ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್!

|

ಇ-ಕಾಮರ್ಸ್‌ ತಾಣಗಳು ಹಲವು ಆಫರ್‌ಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಅವುಗಳಲ್ಲಿ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್ ತಾಣಗಳು ಆನ್‌ಲೈನ್‌ ಶಾಪಿಂಗ್ ಪ್ರಿಯರ್ ನೆಚ್ಚಿನ ಇ ಸ್ಟೋರ್‌ ಎನಿಸಿಕೊಂಡಿವೆ. ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಡಿಸ್ಕೌಂಟ್‌, ಆಫರ್‌ ನೀಡುತ್ತಲೆ ಸಾಗಿದ್ದು, ಇದೀಗ ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ಮೇಳವನ್ನು ಆಯೋಜಿಸಿ ಗ್ರಾಹಕರನ್ನು ತನ್ನತ್ತ ಸೆಳೆದಿದೆ.

ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್!

ಹೌದು, ಜನಪ್ರಿಯ ಇ ಕಾಮರ್ಸ್‌ ಜಾಲತಾಣ ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್‌ ಮೇಳವನ್ನು ಆಯೋಜಿಸಿದೆ. ಈ ಮೇಳವು ಇದೇ ಜುಲೈ 15ರಿಂದ ಆರಂಭವಾಗಿದ್ದು, ಇದೇ ಜುಲೈ 18ರ ವರೆಗೂ ಇರಲಿದೆ. ಮೇಳದಲ್ಲಿ ಹಲವು ಅತ್ಯುತ್ತಮ ಆಫರ್‌ಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಅವುಗಳಲ್ಲಿ ಪ್ರಮುಖ ಕಂಪನಿಗಳ ಗ್ಯಾಜೆಟ್‌ ಉತ್ಪನ್ನಗಳಗೆ ಮೇಲೆ ಭಾರಿ ಡಿಸ್ಕೌಂಟ್ ಪ್ರಯೋಜನಗಳು ದೊರೆಯಲಿವೆ.

ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್!

ಆಸೂಸ್‌, ಮೊಟೊರೊಲಾ ಮತ್ತು ಹಾನರ್ ಸಂಸ್ಥೆಗಳ ಜನಪ್ರಿಯ ಸ್ಮಾರ್ಟ್‌ಫೋನ್‌ಗಳಿಗೆ ಭರ್ಜರಿ ಡಿಸ್ಕೌಂಟ್ ನೀಡಲಾಗಿದ್ದು, ಇದರೊಂದಿಗೆ ಎಸ್‌ಬಿಐ ಕ್ರೆಡಿಟ್‌ ಗ್ರಾಹಕರಿಗೆ ಶೇ. 10% ಇನ್‌ಸ್ಟಂಟ್ ಡಿಸ್ಕೌಂಟ್‌ ಸೌಲಭ್ಯವು ಲಭ್ಯವಾಗಲಿದೆ. ಹಾಗಾದರೇ ಫ್ಲಿಪ್‌ಕಾರ್ಟ್‌ ಬಿಗ್ ಶಾಪಿಂಗ್ ಡೇಸ್ ಮೇಳದಲ್ಲಿ ಅತ್ಯುತ್ತಮ ಆಫರ್ ಲಭ್ಯವಿರುವ ಸ್ಮಾರ್ಟ್‌ಫೋನ್‌ಗಳು ಯಾವುವು ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!ಓದಿರಿ : ಕೇವಲ 590ರೂ.ಗಳಿಗೆ 'ಟಾಟಾಸ್ಕೈ'ನಿಂದ ಅನ್‌ಲಿಮಿಟೆಡ್‌ ಬ್ರಾಡ್‌ಬ್ಯಾಂಡ್ ಸೇವೆ!

ಆಸೂಸ್‌ Z6

ಆಸೂಸ್‌ Z6

ಇತ್ತೀಚಿಗಷ್ಟೆ ಬಿಡುಗಡೆ ಆಗಿರುವ ಆಸೂಸ್‌ Z6 ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. 6GB RAM + 128GB ಸ್ಟೋರೇಜ್‌ ವೇರಿಯಂಟ್ 21,999ರೂ.ಗಳಿಗೆ ಲಭ್ಯವಾಗಲಿದ್ದು, ಹಾಗೆಯೇ 8GB RAM + 256GB ವೇರಿಯಂಟ್ ಸ್ಮಾರ್ಟ್‌ಫೋನ್ 25,999 ರೂ.ಗಳಿಗೆ ದೊರೆಯಲಿದೆ. 5000mAh ಬ್ಯಾಟರಿ ಮತ್ತು ಫ್ಲಿಪ್ ಕ್ಯಾಮೆರಾ ಈ ಫೋನ್‌ ಹೈಲೈಟ್‌ ಫೀಚರ್ಸ್‌ ಆಗಿವೆ.

ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಎಂ1

ಆಸೂಸ್‌ ಝೆನ್‌ಫೋನ್ ಮ್ಯಾಕ್ಸ್ ಎಂ1

ಆಸೂಸ್‌ನ ಜನಪ್ರಿಯ ಝೆನ್‌ಫೋನ್ ಮ್ಯಾಕ್ಸ್ ಎಂ1 ಸ್ಮಾರ್ಟ್‌ಫೋನ್ 5.45 ಇಂಚಿನ ಹೆಚ್‌ಡಿ ಪ್ಲಸ್‌ ಹೊಂದಿರುವ ಜೊತೆಗೆ 4000mAh ಬ್ಯಾಟರಿ ಶಕ್ತಿಯನ್ನು ಹೊಂದಿದೆ. 3GB RAM ಮತ್ತು 32GB ಸ್ಟೋರೇಜ್‌ ಸ್ಥಳಾವಕಾಶವನ್ನು ಒಳಗೊಂಡಿದ್ದು, 8ಎಂಪಿ ಸೆಲ್ಫಿ ಕ್ಯಾಮೆರಾ ಆಯ್ಕೆ ಇದೆ. ಆಫರ್‌ನಲ್ಲಿ 6,499ರೂ.ಗಳಿಗೆ ಲಭ್ಯವಿದ್ದು, ಹಾಗೆಯೇ 99ರೂ ಫೋನ್‌ ಪ್ರೊಟೆಕ್ಷನ್ ಕವರ್ ಉಚಿತವಾಗಿ ಲಭ್ಯ.

ಓದಿರಿ : ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ! ಓದಿರಿ : ಕಡಿಮೆ ಬೆಲೆಗೆ 'ರಿಯಲ್ ಮಿ' ಸ್ಮಾರ್ಟ್‌ಫೋನ್‌ ಆಕ್ಸಸರಿಸ್‌ ಬಿಡುಗಡೆ!

ಮೊಟೊರೊಲಾ ಒನ್‌ ವಿಷನ್

ಮೊಟೊರೊಲಾ ಒನ್‌ ವಿಷನ್

ಮೊಟೊ ಕಂಪನಿಯ ನೂತನ ಮೊಟೊರೊಲಾ ಒನ್ ವಿಷನ್ ಸ್ಮಾರ್ಟ್‌ಫೋನ್‌ಗೆ ಅತ್ಯುತ್ತಮ ಎಕ್ಸ್‌ಚೇಂಜ್ ಆಫರ್‌ ನೀಡಲಾಗಿದ್ದು, ಈ ಫೋನ್‌ ಬೆಲೆಯು 15,999ರೂ.ಗಳಾಗಿದ್ದು, ಆದ್ರೆ 10,999ರೂ.ಗಳಿಗೆ ದೊರೆಯಲಿದೆ. 6.3 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಹಾಗೆಯೇ 3500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಸೆಲ್ಫಿ ಕ್ಯಾಮೆರಾ 25ಎಂಪಿ ಸಾಮರ್ಥ್ಯದಲ್ಲಿದೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್! ಓದಿರಿ : ಫ್ಲಿಪ್‌ಕಾರ್ಟ್‌ 'ಬಿಗ್‌ ಶಾಪಿಂಗ್ ಡೇಸ್' : ಇದುವೇ ಫೋನ್‌ ಖರೀದಿಗೆ ರೈಟ್‌ ಟೈಮ್!

ಹಾನರ್‌ 10 ಲೈಟ್‌

ಹಾನರ್‌ 10 ಲೈಟ್‌

ಹಾನರ್‌ 10 ಲೈಟ್‌ ಸ್ಮಾರ್ಟ್‌ಫೋನ್ 6.21 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದ್ದು, ಹಾಗೆಯೇ 3400mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದುಕೊಂಡಿದೆ. 13ಎಂಪಿ ಮತ್ತು 2ಎಂಪಿ ಸೆನ್ಸಾರ್‌ನ ಡ್ಯುಯಲ್ ರಿಯರ್‌ ಕ್ಯಾಮೆರಾಗಳಿದ್ದು, ಸೆಲ್ಫಿ ಕ್ಯಾಮೆರಾವು 24ಎಂಪಿ ಸಾಮರ್ಥ್ಯದಲ್ಲಿದೆ. 4GB RAM ವೇರಿಯಂಟ್ ಸ್ಮಾರ್ಟ್‌ಫೋನ್ ಆಫರ್‌ನಲ್ಲಿ 11,999ರೂ.ಗಳಿಗೆ ದೊರೆಯಲಿದೆ.

ಆಫರ್‌ನಲ್ಲಿರುವ ಹಾನರ್‌ ಫೋನ್ಸ್

ಆಫರ್‌ನಲ್ಲಿರುವ ಹಾನರ್‌ ಫೋನ್ಸ್

ಫ್ಲಿಪ್‌ಕಾರ್ಟ್‌ ಬಿಗ್‌ ಶಾಪಿಂಗ್ ಡೇಸ್‌ ಮೇಳದಲ್ಲಿ, 3GB RAM ವೇರಿಯಂಟ್‌ನ ಹಾನರ್ 9N ಬೆಲೆಯು 8,499ರೂ.ಗಳು, ಹಾನರ್‌ 9 ಲೈಟ್‌ ಸ್ಮಾರ್ಟ್‌ಫೋನ್ ಬೆಲೆಯು (4GB RAM) 8,999ರೂ.ಗಳು ಆಗಿವೆ. ಹಾಗೆಯೇ ಹಾನರ್ 9i ಸ್ಮಾರ್ಟ್‌ಫೋನ್ 8,999ರೂ,ಗಳಿಗೆ, ಹಾನರ್ 8ಎಕ್ಸ್ 11,999ರೂ.ಗಳಿಗೆ ಮತ್ತು ಹಾನರ್ 8C 7,999ರೂ.ಗಳಿಗೆ ಲಭ್ಯವಾಗಲಿವೆ.

ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ! ಓದಿರಿ : ಮೊದಲು ಖರೀದಿಸಿ, ಆಮೇಲೆ ಪಾವತಿಸಿ ಇದು ಪೇಟಿಎಮ್‌ನ 'ಪೋಸ್ಟ್‌ಪೇಡ್' ಸೇವೆ!

Best Mobiles in India

English summary
Flipkart Big Shopping Days sale has started from today and it will be active till July 18, 2019. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X