ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಡೇಟ್‌ ಫಿಕ್ಸ್‌! 70% ಡಿಸ್ಕೌಂಟ್‌ ಗ್ಯಾರಂಟಿ!

|

ಭಾರತದಲ್ಲಿ ಆನ್‌ಲೈನ್‌ ಶಾಪಿಂಗ್‌ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಆನ್‌ಲೈನ್‌ ಶಾಪಿಂಗ್‌ ಪ್ಲಾಟ್‌ಫಾರ್ಮ್‌ಗಳು ನೀಡುವ ವಿಶೇಷ ರಿಯಾಯಿತಿಗಳೇ ಇದಕ್ಕೆ ಕಾರಣ ಎನ್ನಬಹುದು. ಇದಲ್ಲದೆ ಇ-ಕಾಮರ್ಸ್‌ ಪ್ಲಾಟ್‌ಫಾರ್ಮ್‌ಗಳು ವಿಶೇಷ ದಿನಗಳಲ್ಲಿ ನಡೆಸುವ ಡಿಸ್ಕೌಂಟ್‌ ಸೇಲ್‌ಗಳು ಕೂಡ ಆನ್‌ಲೈನ್ ಶಾಪಿಂಗ್‌ ಪ್ರಿಯರನ್ನು ಸೆಳೆಯುತ್ತಿವೆ. ಸದ್ಯ ಇದೀಗ ಜನಪ್ರಿಯ ಇ-ಕಾಮರ್ಸ್‌ ತಾಣ ಎನಿಸಿಕೊಂಡಿರುವ ಫ್ಲಿಪ್‌ಕಾರ್ಟ್‌ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದ ಪ್ರಯುಕ್ತ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಆಯೋಜಿಸಿದೆ.

ಫ್ಲಿಪ್‌ಕಾರ್ಟ್‌

ಹೌದು, ಫ್ಲಿಪ್‌ಕಾರ್ಟ್‌ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೂ ಕೆಲವೇ ದಿನಗಳ ಮೊದಲು ಬಿಗ್ ಸೇವಿಂಗ್ ಡೇಸ್ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ ಇದೇ ಆಗಸ್ಟ್ 6 ರಂದು ಪ್ರಾರಂಭವಾಗಲಿದ್ದು, ಆಗಸ್ಟ್ 10 ರವರೆಗೆ ಮುಂದುವರಿಯಲಿದೆ. ಇದೇ ಸಮಯದಲ್ಲಿ ಇ-ಕಾಮರ್ಸ್‌ ದೈತ್ಯ ಎನಿಸಿಕೊಂಡಿರುವ ಅಮೆಜಾನ್‌ ಕೂಡ ತನ್ನ ಗ್ರೇಟ್‌ ಫ್ರೀಡಂ ಫೆಸ್ಟಿವಲ್ ಸೇಲ್ ಅನ್ನು ಆಗಸ್ಟ್ 6 ರಂದು ಆಯೋಜಿಸುವುದಾಗಿ ಬಹಿರಂಗಪಡಿಸಿದೆ. ಆದರಿಂದ ಎರಡು ಇ-ಕಾಮರ್ಸ್‌ ಪ್ಲಾಟ್‌ಪಾರ್ಮ್‌ಗಳು ಒಂದೇ ಟೈಂನಲ್ಲಿ ವಿಶೇಷ ಸೇಲ್‌ ಮೂಲಕ ಪೈಪೋಟಿ ನಡೆಸುತ್ತಿವೆ.

ಫ್ಲಿಪ್‌ಕಾರ್ಟ್‌

ಇನ್ನು ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಹಲವು ಬಿಗ್‌ ಡೀಲ್‌ಗಳನ್ನು ಪ್ರಕಟಿಸಲಾಗಿದೆ. ಎಲೆಕ್ಟ್ರಾನಿಕ್ಸ್‌ ಡಿವೈಸ್‌ಗಳ ಮೇಲೆ ಹೆಚ್ಚಿನ ರಿಯಾಯಿತಿಯನ್ನು ನಿರೀಕ್ಷಿಸಬಹುದಾಗಿದೆ. ಈ ಸೇಲ್‌ ಸಮಯದಲ್ಲಿ ICICI ಮತ್ತು Kotak ಬ್ಯಾಂಕ್ ಕಾರ್ಡ್‌ಗಳ ಮೇಲೆ 10% ತ್ವರಿತ ರಿಯಾಯಿತಿಯನ್ನು ನೀಡುವುದಾಗಿ ಹೇಳಲಾಗಿದೆ. ಹಾಗೆಯೇ ಟೆಲಿವಿಷನ್‌ಗಳು ಮತ್ತು ಉಪಕರಣಗಳ ಮೇಲೆ 75% ರಿಯಾಯಿತಿ ಇರುತ್ತದೆ ಎಂದು ಫ್ಲಿಪ್‌ಕಾರ್ಟ್ ಲಿಸ್ಟ್‌ನಲ್ಲಿ ಹೇಳಲಾಗಿದೆ. ಈ ಆಫರ್‌ ಸ್ಯಾಮ್‌ಸಂಗ್‌ ರಿಯಲ್‌ಮಿ ಮತ್ತು ಶಿಯೋಮಿ ಬ್ರ್ಯಾಂಡ್‌ಗಳ ಸ್ಮಾರ್ಟ್‌ಟಿವಿಗಳಿಗೆ ಲಭ್ಯವಾಗಲಿದೆ ಎನ್ನಲಾಗಿದೆ.

ಫ್ಲಿಪ್‌ಕಾರ್ಟ್‌

ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಕಂಡೀಷನರ್‌ಗಳ ಮೇಲೆ 55% ರಷ್ಟು ರಿಯಾಯಿತಿಯನ್ನು ನೀಡಲಾಗ್ತಿದೆ. ಮೈಕ್ರೋವೇವ್‌ಗಳ ಮೇಲೆ 45% ರಷ್ಟು ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೆ ಏರ್ ಕಂಡೀಷನರ್‌ಗಳಲ್ಲಿ (AC) ಶೇಕಡಾ 55 ರಷ್ಟು ರಿಯಾಯಿತಿಯನ್ನು ನೋಡಬಹುದು. ಇನ್ನು ಸ್ಮಾರ್ಟ್ ವಾಚ್ ಖರೀದಿಸುವವರು ಕೂಡ ಈ ಸೇಲ್‌ ವಿಶೇಷ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದ್ದು, 10 ರಿಂದ 70% ಡಿಸ್ಕೌಂಟ್‌ ದೊರೆಯಲಿದೆ ಎಂದು ಫ್ಲಿಪ್‌ಕಾರ್ಟ್ ಹೇಳಿಕೊಂಡಿದೆ.

ಫ್ಲಿಪ್‌ಕಾರ್ಟ್‌

ಇದರೊಂದಿಗೆ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ನಲ್ಲಿ ಗ್ರಾಹಕರು ಆಪಲ್‌, ವಿವೋ, ಒಪ್ಪೋ, ಮೊಟೊರೊಲಾ ಕಂಪೆನಿಯ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ವಿಶೇಷ ಡಿಸ್ಕೌಂಟ್‌ ಪಡೆದುಕೊಳ್ಳಬಹುದಾಗಿದೆ. ಅಲ್ಲದೆ ಈ ಸೇಲ್‌ನಲ್ಲಿ ಐಫೋನ್ ಖರೀದಿಸುವ ಗ್ರಾಹಕರಿಗೆ ಬಿಗ್‌ ಆಫರ್‌ ದೊರೆಯಲಿದೆ. ಇದಲ್ಲದೆ ಎಂದಿನಂತೆ ಫ್ಲಿಪ್‌ಕಾರ್ಟ್‌ನ ಬಿಗ್ ಸೇವಿಂಗ್ ಡೇಸ್ ಮಾರಾಟದ ಸಮಯದಲ್ಲಿ 12AM, 8AM ಮತ್ತು 4PM ನಲ್ಲಿ "ಕ್ರೇಜಿ ಡೀಲ್‌ಗಳು" ಸಹ ಇರುತ್ತವೆ ಎಂದು ಹೇಳಲಾಗಿದೆ. ಆದರೆ ಫ್ಲಿಪ್‌ಕಾರ್ಟ್‌ ಇನ್ನು ಕೂಡ ವಿವಿಧ ಉತ್ಪನ್ನಗಳ ಮೇಲೆ ನಿಖರವಾದ ಡೀಲ್‌ಗಳು ಮತ್ತು ಕೊಡುಗೆಗಳನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದರೆ ಬಿಡುಗಡೆಗೂ ಮುನ್ನ ಕೆಲವು ಡೀಲ್‌ಗಳನ್ನು ಬಹಿರಂಗಪಡಿಸುವ ನಿರೀಕ್ಷೆಯಿದೆ.

ಅಮೆಜಾನ್‌

ಇನ್ನು ಇದೇ ಸಂದರ್ಭದಲ್ಲಿ ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ ಕೂಡ ನಡೆಯಲಿದೆ. ಈ ಸೇಲ್‌ ಭಾರತದಲ್ಲಿ ಇದೇ ಆಗಸ್ಟ್ 6 ರಿಂದ ಆಗಸ್ಟ್ 10 ರ ನಡುವೆ ನಡೆಯಲಿದೆ. ಇನ್ನು ಈ ಸೇಲ್‌ ವಿವಿಧ ವಿಭಾಗಗಳಿಂದ ಹಲವಾರು ಉತ್ಪನ್ನಗಳ ಮೇಲೆ ರಿಯಾಯಿತಿಗಳನ್ನು ನೀಡಲಿದೆ. ಅಲ್ಲದೆ ಈ ಸೇಲ್‌ ಸಮಯದಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗುವ ಸಾಧ್ಯತೆ ಕೂಡ ಇದೆ. ಅಲ್ಲದೆ ಹೊಸದಾಗಿ ಬಿಡುಗಡೆ ಆಗಿರುವ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್‌ಟಿವಿಗಳು ಮತ್ತು ಇತರ ಎಲೆಕ್ಟ್ರಾನಿಕ್ಸ್‌ ಪ್ರಾಡಕ್ಟ್‌ಗಳ ಮೇಲೆ ರಿಯಾಯಿತಿಗಳನ್ನು ಒಳಗೊಂಡಿದೆ.

ಅಮೆಜಾನ್

ಅಮೆಜಾನ್ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಪರಿಕರಗಳ ಮೇಲೆ 40% ರಷ್ಟು ರಿಯಾಯಿತಿಯನ್ನು ನೀಡಲಿದೆ. ಇದರಲ್ಲಿ ಕೆಲವು ಎಂಟ್ರಿ ಲೆವೆಲ್‌ ಸ್ಮಾರ್ಟ್‌ಫೋನ್‌ಗಳು ನಿಮಗೆ ಕೇವಲ 6,599 ರೂ.ಗಳಿಗೆ ಲಭ್ಯವಾಗಲಿವೆ. ಇದಲ್ಲದೆ ಈ ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ ಹಲವು ಹೊಸ ಸ್ಮಾರ್ಟ್‌ಫೋನ್‌ಗಳು ಲಾಂಚ್‌ ಆಗಲಿವೆ. ಅಲ್ಲದೆ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಮಾರಾಟಕ್ಕೆ ಬರಲಿವೆ. ಇದರಲ್ಲಿ ಒನ್‌ಪ್ಲಸ್‌ 10T ಮತ್ತು ಐಕ್ಯೂ 9T ಸ್ಮಾರ್ಟ್‌ಫೋನ್‌ಗಳು ಸೇರಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಇದೇ ಆಗಸ್ಟ್‌ 3 ರಂದು ಬಿಡುಗಡೆಯಾಗಲಿವೆ. ಅಲ್ಲದೆ ಈ ಸೇಲ್‌ನಲ್ಲಿ ಅಮೆಜಾನ್‌ನಲ್ಲಿ ಪ್ರತ್ಯೇಕವಾಗಿ ಮಾರಾಟವಾಗಲಿದೆ.

ಅಮೆಜಾನ್‌

ಇನ್ನು ಅಮೆಜಾನ್‌ ಗ್ರೇಟ್‌ ಫ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಯಾದ ರೆಡ್ಮಿ K50i 5G ಸ್ಮಾರ್ಟ್‌ಫೋನ್‌ ಕೇವಲ 20,999ರೂ.ಬೆಲೆಗೆ ದೊರೆಯಲಿದೆ. ಈ ಬೆಲೆ ಕಾರ್ಡ್ ರಿಯಾಯಿತಿಗಳು ಮತ್ತು ವಿನಿಮಯ ಕೊಡುಗೆಗಳ ನಂತರದ ಬೆಲೆಯಾಗಿದೆ. ಇದಲ್ಲದೆ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M13, ಐಕ್ಯೂ ನಿಯೋ 6 5G, ಟೆಕ್ನೋ ಕ್ಯಾಮನ್‌ 19 ನಿಯೋ ಮತ್ತು ಟೆಕ್ನೋ ಸ್ಪಾರ್ಕ್‌ 9 ಸ್ಮಾರ್ಟ್‌ಫೋನ್‌ಗಳು ಕೂಡ ಈ ಸೇಲ್‌ನಲ್ಲಿ ಡಿಸ್ಕೌಂಟ್‌ನಲ್ಲಿ ದೊರೆಯಲಿವೆ. ಖರೀದಿದಾರರು ಈ ಡಿವೈಸ್‌ಗಳ ಮೇಲೆ ಕ್ರೆಡಿಟ್‌ ಕಾರ್ಡ್‌ ಕಾರ್ಡ್ ರಿಯಾಯಿತಿಗಳನ್ನು ನಿರೀಕ್ಷಿಸಬಹುದು. ಜೊತೆಗೆ ಸ್ಮಾರ್ಟ್‌ಫೋನ್ ಖರೀದಿಯಲ್ಲಿ ನೋ-ಕಾಸ್ಟ್ EMI ಆಯ್ಕೆಯನ್ನು ಕೂಡ ಸಹ ಪಡೆಯಬಹುದು. ಅಮೆಜಾನ್‌ ಗ್ರೇಟ್‌ ಪ್ರೀಡಂ ಫೆಸ್ಟಿವಲ್‌ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲ ಸ್ಮಾರ್ಟ್‌ವಾಚ್‌ಗಳು, ಗೇಮಿಂಗ್ ಪರಿಕರಗಳು, TWS ಇಯರ್‌ಬಡ್‌ಗಳು ಮತ್ತು ಕ್ಯಾಮೆರಾಗಳ ಮೇಲೆ ಕೂಡ ರಿಯಾಯಿತಿಗಳು ದೊರೆಯಲಿದೆ.

ಸೇಲ್‌

ಈ ಸೇಲ್‌ ಸಮಯದಲ್ಲಿ ಖರೀದಿದಾರರು ಆಯ್ದ ಪ್ರಾಡಕ್ಟ್‌ಗಳ ಮೇಲೆ SBI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ ಬಳಸುವವರು ವಿಶೇಷ ಡಿಸ್ಕೌಂಟ್‌ ಪಡೆಯಲಿದ್ದಾರೆ. ಅಂದರೆ ಎಸ್‌ಬಿಐ ಕ್ರೆಡಿಟ್‌ ಕಾರ್ಡ್‌ ಬಳಸಿ ಖರೀದಿಸಿರೆ ನಿಮಗೆ 10% ಡಿಸ್ಕೌಂಟ್‌ ಲಭ್ಯವಾಗಲಿದೆ. ಇದಲ್ಲದೆ ಅಮೆಜಾನ್‌ ಪ್ಲಾಟ್‌ಫಾರ್ಮ್‌ನಲ್ಲಿ ಹೊಸದಾಗಿ ಖರೀದಿಮಾಡುವವರು ಅಂದರೆ ಮೊದಲ-ಬಾರಿ ಖರೀದಿಗೆ 10% ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ. ಇದಲ್ಲದೆ ನೋ ಕಾಸ್ಟ್‌ ಇಎಂಐ ಆಯ್ಕೆಗಳನ್ನು ಕೂಡ ಪಡೆದುಕೊಳ್ಳಬಹುದಾಗಿದೆ.

Best Mobiles in India

English summary
Flipkart Big Saving Days sale event will kick off on August 6

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X