ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಸೇಲ್‌ನಲ್ಲಿ ಈ ನೂತನ ಫೋನ್‌ಗಳಿಗೂ ಡಿಸ್ಕೌಂಟ್‌!

|

ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಹಲವು ಆಫರ್‌ಗಳಿದ ಆನ್‌ಲೈನ್ ಗ್ರಾಹಕರ ಗಮನ ಸೆಳೆದಿದೆ. ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್‌ ಡೇಸ್‌ ಸೇಲ್‌ ಚಾಲ್ತಿಯಲ್ಲಿದ್ದು, ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ನೂತನ ಸ್ಮಾರ್ಟ್‌ಫೋನ್‌ಗಳಿಗೆ ಬೆಸ್ಟ್‌ ಆಫರ್‌ಗಳು ಲಭ್ಯ ಇವೆ. ಹಾಗೆಯೇ ಪ್ರತಿಷ್ಠಿತ ಸ್ಮಾರ್ಟ್‌ಫೋನ್‌ಗಳಿಗೂ ಭಾರೀ ಕೊಡುಗೆಗಳು ಇವೆ.

ಬಿಲಿಯನ್‌

ಹೌದು, ಫ್ಲಿಪ್‌ಕಾರ್ಟ್‌ನಲ್ಲಿ ಬಿಗ್ ಬಿಲಿಯನ್‌ ಡೇಸ್‌ ಸೇಲ್ ಇದೇ ಅಕ್ಟೋಬರ್‌ 16 ರಿಂದ ಶುರುವಾಗಿದೆ. ಈ ಸೇಲ್‌ನಲ್ಲಿ ಗ್ಯಾಡ್ಜೆಟ್ಸ್‌ ಉತ್ಪನ್ನಗಳಿಗೆ ಹೆಚ್ಚಿನ ರಿಯಾಯಿತಿ ಘೋಷಿಸಲಾಗಿದೆ. ಮುಖ್ಯವಾಗಿ ಸ್ಯಾಮ್‌ಸಂಗ್‌, ರೆಡ್ಮಿ, ರಿಯಲ್‌ಮಿ, ಒನ್‌ಪ್ಲಸ್‌ ಸಂಸ್ಥೆಯ ನೂತನ ಸ್ಮಾರ್ಟ್‌ಫೋನ್‌ಗಳಿಗೂ ಡಿಸ್ಕೌಂಟ್‌ಗಳು ನೀಡಲಾಗಿದೆ. ನೋ ಕಾಸ್ಟ್‌ ಇಎಮ್‌ಐ ಹಾಗೂ ಬ್ಯಾಂಕ್‌ಗಳ ಇನ್‌ಸ್ಟಂಟ್‌ ಆಫರ್ ಲಭ್ಯ. ಹಾಗಾದರೇ ಫ್ಲಿಪ್‌ಕಾರ್ಟ್‌ನ ಈ ಸೇಲ್‌ನಲ್ಲಿ ಯಾವೆಲ್ಲಾ ಫೋನ್‌ಗಳಿಗೆ ಡಿಸ್ಕೌಂಟ್‌ ಇರಲಿದೆ ಎನ್ನುವ ಬಗ್ಗೆ ತಿಳಿಸಲಾಗಿದೆ ಮುಂದೆ ಓದಿರಿ.

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಗ್ಯಾಲಕ್ಸಿ F41

ಸ್ಯಾಮ್‌ಸಂಗ್ ಸಂಸ್ಥೆಯ ಇತ್ತೀಚಿಗಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ಗೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಸುಮಾರು 1000ರೂ. ರಿಯಾಯಿತಿ ಲಭ್ಯವಾಗಲಿದೆ. ಇನ್ನು ಈ ಫೋನ್ 64MP + 8MP + 5MP ಕ್ಯಾಮೆರಾ ಸೆಟ್‌ಅಪ್‌ ಹೊಂದಿರುವುದು ಹಾಗೂ 6000mAh ಬ್ಯಾಟರಿ ಬ್ಯಾಕ್‌ಅಪ್‌ ಪ್ರಮುಖ ಹೈಲೈಟ್‌ಗಳಾಗಿವೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S20+

ಸ್ಯಾಮ್‌ಸಂಗ್ ಗ್ಯಾಲಕ್ಸಿ S20+

ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S20+ ಫೋನ್ 49,999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಫೋನ್ 12MP + 64MP + 12MP ಕ್ಯಾಮೆರಾ ಸೆನ್ಸಾರ್‌ ರಚನೆಯನ್ನು ಪಡೆದಿದೆ. ಹಾಗೂ 4500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದೆ.

ರಿಯಲ್‌ಮಿ 7

ರಿಯಲ್‌ಮಿ 7

ರಿಯಲ್‌ಮಿ ಸಂಸ್ಥೆಯ ನೂತನ ರಿಯಲ್‌ಮಿ 7 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 13,999ರೂ.ಗಳಿಗೆ ಲಭ್ಯವಿದೆ. ಈ ಫೋನ್ 64ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗೆಯೇ 90Hz ಸಾಮರ್ಥ್ಯದ ಡಿಸ್‌ಪ್ಲೇ ಅನ್ನು ಪಡೆದಿದೆ.

ಪೊಕೊ X3

ಪೊಕೊ X3

ಇತ್ತೀಚಿಗಿನ ಹೊಸ ಪೊಕೊ X3 ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಸೇಲ್‌ನಲ್ಲಿ ಡಿಸ್ಕೌಂಟ್‌ ದರದಲ್ಲಿ ಲಭ್ಯವಾಗಲಿದೆ. ಆರಂಭಿಕ ವೇರಿಯಂಟ್ 16,999ರೂ.ಗಳಿಗೆ ಸಿಗಲಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 732 ಪ್ರೊಸೆಸರ್‌ ಅನ್ನು ಹೊಂದಿದ್ದು, ಹಾಗೆಯೇ ಡಿಸ್‌ಪ್ಲೇಯು 120Hz ಸಾಮರ್ಥ್ಯದಲ್ಲಿದೆ.

ರಿಯಲ್‌ಮಿ 7i

ರಿಯಲ್‌ಮಿ 7i

ರಿಯಲ್‌ಮಿ ಸಂಸ್ಥೆಯ ನೂತನ ರಿಯಲ್‌ಮಿ 7i ಸ್ಮಾರ್ಟ್‌ಫೋನ್ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ 10,799ರೂ.ಗಳಿಗೆ ಲಭ್ಯವಿದೆ. ಈ ಫೋನ್ ಸಹ 64ಎಂಪಿ ಸೆನ್ಸಾರ್‌ ಸಾಮರ್ಥ್ಯದ ಕ್ಯಾಮೆರಾ ರಚನೆಯನ್ನು ಒಳಗೊಂಡಿದೆ. ಹಾಗೆಯೇ 90Hz ಸಾಮರ್ಥ್ಯದ ಡಿಸ್‌ಪ್ಲೇ ಅನ್ನು ಪಡೆದಿದೆ.

Most Read Articles
Best Mobiles in India

English summary
Flipkart Big Billion Days Sale: Big Discount For These Smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X