Just In
Don't Miss
- Sports
ಐಎಸ್ಎಲ್: ಗೋವಾಕ್ಕೆ ಫೈನಲ್ ಪಂಚ್ ನೀಡುವ ಗುರಿಯಲ್ಲಿ ಮುಂಬೈ
- News
'ಹಿಜಾಬ್' ಕುರಿತು ಟ್ವೀಟ್: ಪಾಕ್ನಲ್ಲಿ ಚೀನಾ ಅಧಿಕಾರಿ ವಿರುದ್ಧ ಕಿಡಿ
- Finance
ಮಾರ್ಚ್ 08ರಂದು ದೇಶದ ಪ್ರಮುಖ ನಗರಗಳ ಪೆಟ್ರೋಲ್-ಡೀಸೆಲ್ ದರ
- Lifestyle
ದಿನ ಭವಿಷ್ಯ: ನಿಮ್ಮ ರಾಶಿ ಸೋಮವಾರ ಹೇಗಿರಲಿದೆ ನೋಡಿ
- Movies
ಬಿಗ್ಬಾಸ್: ಒಂದು ವಾರದಲ್ಲಿ ಪ್ರಶಾಂತ್ ಸಂಬರ್ಗಿ ಬದಲಾಯಿಸಿರುವ ಬಟ್ಟೆ ಎಷ್ಟು ಗೊತ್ತೆ?
- Automobiles
ಅನಾವರಣವಾಯ್ತು ಫೋಕ್ಸ್ವ್ಯಾಗನ್ ಗಾಲ್ಫ್ ಜಿಟಿಐ ಕ್ಲಬ್ಸ್ಪೋರ್ಟ್ 45 ಕಾರು
- Education
Mandya District Court Recruitment 2021: 10 ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Flipkart Big Saving Days sale: ಈ ಸ್ಮಾರ್ಟ್‌ಫೋನ್‌ಗಳಿಗೆ ವಿಶೇಷ ರಿಯಾಯಿತಿ!
ಇ-ಕಾಮರ್ಸ್ ದೈತ್ಯ ಫ್ಲಿಪ್‌ಕಾರ್ಟ್ ವಿಶೇಷ ದಿನಗಳಂದೂ ವಿಶೇಷ ಸೇಲ್‌ಗಳನ್ನ ಆಯೋಜಿಸುತ್ತಲೇ ಬಂದಿದೆ. ಆನ್‌ಲೈನ್ ಗ್ರಾಹಕರನ್ನು ಆಕರ್ಷಿಸುವ ಸಲುವಾಗಿ ವಿಶೇಷ ರಿಯಾಯಿತಿ ಸೇಲ್‌ಗಳನ್ನು ನಡೆಸುತ್ತಿದೆ. ಸದ್ಯ ಇದೀಗ ಗಣರಾಜ್ಯೋತ್ಸವದ ಮುನ್ನ ಫ್ಲಿಪ್‌ಕಾರ್ಟ್ ತನ್ನ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ನಡೆಸಲಿದೆ. ಈ ಸೇಲ್ ಅನ್ನು ಇದೇ ಜನವರಿ 20 ರಿಂದ ಪ್ರಾರಂಭಿಸಲಿದೆ. ಆದಾಗ್ಯೂ, ಫ್ಲಿಪ್‌ಕಾರ್ಟ್ ಪ್ಲಸ್ ಚಂದಾದಾರರು ಇತರರಿಗೆ ಒಂದು ದಿನ ಮೊದಲು ಮಾರಾಟವನ್ನು ಪ್ರವೇಶಿಸಲು ಸಾಧ್ಯವಾಗುತ್ತದೆ. ಫ್ಲಿಪ್ಕಾರ್ಟ್ ಪ್ಲಸ್ ಸದಸ್ಯರಿಗೆ ಜನವರಿ 19 ರಂದು ಬೆಳಿಗ್ಗೆ 12 ಗಂಟೆಗೆ ಮಾರಾಟ ಪ್ರಾರಂಭವಾಗಲಿದೆ.

ಹೌದು, ಜನಪ್ರಿಯ ಇ-ಕಾಮರ್ಸ್ ಸೈಟ್ ಫ್ಲಿಪ್‌ಕಾರ್ಟ್ ರಿಪಬ್ಲಿಕ್ ಡೇ ಪ್ರಯುಕ್ತ ವಿಶೇಷ ಬಿಗ್ ಸೇವಿಂಗ್ ಡೇಸ್ ಸೇಲ್ ಅನ್ನು ಜನವರಿ 20 ರಿಂದ ಪ್ರಾರಂಭಿಸಲಿದೆ. ಇನ್ನು ಈ ಸೇಲ್ ಸಮಯದಲ್ಲಿ ಅನೇಕ ರಿಯಾಯಿತಿಯನ್ನು ನೀಡಲಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್‌ಗಳು ಮತ್ತು ಇಎಂಐ ವಹಿವಾಟುಗಳನ್ನು ಬಳಸುವ ಖರೀದಿದಾರರು ತಮ್ಮ ಖರೀದಿಯ ಮೇಲೆ 10% ರಿಯಾಯಿತಿ ಪಡೆಯಲು ಸಾಧ್ಯವಾಗುತ್ತದೆ. ಇನ್ನು ಸೇಲ್‌ನಲ್ಲಿ, ಖರೀದಿದಾರರು ಸ್ಮಾರ್ಟ್‌ಫೋನ್‌ಗಳು, ಎಲೆಕ್ಟ್ರಾನಿಕ್ಸ್, ವಸ್ತುಗಳು, ಸ್ಮಾರ್ಟ್ ಟಿವಿಗಳು ಮತ್ತು ಫ್ಯಾಷನ್ ಉತ್ಪನ್ನಗಳಿಂದ ಹಿಡಿದು ವಿವಿಧ ಉತ್ಪನ್ನಗಳನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗಾದ್ರೆ ಈ ಸೇಲ್‌ನಲ್ಲಿ ಯಾವೆಲ್ಲಾ ಸ್ಮಾರ್ಟ್‌ಫೋನ್‌ಗಳು ರಿಯಾಯಿತಿ ದರದಲ್ಲಿ ಲಭ್ಯವಾಗಲಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ರಿಯಲ್‌ಮಿ
ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭಾರಿ ರಿಯಾಯಿತಿಯನ್ನು ಘೋಷಿಸಲಾಗಿದೆ. ಸದ್ಯ ಈ ಸೇಲ್‌ನಲ್ಲಿ ರಿಯಲ್‌ಮಿ C12, 3GB RAM ಮತ್ತು 32GB ಇಂಟರ್ ಸ್ಟೋರೇಜ್ ಸಾಮರ್ಥ್ಯದ ಸ್ಮಾರ್ಟ್‌ಫೋನ್ 12, 8,499 ಬೆಲೆಯಲ್ಲಿ ಮಾರಾಟವಾಗಲಿದೆ. ಇನ್ನು ರಿಯಲ್‌ಮಿ 7 ಸ್ಮಾರ್ಟ್‌ಫೋನ್ 13,999 ಬೆಲೆಯಲ್ಲಿ ಪ್ರಾರಂಭವಾಗಲಿವೆ. ಇದಲ್ಲದೆ ರಿಯಲ್‌ಮಿ 7 ಪ್ರೊ, 18,999 ಬೆಲೆಯಲ್ಲಿ ಮಾರಾಟವಾಗಲಿದೆ. ಈ ಫೋನ್ ಸಮೋಲ್ಡ್ ಡಿಸ್‌ಪ್ಲೇ ಹೊಂದಿದೆ ಮತ್ತು 65W ವೇಗದ ಚಾರ್ಜಿಂಗ್ ಅನ್ನು ಸಹ ಬೆಂಬಲಿಸಲಿದೆ. ಜೊತೆಗೆ 90Hz ರಿಫ್ರೆಶ್ ರೇಟ್ ಮತ್ತು 30W ವೇಗದ ಚಾರ್ಜಿಂಗ್ ಹೊಂದಿರುವ ರಿಯಲ್‌ಮಿ 6 ಸ್ಮಾರ್ಟ್‌ಫೋನ್ 13,999 ಬೆಲೆಯಲ್ಲಿ ಮಾರಾಟವಾಗಲಿದೆ.

ಐಫೋನ್ 11 ತನ್ನ ಮೂಲ ಬೆಲೆ 54,900 ರಿಂದ, 48,999 ಬೆಲೆಯಲ್ಲಿ ಮಾರಾಟವಾಗಲಿದೆ. A 13 ಬಯೋನಿಕ್ ಚಿಪ್‌ಸೆಟ್ ಹೊಂದಿರುವ ಐಫೋನ್ SE , ರೂ 27,999 ಬೆಲೆಯಲ್ಲಿ ಲಭ್ಯವಿರುತ್ತದೆ ಮತ್ತು ಇದು ಎಚ್‌ಡಿಎಫ್‌ಸಿ ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ 4000 ರೂ. ರಿಯಾಯಿತಿಯನ್ನು ಸಹ ನೀಡುತ್ತದೆ. ಇನ್ನು ಐಫೋನ್ XR ರಿಯಾಯಿತಿ ಮತ್ತು ಬ್ಯಾಂಕ್ ಕಾರ್ಡ್ ಕೊಡುಗೆಯನ್ನು ಸಹ ಪಡೆಯಲಿದೆ.

ಶಿಯೋಮಿ
ಶಿಯೋಮಿ MI10T ಅನ್ನು ಕೇವಲ 26,999 ರೂ, ಕಡಿಮೆ ಬೆಲೆಗೆ ಖರೀದಿಸಬಹುದು. ಈ ಬೆಲೆಯಲ್ಲಿ ಎಕ್ಸಚೇಂಜ್ ಆಫರ್ ರಿಯಾಯಿತಿ ಮತ್ತು ಬ್ಯಾಂಕ್ ಆಫರ್ ಕೂಡ ಸೇರಿದೆ.

ಸ್ಯಾಮ್‌ಸಂಗ್
ಇನ್ನು ಈ ಸೇಲ್‌ನಲ್ಲಿ 64MP ಕ್ಯಾಮೆರಾ ಲೆನ್ಸ್ ಹೊಂದಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ F41, 13,999 ರೂ. ಕ್ಕೆ ಲಭ್ಯವಿರುತ್ತದೆ. ಜೊತೆಗೆ ಪ್ರೀ ಆರ್ಡರ್ ಮಾಡಿದರೆ 1000 ರೂ.ರಿಯಾಯಿತಿಯನ್ನು ಸಹ ಬೆಲೆ ಒಳಗೊಂಡಿದೆ. ಇದಲ್ಲದೆ ಸ್ಯಾಮ್‌ಸಂಗ್ S20 + ಅನ್ನು, 44,999 ಬೆಲೆಯಲ್ಲಿ ಖರೀದಿಸಬಹುದು. ಅಲ್ಲದೆ ಸ್ಯಾಮ್‌ಸಂಗ್ ನೋಟ್ 10+ ರಿಯಾಯಿತಿ ದರದಲ್ಲಿ, 54,999 ಕ್ಕೆ ಮಾರಾಟವಾಗಲಿದೆ.

ಮೊಟೊರೊಲಾ
ಮೊಟೊರೊಲಾದ ಮೋಟೋ G 5G ಸ್ಮಾರ್ಟ್‌ಫೋನ್ 18,999 ರಿಯಾಯಿತಿ ದರದಲ್ಲಿ ಲಭ್ಯವಿದೆ. ಹೊಸ ಸ್ನಾಪ್‌ಡ್ರಾಗನ್ 750G ಹೊಂದಿದೆ. 6GB RAM ಹೊಂದಿರುವ ಮೊಟೊರೊಲಾ ಒನ್ ಫ್ಯೂಷನ್ + ಅನ್ನು, 15,999 ಬೆಲೆಯಲ್ಲಿ ಖರೀದಿಸಬಹುದು. ಈ ಸಾಧನವು ಸ್ನಾಪ್‌ಡ್ರಾಗನ್ 730G ಯಿಂದ ನಿಯಂತ್ರಿಸಲ್ಪಡುತ್ತದೆ ಮತ್ತು ಪಾಪ್-ಅಪ್ ಕ್ಯಾಮೆರಾ ಮತ್ತು 64MP ಪ್ರೈಮರಿ ಲೆನ್ಸ್ ಅನ್ನು ಸಹ ಹೊಂದಿದೆ.
-
92,999
-
17,999
-
39,999
-
29,400
-
38,990
-
29,999
-
16,999
-
23,999
-
18,170
-
21,900
-
14,999
-
17,999
-
42,099
-
16,999
-
23,999
-
29,495
-
18,580
-
64,900
-
34,980
-
45,900
-
17,999
-
54,153
-
7,000
-
13,999
-
38,999
-
29,999
-
20,599
-
43,250
-
32,440
-
16,190