ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌: ಯಾವ ಫೋನಿಗೆ ಎಷ್ಟು ಡಿಸ್ಕೌಂಟ್‌ ಇಲ್ಲಿದೆ ಮಾಹಿತಿ!

|

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಮಾರಾಟ ಮೇಳ ಪ್ರಾರಂಭವಾಗಲು ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ನೂತನ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರು ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಅನ್ನು ಎದುರುನೋಡುತ್ತಿದ್ದಾರೆ. ಇನ್ನು ಈ ಸೇಲ್‌ ನಲ್ಲಿ ಜನಪ್ರಿಯ ಫೋನ್‌ಗಳು ಸೇರಿದಂತೆ ಇತ್ತೀಚಿಗೆ ಬಿಡುಗಡೆ ಆಗಿರುವ ಕೆಲವು ನೂತನ ಫೋನ್‌ಗಳು ಸಹ ಆಕರ್ಷಕ ರಿಯಾಯಿತಿಯಲ್ಲಿ ದೊರೆಯುತ್ತವೆ. ಹಾಗೆಯೇ ಸೇಲ್‌ಗೂ ಮುನ್ನವೇ ರಿಯಲ್‌ಮಿ ಫೋನ್‌ಗಳು ಹೆಚ್ಚು ಗಮನ ಸೆಳೆದಿವೆ.

ಇರಲಿದೆ

ಹೌದು, ಜನಪ್ರಿಯ ಇ ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಆಯೋಜಿಸಿರುವ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಇದೇ ಸೆಪ್ಟೆಂಬರ್ 23 ರಂದು ಶುರುವಾಗಲಿದ್ದು, ಸೆಪ್ಟೆಂಬರ್ 30 ರ ವರೆಗೂ ಚಾಲ್ತಿ ಇರಲಿದೆ. ಈ ಸೇಲ್‌ ನಲ್ಲಿ ಬಜೆಟ್‌ ಬೆಲೆಯ, ಮೀಡ್‌ ರೇಂಜ್‌ ಬೆಲೆಯ ಹಾಗೂ ಫ್ಲ್ಯಾಗ್‌ಶಿಪ್ ಮಾದರಿಯ ಫೋನ್‌ಗಳು ಆಕರ್ಷಕ ಬೆಲೆಗೆ ಲಭ್ಯವಾಗಲಿವೆ. ಇದರೊಂದಿಗೆ ರಿಯಲ್‌ಮಿ ಕೆಲವು ಆಯ್ದ ಸ್ಮಾರ್ಟ್‌ಫೋನ್‌ಗಳು ಆಫರ್‌ನಲ್ಲಿ ಸಿಗಲಿವೆ.

ಬಿಲಿಯನ್‌

ಇನ್ನು ಫ್ಲಿಪ್‌ಕಾರ್ಟ್ ಪ್ಲಸ್ ಬಳಕೆದಾರರಿಗೆ ಒಂದು ದಿನ ಮುಂಚಿತವಾಗಿ ಸೇಲ್‌ ಪ್ರಾರಂಭವಾಗಲಿದೆ. ಸೇಲ್‌ ಸಂದರ್ಭದಲ್ಲಿ ಖರೀದಿದಾರರು ಐಸಿಐಸಿಐ ಬ್ಯಾಂಕ್ ಮತ್ತು ಆಕ್ಸಿಸ್‌ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳಲ್ಲಿ 10% ತ್ವರಿತ ರಿಯಾಯಿತಿಯನ್ನು ಪಡೆಯಬಹುದು. ಹಾಗಾದರೆ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಬೊಂಬಾಟ್‌ ಕೊಡುಗೆಯಲ್ಲಿ ಲಭ್ಯವಾಗುವ ಕೆಲವು ರಿಯಲ್‌ಮಿ ಫೋನ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ 9 ಪ್ರೊ 5G

ರಿಯಲ್‌ಮಿ 9 ಪ್ರೊ 5G

ರಿಯಲ್‌ಮಿ 9 ಪ್ರೊ 5G ಫೋನ್‌ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಆಕರ್ಷಕ ದರಕ್ಕೆ ಲಭ್ಯವಾಗಲಿದೆ. ಈ ಫೋನ್ 17,999ರೂ. ಗಳ ಪ್ರೈಸ್‌ ಟ್ಯಾಗ್‌ ಅನ್ನು ಹೊಂದಿದ್ದು, ಸೇಲ್‌ ಸಮಯದಲ್ಲಿ ಐಸಿಐಸಿಐ ಮತ್ತು ಆಕ್ಸಿಸ್‌ ಬ್ಯಾಂಕ್ ಕಾರ್ಡ್ ಕೊಡುಗೆಗಳೊಂದಿಗೆ 14,999 ರೂ. ಗಳಿಗೆ ಲಭ್ಯವಿರುತ್ತದೆ. ಇನ್ನು ಸ್ಮಾರ್ಟ್‌ಫೋನ್‌ 6.6 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, 120Hz ರಿಫ್ರೆಶ್ ರೇಟ್‌ ಅನ್ನು ಹೊಂದಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಹೊಂದಿದ್ದು, 8GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.

ರಿಯಲ್‌ಮಿ GT 2 ಪ್ರೊ

ರಿಯಲ್‌ಮಿ GT 2 ಪ್ರೊ

ರಿಯಲ್‌ಮಿ GT 2 ಪ್ರೊ ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ ಅತ್ಯುತ್ತಮ ಕೊಡುಗೆಯಲ್ಲಿ ಲಭ್ಯವಾಗಲಿದ್ದು, ಯಾವುದೇ ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಪಾವತಿಯೊಂದಿಗೆ 10,000 ರೂ. ರಿಯಾಯಿತಿ ಸಿಗಲಿದೆ. ರಿಯಲ್‌ಮಿ GT 2 ಪ್ರೊ ಸ್ಮಾರ್ಟ್‌ಫೋನ್‌ 1,440 x 3,216 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.7 ಇಂಚಿನ 2K LTPO 2.0 ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ.

ಒಳಗೊಂಡಿದ್ದು

ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಹೊಂದಿದ್ದು, ಆಂಡ್ರಾಯ್ಡ್‌ 12 ಆಧಾರಿತ ನಲ್ಲಿ ಕಾರ್ಯನಿರ್ವಹಿಸುತ್ತದೆ. ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸೆಲ್ ಸೆನ್ಸಾರ್‌ ನಲ್ಲಿದೆ. ಜೊತೆಗೆ ಈ ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ 65W ಸೂಪರ್‌ಡಾರ್ಟ್ ಚಾರ್ಜ್ ವರ್ಧಿತ ವೇಗದ ಚಾರ್ಜಿಂಗ್‌ ಅನ್ನು ಒಳಗೊಂಡಿದೆ.

ಇತರೆ ರಿಯಲ್‌ಮಿ ಫೋನ್‌ಗಳ ಆಫರ್ ಹೀಗಿದೆ:

ಇತರೆ ರಿಯಲ್‌ಮಿ ಫೋನ್‌ಗಳ ಆಫರ್ ಹೀಗಿದೆ:

- ರಿಯಲ್‌ಮಿ C33 ಫೋನ್ ಸಹ ಅತ್ಯುತ್ತಮ ಆಫರ್ ಪಡೆದಿದ್ದು, 6,999 ರೂ.ಗಳಿಂದ ಖರೀದಿಗೆ ಲಭ್ಯ.
- ರಿಯಲ್‌ಮಿ C35 ಫೋನ್ 9,999 ರೂ.ಗಳ ಆಫರ್‌ ಬೆಲೆಯಲ್ಲಿ ಖರೀದಿಗೆ ಸಿಗಲಿದೆ.
- ರಿಯಲ್‌ಮಿ 9 (6GB+128GB) ಆಫರ್‌ಗಳನ್ನು ಒಳಗೊಂಡಂತೆ 12,999 ರೂ.ಗಳಿಗೆ ದೊರೆಯಲಿದೆ.
- ರಿಯಲ್‌ಮಿ C30 ಫೋನ್ 5,799 ರೂ.ಗಳಲ್ಲಿ ಆಕರ್ಷಕ ಪ್ರೈಸ್‌ ಟ್ಯಾಗ್‌ನಲ್ಲಿ ಲಭ್ಯವಾಗಲಿದೆ.
- ರಿಯಲ್‌ಮಿ 9i ಫೋನ್ 10,999ರೂ.ಗಳ ಪ್ರಾರಂಭ ಬೆಲೆಯಲ್ಲಿ ಸಿಗಲಿದೆ.
- ರಿಯಲ್‌ಮಿ 9 5G ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ನಲ್ಲಿ 12,999 ರೂ.ಗಳ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ.

Best Mobiles in India

English summary
If You Want You Buy Realme Phone at offer price, Flipkart is Best Platform. Flipkart Big Billion Days Sale 2022 starts very soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X