ಹೊಸ ಐಫೋನ್ SE 2020 ಖರೀದಿಸಲು ಇದಕ್ಕಿಂತ ಒಳ್ಳೆಯ ಆಫರ್ ಬೇಕೆ?

|

ಪ್ರಸ್ತುತ ಸ್ಮಾರ್ಟ್‌ಫೋನ್ ಪ್ರತಿಯೊಬ್ಬರ ಅತೀ ಅಗತ್ಯವಾದ ಡಿವೈಸ್‌ ಆಗಿದೆ. ಆದ್ರೆ ಕೆಲವರು ಆಂಡ್ರಾಯ್ಡ್‌ ಫೋನ್‌ಗಳನ್ನು ಖರೀದಿಸಿಲು ಇಚ್ಚಿಸಿದರೇ, ಮತ್ತೆ ಕೆಲವರು ದುಬಾರಿ ಬೆಲೆಯ ಆಪಲ್ ಐಫೋನ್‌ ಖರೀದಿಸಲು ಮುಂದಾಗುತ್ತಾರೆ. ಹಾಗೇನಾದರೂ ನಿಮಗೂ ಇತ್ತೀಚಿನ ಹೊಸ ಐಫೋನ್‌ ಖರೀದಿಸುವ ಆಲೋಚನೆ ಇದ್ದರೇ, ಇದೇ ಆಗಷ್ಟ್ 10ರ ಒಳಗೆ ಖರೀದಿಸಿಬಿಡಿ.

ಕಾಮರ್ಸ್‌

ಹೌದು, ಜನಪ್ರಿಯ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್ ಫ್ಲಿಪ್‌ಕಾರ್ಟ್ ಇದೀಗ ಬಿಗ್ ಸೇವಿಂಗ್ ಡೇಸ್‌ ಸೇಲ್ ಮೇಳವನ್ನು ಆಯೋಜಿಸಿದೆ. ಈ ಸೇಲ್ ಮೇಳವು ಆಗಸ್ಟ್ 6ರಿಂದ ಶುರುವಾಗಿದ್ದು, ಇದೇ ಆಗಸ್ಟ್ 10ರ ವರೆಗೂ ಚಾಲ್ತಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು ಸೇರಿದಂತೆ ಕೆಲವು ಐಫೋನ್‌ಗಳಿಗೂ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಹಾಗೆಯೇ ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಆಪಲ್‌ ಐಫೋನ್‌ SE 2020 ಸಹ ಡಿಸ್ಕೌಂಟ್‌ನಲ್ಲಿ ಲಭ್ಯ.

64GB ವೇರಿಯಂಟ್‌

ಐಫೋನ್‌ SE 2020 64GB ವೇರಿಯಂಟ್‌ ಫೋನ್ ಆಫರ್‌ನಲ್ಲಿ 36,999ರೂ.ಗಳಿಗೆ ಲಭ್ಯವಾಗಲಿದೆ. ಹಾಗೆಯೇ 128GB ವೇರಿಯಂಟ್‌ ಫೋನ್ 41,999ರೂ. ಗಳಿಗೆ ಮತ್ತು 256GB ವೇರಿಯಂಟ್‌ 51,999ರೂ.ಗಳಿಗೆ ಲಭ್ಯ. ಜೊತೆಗೆ ಸುಮಾರು 13,450ರೂ. ವರೆಗೂ ಎಕ್ಸ್‌ಚೇಂಜ್ ಆಫರ್‌ ಸಹ ಲಭ್ಯವಾಗಲಿದೆ. ಇನ್ನು ಸಿಟಿ ಬ್ಯಾಕ್ ಹಾಗೂ ಐಸಿಐಸಿಐ ಬ್ಯಾಂಕ್ ಕಾರ್ಡ್‌ ಬಳಸಿ ಖರೀದಿಸಿದರೇ ಶೇ.10% ಇನ್‌ಸ್ಟಂಟ್ ಡಿಸ್ಕೌಂಟ್ ಲಭ್ಯವಾಗಲಿದೆ. ಹಾಗಾದರೇ ಐಫೋನ್‌ SE 2020 ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೋಣ.

ಡಿಸ್‌ಪ್ಲೇ ರಚನೆ ಹೇಗಿದೆ

ಡಿಸ್‌ಪ್ಲೇ ರಚನೆ ಹೇಗಿದೆ

ಆಪಲ್ ಐಫೋನ್ SE(2020) 4.7-ಇಂಚಿನ ರೆಟಿನಾ ಎಚ್‌ಡಿ ಮಾದರಿಯ ಐಪಿಎಸ್ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 750x1334 ಪಿಕ್ಸೆಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ವೈಟ್ ಬ್ಯಾಲೆನ್ಸ್ ಹೊಂದಿಸಲು ಟ್ರೂ ಟೋನ್ ಟೆಕ್ ಹೊಂದಿದೆ. ಇನ್ನು ಈ ಡಿಸ್‌ಪ್ಲೇಯು 625 ನಿಟ್‌ಗಳ ಗರಿಷ್ಠ ಬ್ರೈಟ್‌ನೆಶ್‌ ಅನ್ನು ನೀಡಲಿದೆ.

ಪ್ರೊಸೆಸರ್ ಕಾರ್ಯವೈಖರಿ

ಪ್ರೊಸೆಸರ್ ಕಾರ್ಯವೈಖರಿ

ಐಫೋನ್ SE(2020) ಆಪಲ್‌ ಕಂಪೆನಿ A 13 ಬಯೋನಿಕ್ SoC ಪ್ರೊಸೆಸರ್‌ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಲಿದೆ. ಪ್ರೊಸೆಸರ್‌ಗೆ ಪೂರಕವಾಗಿ ಐಒಎಸ್‌ 13 ಬೆಂಬಲ ನೀಡಲಿದೆ. ಇನ್ನು ಈ ಐಫೋನ್ 64GB, 128GB, ಮತ್ತು 256GB ಇಂಟರ್‌ ಸ್ಟೋರೇಜ್‌ ಸಾಮರ್ಥ್ಯ ವೇರಿಯೆಂಟ್‌ ಆಯ್ಕೆಯಲ್ಲಿ ಲಬ್ಯವಿದೆ. ಮೆಮೊರಿ ಕಾರ್ಡ್‌ ಮೂಲಕ ಸಂಗ್ರಹ ಸಾಮರ್ಥ್ಯ ವಿಸ್ತರಿಸಲು ಯಾವುದೇ ಅವಕಾಶವನ್ನ ನೀಡಿಲ್ಲ.

ಕ್ಯಾಮೆರಾ ವಿನ್ಯಾಸ

ಕ್ಯಾಮೆರಾ ವಿನ್ಯಾಸ

ಐಫೋನ್ SE(2020) ಐಫೋನ್ ರಿಯರ್‌ ಸೆಟ್‌ಅಪ್‌ನಲ್ಲಿ ಸಿಂಗಲ್‌ ಕ್ಯಾಮೆರಾ ಹೊಂದಿದ್ದು, 12 ಮೆಗಾಪಿಕ್ಸೆಲ್ ಕ್ಯಾಮೆರಾ ಸೆನ್ಸಾರ್ ಒಳಗೊಂಡಿದೆ. ಜೊತೆಗೆ 7 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. 60kps ವರೆಗೆ 4 ಕೆ ವಿಡಿಯೋ ರೆಕಾರ್ಡಿಂಗ್ ಮತ್ತು ಫೋಟೋಗಳಿಗಾಗಿ ಸ್ಮಾರ್ಟ್ HDR ಆಯ್ಕೆ ಪಡೆದಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಆಪಲ್‌ ಐಫೋನ್‌SE(2020) ಉತ್ತಮ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G VOLTE, ವೈ-ಫೈ 802.11ax, ವೈ-ಫೈ ಕಾಲ್‌, ಎನ್‌ಎಫ್‌ಸಿ, ಬ್ಲೂಟೂತ್ ವಿ 5.0, 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಅಕ್ಸೆಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಬಾರೋಮೀಟರ್, ಮೂರು-ಆಕ್ಸಿಸ್ ಗೈರೊಸ್ಕೋಪ್ ಹೊಂದಿವೆ.

Best Mobiles in India

English summary
iPhone SE is available at a discounted price during the Big Saving Days sale. As per the listings, you can grab one at Rs 36,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X