Subscribe to Gizbot

ಫ್ಲಿಪ್‌ಕಾರ್ಟ್ ದರಕಡಿತ ಮೋಸದ ಬಲೆಯೇ?

Written By:

ಗ್ರಾಹಕರು ಇ - ಕಾಮರ್ಸ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡುತ್ತಿರುವುದು ಆ ತಾಣಗಳು ನೀಡುತ್ತಿರುವ ವಿನಾಯಿತಿಗಳು ಮತ್ತು ಉತ್ತಮ ಕೊಡುಗೆಗಳ ಭರವಸೆಗಳಂದಾಗಿದೆ. ಆದರೆ ಈ ತಾಣಗಳು ಕೆಲವೊಮ್ಮೆ ವಂಚನೆಯನ್ನು ಮಾಡುತ್ತವೆ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಫ್ಲಿಪ್‌ಕಾರ್ಟ್ ಸಾಕ್ಷಿಯಾಗಿದೆ.

ಓದಿರಿ: ಸಾಮಾಜಿಕ ತಾಣ: ವಿಶ್ವದಲ್ಲೇ ಪ್ರಬಲ ಮಾಧ್ಯಮ

ಫ್ಲಿಪ್‌ಕಾರ್ಟ್ ದರಕಡಿತ ಮೋಸದ ಬಲೆಯೇ?

ಕೋಲ್ಕಾತ್ತಾದ ಮಣಿ ಶಂಕರ್ ರೂ 399 ಕ್ಕೆ ನಿಗದಿಯಾಗಿದ್ದ ಚಪ್ಪಲಿಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಪ್ರದರ್ಶಿಸಿದ ಜಾಹೀರಾತಿಗನುಗುಣವಾಗಿ ಬುಕ್ ಮಾಡಿದ್ದರು. ಈ ಚಪ್ಪಲಿಗಳ ಬೆಲೆ ರೂ 799 ಆಗಿತ್ತು. ಇನ್ನು ಈ ಜಾಹೀರಾತಿನಲ್ಲೂ ಇದರ ಬೆಲೆಯನ್ನು ನಿಖರವಾಗಿ ನೀಡಲಾಗಿತ್ತು. ಆದರೆ ಚಪ್ಪಲಿಗಳಲ್ಲಿ ಬೆಲೆಯನ್ನು ರೂ 399 ಎಂದೇ ನಿಗದಿಪಡಿಸಿದ್ದು ಫ್ಲಿಪ್‌ಕಾರ್ಟ್ 799 ರೂಪಾಯಿಗಳ ಚಪ್ಪಲಿಗಳನ್ನು ವಿನಾಯಿತಿ ನೀಡಿ 399 ಕ್ಕೆ ನೀಡುತ್ತಿದೆ ಎಂದು ತೋರಿಸಿದೆ.

ಓದಿರಿ: ಎಚ್ಚರ: ಹೆಚ್ಚು ಮೊಬೈಲ್ ಬಳಕೆ ಪ್ರಾಣಕ್ಕೆ ಮಾರಕ

ಫ್ಲಿಪ್‌ಕಾರ್ಟ್ ದರಕಡಿತ ಮೋಸದ ಬಲೆಯೇ?

ಚಪ್ಪಲಿ ತಯಾರಕರು ಈಗಾಗಲೇ ಉತ್ಪತ್ತಿಯಲ್ಲಿ ಮೂಲ ಬೆಲೆಯನ್ನು ನಿಗದಿಪಡಿಸಿದ್ದರೂ ಫ್ಲಿಪ್‌ಕಾರ್ಟ್ ಗ್ರಾಹಕರನ್ನು ಮೂರ್ಖರನ್ನಾಗಿಸುವ ಪ್ರಯತ್ನವನ್ನು ಮಾಡಿದೆ. ನಿಮ್ಮ ಸೈಟ್‌ಗಳಲ್ಲಿ ಬರುವ ಉತ್ಪನ್ನಗಳನ್ನು ನಾವು ನಿಖರವಾಗಿ ಪರಿಶೋಧಿಸಿ ಖರೀದಿಸುತ್ತೇವೆ. ಆದರೆ ನೀವು ಗ್ರಾಹಕರಿಗೆ ಟೋಪಿ ಹಾಕಲು ಪ್ರಯತ್ನಿಸುತ್ತಿದ್ದು ಇದು ನ್ಯಾಯಯುತವಾದುದಲ್ಲ ಎಂದು ಮಣಿ ಶಂಕರ್ ಬರೆದಿರುವ ಪತ್ರಕ್ಕೆ ನಮ್ಮಿಂದ ತಪ್ಪು ಸಂಭವಿಸಿದ್ದು ನಾವು ಇದನ್ನು ಪರಿಶೀಲಿಸುತ್ತಿದ್ದೇವೆ ಎಂದು ಕಂಪೆನಿ ತಿಳಿಸಿದೆ.

English summary
One of the biggest reasons consumers are flocking from brick-and-mortar stores to e-commerce websites is the substantial discounts that the latter offer. However, a Flipkart product listing has cast some doubts over these discounts that e-tailers offer.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot