ಫ್ಲಿಪ್‌ಕಾರ್ಟ್ ನಿಂದ ಹೊಸ ಕ್ರೆಡಿಟ್ ಕಾರ್ಡ್ ಬಿಡುಗಡೆ ? ಏನೆಲ್ಲಾ ಪ್ರಯೋಜನಗಳು ಲಭ್ಯ!

|

ಜನಪ್ರಿಯ ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ಭಾರತದಲ್ಲಿ ಹೊಸ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಆಕ್ಸಿಸ್‌ ಬ್ಯಾಂಕ್‌ ಸಹಯೋಗದಲ್ಲಿ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಅನ್ನು ಘೋಷಿಸಿದೆ. ಈ ಕ್ರೆಡಿಟ್‌ ಕಾರ್ಡ್‌ ಮೂಲಕ ಬಳಕೆದಾರರು ಫ್ಲಿಪ್‌ಕಾರ್ಟ್‌ನಲ್ಲಿ ಮತ್ತು ಹೊರಗಡೆ ಖರೀದಿ ಮಾಡಬಹುದು. ಅಲ್ಲದೆ ಪ್ರತಿ ವಹಿವಾಟಿನ ನಂತರ, ಗ್ರಾಹಕರು ಸೂಪರ್‌ ಕಾಯಿನ್ಸ್‌ ಅನ್ನು ಕೂಡ ಗಳಿಸುವುದಕ್ಕೆ ಅವಕಾಶವಿದೆ. ಇದು ಫ್ಲಿಪ್‌ಕಾರ್ಟ್‌ನ ರಿವಾರ್ಡ್ ರಿಡೆಂಪ್ಶನ್ ಸಿಸ್ಟಮ್ ಆಗಿದ್ದು ಇದನ್ನು ಹೆಚ್ಚುವರಿ ಆಫರ್‌ ಪಡೆಯುವುದಕ್ಕೆ ಬಳಸಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಆಕ್ಸಿಸ್‌ ಬ್ಯಾಂಕ್‌ ಸಹಯೋಗದಲ್ಲಿ ಹೊಸ ಸೂಪರ್‌ ಎಲೈಟ್‌ ಕ್ರೆಡಿಟ್‌ ಕಾರ್ಡ್‌ ಪರಿಚಯಿಸಿದೆ. ಇನ್ನು ಈ ಹೊಸ ಸೂಪರ್ ಎಲೈಟ್ ಕಾರ್ಡ್ ಮೂಲಕ ಗ್ರಾಹಕರಿಗೆ ಹಲವಾರು ಪ್ರಯೋಜನಗಳನ್ನು ಘೋಷಿಸಿದೆ. ಅದರಂತೆ ಗ್ರಾಹಕರು ತಮ್ಮ ಹೊಸ ಸೂಪರ್ ಎಲೈಟ್ ಕಾರ್ಡ್ ಅನ್ನು ಸಕ್ರಿಯಗೊಳಿಸಿದಾಗ 500 ಸೂಪರ್‌ಕಾಯಿನ್‌ಗಳನ್ನು ಪಡೆಯಲು ಸಾಧ್ಯವಿದೆ ಎಂದು ಹೇಳಲಾಗಿದೆ. ಹಾಗಾದ್ರೆ ಹೊಸ ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ವಿಶೇಷತೆ ಏನು? ಇದರಿಂದ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್ ಆಕ್ಸಿಸ್ ಬ್ಯಾಂಕ್ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಭಾರತದಲ್ಲಿ ಬಿಡುಗಡೆಯಾಗದೆ. ಈ ಕಾರ್ಡ್‌ ಅನ್ನು ಬಳಸುವ ಗ್ರಾಹಕರು ವಿಶೇಷ ರಿವಾರ್ಡ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಗ್ರಾಹಕರು ಸಕ್ರಿಯಗೊಳಿಸುವಿಕೆ ಮತ್ತು ಹೊಸ ಕಾರ್ಡ್ ಬಳಸಿ ಮಾಡಿದ ವಹಿವಾಟುಗಳಿಗಾಗಿ ಮಲ್ಟಿ ರಿವಾರ್ಡ್‌ಗಳನ್ನು ಕ್ಲೈಮ್ ಮಾಡಬಹುದು. ಅದರಲ್ಲೂ ಕಾರ್ಡ್ ಆಕ್ಟಿವ್‌ ಆಗುವುದರ ಮೇಲೆ ಕೂಡ ವಿಶೇಷ ರಿವಾರ್ಡ್‌ಗಳನ್ನು ನೀಡಲಾಗ್ತಿದೆ.

ಏನೆಲ್ಲಾ ರಿವಾರ್ಡ್‌ ಲಭ್ಯವಾಗಲಿದೆ?

ಏನೆಲ್ಲಾ ರಿವಾರ್ಡ್‌ ಲಭ್ಯವಾಗಲಿದೆ?

* ಕಾರ್ಡ್ ಆಕ್ಟಿವೇಶನ್‌ ಮೇಲೆ 500 ಸೂಪರ್‌ ಕಾಯಿನ್ಸ್‌ ಲಭ್ಯ.
* ಫ್ಲಿಪ್‌ಕಾರ್ಟ್ ವಿಮಾನಗಳ ಮೇಲೆ 15% ರಿಯಾಯಿತಿ
* ಫ್ಲಿಪ್‌ಕಾರ್ಟ್‌ ಹೆಲ್ತ್‌ + ನಿಂದ ಖರೀದಿಸಿದ ವಸ್ತುಗಳ ಮೇಲೆ 30%
* Myntra ಮೇಲೆ 500ರೂ
* ಕ್ಲಿಯರ್ ಟ್ರಿಪ್ ಮೂಲಕ ಬುಕ್ ಮಾಡಿದ ವಿಮಾನಗಳಲ್ಲಿ 10% ಡಿಸ್ಕೌಂಟ್‌
* ಯೂಟ್ಯೂಬ್‌ ಪ್ರೀಮಿಯಂ ಎರಡು ತಿಂಗಳ ಪ್ರಾಯೋಗಿಕ ಸದಸ್ಯತ್ವ
* ಕ್ಲಿಯರ್ ಟ್ರಿಪ್ ಮೂಲಕ ಮಾಡಿದ ಹೋಟೆಲ್ ಬುಕಿಂಗ್‌ನಲ್ಲಿ 25% ರಿಯಾಯಿತಿ
* ಲೆನ್ಸ್‌ಕಾರ್ಟ್ ಗೋಲ್ಡ್ ಸದಸ್ಯತ್ವದ 1 ವರ್ಷ
* Gaana Plus ನ ಮೂರು ತಿಂಗಳ ಪ್ರಾಯೋಗಿಕ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ.

ಗ್ರಾಹಕರು

ಇದಲ್ಲದೆ ಗ್ರಾಹಕರು ಫ್ಲಿಪ್‌ಕಾರ್ಟ್‌ನಲ್ಲಿ ಖರ್ಚು ಮಾಡಿದ ಪ್ರತಿ 100 ರೂಗಳಿಗೆ 12 ಹೆಚ್ಚುವರಿ ಸೂಪರ್‌ಕಾಯಿನ್‌ಗಳನ್ನು ಪಡೆದುಕೊಳ್ಳಬಹುದಾಗಿದೆ. ಜೊತೆಗೆ ಫ್ಲಿಪ್‌ಕಾರ್ಟ್‌ನ ಹೊರಗೆ ಸೂಪರ್ ಎಲೈಟ್ ಕ್ರೆಡಿಟ್ ಕಾರ್ಡ್ ಬಳಸಿ ಮಾಡಿದ ವಹಿವಾಟುಗಳಿಗೆ, ಬಳಕೆದಾರರು ಪ್ರತಿ 100 ರೂ.ಗೆ ಎರಡು ಸೂಪರ್‌ಕಾಯಿನ್‌ಗಳನ್ನು ಪಡೆಯುತ್ತಾರೆ. ಫ್ಲಿಪ್‌ಕಾರ್ಟ್ ಪ್ಲಸ್ ಸದಸ್ಯರು ಪ್ಲಸ್ ಅಲ್ಲದ ಸದಸ್ಯರಿಗಿಂತ ಹೆಚ್ಚುವರಿ ಪ್ರಯೋಜನಗಳನ್ನು ಪಡೆಯುತ್ತಾರೆ. ಪ್ಲಸ್ ಅಲ್ಲದ ಸದಸ್ಯರು 2,500ರೂ ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟುಗಳಿಗಾಗಿ ಗರಿಷ್ಠ 200 ಸೂಪರ್‌ಕಾಯಿನ್‌ಗಳನ್ನು ಗಳಿಸಬಹುದಾಗಿದೆ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ ಗ್ರಾಹಕರು ಈ ಸೂಪರ್‌ ಕಾಯಿನ್ಸ್‌ಗಳನ್ನು ಮಲ್ಟಿ ಪ್ಲಾಟ್‌ಫಾರ್ಮ್‌ಗಳಲ್ಲಿ ರಿವಾರ್ಡ್‌ ಆಗಿ ಪಡೆದುಕೊಳ್ಳಬಹುದಾಗಿದೆ. ಈ ರಿವಾರ್ಡ್‌ಗಳನ್ನು Myntra, ಕ್ಲಿಯರ್ ಟ್ರಿಪ್, ಫೋನ್‌ಪೇ, ಯೂಟ್ಯೂಬ್‌, ಹಾಟ್‌ಸ್ಟಾರ್‌, ಸೋನಿಲೈವ್‌, ಜೀ5, ಡೊಮಿನೋಸ್, ಜೋಮೊಟೊ, ಲೀಫ್‌, ಬೋಟ್‌, ನಾಯ್ಸ್‌, ಏರ್‌ಟೆಲ್‌, ಮೊಬಿಕ್ವಿಕ್‌ ಮತ್ತು ಪೇಟಿಎಂನಲ್ಲಿ ರಿಡೀಮ್ ಮಾಡಬಹುದು. ಜೊತೆಗೆ ಆಯ್ದ ರೆಸ್ಟೋರೆಂಟ್‌ಗಳಲ್ಲಿ ಶೇಕಡಾ 20 ರಷ್ಟು ರಿಯಾಯಿತಿಯನ್ನು ಸಹ ಪಡೆಯುವುದಕ್ಕೆ ಅವಕಾಶ ಸಿಗಲಿದೆ.

ಯಾರೆಲ್ಲಾ ಕಾರ್ಡ್‌ ಪಡೆದುಕೊಳ್ಳಬಹುದು?

ಯಾರೆಲ್ಲಾ ಕಾರ್ಡ್‌ ಪಡೆದುಕೊಳ್ಳಬಹುದು?

ಫ್ಲಿಪ್‌ಕಾರ್ಟ್‌ನ ಈ ಹೊಸ ಕ್ರೆಡಿಟ್‌ ಕಾರ್ಡ್‌ ಪಡೆದುಕೊಳ್ಳುವುದಕ್ಕೆ ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಸಂಬಳ ಪಡೆಯುವ ಉದ್ಯೋಗಿಗಳು ಅರ್ಜಿ ಸಲ್ಲಿಸಬಹುದು. 30,000 ಅಥವಾ ಅದಕ್ಕಿಂತ ಹೆಚ್ಚಿನ ಮಾಸಿಕ ಆದಾಯ ಹೊಂದಿರುವ ಸ್ವಯಂ ಉದ್ಯೋಗಿ ವ್ಯಾಪಾರ ವೃತ್ತಿಪರರು ಮತ್ತು ಸ್ವತಂತ್ರ ಗಳಿಕೆದಾರರು ಸೂಪರ್ ಎಲೈಟ್ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು. ಇನ್ನು ಕ್ರೆಡಿಟ್‌ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು, ಮೀಸಲಾದ ವೆಬ್‌ಸೈಟ್‌ಗೆ ಹೋಗಿ ಮತ್ತು ಈಗ ಅನ್ವಯಿಸು ಕ್ಲಿಕ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

Best Mobiles in India

English summary
Flipkart Axis Bank Super Elite Credit Card Launched

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X