'ಫ್ಲಿಪ್​ಕಾರ್ಟ್' ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರು!

|

ಇಷ್ಟು ದಿನ ಆನ್‌ಲೈನ್ ಗ್ರಾಹಕರಿಗೆ ಡೆಲಿವರಿ ಬಾಯ್‌ಗಳು ವಂಚಿಸಿದ ಪ್ರಕರಣಗಳ ಬಗ್ಗೆ ಕೇಳಿರುತ್ತೀರಾ. ಆದರೆ, ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರ ಬಗ್ಗೆ ದೂರು ದಾಖಲಾಗಿರುವ ಘಟನೆ ಬುಧವಾರ ನಡೆದಿದೆ. ಮೊಬೈಲ್ ಅನ್ನು ಡೆಲಿವರಿ ಮಾಡಲು ಬಂದಿದ್ದ ಫ್ಲಿಪ್​ಕಾರ್ಟ್​ ಶಾಪಿಂಗ್​ನ ಡೆಲಿವರಿ ಬಾಯ್​ಗೆ ಬೆಂಗಳೂರಿನಲ್ಲಿ ವಂಚನೆ ಮಾಡಲಾಗಿದೆ.

ಹೌದು, ಆನ್​ಲೈನ್​ನಲ್ಲಿ ಬುಕ್ ಮಾಡಿದಾಗ ಕೆಲವೊಮ್ಮೆ ಪಾರ್ಸಲ್​ನಲ್ಲಿ ಆರ್ಡರ್ ಮಾಡಿದ ವಸ್ತುವಿನ ಬದಲಾಗಿ ಕಲ್ಲು, ಕಟ್ಟಿಗೆ, ಪೇಪರ್ ತುಂಬಿ ಕಳುಹಿಸುವುದನ್ನು ನೋಡಿದ್ದೇವೆ. ಆದರೆ, ಇಲ್ಲಿ ಕಥೆಯೇ ಬೇರೆಯಾಗಿದ್ದು, ಗ್ರಾಹಕರೇ ಡೆಲಿವರಿ ಬಾಯ್​ಗೆ ಯಾಮಾರಿಸಿದ್ದಾರೆ. ಹೀಗೇ ಯಾಮಾರಿಸಲೆಂದೇ ಡೆಲಿವರಿಗೆ ನೀಡಿದ್ದ ಮನೆಯ ವಿಳಾಸವನ್ನೂ ಮರೆಮಾಚಿ ಕೃತ್ಯವೆಸಗಿದ್ದಾರೆ.

'ಫ್ಲಿಪ್​ಕಾರ್ಟ್' ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರು!

ಘಟನೆ ವಿವರ ಹೀಗಿದ್ದು, ರಾಹುಲ್ ಎಂಬ ಹೆಸರಿನಲ್ಲಿ ಫ್ಲಿಪ್ಕಾರ್ಟ್ ನಲ್ಲಿ 50 ಸಾವಿರ ರೂ. ಬೆಲೆಯ ಐಫೋನ್ ಬುಕ್ ಮಾಡಲಾಗಿದೆ. ಡೆಲಿವರಿ ಬಾಯ್​ ಎಂದಿನಂತೆ ಮೊಬೈಲ್​ ಡೆಲಿವರಿ ಮಾಡಲು ನಮೂದಿಸಲಾಗಿದ್ದ ಆರ್​ಆರ್​ ನಗರದ ಲೊಕೇಶನ್​ಗೆ ಬಂದಿದ್ದಾರೆ. ಈ ವೇಳೆ ಮೊಬೈಲ್ ನೋಡುವ ನೆಪದಲ್ಲಿ ಡೆಲಿವರಿ ಬಾಯ್ ಗಮನ‌ವನ್ನು ಬೇರೆಡೆ ಸೆಳೆದು ವಂಚಿಸಲಾಗಿದೆ.

ಡೆಲಿವರಿ ನೀಡಲು ಹೋದಾಗ ಮೊಬೈಲ್ ತೆಗೆದುಕೊಂಡ ವ್ಯಕ್ತಿ ಅದನ್ನು ನೋಡಿದ ಬಳಿಕ ಹಣ ಕಡಿಮೆ ಇದೆ. ನಂತರ ಕಚೇರಿಯಲ್ಲೇ ಬಂದು ಮೊಬೈಲ್​ ತೆಗೆದುಕೊಳ್ಳುತ್ತೇನೆ ಎಂದು ಹೇಳಿ ಆತನಿಗೆ ವಾಪಸ್​ ಕಳುಹಿಸಿದ್ದಾನೆ. ಬಳಿಕ ಆ ಡೆಲಿವರಿ ಬಾಯ್​ ತನ್ನ ಕಚೇರಿಗೆ ಬಂದು ಬಾಕ್ಸ್ ವಾಪಸ್ ನೀಡಲು ಹೋದಾಗ ಅಲ್ಲಿ ಐಫೋನ್ ಬದಲು ಕಲ್ಲಿಟ್ಟಿರುವುದು ಬೆಳಕಿಗೆ ಬಂದಿದೆ.

'ಫ್ಲಿಪ್​ಕಾರ್ಟ್' ಡೆಲಿವರಿ ಬಾಯ್​ಗೆ ಯಾಮಾರಿಸಿದ ಪ್ರಳಯಾಂತಕರು!

ಮನೆಯ ಬಳಿ‌ ಬೇಡ ಶೆಲ್ ಪೆಟ್ರೋಲ್ ಬಂಕ್​ಗೆ ಬರ ಹೇಳಿ ವಿಳಾಸವನ್ನು ತಪ್ಪಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಆ ಹೆಸರಿನ ವ್ಯಕ್ತಿ​ ಜತೆ ಇನ್ನಿತರರು ಸೇರಿಕೊಂಡು ವಂಚನೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಇದೇ ಮೊದಲ ಬಾರಿಗೆ ಈ ರೀತಿ ಡೆಲಿವರಿ ಬಾಯ್ಗೆ ವಂಚಿಸಿದ ಪ್ರಕರಣ ಇದಾಗಿದ್ದು, ಈ ಸಂಬಂಧ ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒದಿರಿ: ಸಿಹಿಸುದ್ದಿ..'ರೆಡ್‌ಮಿ ನೋಟ್ 6 ಪ್ರೊ' ಬೆಲೆ ಮತ್ತೊಮ್ಮೆ ಇಳಿಕೆ!

Best Mobiles in India

English summary
Flipkart delivery boy files cheating case against Customer. This is how Customer cheat delivery boy on Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X