Subscribe to Gizbot

ಇಂದು 12 ಗಂಟೆಗೆ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಫ್ಲಿಪ್‌ಕಾರ್ಟ್!!

Written By:

ಕಳೆದ ಕೆಲವು ದಿನಗಳಿಂದಲೂ "ಸಮ್ಥಿಂಗ್ ಸೊ ಬಿಗ್" ಎಂದು ಹೈಪ್ ಕ್ರಿಯೇಟ್ ಮಾಡುತ್ತಿರುವ ಭಾರತದ ಪ್ರಮುಖ ಇ ಕಾಮರ್ಸ್ ಶಾಪಿಂಗ್ ಜಾಲತಾಣ ಫ್ಲಿಪ್‌ಕಾರ್ಟ್ ಇಂದು 12 ಗಂಟೆಗೆ ಭಾರೀ ಯೋಜನೆಯೊಂದನ್ನು ಘೋಷಿಸುತ್ತಿದೆ. ಫ್ಲಿಪ್‌ಕಾರ್ಟ್ ಘೋಷಿಸಲಿರುವ ಯೋಜನೆ ಭಾರತದ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಎನ್ನಲಾಗಿದೆ.

ಇಂದು 12 ಗಂಟೆಗೆ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಫ್ಲಿಪ್‌ಕಾರ್ಟ್!!

ಫ್ಲಿಪ್‌ಕಾರ್ಟ್ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಒಂದು ಚಿಕ್ಕ ವಿಡಿಯೋದಲ್ಲಿ ಈಗಾಗಲೇ ಹೆಳಿರುವಂತೆ ಫ್ಲಿಪ್‌ಕಾರ್ಟ್ ಇಂದು ಎರಡು ಪ್ರಮುಖ ಯೋಜನೆಗಳನ್ನು ತರುತ್ತಿದೆ ಎಂಬುದು ಸ್ಪಷ್ಟವಾಗಿದೆ. ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿಯೇ ಭಾರೀ ಬದಲಾವಣೆಯನ್ನು ತರಬಹುದಾದ ಎರಡು ಪ್ರಮುಖ ಯೋಜನೆಗಳು ಇವಾಗಿರಲಿವೆ ಎಂದು ಹೇಳಲಾಗುತ್ತಿದೆ.

ಇಂದು 12 ಗಂಟೆಗೆ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಫ್ಲಿಪ್‌ಕಾರ್ಟ್!!

ಕಲ್ಯಾಣ್ ಕೃಷ್ಣಮೂರ್ತಿ ಅವರು ವಿಡಿಯೋದಲ್ಲಿ ಬಿಟ್ಟುಕೊಟ್ಟಿರುವ ಮಾಹಿತಿಯಂತೆ, ಫ್ಲಿಪ್‌ಕಾರ್ಟ್ ಕಂಪೆಂನಿ ಒಂದು ಪ್ರಮುಖ ಸ್ಮಾರ್ಟ್‌ಪೋನ್ ಕಂಪೆನಿ ಜೊತೆಗೆ ಕೈಜೋಡಿಸಿರುವುದು ಸ್ಪಷ್ಟವಾಗಿದೆ. ಹಾಗಾಗಿ, ಗ್ರಾಹಕ ಕೇಂದ್ರಿತ ಸೇವೆಯನ್ನು ಒದಗಿಸುವಂತಹ ಒಂದು ದೊಡ್ಡ ಯೋಜನೆ ಫ್ಲಿಪ್‌ಕಾರ್ಟ್‌ನಿಂದ ಹೊರಬೀಳುವುದನ್ನು ನಾವು ನಿರೀಕ್ಷಿಸಬಹುದಾಗಿದೆ.

ಇಂದು 12 ಗಂಟೆಗೆ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಫ್ಲಿಪ್‌ಕಾರ್ಟ್!!

ಕಾಂಗ್ (ಚಿಂಪಾಂಜಿ) ಕೂಡ ಚಿಕ್ಕದಾಗಿ ಕಾಣಿಸುವಂತಹ ದೊಡ್ಡದಾದ ವಸ್ತು ಇದಾಗಿರಲಿದೆ ಎಂಬಂತಹ ಜಾಹಿರಾತುಗಳನ್ನು ನೀಡುತ್ತಿರುವ ಫ್ಲಿಪ್‌ಕಾರ್ಟ್ ಇದನ್ನು ಇಷ್ಟಕ್ಕೆ ನಿಲ್ಲಿಸದೇ, ಇದರ ಮುಂದೆ ಬಿಟ್‌ಕಾಯಿನ್ ಕೂಡ ಚಿಕ್ಕದಾಗಿ ಕಾಣಿಸುತ್ತದೆ ಎಂದು ಹೆಳಿರುವುದರಿಂದ ಫ್ಲಿಪ್‌ಕಾರ್ಟ್ ಘೋಷಿಸಲಿರುವ ದೊಡ್ಡ ಯೋಜನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಇಂದು 12 ಗಂಟೆಗೆ ಮೊಬೈಲ್ ಮಾರುಕಟ್ಟೆಗೆ ದೊಡ್ಡ ಶಾಕ್ ನೀಡಲಿದೆ ಫ್ಲಿಪ್‌ಕಾರ್ಟ್!!

#BigOnFlipkart ಪ್ರಚಾರವು ಪ್ರಸ್ತುತ ಫ್ಲಿಫ್‌ಕಾರ್ಟ್ ಕಂಪೆನಿಯ ಫೇಸ್‌ಬುಕ್, ಟ್ವಿಟರ್, ಯೂಟ್ಯೂಬ್ ಮತ್ತು ಇನ್ಸ್ಟಾಗ್ರ್ಯಾಮ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯವಾಗಿದೆ. ಹಾಗಾಗಿ, ಇಂದು 12 ಗಂಟೆಗೆ ಫ್ಲಿಪ್‌ಕಾರ್ಟ್ ಕಂಪೆನಿ ಹೈಪ್ ಕ್ರಿಯೇಟ್ ಮಾಡಿರುವ #BigOnFlipkart ಬಗ್ಗೆ ಘೋಷಣೆ ಮಾಡುತ್ತಿರುವುದು ಏನು ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.! ಹಾಗಾದರೆ, ನೀವು?

How to read deleted WhatsApp messages - GIZBOT KANNADA

ಓದಿರಿ: ಕೇಬಲ್ ಟಿವಿಗೆ ಬ್ರೇಕ್ ಹಾಕಲು ಬರುತ್ತಿರುವುದು 'ಜಿಯೋ ಡಿಟಿಹೆಚ್' ಅಲ್ಲ 'ಜಿಯೋ ಹೋಮ್' ಟಿವಿ!!

English summary
Flipkart’s CEO has hinted towards a big partnership with a major smartphone brand and a possible consumer-centric service for Indian consumers.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot