಿತವಾಗಿ ಸರಕುಗಳನ್ನು ಪೂರೈಸಬಹುದಾಗಿದೆ.

ಈ ಸ್ವಯಂಚಾಲಿತ ರೋಬೋಗಳು ಕೇವಲ 1 ಗಂಟೆಯಲ್ಲೇ 4500 ಶಿಪ್‌ಮೆಂಟ್‌ಗಳನ್ನು ವಿಂಗಡಿಸುತ್ತವೆ. ಇವುಗಳ ಕಾರ್ಯಕ್ಷಮತೆ ಶೇಖಡ 99.9ರಷ್ಟು ನಿಖರವಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದರಿಂದ ತನ್ನ ಗ್ರಾಹಕರಿಗೆ ತ್ವರಿತವಾಗಿ ಸರಕುಗಳನ್ನು ಪೂರೈಸಲು ಅನುಕೂಲವಾಗಲಿದ್ದು, ಸೇವೆಯ ಗುಣಮಟ್ಟ ಹೆಚ್ಚಲಿದೆ ಎಂದು ಕಂಪೆನಿ ಅಭಿಪ್ರಾಯಪಟ್ಟಿದೆ.

ಅಮೆರಿಕಾದ ವಾಲ್‌ಮಾರ್ಟ್ ಜೊತೆಗೂಡಿದ ನಂತರ ಫ್ಲಿಪ್‌ಕಾರ್ಟ್ ನಿರಂತರವಾಗಿ ತನ್ನ ಪೂರೈಕೆ ಜಾಲದಲ್ಲಿ ಯಾಂತ್ರೀಕರಣಕ್ಕೆ ಆಧ್ಯತೆ ನೀಡುತ್ತಾ ಬಂದಿದೆ. ಇದೀಗ ಸ್ವಯಂಚಾಲಿತ ರೋಬೋಗಳನ್ನು ಅಳವಡಿಸಿಕೊಳ್ಳುವ ಮೂಲಕ ಇದೇ ಮೊದಲ ಬಾರಿಗೆ ದೇಶದಲ್ಲಿ ಇಂತಹ ತಂತ್ರಜ್ಞಾನವನ್ನು ಅಳವಡಿಸಿಕೊಂಡ ಮೊದಲ ಕಂಪೆನಿ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ.

ಓದಿರಿ: ಇನ್ಮುಂದೆ ಮೊಬೈಲ್ ನಂಬರ್ ಸೇವ್ ಮಾಡದೆಯೇ 'ವಾಟ್ಸ್ಆಪ್' ಮೆಸೇಜ್ ಮಾಡಿ!

Best Mobiles in India

English summary
To speed up delivery, we are using about 100 bots (robots) powered by automation intelligence (AI) at the clearing facility to sort the parcels ordered by customers in thousands from across the country. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X