Subscribe to Gizbot

ಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇ

Written By:

ಸದ್ಯ ದೇಶದಲ್ಲಿ ಆನ್‌ಲೈನ್ ಶಾಪಿಂಗ್ ತಾಣಗಳ ಭರಾಟೆ ಜೋರಾಗಿ ನಡೆಯುತ್ತಿದ್ದು, ಇದೇ ಸಂದರ್ಭದಲ್ಲಿ ಆನ್‌ಲೈನ್ ಶಾಪಿಂಗ್ ದೈತ್ಯ ಬೆಂಗಳೂರು ಮೂಲದ ಫ್ಲಿಪ್ ಕಾರ್ಟ್‌ನೊಂದಿಗೆ ಮತ್ತೊಂದು ಆನ್‌ಲೈನ್ ಶಾಂಪಿಂಗ್ ತಾಣ ಇಬೇ' ಕೈಜೋಡಿಸಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇ

ದೇಶಿಯಾ ಆನ್‌ಲೈನ್ ಶಾಪಿಂಗ್ ವಲಯವು ಇತ್ತೀಚಿನ ದಿನಗಳಲ್ಲಿ ವೇಗವಾಗಿ ಬೆಳೆಯುತ್ತಿದ್ದು, ಇದರ ಹೆಚ್ಚಿನ ಲಾಭ ಪಡೆಯುವ ಸಲುವಾಗಿ ಈ ಕಂಪನಿಗಳು ಒಂದಾಗಿವೆ. ಮುಂದಿನ ದಿನಗಳಲ್ಲಿ ಆನ್‌ಲೈನ್ ಶಾಪಿಂಗ್ ಜಾಲದ ಬಳಕೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಮತ್ತು ಗ್ರಾಹಕರಿಗೆ ತ್ವರಿತ ಮತ್ತು ಗುಣಮಟ್ಟದ ಸೇವೆಯನ್ನು ನೀಡಲು ಈ ಎರಡು ಕಂಪನಿಗಳು ಮುಂದಾಗಿವೆ.

ಈ ಕುರಿತು ಎರಡೂ ಕಂಪೆನಿಗಳು ಸೋಮವಾರ ಜಂಟಿ ಪತ್ರಿಕಾ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಫ್ಲಿಪ್‌ಕಾರ್ಟ್‌ನೊಂದಿಗೆ ವಿಲೀನವಾಗಿರುವ ಇಬೇ ಡಾಟ್‌ ಇನ್‌, ತನ್ನ ಎಲ್ಲಾ ವಹಿವಾಟಿನ ಹಕ್ಕುಗಳನ್ನು ಫ್ಲಿಪ್‌ಕಾರ್ಟ್‌ಗೆ ಬಿಟ್ಟುಕೊಟ್ಟಿರುವುದಾಗಿ ಮತ್ತು ಇದರೊಂದಿಗೆ ₹ 3,250 ಕೋಟಿ ಹಣವನ್ನು ಫ್ಲಿಪ್‌ಕಾರ್ಟ್‌ನಲ್ಲಿ ಹೂಡಿಕೆ ಮಾಡಲಿದೆ ಎನ್ನುವ ಮಾಹಿತಿಯನ್ನು ನೀಡಿವೆ.

ಫ್ಲಿಪ್‌ಕಾರ್ಟ್ ತೆಕ್ಕೆ ಸೇರಿದ ಈಬೇ

ಓದಿರಿ: ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಂಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

ಇಬೇ ಕಂಪನಿಯೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದು, ಈ ಹಿನ್ನಲೆಯಲ್ಲಿ ಫ್ಲಿಪ್‌ಕಾರ್ಟ್‌ ಸಹ ತನ್ನ ಎಲ್ಲೇಯನ್ನು ಭಾರತದಿಂದ ಆಚೆಗೆ ವಿಸ್ತರಿಸಲಿದೆ. ಇದೇ ಮಾದರಿಯಲ್ಲಿ ಫ್ಲಿಪ್‌ಕಾರ್ಟ್ ಭಾರತದಲ್ಲಿ ಹೊಂದಿರುವ ಮಾರುಕಟ್ಟೆಯನ್ನು ಇಬೇ ಬಳಸಿಕೊಳ್ಳಲಿದೆ.

ಇದಲ್ಲದೇ ಫ್ಲಿಪ್‌ಕಾರ್ಟ್ ಮಾರುಕಟ್ಟೆಯನ್ನು ವಿಸ್ತರಿಸುವ ಸಲುವಾಗಿ ಟೆನ್‌ಸೆನ್ಟ್ ಮತ್ತು ಮೆಕ್ರೋ ಸಾಫ್ಟ್ ಕಂಪನಿಗಳಿಂದ ಸುಮಾರು 1.4 ಬಿಲಿಯನ್ ಡಾಲರ್ ಬಂಡವಾಳವನ್ನು ಸಂಗ್ರಹಿಸಿದೆ.

ಓದಿರಿ: ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ: ಆದರೆ ಗ್ರಾಹಕರಿಗೆ ನೀಡಿದ ಭರವಸೆ ಏನು..?

ಈ ಒಪ್ಪಂದಿಂದಾಗಿ ಭಾರತೀಯ ಇ-ಕಾಮರ್ಸ್ ವಲಯದಲ್ಲಿ ನಡೆಯುತ್ತಿರುವ ಬದಾಲಾವಣೆಗಳು, ಮಾರುಕಟ್ಟೆಯ ವಿಸ್ತಾರ ಮತ್ತು ಪ್ರಾಮುಖ್ಯತೆಯನ್ನು ಎತ್ತಿ ತೋರಿಸುತ್ತಿದ್ದು, ವಿಶಾಲ ದೇಶದಲ್ಲಿರುವ ಬೆರಳೆಣಿಕೆಯ ಆನ್‌ಲೈನ್‌ ಸೈಟ್‌ಗಳು ಹೇಗೆ ಬಂಡವಾಳ ಸಂಗ್ರಹಕ್ಕೆ ಮುಂದಾಗಿವೆ ಎಂಬುದನ್ನು ತಿಳಿಸುತ್ತಿದೆ.

Read more about:
English summary
Flipkart announced its biggest funding round and said it is buying rival eBay’s Indian operations. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot