ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ : ಪೊಕೊ ಫೋನ್‌ಗಳಿಗೆ ಭರ್ಜರಿ ಆಫರ್

|

ಪ್ರಮುಖ ಇ- ಕಾಮರ್ಸ್‌ನ ದೈತ್ಯ ಸ್ಟೋರ್‌ಗಳಲ್ಲಿ ಒಂದಾದ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌‌ ಡೇಸ್ ಸೇಲ್‌ನಲ್ಲಿ ಭರ್ಜರಿ ಡಿಸ್ಕೌಂಟ್‌ ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಇದೀಗ ಪೊಕೊ (Poco) ಸ್ಮಾರ್ಟ್‌ಫೋನ್‌ಗಳಿಗೆ ಫ್ಲಿಪ್‌ಕಾರ್ಟ್‌ ದೊಡ್ಡ ಪ್ರಮಾಣದಲ್ಲಿ ರಿಯಾಯಿತಿ ಘೋಷಣೆ ಮಾಡಿದೆ. ಈ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ನಾಳೆಯಿಂದ(ಸೆ.23) ಆರಂಭ ಆಗಲಿದೆ. ಕಡಿಮೆ ಬೆಲೆಗೆ ಹೆಚ್ಚಿನ ಆಯ್ಕೆ ಇರುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬೇಕು ಎಂದು ಕೊಂಡಿದ್ದರೆ ಅದಕ್ಕೆ ಫ್ಲಿಪ್‌ಕಾರ್ಟ್‌ ವೇದಿಕೆ ಒದಗಿಸಿದೆ.

ಸ್ಮಾರ್ಟ್‌ಫೋನ್‌

ಕಡಿಮೆ ವೆಚ್ಚದಲ್ಲಿ ಪ್ರೀಮಿಯಂ ತಂತ್ರಾಂಶವನ್ನು ಪೊಕೊ ಮೊಬೈಲ್‌ಗಳು ನೀಡಲಿದ್ದು, ಬಹುಪಾಲು ಜನರ ಬಳಿ ಈಗಾಗಲೇ ಈ ಸ್ಮಾರ್ಟ್‌ಫೋನ್‌ಗಳಿವೆ. ಪ್ರಸ್ತುತ ಈ ಆಫರ್‌ನಲ್ಲಿ ಪೊಕೊ F, ಪೊಕೊ X, ಪೊಕೊ M, ಮತ್ತು ಪೊಕೊ C ಎಂಬ ನಾಲ್ಕು ವಿಭಿನ್ನ ಸ್ಮಾರ್ಟ್‌ಫೋನ್‌ ಸೇರಿದಂತೆ ಇತರೆ ಫೋನ್‌ಗಳಿಗೂ ರಿಯಾಯಿತಿ ನೀಡಲಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಈ ಸ್ಮಾರ್ಟ್‌ಫೋನ್‌ಗಳನ್ನು ಆಕ್ಸಿಸ್‌, ಐಸಿಐಸಿಐ ಬ್ಯಾಂಕ್‌ನ ಡೆಬಿಟ್ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆ ಮಾಡಿ ಖರೀದಿ ಮಾಡಿದರೆ 10% ವರೆಗೂ ಹೆಚ್ಚಿನ ರಿಯಾಯಿತಿ ಪಡೆಯಬಹುದಾಗಿದೆ. ಹಾಗಿದ್ರೆ ಈ ಸ್ಮಾರ್ಟ್‌ಫೋನ್‌ಗಳ ಸಾಮಾನ್ಯ ಬೆಲೆ ಎಷ್ಟು? ಡಿಸ್ಕೌಂಟ್‌ನಲ್ಲಿನ ಬೆಲೆ ಎಷ್ಟು? ಎಂಬಿತ್ಯಾದಿ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಓದಿರಿ.

ಪೊಕೊ F4 5G

ಪೊಕೊ F4 5G

ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 27,999 ರೂ.ಗಳಾಗಿದ್ದು, 19,999 ರೂ.ಗಳ ಆಫರ್‌ ಬೆಲೆಯಲ್ಲಿ ನೀವು ಕೊಂಡುಕೊಳ್ಳಬಹುದಾಗಿದೆ. ಈ ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, 4500 mAh ಸಾಮರ್ಥ್ಯದ ಬ್ಯಾಟರಿ ಹೊಂದಿದೆ. ಹಾಗೆಯೇ 6 GB RAM ಹಾಗೂ 128 GB ಇಂಟರ್‌ ಸ್ಟೋರೇಜ್‌ ಆಯ್ಕೆ ಜೊತೆಗೆ ಮೂರು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಪೊಕೊ POCO M5

ಪೊಕೊ POCO M5

ಈ ಸ್ಮಾರ್ಟ್‌ಫೋನ್‌ ಸಾಮಾನ್ಯ ದರ 12,499 ರೂ.ಗಳಾಗಿದ್ದು, ಆಫರ್‌ ಬೆಲೆಯಲ್ಲಿ ನೀವು ಇದನ್ನ 10,999 ರೂ.ಗಳಿಗೆ ಖರೀದಿಸಬಹುದಾಗಿದೆ. ಇದು ಟ್ರಿಪಲ್‌ ಕ್ಯಾಮೆರಾ ರಚನೆ ಹೊಂದಿದ್ದು, 5000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. 4GB + 64GB ಹಾಗೂ 6 GB+ 128 GB ಯ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಪೊಕೊ X4 ಪ್ರೊ 5G

ಪೊಕೊ X4 ಪ್ರೊ 5G

ಈ ಸ್ಮಾರ್ಟ್‌ಫೋನ್‌ನ ಸಾಮಾನ್ಯ ಫ್ಲಿಪ್‌ಕಾರ್ಟ್‌ ದರ 15,499ರೂ. ಇದ್ದು, ಆಫರ್‌ ಬೆಲೆ 13,999 ರೂ.ನಲ್ಲಿ ಇದನ್ನು ಖರೀದಿ ಮಾಡಬಹುದು. AMOLED ಡಿಸ್‌ಪ್ಲೇ ಜೊತೆಗೆ ಟ್ರಿಪಲ್‌ ಕ್ಯಾಮೆರಾ ರಚನೆ ಇದ್ದು, ಈ ಸ್ಮಾರ್ಟ್‌ಫೋನ್‌‌ 5000 mAh ಬ್ಯಾಟರಿ ಹೊಂದಿದೆ. ಹಾಗೆಯೇ ಕ್ವಾಲ್ಕಮ್ ಸ್ನಾಪ್‌ಡ್ರಾಗನ್ 695 5G ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 6 GB RAM ಹಾಗೂ 64 GB ROM ಒಳಗೊಂಡಂತೆ ಎರಡು ಅಯ್ಕೆಯಲ್ಲಿ ಲಭ್ಯ ಇದೆ. ಇದನ್ನು 1 TB ವರೆಗೂ ಎಸ್‌ಡಿ ಕಾರ್ಡ್‌ ಮೂಲಕ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಪೊಕೊ M4 ಪ್ರೊ 5G

ಪೊಕೊ M4 ಪ್ರೊ 5G

ಪೊಕೊ M4 ಪ್ರೊ 5G ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ 14,999ರೂ. ಗಳಿದ್ದು, ಇದನ್ನು ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 10,999 ರೂ.ಗಳಿಗೆ ತೆಗೆದುಕೊಳ್ಳಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, 5000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಹಾಗೆಯೇ 4 GB RAM ಹಾಗೂ 64 GB ROM ನ ವೇರಿಯಂಟ್‌ ಜೊತೆಗೆ ಮೂರು ವೇರಿಯಂಟ್‌ನಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿವೆ. ಇದನ್ನು 1 TB ವರೆಗೆ ವಿಸ್ತರಿಸಿಕೊಳ್ಳಬಹುದು.

ಪೊಕೊ M4 ಪ್ರೊ AMOLED

ಪೊಕೊ M4 ಪ್ರೊ AMOLED

ಪೊಕೊ M4 ಪ್ರೊ AMOLED ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 14,999 ರೂ ಗಳಿದ್ದು, ಇದನ್ನು ಫ್ಲಿಪ್‌ಕಾರ್ಟ್‌ನ ಆಫರ್‌ ಬೆಲೆಯಲ್ಲಿ 9,749 ರೂ.ಗಳಿಗೆ ಕೊಂಡುಕೊಳ್ಳಬಹುದು. ಟ್ರಿಪಲ್‌ ಕ್ಯಾಮೆರಾ ರಚನೆ ಒಳಗೊಂಡಂತೆ 5000 mAh ಬ್ಯಾಟರಿ ಸಾಮರ್ಥ್ಯ ಹಾಗೂ ಮೀಡಿಯಾಟೆಕ್‌ ಹಿಲಿಯೋ G96 ಪ್ರೊಸೆಸರ್‌ನಲ್ಲಿ ಇದು ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ 6 GB RAM ಹಾಗೂ 128 GB ROM ಆಯ್ಕೆಯ ಜೊತೆಗೆ ಎರಡು ವೇರಿಯಂಟ್‌ನಲ್ಲಿ ಲಭ್ಯ ಇದೆ.

ಪೊಕೊ M4 5G

ಪೊಕೊ M4 5G

ಪೊಕೊ M4 5G ಸ್ಮಾರ್ಟ್‌ಫೋನ್‌ನ ಸಾಮಾನ್ಯ ದರ 10,999 ರೂ.ಗಳಾಗಿದ್ದು, ಇದನ್ನು 9,749 ರೂ.ಗಳಿಗೆ ಖರೀದಿ ಮಾಡಬಹುದಾಗಿದೆ. ಡ್ಯುಯಲ್‌ ಕ್ಯಾಮೆರಾ ರಚನೆ ಹೊಂದಿರುವ ಇದು 5000 mAh ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮೀಡಿಯಾಟೆಕ್ ಡೈಮೆನ್ಸಿಟಿ 700 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಈ ಫೋನ್‌ 4 GB RAM ಹಾಗೂ 64 GB ROM ಆಯ್ಕೆಯಲ್ಲಿ ಲಭ್ಯ ಇದ್ದು, ಇದನ್ನು 512 GB ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

ಪೊಕೊ C3

ಪೊಕೊ C3

ಪೊಕೊ C3 ಸ್ಮಾರ್ಟ್‌ಫೋನ್‌ ಸಾಮಾನ್ಯ ದರ 8,499 ರೂ.ಗಳಿದ್ದು, 6,499 ರೂ.ಗೆ ಫ್ಲಿಪ್‌ಕಾರ್ಟ್‌ ಮಾರಾಟ ಮಾಡಲಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ಕ್ಯಾಮೆರಾ ರಚನೆ ಜೊತೆಗೆ 5000 ಬ್ಯಾಟರಿ ಸಾಮರ್ಥ್ಯ ಪಡೆದಿದೆ. ಹಾಗೆಯೇ ಮೀಡಿಯಾಟೆಕ್ ಹಿಲಿಯೋ G35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 3 GB RAM ಹಾಗೂ 32 GB ROM ಆಯ್ಕೆಯಲ್ಲಿ ಲಭ್ಯ ಇದ್ದು, ಈ ಸ್ಮಾರ್ಟ್‌ಫೋನ್‌ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು 512 GB ವರೆಗೆ ವಿಸ್ತರಿಸಿಕೊಳ್ಳಬಹುದಾದ ಆಯ್ಕೆ ಪಡೆದಿದೆ.

ಪೊಕೊ C31

ಪೊಕೊ C31

ಪೊಕೊ C31 ಸ್ಮಾರ್ಟ್‌ಫೋನ್‌ನ ಸಾಮಾನ್ಯ ಬೆಲೆ 8,499 ರೂ. ಗಳಿದ್ದು, ಇದನ್ನು ಆಫರ್‌ನಲ್ಲಿ 5,999 ರೂ.ಗಳಿಗೆ ಕೊಂಡುಕೊಳ್ಳಬಹುದಾಗಿದೆ. ಈ ಸ್ಮಾರ್ಟ್‌ಫೋನ್ ಟ್ರಿಪಲ್‌ ಕ್ಯಾಮೆರಾ ರಚನೆ ಪಡೆದಿದ್ದು, 5000 mAh ಬ್ಯಾಟರಿ ಸಾಮರ್ಥ್ಯವನ್ನು ತನ್ನದಾಗಿಸಿಕೊಂಡಿದೆ. ಇದು ಮೀಡಿಯಾ ಟೆಕ್ ಹಿಲಿಯೊ ಜಿ35 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. 3 GB RAM ಹಾಗೂ 32 GB ROM ಆಯ್ಕೆಯಲ್ಲಿ ಲಭ್ಯ ಇದ್ದು, ಇದರ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಎಸ್‌ಡಿ ಕಾರ್ಡ್‌ ಮೂಲಕ 512 GB ವರೆಗೆ ವಿಸ್ತರಿಸಿಕೊಳ್ಳಬಹುದಾಗಿದೆ.

Best Mobiles in India

English summary
One of the giant e-commerce stores Flipkart is wooing customers by offering huge discounts on the Big Billion Sale. Here we describe some Poco mobiles.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X