ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!

ಇ-ವಾಲೆಟ್ ಕಂಪೆನಿಯ ಹಾರ್ಡ್‌ವೇರ್ ಎನ್‌ಸ್ಕ್ರಿಪ್ಷನ್‌ನಿಂದ ಬಳಕೆದಾರರ ಮಾಹಿತಿ ಮತ್ತು ಡೇಟಾವನ್ನು ಕದಿಯಬಹುದಾಗಿದೆ ಎಂದು ಕ್ವಾಲ್ಕಾಮ್ ಕಂಪೆನಿಯ ಹಿರಿಯ ನಿರ್ದೇಶಕ ಎಸ್‌ ಚೌಧರಿ ಅಭಿಪ್ರಾಯಪಟ್ಟಿದ್ದಾರೆ.

|

ಭಾರತೀಯರು ಉಪಯೋಗಿಸುತ್ತಿರುವ ಯಾವುದೇ ಇ-ವಾಲೆಟ್ ಕಂಪೆನಿಯೂ ಸಹ ಪೂರ್ಣ ಸುರಕ್ಷಿತವಾಗಿಲ್ಲ ಎಂದು ಪ್ರಖ್ಯಾತ ಮೊಬೈಲ್ ಚಿಪ್‌ಸೆಟ್ ತಯಾರಿಕಾ ಕಂಪೆನಿ ಕ್ವಾಲ್ಕಾಮ್ ಹೇಳಿದೆ!! ಈ ಮೂಲಕ ಕ್ವಾಲ್ಕಾಮ್ ಇ-ವಾಲೆಟ್ ಬಳಕೆದಾರರಿಗೆ ಶಾಕ್ ನೀಡಿದೆ!

ಈ ಬಗ್ಗೆ ಕ್ವಾಲ್ಕಾಮ್ ಕಂಪೆನಿಯ ಹಿರಿಯ ನಿರ್ದೇಶಕ ಎಸ್‌ ಚೌಧರಿ ಮಾತನಾಡಿ, ಪ್ರಪಂಚದಲ್ಲಿನ ಬಹುತೇಕ ಎಲ್ಲಾ ಬ್ಯಾಂಕ್ ಮತ್ತು ಇ-ವಾಲೆಟ್ ಆಪ್‌ಗಳು ಕೇವಲ ಆಂಡ್ರಾಯ್ಡ್ ಸಿಸ್ಟಮ್‌ ಬಳಸುತ್ತಿದ್ದು, ಹಾರ್ಡ್‌ವೇರ್ ಸೆಕ್ಯುರಿಟಿಯನ್ನು ಬಳಸುತ್ತಿಲ್ಲ . ಇದರಿಂದಾಗಿ ಎಲ್ಲಾ ಇ-ವಾಲೆಟ್ ಕಂಪೆನಿಯ ಹಾರ್ಡ್‌ವೇರ್ ಎನ್‌ಸ್ಕ್ರಿಪ್ಷನ್‌ನಿಂದ ಬಳಕೆದಾರರ ಮಾಹಿತಿ ಮತ್ತು ಡೇಟಾವನ್ನು ಕದಿಯಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!!

ಕರ್ನಾಟಕಕ್ಕೆ ಹೆಚ್ಚು ವರ್ಧ ಚಂಡಮಾರುತದ ಎಫೆಕ್ಟ್!!..ಇದು ಟೆಕ್ ವಿಷಯ!

ದೇಶದಲ್ಲಿ 500 ಮತ್ತು 1000 ರೂಪಾಯಿ ನೋಟು ರದ್ದು ನಂತರ ಕ್ಯಾಶ್‌ಲೆಸ್‌ ವ್ಯವಹಾರ ಶೇಕಡ ಸಾವಿರಪಟ್ಟು ಹೆಚ್ಚಾಗಿದ್ದು, ಜನರು ಆನ್‌ಲೈನ್‌ ವ್ಯವಹಾರಕ್ಕೆ ಮೊರೆಹೋಗಿದ್ದಾರೆ. ಆದರೆ, ಭಾರತದಲ್ಲಿನ ಎಲ್ಲಾ ಇ-ವಾಲೆಟ್ ಕಂಪೆನಿಯ ಹಾರ್ಡ್‌ವೇರ್ ಎನ್‌ಸ್ಕ್ರಿಪ್ಷನ್ ಸರಿಯಾಗಿಲ್ಲ ಎನ್ನುವ ಸುದ್ದಿ ಆನ್‌ಲೈನ್‌ ವ್ಯವಹಾರ ಬಳಕೆದಾರರಿಗೆ ಶಾಕ್‌ ನೀಡಿದೆ!.

ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!!

ಇನ್ನು ಕೇಂದ್ರ ಸರ್ಕಾರ ಸಹ ಆನ್‌ಲೈನ್‌ ವ್ಯವಹಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಕ್ಯಾಶ್‌ಲೆಸ್‌ ಸಮಾಜ ನಿರ್ಮಾಣ ಮಾಡಬೇಕು ಎನ್ನುವ ಕೇಂದ್ರ ಸರ್ಕಾರದ ಯೋಜನೆಗೆ ಎದುರಾಗಿ ಇ- ವಾಲೆಟ್‌ಗಳಲ್ಲಿನ ಸೆಕ್ಯುರಿಟಿ ವ್ಯವಸ್ಥೆ ನಿಂತಿದೆ ಎನ್ನಬಹುದು. ಕೇವಲ ಒಂದೆರಡು ಆನ್‌ಲೈನ್‌ ಮೋಸದ ಸುದ್ದಿಗಳು ಜನರಿಗೆ ಬಿದ್ದರೆ ಕೇಂದ್ರದ ಕ್ಯಾಶ್‌ಲೆಸ್‌ ಯೋಜನೆಗೆ ಭಂಗ ತಂದಂತೆಯೇ ಸರಿ!.

ಶಾಕಿಂಗ್ ನ್ಯೂಸ್! ಭಾರತದ ಯಾವುದೇ ಇ-ವಾಲೆಟ್ ಕಂಪೆನಿಗಳು ಸುರಕ್ಷಿತವಲ್ಲ!!!

ಹಾಗಾಗಿ ಕೇಂದ್ರ ಸರ್ಕಾರ ಇ-ವಾಲೆಟ್‌ಗಳ ಸುರಕ್ಷತೆಯ ಮೇಲೆ ಎಚ್ಚರಿಕೆ ವಹಿಸಬೇಕಿದ್ದು, ಇತ್ತೀಚಿಗೆ ಸೈಬರ್‌ ಕ್ರಿಮಿನಲ್‌ಗಳ ಮೋಸಗಾರಿಕೆಯ ಭಯ ಹೊಂದಿರುವ ಭಾರತೀಯರಿಗೆ ಈ ಸುದ್ದಿ ಯಾವ ರೀತಿಯಲ್ಲಿ ಪ್ರಭಾವ ಬೀರಬಹುದು ಎಂಬುದನ್ನು ಕಾದುನೋಡಬೇಕಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
“Most of the banking or wallet apps around the world don’t use hardware security. to Know More visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X