ನಿಮ್ಮ ಊಹೆಗಿಂತ ಕಡಿಮೆ ಬೆಲೆಗೆ ಆಪಲ್ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ ಲಭ್ಯ!

|

ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ಗೆ ಈಗಾಗಲೇ ದಿನಗಣನೇ ಶುರುವಾಗಿದೆ. ಈ ಸೇಲ್‌ನಲ್ಲಿ ಆಯ್ದ ಕೆಲವು ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಆಫರ್ ಲಭ್ಯವಾಗಲಿದ್ದು, ಸ್ಮಾರ್ಟ್‌ಫೋನ್‌ ಜೊತೆಗೆ ಕೆಲವು ಆಯ್ದ ಲ್ಯಾಪ್‌ಟಾಪ್‌ಗಳಿಗೂ ಆಕರ್ಷಕ ಕೊಡುಗೆ ದೊರೆಯಲಿದೆ. ಮುಖ್ಯವಾಗಿ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ನಲ್ಲಿ ಆಪಲ್‌ ಸಂಸ್ಥೆಯು ಆಪಲ್ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ ಖರೀದಿ ಮಾಡುವ ಗ್ರಾಹಕರಗೆ ಭರ್ಜರಿ ಸಿಹಿಸುದ್ದಿ ಇದೆ.

ಫ್ಲಿಪ್‌ಕಾರ್ಟ್‌

ಇ ಕಾಮರ್ಸ್‌ ದೈತ್ಯ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್‌ ಘೋಷಿಸಿರುವ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ ಇದೇ ಸೆಪ್ಟೆಂಬರ್ 23 ರಂದು ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ರ ವರೆಗೂ ಲೈವ್‌ ಇರಲಿದೆ. ಈ ಸೇಲ್‌ ನಲ್ಲಿ ಕೆಲವು ಆಯ್ದ ಐಫೋನ್‌ ಮಾಡೆಲ್‌ಗಳು ಹೆಚ್ಚಿನ ರಿಯಾಯಿತಿ ದರದಲ್ಲಿ ದೊರೆಯಲಿದ್ದು, ಜೊತೆಗೆ ಆಪಲ್ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ ಬೊಂಬಾಟ್‌ ಕೊಡುಗೆಯಲ್ಲಿ ಲಭ್ಯವಾಗಲಿದೆ.

ಲ್ಯಾಪ್‌ಟಾಪ್‌

ಆಪಲ್ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ 70,000ರೂ. ಗಳ ಒಳಗೆ ಲಭ್ಯವಾಗಲಿದ್ದು, ಇದು ಬ್ಯಾಂಕ್‌ ಕೊಡುಗೆ, ಎಕ್ಸ್‌ಚೇಂಜ್ ಆಫರ್‌ಗಳನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಟಿಪ್‌ಸ್ಟರ್ ಮುಕುಲ್ ಶರ್ಮಾ ಗುರುತಿಸಿರುವ ಫ್ಲಿಪ್‌ಕಾರ್ಟ್ ಪಟ್ಟಿಯ ಪ್ರಕಾರ, ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ ಬೆಲೆಯು 6X,490ರೂ. ಕ್ಕಿಂತ ಕಡಿಮೆ ಬೆಲೆಗೆ ಸಿಗಲಿದೆ. ಇದು ಬ್ಯಾಂಕ್‌ ಆಫರ್‌, ಎಕ್ಸ್‌ಚೇಂಜ್ ಕೊಡುಗೆಗಳನ್ನು ಒಳಗೊಂಡಿರಲಿದೆ. ಹಾಗಾದರೆ ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಆಪಲ್‌ ಮ್ಯಾಕ್‌ಬುಕ್‌ ಏರ್‌ M1

ಆಪಲ್‌ ಮ್ಯಾಕ್‌ಬುಕ್‌ ಏರ್‌ M1

ಆಪಲ್‌ ಮ್ಯಾಕ್‌ಬುಕ್‌ ಏರ್‌ M1 ಲ್ಯಾಪ್‌ಟಾಪ್‌ M1 ಚಿಪ್ ಅನ್ನು ಪ್ಯಾಕ್ ಮಾಡುತ್ತದೆ. ಇದು ಮ್ಯಾಕ್‌ಗಾಗಿ ಕಂಪನಿಯಿಂದ ಚಿಪ್‌ನಲ್ಲಿ ಮೊದಲ ಸಿಸ್ಟಮ್ ಆಗಿದೆ. M1 ಚಿಪ್ 8-ಕೋರ್ CPU ಮತ್ತು 8-ಕೋರ್ GPU ಜೊತೆಗೆ 8GB ಮೆಮೊರಿ ಮತ್ತು 256GB SSD ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ. ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ 2560 x 1600 ಪಿಕ್ಸೆಲ್‌ಗಳ ರೆಸಲ್ಯೂಶನ್ ಸಾಮರ್ಥ್ಯದ 13.3 ಇಂಚಿನ LED ಬ್ಯಾಕ್‌ಲಿಟ್ ಡಿಸ್‌ಪ್ಲೇ ಹೊಂದಿದೆ. ಇದು 400 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡುತ್ತದೆ.

ಐಡಿಯನ್ನು

ಇನ್ನು ಈ ಮ್ಯಾಕ್‌ಬುಕ್ ಏರ್ 720 p ಫೇಸ್‌ಟೈಮ್ HD ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ ಈ ಲ್ಯಾಪ್‌ಟಾಪ್‌ ಟಚ್ ಐಡಿಯನ್ನು ಕೂಡ ಹೊಂದಿದೆ. ಇದು ಪವರ್ ಆನ್ ಬಟನ್‌ಗೆ ಸಂಯೋಜಿಸಲ್ಪಟ್ಟಿದೆ. ಈ ಲ್ಯಾಪ್‌ಟಾಪ್ ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಬರುತ್ತದೆ. ಇದು Wi-Fi 6 ಅನ್ನು ಬೆಂಬಲಿಸುತ್ತದೆ ಮತ್ತು ಎರಡು Thunderbolt ಪೋರ್ಟ್‌ಗ ಳೊಂದಿಗೆ ಬರುತ್ತದೆ. ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್ ನ ಅತಿ ದೊಡ್ಡ ಹೈಲೈಟ್ ಎಂದರೆ ಇದು 18 ಗಂಟೆಗಳ ಬ್ಯಾಟರಿ ಬಾಳಿಕೆ ನೀಡಲಿದೆ.

1.29

ಆಪಲ್‌ನ ಮ್ಯಾಕ್‌ಬುಕ್ ಏರ್ M1 ಲ್ಯಾಪ್‌ಟಾಪ್‌ 304.1 x 212.4 x 10.9 ಸುತ್ತಳತೆ ಯನ್ನು ಪಡೆದಿದ್ದು, ಇದು 1.29 ಕಿ.ಲೋ ತೂಕವನ್ನು ಹೊಂದಿದೆ. ಹಾಗೆಯೇ ಈ ಲ್ಯಾಪ್‌ಟಾಪ್ 13.3 ಇಂಚಿನ ಡಿಸ್‌ಪ್ಲೇ ಇದ್ದು, ಈ ಡಿಸ್‌ಪ್ಲೇಯ ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 227 ppi ಆಗಿದೆ. ಜೊತೆಗೆ 400 nits ಬ್ರೈಟ್ನೆಸ್‌ ಸಪೋರ್ಟ್‌ ಪಡೆದಿದೆ. ಬಿಲ್ಟ್‌ ಇನ್‌ ಸ್ಪೀಕರ್ಸ್‌ ಇದ್ದು, 720p HD ಸಾಮರ್ಥ್ಯದ ವಿಡಿಯೋ ರೆಕಾರ್ಡಿಂಗ್ ಸಪೋರ್ಟ್‌ ಒಳಗೊಂಡಿದೆ.

Best Mobiles in India

English summary
Flipkart Big Billion Days sale: You Can Buy Apple MacBook Air M1 laptop at Offer Price.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X