ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌: ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ಡಿಸ್ಕೌಂಟ್‌!

|

ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್ ಬಿಲಿಯನ್ ಡೇಸ್‌ ಸೇಲ್‌ ಪ್ರಸ್ತುತ ಚಾಲ್ತಿ ಇದ್ದು, ಈಗಾಗಲೇ ಗ್ರಾಹಕರು ಅಗತ್ಯ ಉತ್ಪನ್ನಗಳನ್ನು ಖರೀದಿಸುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆಯಲ್ಲಿ ನೀವೆನಾದರು ಹೈ ಎಂಡ್‌ ಸ್ಮಾರ್ಟ್‌ಫೋನ್‌ ಖರೀದಿಸುವ ತಯಾರಿಯಲ್ಲಿದ್ದರೇ, ಇ-ಕಾಮರ್ಸ್‌ ದೈತ್ಯ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಬಿಗ್ ಆಫರ್‌ಗಳು ಲಭ್ಯ ಇವೆ. ಜೊತೆಗೆ ನೋ ಕಾಸ್ಟ್‌ ಇಎಮ್‌ಐ, ಇನ್‌ಸ್ಟಂಟ್‌ ಡಿಸ್ಕೌಂಟ್‌ಗಳ ಪ್ರಯೋಜನ ಪಡೆಯಬಹುದು.

ಬಿಗ್ ಬಿಲಿಯನ್ ಡೇಸ್‌

ಹೌದು, ಫ್ಲಿಪ್‌ಕಾರ್ಟ್‌ ಆಯೋಜಿಸಿರುವ 'ಬಿಗ್ ಬಿಲಿಯನ್ ಡೇಸ್‌' ಸೇಲ್ ಮೇಳವು ಇದೇ ಸೆಪ್ಟೆಂಬರ್ 29ರಿಂದ ಆರಂಭವಾಗಿದ್ದು, ಇದೇ ಅಕ್ಟೋಬರ್ 4ರ ವರೆಗೂ ಇರಲಿದೆ. ಈ ಮೇಲದಲ್ಲಿ ಬಜೆಟ್‌ ಸ್ಮಾರ್ಟ್‌ಫೋನ್‌ನಿಂದ ದುಬಾರಿ ಸ್ಮಾರ್ಟ್‌ಫೋನ್‌ಗಳಿಗೂ ಅತ್ಯುತ್ತಮ ರಿಯಾಯಿತಿ ಘೋಷಿಸಲಾಗಿದೆ. ಜೊತೆಗೆ ಐಸಿಐಸಿಐ ಮತ್ತು ಆಕ್ಸಿಸ್‌ ಬ್ಯಾಂಕ್‌ಗಳಿಂದ ಶೇ.10% ಇನ್‌ಸ್ಟಂಟ್‌ ಡಿಸ್ಕೌಂಟ್‌ ಲಭ್ಯವಾಗಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಸೇಲ್ ಮೇಳದಲ್ಲಿ ಬೆಸ್ಟ್‌ ಆಫರ್‌ನಲ್ಲಿ ಲಭ್ಯವಾಗುವ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್ ಐಫೋನ್‌ಗಳಿಗೆ ಆಫರ್

ಆಪಲ್ ಐಫೋನ್‌ಗಳಿಗೆ ಆಫರ್

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಸೇಲ್‌ನಲ್ಲಿ ಆಪಲ್ ಸಂಸ್ಥೆಯ ಐಫೋನ್‌ಗಳಿಗೆ ಬಾರಿ ಡಿಸ್ಕೌಂಟ್‌ ನೀಡಲಾಗಿದ್ದು, 'ಐಫೋನ್‌ X' 64GB ಸ್ಟೋರೇಜ್ ವೇರಿಯಂಟ್‌ 44,999ರೂ.ಗಳಿಗೆ ಖರೀದಿಸಬಹುದಾಗಿದೆ. ಇದರೊಂದಿಗೆ ಬ್ಯಾಂಕ್‌ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸೌಲಭ್ಯವನ್ನು ಪಡೆದುಕೊಂಡರೇ 40,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ ಆಪಲ್ 'ಐಫೋನ್ XR' 64GB ವೇರಿಯಂಟ್ ಬ್ಯಾಂಕ್‌ ಡಿಸ್ಕೌಂಟ್‌ನೊಂದಿಗೆ ಖರೀದಿಸಿದರೇ 35,999ರೂ.ಗಳಿಗೆ ಸಿಗಲಿದ್ದು, ಬ್ಯಾಂಕ್ ಆಫರ್ ಹೊರತುಪಡಿಸಿ 40,000ರೂ,ಗಳಿಗೆ 'ಐಫೋನ್ XR' 64GB ಲಭ್ಯ.

ಸ್ಯಾಮ್‌ಸಂಗ್ ಫೋನ್‌ಗಳಿಗೆ ಡಿಸ್ಕೌಂಟ್

ಸ್ಯಾಮ್‌ಸಂಗ್ ಫೋನ್‌ಗಳಿಗೆ ಡಿಸ್ಕೌಂಟ್

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಸೇಲ್‌ನಲ್ಲಿ ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌9' ಸ್ಮಾರ್ಟ್‌ಫೋನ್‌ಗೆ ಬೆಸ್ಟ್‌ ಡೀಲ್‌ ಇದ್ದು, 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್ 29,999ರೂ.ಗಳಿಗೆ ಸಿಗಲಿದೆ. ಇನ್ನು ಬ್ಯಾಂಕ್ ಆಫರ್ ಪಡೆದುಕೊಂಡರೇ 27,999ರೂ.ಗಳಿಗೆ ಖರೀದಿಸಬಹುದು. ಹಾಗೆಯೇ ಸ್ಯಾಮ್‌ಸಂಗ್ 'ಗ್ಯಾಲ್ಯಾಕ್ಸಿ ಎಸ್‌9+' ಸ್ಮಾರ್ಟ್‌ಫೋನಿನ 4GB RAM ಮತ್ತು 64GB ವೇರಿಯಂಟ್ 34,999ರೂ.ಗಳಿಗೆ ಲಭ್ಯ ಇದೆ. ಇನ್ನು ಬ್ಯಾಂಕ್ ಡಿಸ್ಕೌಂಟ್‌ ಸೇರಿದರೇ 32,999ರೂ.ಗಳಿಗೆ ದೊರೆಯುತ್ತದೆ.

ಶಿಯೋಮಿ ಫೋನ್‌ಗಳಿಗೆ ರಿಯಾಯಿತಿ

ಶಿಯೋಮಿ ಫೋನ್‌ಗಳಿಗೆ ರಿಯಾಯಿತಿ

ಶಿಯೋಮಿ ಕಂಪನಿಯು ಇತ್ತೀಚಿನ ಬಿಡುಗಡೆ ಮಾಡಿರುವ 'ರೆಡ್ಮಿ ನೋಟ್ ಕೆ20 ಪ್ರೊ' ಸ್ಮಾರ್ಟ್‌ಫೋನಿನ 6GB RAM ಮತ್ತು 128GB ಸ್ಟೋರೇಜ್ ವೇರಿಯಂಟ್‌ ಫೋನಿಗೆ ಬೆಸ್ಟ್‌ ಡಿಸ್ಔಂಟ್‌ ಇದ್ದು, 24,999ರೂ.ಗಳಿಗೆ ಗ್ರಾಹಕರ ಕೈ ಸೇಲಿದೆ. ಇನ್ನು ಬ್ಯಾಂಕ್‌ನ ಇನ್‌ಸ್ಟಂಟ್‌ ಡಿಸ್ಕೌಂಟ್‌ ಪಡೆದುಕೊಂಡರೇ 22,999ರೂ.ಗಳಿಗೆ ಫೋನ್ ದೊರೆಯಲಿದೆ. ಹಾಗೆಯೇ ರೆಡ್ಮಿ Y3 ಸ್ಮಾರ್ಟ್‌ಫೋನ್ 7,999ರೂ.ಗಳು ಆಗಿದೆ.

ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!ಓದಿರಿ : ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ ಎರಡರಲ್ಲೂ ಆಫರ್‌ ಇದೆ, ಆದ್ರೆ ಯಾವುದು ಬೆಸ್ಟ್‌!

ಗೂಗಲ್ ಪಿಕ್ಸಲ್‌ ಫೋನಿಗೂ ಆಫರ್

ಗೂಗಲ್ ಪಿಕ್ಸಲ್‌ ಫೋನಿಗೂ ಆಫರ್

ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಸೇಲ್‌ನಲ್ಲಿ ಗೂಗಲ್ ಸಂಸ್ಥೆಯ 'ಪಿಕ್ಸಲ್‌ 3a' ಸ್ಮಾರ್ಟ್‌ಫೋನಿಗೂ ಆಫರ್‌ ನೀಡಲಾಗಿದ್ದು, 4GB RAM ಮತ್ತು 64GB ಸ್ಟೋರೇಜ್ ವೇರಿಯಂಟ್‌ 29,999ರೂ.ಗಳಿಗೆ ಲಭ್ಯವಾಗಲಿದೆ. ಐಸಿಐಸಿಐ ಮತ್ತು ಆಕ್ಸಿಸ್‌ ಬ್ಯಾಂಕ್‌ ಇನ್‌ಸ್ಟಂಟ್‌ ಡಿಸ್ಕೌಂಟ್‌ ಸೌಲಭ್ಯವನ್ನು ಪಡೆದುಕೊಂಡರೇ 27,999ರೂ.ಗಳಿಗೆ ಗ್ರಾಹಕರು ಪಿಕ್ಸಲ್ 3a ಸ್ಮಾರ್ಟ್‌ಫೋನ್ ಖರೀದಿಸಬಹುದು.

ಓದಿರಿ : 'ರಿಯಲ್‌ ಮಿ XT' ಓಪೆನ್‌ ಸೇಲ್‌ ಶುರು!.64ಎಂಪಿ ಕ್ಯಾಮೆರಾ ವಿಶೇಷ!ಓದಿರಿ : 'ರಿಯಲ್‌ ಮಿ XT' ಓಪೆನ್‌ ಸೇಲ್‌ ಶುರು!.64ಎಂಪಿ ಕ್ಯಾಮೆರಾ ವಿಶೇಷ!

Best Mobiles in India

English summary
Flipkart is offering massive discounts and other benefits during the sale on top smartphones. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X