ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಪೊಕೊ ಫೋನ್‌ಗಳಿಗೆ ಬಿಗ್‌ ಆಫರ್‌!

|

ಜನಪ್ರಿಯ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ತನ್ನ ಆನ್‌ಲೈನ್‌ ಗ್ರಾಹಕರಿಗಾಗಿ ಮತ್ತೊಮ್ಮೆ ಬಿಗ್‌ ದೀಪಾವಳಿ ಸೇಲ್‌ ಆಯೋಜಿಸಿದೆ. ಈ ಸೇಲ್‌ ನಾಳೆಯಿಂದ ಪ್ರಾರಂಭವಾಗಲಿದ್ದು, ಪ್ಲಸ್‌ ಸದ್ಯಸರಿಗೆ ಇಂದು ರಾತ್ರಿಯಿಂದಲೇ ಲೈವ್‌ ಆಗಲಿದೆ. ಇನ್ನು ಈ ಸೇಲ್‌ ಅಕ್ಟೋಬರ್ 28 ರಿಂದ ನವೆಂಬರ್ 3 ರವರೆಗೆ ನಡೆಯಲಿದ್ದು, ಆಯ್ದ ಗ್ಯಾಜೆಟ್ಸ್‌ಗಳ ಮೇಲೆ ಬಿಗ್‌ ಆಫರ್‌ ಘೋಷಿಸಲಾಗಿದೆ. ಇನ್ನು ಎಂದಿನಂತೆ ಫ್ಲಿಪ್‌ಕಾರ್ಟ್‌ ತನ್ನ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಬಿಗ್‌ ಡಿಸ್ಕೌಂಟ್‌ ಘೋಷಿಸಿದೆ. ಅದರಲ್ಲೂ ಪೊಕೊ ಕಂಪೆನಿಯ ಫೋನ್‌ಗಳ ಮೇಲೆ ಹೆಚ್ಚಿನ ರಿಯಾಯಿತಿ ನೀಡುವುದಾಗಿ ಹೇಳಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಪೊಕೊ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ಪಡೆದುಕೊಂಡಿದೆ. ಪೊಕೊ ಕಂಪೆನಿಯ ಜನಪ್ರಿಯ ಫೋನ್‌ಗಳಾದ ಪೊಕೊ X3 ಪ್ರೊ, ಪೊಕೊ M2 ಪ್ರೊ, ಪೊಕೊ C3 ಮೇಲೆ ಬಿಗ್‌ ಆಫರ್‌ ಘೋಷಿಸಲಾಗಿದೆ. ಇನ್ನು ಈ ಆಪರ್‌ಗಳಲ್ಲಿ ಕೆಲವು ಮಾದರಿಗಳಲ್ಲಿ "ಕೊನೆಯ ಬಾರಿಗೆ" ಆಫರ್‌ ಎಂದು ಹೇಳಲಾಗಿದೆ. ಹಾಗಾದ್ರೆ ಫ್ಲಿಪ್‌ಕಾರ್ಟ್‌ ಸೇಲ್‌ನಲ್ಲಿ ಪೊಕೊ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಮೇಲೆ ಏನೆಲ್ಲಾ ರಿಯಾಯಿತಿ ಸಿಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಪೊಕೊ X3 ಪ್ರೊ

ಪೊಕೊ X3 ಪ್ರೊ

ಪೊಕೊ X3 ಪ್ರೊ ಸ್ಮಾರ್ಟ್‌ಫೋನ್‌ ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ 7,000 ರೂಪಾಯಿಗಳ ಬೃಹತ್ ಮುಂಗಡ ರಿಯಾಯಿತಿ ಪಡದುಕೊಂಡಿದೆ. ಇದರಿಂದ 6GB RAM ಸಾಮರ್ಥ್ಯದ ಆಯ್ಕೆಯ ಮೂಲಬೆಲೆ 23,999ರೂ.ಆಗಿದ್ದು, 16,999 ರೂ.ಗೆ ಲಭ್ಯವಾಗಲಿದೆ. ಹಾಗೆಯೇ 8GB RAM ಆಯ್ಕೆಯು 18,999 ರೂಗಳಿಗೆ ಲಭ್ಯವಿರುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಮೇಲೆ ಮುಂಗಡ ರಿಯಾಯಿತಿ ಮಾತ್ರವಲ್ಲದೆ ಬ್ಯಾಂಕ್‌ ಆಫರ್‌ ಕೂಡ ಲಭ್ಯವಿದೆ. ಈ ಸ್ಮಾರ್ಟ್‌ಫೋನ್‌ 6.67-ಇಂಚಿನ ಫುಲ್‌-ಹೆಚ್‌ಡಿ + ಡಾಟ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಗನ್ 860 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್ 11 ನಲ್ಲಿ MIUI 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಈ ಫೋನ್‌ ಕ್ವಾಡ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಹೊಂದಿದೆ.

ಪೊಕೊ M2 ಪ್ರೊ

ಪೊಕೊ M2 ಪ್ರೊ

ಇನ್ನು ಈ ಸೇಲ್‌ನಲ್ಲಿ ಪೊಕೊ M2 ಪ್ರೊ ಸ್ಮಾರ್ಟ್‌ಫೋನ್‌ ಕೂಡ ಬಿಗ್‌ ಡಿಸ್ಕೌಂಟ್‌ ಪಡೆದಿದೆ. ಇದರಲ್ಲಿ 4GB RAM ಮತ್ತು 64GB ಸ್ಟೋರೇಜ್ ಆಯ್ಕೆಯು ಫ್ಲಿಪ್‌ಕಾರ್ಟ್ ಬಿಗ್ ದೀಪಾವಳಿ ಸೇಲ್‌ನಲ್ಲಿನ 10,799ರೂ.ಬೆಲೆಗೆ ಲಭ್ಯವಿರುತ್ತದೆ. ಇದರ ಮೂಲಬೆಲೆ 16,999 ರೂ. ಆಗಿದ್ದು, 6,000 ರೂ.ಗಿಂತ ಹೆಚ್ಚಿನ ರಿಯಾಯಿತಿಯನ್ನು ನೀಡುತ್ತದೆ. ಹಾಗೆಯೇ 6GB RAM ಆಯ್ಕೆಯು 11,749ರೂ.ಬೆಲೆಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ಫೋನ್‌6.67 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನ ಹೊಂದಿದೆ. ಈ ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಜೊತೆಗೆ ಪ್ರೊ ಕಲರ್ ಮೋಡ್, ಪ್ರೊ ವಿಡಿಯೋ ಮೋಡ್, ಮತ್ತು ರಾ ಮೋಡ್ ಸೇರಿದಂತೆ ಕ್ಯಾಮೆರಾ ಮೋಡ್‌ಗಳನ್ನ ಈ ಸ್ಮಾರ್ಟ್‌ಫೋನ್ ಒಳಗೊಂಡಿದೆ.

ಪೊಕೊ C3

ಪೊಕೊ C3

ಪೊಕೊ C3 ಸ್ಮಾರ್ಟ್‌ಫೋನ್‌ 3GB RAM ಮತ್ತು 32GB ಸ್ಟೋರೇಜ್‌ ಸಾಮರ್ಥ್ಯದ ಆಯ್ಕೆಯು ದೀಪಾವಳಿ ಸೇಲ್‌ನಲ್ಲಿ 6,749 ರೂ.ಗಳಿಗೆ ಲಭ್ಯವಾಗಲಿದೆ. ಇದರ ಮೂಲ ಬೆಲೆ 9,999ರೂ.ಆಗಿದ್ದು, 3,000ರೂ. ಕ್ಕಿಂತ ಹೆಚ್ಚಿನ ರಿಯಾಯಿತಿಯನ್ನು ಪಡೆದುಕೊಂಡಿದೆ. ಇನ್ನು ಪೊಕೊ C3 ಸ್ಮಾರ್ಟ್‌ಫೋನ್‌ 6.53 ಇಂಚಿನ ಎಲ್‌ಸಿಡಿ ಡಾಟ್ ಡ್ರಾಪ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G35 SoC ಪ್ರೊಸೆಸರ್ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಹೊಂದಿದೆ.ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದು 10W ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ದೀಪಾವಳಿ ಸೇಲ್‌ನಲ್ಲಿ ಪೊಕೊ M3 ಮತ್ತು ಪೊಕೊ M3ಪ್ರೊ ಸ್ಮಾರ್ಟ್‌ಫೋನ್‌ ಕ್ರಮವಾಗಿ 9,899ರೂ ಮತ್ತು 13,249 ರೂ.ಗಳಿಗೆ ಲಭ್ಯವಾಗಲಿದೆ.

Most Read Articles
Best Mobiles in India

English summary
Flipkart Big Diwali Sale: discount of up to Rs 7,000 on poco smartphones.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X