Subscribe to Gizbot

ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ: ಆದರೆ ಗ್ರಾಹಕರಿಗೆ ನೀಡಿದ ಭರವಸೆ ಏನು..?

Written By:

ಟ್ರಾಯ್ ವಾರದ ಹಿಂದೆ ಹೇಳಿದಂತೆ ತನ್ನ ನಿಯಮಾವಳಿಯನ್ನು ಮೀರಿದ ಸಮ್ಮರ್ ಸರ್ಪ್ರೈಸ್ ಆಫರ್ ಅನ್ನು ಅಧಿಕೃತವಾಗಿ ರಿಲಯನ್ಸ್ ಮಾಲೀಕತ್ವದ ಜಿಯೋ ಹಿಂಪಡೆದಿದ್ದು, ಆದರೆ ಗ್ರಾಹಕರಿಗೆ ಇದಕ್ಕಿಂತ ಹೆಚ್ಚಿನ ಲಾಭವನ್ನು ನೀಡುವಂತಹ ಆಫರ್ ಘೋಷಣೆ ಮಾಡುವುದಾಗಿ ತಿಳಿಸಿದೆ.

ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ

2016ರ ಸೆಪ್ಟೆಂಬರ್ ನಲ್ಲಿ ಲಾಂಚ್ ಆದಂತಹ ಜಿಯೋ ಇಲ್ಲಿಯವರೆಗೂ ಉಚಿತ ಸೇವೆಯನ್ನು ಮುಂದುವರೆಸಿಕೊಂಡು ಬಂದಿದೆ. ಅಲ್ಲದೇ ಮುಂದೆ ಮೂರು ತಿಂಗಳು ಉಚಿತ ಸೇವೆಯನ್ನು ನೀಡುವ ಮನಸ್ಸು ಮಾಡಿತ್ತು, ಆದರೆ ಟ್ರಾಯ್ ಈಗ ಮತ್ತೇ ಮೂರು ತಿಂಗಳು ಉಚಿತ ಸೇವೆಯನ್ನು ನೀಡುವಂತೆ ಜಿಯೋಗೆ ತಿಳಿಸಿದ್ದಲ್ಲದೇ ಈ ಕೊಡುಗೆಯನ್ನು ಹಿಂಪಡೆಯುವಂತೆ ತಿಳಿಸಿತ್ತು.

ಈಗಾಗಲೇ ಜಿಯೋ ಪ್ರೈಮ್ ಸದಸ್ಯತ್ವವನ್ನು ಪಡೆದುಕೊಂಡು, ಸಮ್ಮರ್ ಸರ್ಪ್ರೈಸ್ ಆಫರ್ ರೀಚಾರ್ಜ್ ಮಾಡಿಸಿದವರಿಗೆ ಮೂರು ತಿಂಗಳು ಉಚಿತ ಕೊಡುಗೆಯನ್ನು ಪಡೆಯಲಿದ್ದಾರೆ. ಮುಂದೆ ಇದೇ ಆಫರ್ ಪಡೆಯುವವರಿಗೆ ಈ ಕೊಡುಗೆಯೂ ದೊರೆಯುವುದಿಲ್ಲ ಎಂದು ಹೇಳಲಾಗಿದೆ.

ಅಧಿಕೃತವಾಗಿ ಸಮ್ಮರ್ ಸರ್ಪ್ರೈಸ್ ಆಫರ್ ಹಿಂಪಡೆದ ಜಿಯೋ

ಓದಿರಿ: ಜಿಯೋ ಉಚಿತ ಸೇವೆಗೆ ಟ್ರಾಯ್ ಬ್ರೇಕ್ ಹಾಕಲು ಕಾರಣ ಇದೇನಾ..?

ಜಿಯೋ ಸಮರ್ ಸರ್ಪ್ರೈಸ್ ಆಫರ್ ನಲ್ಲಿ ಒಂದನ್ನು ಖರೀದಿಸಿದರೆ ಮೂರನ್ನು ಕೊಡುವಂತ ಆಫರ್ ನೀಡಿತ್ತು. 303 ರೂ. ರಿಚಾರ್ಜ್ ಮಾಡಿಸಿದರೆ 28 ದಿನಗಳ ಅವಧಿಗೆ ಪ್ರತಿ ದಿನ 1 GB ಹೈ ಸ್ಪೀಡ್ 4G ಡೇಟಾವನ್ನು ನೀಡುವುದರೊಂದಿಗೆ ಉಚಿತ ಕರೆ ಮಾಡುವ ಸೇವೆಯನ್ನು ನೀಡಲು ಮಂದಾಗಿತ್ತು.

ಓದಿರಿ: ಫ್ಲಿಪ್‌ಕಾರ್ಟ್, ಆಮೆಜಾನ್‌ನಲ್ಲಿ ಶಾಂಕಿಂಗ್ ಬೆಲೆಗೆ ಜಿಯೋ ಲಾಪ್‌ಟಾಪ್..!

Read more about:
English summary
Jio website, the company has now put up a disclaimer, which reads, “We are updating our tariff packs and will be soon introducing more exciting offers.” to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot